Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಹುಡುಗಿಯರು ಪ್ರೀತಿಸುವ ಹುಡುಗರನ್ನು ಹೇಗೆ ಸುಲಿಗೆ ಮಾಡುತ್ತಾರೆ?
ಈ ಅಂಕಣದ ಹೆಸರು ಹುಡುಗಿಯರು ಪ್ರೀತಿಸುವ ಹುಡುಗರನ್ನು ಹೇಗೆ ಸುಲಿಗೆ ಮಾಡುತ್ತಾರೆ ಎಂದಾಗಿದ್ದರು, ನಾವು ಇಲ್ಲಿ ಸಾಮಾನ್ಯವಾಗಿ ಸಂಬಂಧಗಳಲ್ಲಿ ಹುಡುಗರನ್ನು ಹುಡುಗಿಯರು ಹೇಗೆ ತಮ್ಮ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಚರ್ಚಿಸುತ್ತದೆ. ಇಲ್ಲಿ ಹುಡುಗಿಯರು ಹೇಳುವ ಕೆಲಸವನ್ನು ಹುಡುಗರು ಯಾವುದೇ ತಕರಾರಿಲ್ಲದೆ ಮಾಡುತ್ತಾರೆ. ದುರ್ದೈವವೆಂದರೆ, ಇಲ್ಲಿ ಮುಗ್ಧ ಹುಡುಗರು ಸಂಬಂಧದಲ್ಲಿ ತಾವುಗಳು ಬಲಿಪಶುಗಳಾಗುತ್ತಿದ್ದೇವೆ ಎಂಬ ಪರಿಜ್ಞಾನವಿಲ್ಲದೆ ಇವುಗಳನ್ನೆಲ್ಲ ಮಾಡುತ್ತಾರೆ.
ಸುಲಿಗೆ ಎಂಬುದು ಸಂಬಂಧದಲ್ಲಿ ನಡೆಯುವ ಒಂದು ಅನಾರೋಗ್ಯಕರ ಪ್ರಕ್ರಿಯೆಯಾಗಿರುತ್ತದೆ. ಹಾಗಾದರೆ ಬನ್ನಿ ಇಲ್ಲಿ ನೀಡಿರುವ ಕೆಲವೊಂದು ಸನ್ನಿವೇಶಗಳನ್ನು ನೋಡಿ, ನೀವು ಸಹ ಇಂತಹ ಸುಲಿಗೆಗಳ ಬಲಿಪಶುವಾಗಿದ್ದಿರೆ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ಇಂತಹ ಸನ್ನಿವೇಶಗಳು ನಿಮಗೂ ಎದುರಾಗಿದ್ದರೆ ಅಥವಾ ಈಗ ಎದುರಾಗುತ್ತಿದೆ ಎಂದರೆ ಸಂಬಂಧದಲ್ಲಿ ನೀವು ಸುರಕ್ಷಿತವಾಗಿ ಮುನ್ನಡೆಯಿರಿ. ನಾವು ಹೀಗೆ ಹೇಳುತ್ತಿದ್ದೇವೆ ಎಂದು ನಿಮ್ಮ ಸಂಬಂಧವನ್ನು ಕಡಿದುಕೊಳ್ಳುವವರೆಗೆ ಹೋಗಿ ಎಂದರ್ಥವಲ್ಲ. ಆದರೆ ಇಂತಹ ಬಲಿಪಶುವಾಗದೆ, ನಿಮ್ಮ ಸಂಬಂಧವನ್ನು ನೀವು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಕೆಲಸವನ್ನು ಮಾಡಬಹುದು.
ಜೊತೆಗೆ ಇಂತಹ ಸುಲಿಗೆಗಳಿಗೆ ಗುರಿಯಾಗದಂತೆ ನೀವು ಸಹ ಧ್ವನಿ ಎತ್ತಬಹುದು. ಇದರಿಂದ ಸುಲಿಗೆಯು ನಿಲ್ಲುತ್ತದೆ, ಸಂಬಂಧವು ಸರಿ ದಾರಿಯಲ್ಲಿ ಹೋಗುತ್ತದೆ. ಬನ್ನಿ ಹಾಗಾದರೆ ಸುಲಿಗೆ ಯಾವ ರೂಪದಲ್ಲಿ ನಡೆಯುತ್ತದೆ ಎಂಬುದನ್ನು ನೋಡೋಣ. ಪ್ರಣಯದ ಸಮಯದಲ್ಲಿ ಚುಂಬನದ ಸಮಸ್ಯೆ ಅಡ್ಡ ಬರುತ್ತಿದೆಯೇ?
ದುಬಾರಿ ಉಡುಗೊರೆಗಳನ್ನು ಕೇಳುವುದು

ಕೆಲವು ಹುಡುಗಿಯರು (ಎಲ್ಲಾ ಹುಡುಗಿಯರಲ್ಲ) ತಮ್ಮ ಬಾಯ್‌ಫ್ರೆಂಡ್‍ಗಳಿಂದ ದುಬಾರಿ ಉಡುಗೊರೆಗಳನ್ನು ಕೇಳುತ್ತಾರೆ. ಒಬ್ಬ ಹುಡುಗ ಪ್ರೀತಿಯಲ್ಲಿ ಬಿದ್ದ ಎಂದರೆ, ಆತ ತನ್ನ ಹುಡುಗಿಯನ್ನು ಸಂತೋಷಪಡಿಸುವುದು ಮುಖ್ಯ, ಅದು ತನ್ನ ಜವಾಬ್ದಾರಿ ಎಂದುಕೊಳ್ಳುತ್ತಾನೆ. ಈ ಪ್ರಯತ್ನದಲ್ಲಿ ಅವನು ಅವಳನ್ನು ಮೆಚ್ಚಿಸಲು ಮತ್ತು ಸಂತೋಷಪಡಿಸಲು ಯಾವ ಮಟ್ಟಿಗಾದರು ಖರ್ಚು ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಾನೆ. ಇದೇ ಪರಿಸ್ಥಿತಿಯನ್ನು ಹುಡುಗರು ಸಹ ಬಳಸಿಕೊಳ್ಳುತ್ತಾರೆ. ಒಂದು ಹಣವಂತರ ಹುಡುಗಿ ಸಿಕ್ಕಾಗ, ಅವರು ಸಹ ಆಕೆಯಿಂದ ದುಬಾರಿ ಉಡುಗೊರೆಗಳನ್ನು ಕೇಳುತ್ತಾರೆ.
ಒಂದು ಸಹಾಯ ಆಗಬೇಕಾಗಿತ್ತು....
ಒಮ್ಮೆ ಒಂದು ಹುಡುಗ ಹುಡುಗಿಯ ಪ್ರೀತಿಗೆ ಹುಡುಗ ಬಿದ್ದರೆ ಮುಗಿಯಿತು. ಆಕೆಗಾಗಿ ಯಾವುದೇ ಕೆಲಸವನ್ನು ಮಾಡಲು ಆತ ಮುಂದೆ ಬಂದು ನಿಲ್ಲುತ್ತಾನೆ. ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಆಗ ಅವರು ತಮ್ಮ ಇಚ್ಛೆ ಈಡೇರಿಸಿಕೊಳ್ಳಲು ಇಬ್ಬರ ಶಕ್ತಿಯನ್ನು ವಿನಿಯೋಗಿಸುತ್ತಾರೆ. ಹುಡುಗಿಯರು ತಮ್ಮ ಅನಿಸಿಕೆಗಳನ್ನು ಮತ್ತು ಇಚ್ಛೆಗಳನ್ನು ಪೂರೈಸಿಕೊಳ್ಳುವಂತಹ ಸಹಾಯವನ್ನು ಹುಡುಗರಿಂದ ನಿರೀಕ್ಷಿಸುತ್ತಾರೆ. ಮೊದಲೆ ಹೇಳಿದಂತೆ ಇಂತಹ ಸಹಾಯಗಳನ್ನು ಹುಡುಗರು ಸಹ ಮುಗ್ಧ ಹುಡುಗಿಯರಿಂದ ಪಡೆಯುತ್ತಿರುತ್ತಾರೆ.
ತನ್ನ ಜೊತೆ ಬರಲು ಬಲವಂತ ಮಾಡುವುದು
ಇದೊಂದು ತಮಾಷೆಯ ಸಂಗತಿ. ಕೆಲ ಹುಡುಗಿಯರು ತಮ್ಮ ಹುಡುಗರನ್ನು ತಮ್ಮೊಂದಿಗೆ ಎಲ್ಲಾ ಕಡೆಗೆ ಬರಲು ಕೇಳಿಕೊಳ್ಳುತ್ತಾರೆ. ಈ ಸಂಗತಿ ಸುಲಿಗೆಯ ಅಡಿಯಲ್ಲಿ ಬರುವುದಿಲ್ಲವಾದರು, ಹುಡುಗನಿಗೆ ಈ ವಿಚಾರವಾಗಿ ಇಷ್ಟವಿಲ್ಲದಿದ್ದರೆ, ಅದು ಸುಲಿಗೆ ಎಂದೆ ಕರೆಸಿಕೊಳ್ಳುತ್ತದೆ. ಒಂದು ವೇಳೆ ಇದು ದುಬಾರಿ ಸ್ಥಳಗಳಾಗಿದ್ದಲ್ಲಿ ಆಗ ಇದು ಸುಲಿಗೆಯ ಅಡಿ ಸಿಲುಕಿಕೊಳ್ಳುತ್ತದೆ. ಇನ್ನು ಹುಡುಗ ಕೆಲಸ ಮಾಡುತ್ತಿದ್ದು, ಆ ಕೆಲಸಕ್ಕೆ ರಜೆ ಹಾಕಿ ಹುಡುಗಿಯ ಹಿಂದೆ ಬಂದರೆ ಏನಾಗುತ್ತದೆ ಎಂಬುದನ್ನು ನೀವೇ ಊಹಿಸಿ! ಆದರೆ ಒಂದು ಮಾತು ಇಂತಹ ಪದೇ ಪದೇ ಬಲವಂತವು ಹುಡುಗರಲ್ಲಿ ಉದ್ವೇಗವನ್ನು ಹೆಚ್ಚಿಸಿ, ಸಂಬಂಧದಲ್ಲಿ ಬೇಸರವನ್ನು ತರಿಸುತ್ತವೆ. ನಿಮ್ಮ ಕನಸಿನ ನಲ್ಲನನ್ನು ಪ್ರೇಮಪಾಶದಲ್ಲಿ ಸಿಲುಕಿಸುವುದು ಹೇಗೆ?
ಬಿಲ್‌ಗಳನ್ನು ಪಾವತಿಸುವಂತೆ ಹೇಳುವುದು
ಇದು ಸಂಬಂಧದಲ್ಲಿ ಹಣದ ಸುಲಿಗೆಯ ಅಡಿಯಲ್ಲಿ ಬರುತ್ತದೆ. ಯಾವಾಗ ಗಂಡು ಅಥವಾ ಹೆಣ್ಣು ತಮ್ಮ ಸಂಗಾತಿಗಳನ್ನು ಸುಲಿಗೆ ಮಾಡಲು ಆಲೋಚಿಸಿದಾಗ ಈ ವಿಚಾರವೇ ಅದಕ್ಕೆ ಶಂಕುಸ್ಥಾಪನೆ ಹಾಕುತ್ತದೆ. ಈ ವಿಚಾರವಾಗಿ ದೂಸ್ರಾ ಮಾತನಾಡದೆ ಅವರು ತಮ್ಮ ಸಂಗಾತಿಯ ಮೇಲೆ ಅವಲಂಬಿಸುತ್ತಾರೆ. ನಿಮ್ಮ ಸಂಗಾತಿಯು ನಿಮ್ಮನ್ನು ಬಿಲ್ ಪಾವತಿಸುವಂತೆ ಕೇಳಿಕೊಂಡಾಗ (ಯಾವುದೇ ಕಾರಣಗಳಿಲ್ಲದೆ), ಅದು ಸುಲಿಗೆಯ ಮೊದಲ ಲಕ್ಷಣ ಎಂದು ತಿಳಿಯಿರಿ. ಆದರೆ ಕೆಲವೊಂದು ನಿರ್ದಿಷ್ಟ ಕಾರಣಗಳಿದ್ದಾಗ (ಬಡತನ, ತಿಂಗಳ ಕೊನೆ, ಹೊರಗೆ ಪ್ರವಾಸದಲ್ಲಿದ್ದಾಗ ಇತ್ಯಾದಿ) ಪರಸ್ಪರರು ಸಹಾಯ ಮಾಡಿಕೊಳ್ಳುವುದು ತಪ್ಪಲ್ಲ. ಅದನ್ನು ಸುಲಿಗೆಯ ಅಡಿಯಲ್ಲಿ ಸೇರಿಸಲು ಬರುವುದಿಲ್ಲ. ಕೊನೆ ಮಾತು: ಸಂಬಂಧ ಇರುವುದು ಬಾಳುವುದಕ್ಕಾಗಿ ಸುಲಿಗೆ ಮಾಡುವುದಕ್ಕಲ್ಲ.



Click it and Unblock the Notifications














