Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರು ಸಹಿಸದ ಮಹಿಳೆಯ ಕೆಲವೊಂದು ಗುಣಗಳು
ಸಾಮಾನ್ಯವಾಗಿ ಮಹಿಳೆಯರ ಯಾವ ಗುಣ ಪುರುಷರನ್ನು ಹೆಚ್ಚು ಆಕರ್ಷಿಸುತ್ತದೆ? ಎಂದು ಕೇಳಿದರೆ, ಹೆಚ್ಚಿನವರು ಇದಕ್ಕೆ ನೀಡುವ ಉತ್ತರ: ಸೌಂದರ್ಯ! ಇದೇ ಹೌದಾಗಿದ್ದರೆ ಸ್ಫುರದ್ರೂಪಿ ಮಜನೂ ಮತ್ತು ಸಾಮಾನ್ಯ ರೂಪದ ಲೈಲಾ ನಡುವೆ ಪ್ರೇಮಾಂಕುರವಾಗುತ್ತಲೇ ಇರಲಿಲ್ಲ. ಕೃಷ್ಣವರ್ಣದವಳಾಗಿದ್ದ ಲೈಲಾಳನ್ನು (ಅರೇಬಿಕ್ ಭಾಷೆಯಲ್ಲಿ ಲೈಲ್ ಅಂದರೆ ರಾತ್ರಿ, ಕಪ್ಪಗಿದ್ದ ಕಾರಣಕ್ಕೇ ಆಕೆಯ
ತಂದೆತಾಯಿಯರು ಲೈಲಾ ಎಂಬ ಹೆಸರಿಟ್ಟರು) ಮಜನೂವಿನ ದೃಷ್ಟಿಯಿಂದ ನೋಡಿದರೆ ಆಕೆಯೂ ಸೌಂದರ್ಯವತಿಯಾಗಿಯೇ ಕಾಣುತ್ತಾಳೆ ಎಂದು ಸುಭಾಷಿತವೊಂದು ಹೇಳುತ್ತದೆ. ಅಪ್ಪಟ ಸತ್ಯವಾದ ಈ ಮಾತು ನಮ್ಮ ಒಳದೃಷ್ಟಿಯತ್ತ ಬೊಟ್ಟುಮಾಡುತ್ತದೆ.
ಅಂತೆಯೇ ಪುರುಷರಿಗೆ ಮಹಿಳೆಯ ಸೌಂದರ್ಯ ಒಂದು ಆಕರ್ಷಣೆಯೇ ಆಗಿದ್ದರೂ ಏಕೈಕ ಗುಣವಂತೂ ಅಲ್ಲ. ಇದರೊಂದಿಗೆ ಬುದ್ಧಿವಂತಿಕೆ, ಜಾಣ್ಮೆ, ತಮಾಷೆಯ ಗುಣ, ಹೊಂದಿಕೊಂಡು ಹೋಗುವ ಗುಣ, ವಿಶ್ವಾಸಾರ್ಹತೆ, ತಮ್ಮ ಹಿರಿಯರನ್ನೂ ತನ್ನ ಹಿರಿಯರೆಂದು ಭಾವಿಸಿ ಗೌರವಿಸುವ ಗುಣ, ಔದಾರ್ಯತೆ, ಭಕ್ತಿ ಮೊದಲಾದವು ಸಹಾ ಇರಬೇಕೆಂದು ಅವರು ಬಯಸುತ್ತಾರೆ. ಆದರೆ ಈ ಗುಣಗಳೆಲ್ಲಾ ಎಲ್ಲಾ ಮಹಿಳೆಯರಲ್ಲಿ ಸಮಾನವಾಗಿರುವುದಿಲ್ಲ.
ಕೆಲವರಲ್ಲಿ ಕೆಲವು ಗುಣಗಳು ಹೆಚ್ಚು, ಕೆಲವು ಕಡಿಮೆಯಿರುತ್ತವೆ. ಭೂಮಿಯ ಮೇಲಿರುವ ಯಾವುದೇ ವ್ಯಕ್ತಿಯೂ ಅವಗುಣಗಳಿಲ್ಲದೇ ಇಲ್ಲ. ಅಂತೆಯೇ ಮಹಿಳೆಯರೂ ಇದಕ್ಕೆ ಹೊರತಲ್ಲ. ಅವರಲ್ಲೂ ಹಲವಾರು ಅವಗುಣಗಳಿರುತ್ತವೆ. ಅಸೂಯೆ, ದ್ವೇಷ, ಸೋಮಾರಿತನ, ಕೊಳ್ಳುಬಾಕತನ, ಅತೃಪ್ತಿ, ಇನ್ನೊಬ್ಬರಿಗೆ ಹೋಲಿಸಿಕೊಂಡು ಪಡುವ ಕೀಳರಿಮೆ, ಹೆಚ್ಚು ಹಣ ಅಥವಾ ದರ್ಪಕ್ಕಾಗಿ ಪತಿಯನ್ನು ಲಂಚಕ್ಕಾಗಿ ಪ್ರೇರೇಪಿಸುವುದು (ಈ ವಿಷಯದ ಮೇಲೆ ಬಹಳ ಚರ್ಚೆಗಳೂ ಆಗಿವೆ) ಇತ್ಯಾದಿಗಳನ್ನು ಪುರುಷರು ಇಷ್ಟಪಡುವುದಿಲ್ಲ.
ತಾವು ಮೆಚ್ಚಿದ ಸೌಂದರ್ಯದ ಹಿಂದೆ ಈ ಗುಣಗಳ ಕರಾಳಮುಖವೇನಾದರೂ ಇದ್ದರೆ ಸುಂದರ ವದನ ಕರಾಳರೂಪ ಪಡೆಯುತ್ತದೆ. ಇದು ಆಗಬಾರದೆಂದಿದ್ದರೆ ಪುರುಷರು ಯಾವ ಅವಗುಣಗಳನ್ನು ಸಹಿಸುವುದಿಲ್ಲ ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದ್ದು ಅದರ ಪ್ರಕಾರ ತಮ್ಮನ್ನು ತಾವೇ ಬದಲಿಸಿಕೊಂಡರೆ ಯುವತಿಯರಿಗೆ ತಮ್ಮ ಕನಸಿನ ರಾಜಕುಮಾರ ದಕ್ಕಲು ನೆರವಾಗಬಹುದು.

ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದಿರುವುದು
ಸಾಮಾನ್ಯವಾಗಿ ಮಹಿಳೆಯರು ಸ್ವಚ್ಛತೆಗೆ ಅತಿಹೆಚ್ಚಿನ ಆದ್ಯತೆ ನೀಡುತ್ತಾರೆ. ಮನೆಯಲ್ಲಿ ಒಪ್ಪ ಓರಣ, ಶುಚಿತ್ವ, ನೈರ್ಮಲ್ಯ, ಎಲ್ಲಾ ವಸ್ತುಗಳು ತಮ್ಮ ಸ್ವಸ್ಥಾನದಲ್ಲಿರುವುದು, ಅಚ್ಚುಕಟ್ಟುತನ, ಕಸವಿಲ್ಲದಿರುವುದು, ಸಾಕಷ್ಟು ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳುವುದು ಮೊದಲಾದ ವಿಷಯಗಳಿಗೆ ಮಹಿಳೆಯರು ಮುತುವರ್ಜಿ ವಹಿಸುತ್ತಾರೆ. ಅಂತೆಯೇ ತಮ್ಮ ದೈಹಿಕ ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಸೋಮಾರಿತನದಿಂದ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವ ಮಹಿಳೆಯರನ್ನು ಪುರುಷರು ಇಷ್ಟಪಡುವುದಿಲ್ಲ.

ಸದಾ ಜಗಳವಾಡುವ ಬುದ್ಧಿ
ತಮ್ಮ ತಪ್ಪಿದ್ದರೂ ಒಪ್ಪದೇ ಜಗಳವನ್ನು ಮುಂದುವರೆಸಿಕೊಂಡೇ ಹೋಗುವ ಮಹಿಳೆಯರ ಬುದ್ಧಿ ಪುರುಷರಿಗೆ ಇಷ್ಟವಾಗುವುದಿಲ್ಲ. ಒಟ್ಟಾರೆಯಾಗಿ ಜಗಳಗಂಟಿ ಮಹಿಳೆಯರು ಪುರುಷರಿಗೆ ಇಷ್ಟವಿಲ್ಲ.

ಕಥೆ ಕಟ್ಟುವ ಗುಣ
ಸದಾ ತನ್ನ ತೊಂದರೆಗಳನ್ನೇ ಪಟ್ಟಿಮಾಡಿ ಅಳುತ್ತಾ ಈ ಬಗ್ಗೆ ದೂರುತ್ತಾ ಇರುವ ಮಹಿಳೆಯರಿಂದಲೂ ಪುರುಷರು ದೂರ ಓಡುತ್ತಾರೆ. ಅಳುಮುಂಜಿಯರು ಪುರುಷರಿಗೆ ಇಷ್ಟವಿಲ್ಲ.

ಮದ್ಯಪಾನ ಅಥವಾ ಧೂಮಪಾನದ ವ್ಯಸನಿಗಳು
ಪುರುಷರು ತಾವು ಮದ್ಯಪಾನ ಅಥವಾ ಧೂಮಪಾನ ಮಾಡಿದರೂ ತಮ್ಮ ಮಹಿಳೆಯರು ಮಾತ್ರ ಇವೆರಡನ್ನೂ ಮಾಡಬಾರದೆಂದು ಬಯಸುತ್ತಾರೆ. ವಾಸ್ತವವಾಗಿ ಮಹಿಳೆಯರಿಗೂ ಮದ್ಯಪಾನ ಮತ್ತು ಧೂಮಪಾನ ಮಾಡುವ ಪುರುಷರು ಇಷ್ಟವಾಗುವುದಿಲ್ಲ.

ಚಾಡಿ ಹೇಳುವ ಗುಣ
ನಾಲ್ಕು ಜನರಿದ್ದಲ್ಲಿ ಗಾಸಿಪ್ ಇದ್ದೇ ಇರುತ್ತದೆ, ಆದರೆ ಆ ನಾಲ್ವರಲ್ಲಿ ಇಬ್ಬರಾದರೂ ಮಹಿಳೆಯರಾಗಿರಬೇಕು ಎಂಬ ಜೋಕು ಪ್ರಚಲಿತದಲ್ಲಿದೆ. ಏಕೆಂದರೆ ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸುತ್ತ ಮುತ್ತ ಇರುವವರ ಬಗ್ಗೆ ಪುರುಷರಿಗಿಂತ ಕುತೂಹಲ ಹೆಚ್ಚಿರುತ್ತದೆ. ಆದರೆ ಈ ಗುಣ ಅತಿರೇಕಕ್ಕೆ ಹೋಗಬಾರದು. ಒಂದು ವೇಳೆ ಇದನ್ನೇ ಗೀಳಾಗಿಸಿಕೊಂಡು ಇತ್ತಲಿನ ಸುದ್ದಿಯನ್ನು ಅತ್ತ ಅತ್ತಲಿನ ಸುದ್ದಿಯನ್ನು ಇತ್ತ ಪ್ರಚಾರ ಮಾಡಿ ಚಾಡಿ ಹೇಳುವ ಗುಣವಿರುವ ಮಹಿಳೆಯರನ್ನು ಪುರುಷರು ಇಷ್ಟಪಡುವುದಿಲ್ಲ.

ಸೋಮಾರಿತನ
ಸೋಮಾರಿತನ ಒಂದು ರೋಗದಂತೆ. ಸೋಮಾರಿಗಳು ಯಾರಿಗೂ ಇಷ್ಟವಾಗುವುದಿಲ್ಲ. ನಿತ್ಯವೂ ಚಟುವಟಿಕೆಯಿಂದಿದ್ದು ಒಂದಲ್ಲಾ ಒಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆಯರನ್ನೇ ಪುರುಷರು ಹೆಚ್ಚು ಇಷ್ಟಪಡುತ್ತಾರೆ.

ಮೂದಲಿಕೆ
ಮೂದಲಿಸುವ ಅಭ್ಯಾಸವಿರುವ ಮಹಿಳೆಯರು ಯಾವುದೇ ಪುರುಷರಿಗೆ ಇಷ್ಟವಾಗುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಮಗ ಅಥವಾ ಪತಿಯಲ್ಲಿ ತಮ್ಮ ಅತ್ತೆ ಅಥವಾ ಸೊಸೆಯರ ಬಗ್ಗೆ ಮೂದಲಿಸುವ ಮೂಲಕ ತಮ್ಮ ಮಗ/ಪತಿಯನ್ನು ದೂರ ಓಡಿಸುತ್ತಾರೆ.

ಒಡೆದು ಆಳುವ ನೀತಿ
ಯಾವುದೇ ಮನೆಯನ್ನು ಒಡೆದು ತಮ್ಮ ಪ್ರಪಂಚವನ್ನು ನಿರ್ಮಿಸುವ ಇರಾದೆಯುಳ್ಳ ಮಹಿಳೆಯರನ್ನು ಪುರುಷರು ಇಷ್ಟಪಡುವುದಿಲ್ಲ. ಇದು ಸಂಕುಚಿತ ಮನಸ್ಸಿನ ಭಾವನೆಯಾಗಿದ್ದು ಪುರುಷರು ಈ ಬುದ್ಧಿಗಿಂತ ವಿಶಾಲ ಮನಸ್ಸಿನ ಮಹಿಳೆಯರನ್ನು ಇಷ್ಟಪಡುತ್ತಾರೆ.

ಕೊಳ್ಳುಬಾಕತನ
ಮ್ಮ ಆದಾಯ, ಅಗತ್ಯತೆ, ಅನಿವಾರ್ಯತೆಯನ್ನೊಂದೂ ಲೆಕ್ಕಿಸದೇ ಕಂಡಿದ್ದನ್ನೆಲ್ಲಾ ಬೇಕು ಎನ್ನುವ ಬುದ್ದಿ ಪುರುಷರಿಗೆ ಇಷ್ಟವಾಗುವುದಿಲ್ಲ. ಈ ಮಹಿಳೆಯರು ಸಾಮಾನ್ಯವಾಗಿ ಇತರ ಮಹಿಳೆಯರ ಬಳಿ ಇರುವ ವಸ್ತುಗಳೆಲ್ಲಾ ತಮ್ಮಲ್ಲಿಯೂ ಇರಬೇಕು ಎಂಬ ಆಕಾಂಕ್ಷೆಯಿಂದ ತಮ್ಮ ಪತಿಯರ ಆದಾಯವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಈ ಬುದ್ದಿ ಪುರುಷರಿಗೆ ಇಷ್ಟವಾಗುವುದಿಲ್ಲ.



Click it and Unblock the Notifications
