Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆ ಮುಂಚೆ ವಧುವಿಗೆ ಕಾಡುವ ಸಂದೇಹ ಅಷ್ಟಿಷ್ಟಲ್ಲ!
ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎನ್ನುತ್ತದೆ ಒಂದು ಸುಭಾಷಿತ. ಮದುವೆಯ ಬಗ್ಗೆ ಎಲ್ಲರಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಬಂಧನವೆಂದು ಪರಿಗಣಿಸಿದರೆ ಉಳಿದವರು ಇದು ನಿಸರ್ಗದ ನಿಯಮ ಹಾಗೂ ಜವಾಬ್ದಾರಿ ಹೊರಲು ದೇವರು ನೀಡಿರುವ ಕರ್ತವ್ಯವಾಗಿದೆ ಎಂದು ಭಾವಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಯೌವನದ ಹುರುಪಿನಲ್ಲಿ ಆಟೋಟ ಜಾಸ್ತಿಯಾದಾಗ ಹಿರಿಯರು ಇವನಿಗೊಂದು, ಅಥವಾ ಅವಳಿಗೊಂದು ಮದುವೆ ಮಾಡೋಣ, ಜವಾಬ್ದಾರಿ ಬರುತ್ತದೆ ಎಂಬ ಅಭಿಪ್ರಾಯವನ್ನು ಮಂಡಿಸುತ್ತಾರೆ.
ಏಕೆಂದರೆ ಮದುವೆಯಾದ ಬಳಿಕ ಬರುವ ಜವಾಬ್ದಾರಿ ವ್ಯಕ್ತಿಯ ನಡವಳಿಕೆಯನ್ನೇ ಬದಲಿಸಿಬಿಡುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳಲು, ಸಮೃದ್ಧಿ ಮತ್ತು ಜೀವನದಲ್ಲಿ ಸುಖ ಹೆಚ್ಚಲು ನೆರವಾಗುತ್ತದೆ. ಬೇಡದ ಕೆಲಸಗಳಿಗೆ ಕೈ ಹಾಕುವುದು ನಿಲ್ಲುತ್ತದೆ. ವರ್ಷಗಳು ಕಳೆಯುತ್ತಿದ್ದಂತೆಯೇ ದಂಪತಿಗಳ ನಡುವಣ ಬಾಂಧವ್ಯ ಇನ್ನಷ್ಟು ಬೆಸೆಯುತ್ತಾ ಒಬ್ಬರನ್ನೊಬ್ಬರು ಬಿಟ್ಟಿರಲಾದ ಹಂತಕ್ಕೆ ಬಂದು ತಲುಪುತ್ತದೆ. ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ!
ಆದರೆ ವಿವಾಹದ ಬಗ್ಗೆ ಎಲ್ಲರಲ್ಲೂ ಇರುವ ಅಭಿಪ್ರಾಯಗಳು ಬಹುತೇಕ ವಿಭಿನ್ನವಾಗಿರುತ್ತದೆ. ಅದರಲ್ಲೂ ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಎಂದಾಗ ವಧುವಿನಲ್ಲಿ ಸಂದೇಹ ಎನ್ನುವ ಭೂತ ಹೆಚ್ಚಾಗಿ ಅವರನ್ನು ಕಾಡತೊಡಗುತ್ತದೆ. ಯಾವಾಗ ತನ್ನ ಮದುವೆಯ ಬಗ್ಗೆ ಸಂದೇಹವು ಬರುತ್ತದೆಯೋ, ಆಗ ಆಕೆ ತನ್ನನ್ನು ತಾನೇ ಕೋಟಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾಳೆ! ತಜ್ಞರ ಪ್ರಕಾರ ಪ್ರತಿ ವಧುವು ಸಹ ವಿವಾಹಕ್ಕೆ ಮೊದಲು ಸಂದೇಹಗಳ ಹೊಡೆತಕ್ಕೆ ನಲುಗಿ ಹೋಗುತ್ತಾಳಂತೆ. ಬನ್ನಿ ಇಂದು ಬೋಲ್ಡ್ ಸ್ಕೈ ಹುಡುಗಿಯರು ಅನುಭವಿಸುವ ಸಂದೇಹಗಳಲ್ಲಿ ಕೆಲವನ್ನು ನಿಮಗೆ ತಿಳಿಸುತ್ತಿದೆ. ಬನ್ನಿ ಆ ಸಂದೇಹಗಳು ಯಾವುವು ಎಂದು ನಾವು ಸಹ ತಿಳಿದುಕೊಳ್ಳೋಣ...

ಮದುವೆಯಾಗಲು ನಾನಿನ್ನೂ ಚಿಕ್ಕವಳಾ?
ಇದು ಪ್ರತಿಯೊಬ್ಬ ವಧುವು ಕೇಳಿಕೊಳ್ಳುವ ಸಾಮಾನ್ಯ ಪ್ರಶ್ನೆಯಾಗಿರುತ್ತದೆ. ಮದುವೆಯಾಗಲು ನಾನಿನ್ನೂ ಚಿಕ್ಕವಳಾ? ಎಂಬ ಪ್ರಶ್ನೆ ಆಕೆ ಮೊದಲು ಕೇಳಿಕೊಳ್ಳುತ್ತಿರುತ್ತಾಳೆ. ಹೌದು ನಿಮಗೆ ಮದುವೆಯಾಗಲು ಅಗತ್ಯವಾದ ವಯಸ್ಸಾಗಿದೆ. ಒಂದು ಜವಾಬ್ದಾರಿಯನ್ನು ಹೊರುವಷ್ಟು ವಯಸ್ಸು ನಿಮ್ಮದಾಗಿದೆ. ಅದಕ್ಕೆ ನಿಮಗೆ ಮದುವೆ ಮಾಡಲು ಸಿದ್ಧಗೊಂಡಿದ್ದಾರೆ ಇದಕ್ಕಾಗಿ ಸಂಶಯ ಬೇಡ.

ನಾನು ಅವರ ಮನೆಯಲ್ಲಿ ಹೊಂದಿಕೊಳ್ಳುವೆನಾ?
ಹೌದು, ಆತನ ಮನೆಯಲ್ಲಿ ನೀವು ಖಂಡಿತ ಹೊಂದಿಕೊಳ್ಳುತ್ತಿರಿ. ಅದಕ್ಕಾಗಿ ನೀವು ಸ್ವಲ್ಪ ಮಾನಸಿಕವಾಗಿ ಸಿದ್ಧಗೊಳ್ಳಬೇಕು. ಅಲ್ಲಿ ನಿಮಗಾಗಿ ಕೆಲವೊಂದು ಸವಾಲುಗಳು ಇರುವುದು ನಿಜ ಮತ್ತು ಕೆಲವೊಂದು ಬದಲಾವಣೆಗಳು ಸಹ ಇರುವುದು ಅಷ್ಟೇ ಸತ್ಯ. ಆದರೆ ಮಾನವನು ಮೂಲತಃ ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣವನ್ನು ಜನ್ಮಜಾತವಾಗಿ ಪಡೆದಿರುತ್ತಾನೆ. ಹೊಂದಿಕೊಳ್ಳುವುದು ಅಷ್ಟೇನು ಕಷ್ಟವಾಗುವುದಿಲ್ಲ.

ನಮ್ಮ ಅತ್ತೆ ನನ್ನನ್ನು ಒಪ್ಪಿಕೊಳ್ಳುವರಾ?
ನಿಮ್ಮ ಅತ್ತೆ ನಿಮ್ಮ ತಾಯಿಯ ಸ್ಥಾನವನ್ನು ಯಾವುದೇ ಕಾರಣಕ್ಕು ತುಂಬುವುದಿಲ್ಲ! ಹೌದು, ವ್ಯತ್ಯಾಸಗಳು ಇದ್ದೇ ಇರುತ್ತವೆ, ಆದರೆ ಇದು ನೀವು ನಡೆದುಕೊಳ್ಳುವ ರೀತಿಯ ಮೇಲೆ ಇದು ಅವಲಂಬಿಸಿರುತ್ತದೆ.

ನಾನು ತುಂಬಾ ಖರ್ಚು ಮಾಡಬೇಕಾಗುತ್ತದೆಯೇ?
ಇದು ಸಹ ವಧುಗಳಿಗೆ ಕಾಡುವ ಒಂದು ಸಮಸ್ಯೆಯಾಗಿರುತ್ತದೆ. ಒಂದು ನೆನಪಿಡಿ, ಮದುವೆ ಜೀವನದಲ್ಲಿ ಒಂದು ಬಾರಿ ಮಾತ್ರ ಆಗುವ ಸಮಾರಂಭ. ಅದಕ್ಕಾಗಿ ನಿಮ್ಮ ಹುಟ್ಟು ಹಬ್ಬಕ್ಕೆ ಖರ್ಚು ಮಾಡಬೇಕಾದ ಹಣಕ್ಕಿಂತ ಸ್ವಲ್ಪ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಖರ್ಚಿನ ಬಗ್ಗೆ ಆಲೋಚಿಸಬೇಡಿ, ಎಷ್ಟಾದರು ಇದು ನಿಮ್ಮ ಮದುವೆ.

ನಮ್ಮ ಪ್ರೀತಿ ಶಾಶ್ವತವಾಗಿ ಇರುತ್ತದೆಯೇ?
ನಿಮ್ಮ ಪ್ರೀತಿ ಶಾಶ್ವತವಾಗಿ ಇರಬೇಕು ಎಂದು ನೀವು ಬಯಸುತ್ತಿದ್ದೀರಾ, ಇದು ಸಾಧ್ಯ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಮತ್ತೊಬ್ಬ ವ್ಯಕ್ತಿ ಬರಲು ಅವಕಾಶ ಮಾಡಿಕೊಟ್ಟರೆ ಖಂಡಿತ ನಿಮ್ಮ ಪ್ರೀತಿಯ ಜೀವನ ಹಾಳಾಗುತ್ತದೆ. ಹಾಗಾಗಿ ನೀವು ನೀವಾಗಿರಿ, ನಿಮ್ಮ ಸಂಗಾತಿಯ ಜೊತೆಗೆ ಸಂಬಂಧವನ್ನು ಕಾಪಾಡಿಕೊಳ್ಳಿ.



Click it and Unblock the Notifications
