Latest Updates
-
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್
ಕಪಿ ಚೇಷ್ಟೆ ಮೂಲಕ ಮನದ ಕನ್ಯೆಗೆ ಭಯ ಹುಟ್ಟಿಸಬೇಡಿ!
ನೀವು ಎಂದಾದರು ಯಾವ ಹೆಂಗಸರನ್ನು ನೋಡದೆ ಇರುವಂತೆ ಹುಡುಗರು ಆಡುವುದನ್ನು ನೋಡಿದ್ದೀರಾ? ಹೌದು ಕೆಲವರಿರುತ್ತಾರೆ, ಒಮ್ಮೆ ಅವರಿಗೆ ಒಬ್ಬ ಹೆಂಗಸಿನ ಮೇಲೆ ಆಕರ್ಷಣೆ ಹುಟ್ಟಿತೆಂದರೆ ಸಾಕು, ತುಂಬಾ ವಿಚಿತ್ರವಾಗಿ ಅವರಿಗೆ ಭಯಹುಟ್ಟಿಸುವಂತೆ ನಡೆದುಕೊಳ್ಳುತ್ತಾರೆ. ಹೌದು ಇವರು ಆ ಹೆಣ್ಣಿನ ಪೂರ್ವಾಪರವನ್ನು ಹೇಗೋ ಮಾಡಿ ತಿಳಿದುಕೊಳ್ಳುತ್ತಾರೆ. ಅದು ಅವರ ಹಿಂದಿನ ಸಂಬಂಧ, ಲೈಂಗಿಕತೆಯಂತಹ ವಿಚಾರಗಳು ಹೀಗೆ ನಾನಾ ವಿಷಯಗಳನ್ನು ಅವರು ತಿಳಿದುಕೊಂಡು ಇವರಿಗೆ ಭಯವನ್ನು ತರುತ್ತಾರೆ.
ಇದೆಲ್ಲದ್ದಕ್ಕಿಂತ ಹೆಚ್ಚು ಎಂದರೆ, ಒಮ್ಮೆ ಏನಾದರು ಆ ಹೆಣ್ಣಿನ ಕಡೆಯಿಂದ ಇವನಿಗೆ ಹಸಿರು ನಿಶಾನೆ ಸಿಕ್ಕರೆ ಮುಗಿಯಿತು, ಆಕೆಗೆ ಏನೆಲ್ಲ ಬೇಕೋ, ಅದನ್ನು ಹೋಗಿ ಈತ ಕೊಂಡುಕೊಂಡು ಬಂದು ಕೊಡುತ್ತಾನೆ. ಕೇವಲ ಆಕೆಯನ್ನು ಸಂತೋಷಪಡಿಸಲು. ಇದೆಲ್ಲ ಮಾಡುವುದು ಕೇವಲ ಆಕೆಯನ್ನು ಅಚ್ಚರಿಪಡಿಸಲು ಮಾತ್ರ. ಅಂತಹ ಹುಡುಗರು ಏಕೆ ನಮ್ಮ ನಡುವೆ ಇದ್ದಾರೆ! ಎಚ್ಚರ: ಇಂತಹ ಸುಳ್ಳುಗಳು ಸಂಸಾರದ ಬುಡವನ್ನೇ ಅಲುಗಾಡಿಸಿಬಿಡಬಲ್ಲವು!

ಒಂದು ವೇಳೆ ನೀವು ಈ ಗುಂಪಿಗೆ ಸೇರಿದ ಹುಡುಗನಾಗಿದ್ದು, ಈ ಲೇಖನವನ್ನು ಓದುತ್ತಿದ್ದರೆ, ಮತ್ತೊಮ್ಮೆ ಯೋಚಿಸಿ. ಆ ಹುಡುಗಿಗೆ ಇದು ಇಷ್ಟವೇ? ಎಂದು ಏಕೆಂದರೆ ನೀವು ಮಾಡುತ್ತಿರುವ ಕೆಲಸಗಳನ್ನು ಆಕೆ ಜೀರ್ಣಿಸಿಕೊಳ್ಳುವುದು ಕಷ್ಟ. ಒಂದು ವೇಳೆ ನಿಮಗೆ ಆ ಹುಡುಗಿ ಇಷ್ಟವಾಗಿದ್ದರೆ, ಅದನ್ನು ತಿಳಿಸಲು ನಾನಾ ದಾರಿಗಳು ಇವೆ. ಅದನ್ನು ಬಿಟ್ಟು ಆಕೆಯನ್ನು ಒಲಿಸಿಕೊಳ್ಳಲು ಆಕೆಗೆ ಮುಜುಗರ ತರುವಂತಹ, ಭಯ ಹುಟ್ಟಿಸುವಂತಹ ಕೆಲಸಕ್ಕೆ ಕೈ ಹಾಕಬೇಡಿ. ಬನ್ನಿ ಇಲ್ಲಿ ನಾವು ಕೆಲವೊಂದು ಹುಡುಗರು ನಿಮ್ಮನ್ನು ಇಷ್ಟಪಟ್ಟಾಗ ಮಾಡಬಹುದಾದ ಭಯಹುಟ್ಟಿಸುವಂತಹ ಕೆಲಸಗಳನ್ನು ತಿಳಿಸುತ್ತಿದ್ದೇವೆ:
ಅವರ ಹಿಂದಿನ ಕಥೆ
ಅವರ ಹಿಂದಿನ ಕಥೆಯನ್ನು ಮಾತನಾಡುವುದು ಅವರಿಗೆ ತುಂಬಾ ಇಷ್ಟ. ಒಂದು ವೇಳೆ ಒಬ್ಬ ಹುಡುಗ ಪದೇ ಪದೇ ತನ್ನ ಪೂರ್ವಾಪರವನ್ನು ನಿಮ್ಮ ಮುಂದೆ ಹೇಳುತ್ತಿದ್ದಲ್ಲಿ, ಮತ್ತು ಅವನ ಕುರಿತು ನಿಮಗೆ ಸ್ಪಷ್ಟವಾಗಿ ಗೊತ್ತಾಗಲಿ ಎಂದು ಪ್ರಯತ್ನಿಸುತ್ತಿದ್ದಲ್ಲಿ ಆತ ನಿಮ್ಮ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾನೆ ಎಂದು ಅರ್ಥ. ಏಕೆಂದರೆ ಹೆಂಗಸರಿಗೆ ಇತರರ ಹಿನ್ನಲೆ ತಿಳಿದುಕೊಳ್ಳುವ ಹುಚ್ಚು ಅಧಿಕವಾಗಿರುತ್ತದೆ. ಅದನ್ನೆ ಈ ಹುಡುಗರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ನೋಡುತ್ತಾರೆ. ಮಾತು ಬೆಳ್ಳಿ ಮೌನ ಬಂಗಾರ, ಇದು ಸುಖಿ ಸಂಸಾರಕ್ಕೆ ರಹದಾರಿ!
ಲೈಂಗಿಕ ವಿಚಾರ
ಇನ್ನೊಂದು ಭಯ ಮತ್ತು ಮುಜುಗರ ಹುಟ್ಟಿಸುವ ವಿಷಯ, ಅದು ಲೈಂಗಿಕತೆ. ಇಂತಹ ಹುಡುಗರು ಹುಡುಗಿಯರ ಬಳಿ ಸಲುಗೆಯಿಂದ ಮಾತನಾಡಲು ಆರಂಭಿಸಿದರೆ, ಅವರು ಮಾತನಾಡುವ ಅಂಶ ಲೈಂಗಿಕತೆ ಕುರಿತು. ಹೌದು ನೀವು ಇನ್ನೂ ಇದರ ಕುರಿತು ತಿಳಿದುಕೊಂಡಿಲ್ಲ ಎಂದರೆ ಮುಗಿಯಿತು, ಅವರು ಅದೇ ವಿಷಯವನ್ನು ಸುತ್ತಿ ಬಳಸಿ ನಿಮ್ಮ ಮುಂದೆ ತೆಗೆಯುತ್ತಾರೆ. ಆದರೆ ಕೆಲವು ಹುಡುಗಿಯರಿಗೆ ಈ ವಿಷಯ ಅತಿ ಎನಿಸುವುದು ಖಂಡಿತ.
ನಿಮಗಾಗಿ ವಸ್ತುಗಳನ್ನು ಕೊಂಡುಕೊಂಡು ಬರುತ್ತಾರೆ
ನಿಮ್ಮನ್ನು ಸಂತೋಷಪಡಿಸಲಿಕ್ಕಾಗಿ ಹುಡುಗರು ಸಿಕ್ಕಾಪಟ್ಟೆ ವಸ್ತುಗಳನ್ನು ತಂದುಕೊಡುತ್ತಾರೆ. ಇದು ಸಹ ಹುಡುಗಿಯರಲ್ಲಿ ಭಯ ಮತ್ತು ಮುಜುಗರ ಎರಡನ್ನು ತರಿಸುತ್ತದೆ. ಕೆಲವು ಹುಡುಗರಂತು, ಹುಡುಗಿಯರಿಗಾಗಿ ಕೆಲವೊಂದು ಅನಾವಶ್ಯಕ ಉಡುಗೊರೆಗಳನ್ನು ತಂದು ನೀಡುತ್ತಲೆ ಇರುತ್ತಾರೆ. ಹೆಂಗಸರಿಗೆ ಪೆದ್ದು ಗಂಡಸರು ಏಕೆ ಇಷ್ಟವಾಗುತ್ತಾರೆ?
ಹಿಂದೆ ಹಿಂದೆ ಬರುವುದು
ಹುಡುಗರು ನಿಮ್ಮನ್ನು ಇಷ್ಟಪಟ್ಟರೆ ಮುಗಿಯಿತು. ಅವರು ಸದಾ ನಿಮ್ಮ ಹಿಂದೆ-ಮುಂದೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತ ಇರುತ್ತಾರೆ. ಅವರನ್ನು ನೀವು ಓಡಾಡುವ ಸ್ಥಳಗಳಲ್ಲೆಲ್ಲ ನಾವು ಕಾಣಬಹುದು. ಇದು ಖಂಡಿತ ಹುಡುಗಿಗೆ ಭಯವನ್ನುಟ್ಟಿಸುತ್ತದೆ. ಹುಡುಗರು ತಮ್ಮ ಹುಡುಗಿಗೆ ಬೆಂಬಲವಾಗಿ ಹಿಂದೆ ಬರುತ್ತೇವೆ ಎಂದು ಭಾವಿಸಿದರೆ, ಇದೇ ಅವರಿಗೆ ಉಸಿರು ಕಟ್ಟಿಸುವಂತಹ ಅನುಭವ ನೀಡುತ್ತದೆ.



Click it and Unblock the Notifications

