Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಹೊಗಳಿಕೆಯ ಮಾತು ಆಕೆಯ ಕೆನ್ನೆಯನ್ನು ಕೆಂಪಾಗಿಸಬೇಕು!
ನಿಮಗೆ ಗೊತ್ತೆ ಹೆಂಗಸರ ಮುಖವನ್ನು ಕೆಂಪಾಗಿಸುವ ಹೊಗಳಿಕೆಗಳು ಯಾವುವು ಎಂದು? ಒಂದು ವೇಳೆ ನೀವು ಒಂದು ಹುಡುಗಿ ನಾಚಿ ಕೆಂಪೇರುವುದನ್ನು ನೋಡಬೇಕೆಂದು ಬಯಸಿದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳುವುದು ಅಗತ್ಯ.
ಪ್ರತಿಯೊಬ್ಬ ಗಂಡಸು ಒಂದು ಹೆಂಗಸನ್ನು ಮೆಚ್ಚಿಸುಚ ಸಾಮಾರ್ಥ್ಯವನ್ನು ಹೊಂದಿರುತ್ತಾನೆ. ಆದರೆ ಕೆಲವೊಮ್ಮೆ ನಾವು ಆಕೆ ಯಾವುದಕ್ಕೆ ಈ ರೀತಿ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿರುತ್ತದೆ. ಮೊದಲ ನೋಟದಲ್ಲೇ ಹೆಣ್ಣಿನ ಚಂಚಲ ಮನಸ್ಸನ್ನು ಗೆಲ್ಲಬಹುದೇ?
ಕೆಲವೊಮ್ಮೆ ಹುಡುಗಿಯರನ್ನು ಇಂತಹ ಪರಿಸ್ಥಿತಿಯಲ್ಲಿ ನೋಡಿದಾಗ ನಿಮಗೆ ವಿಚಿತ್ರ ಎನಿಸುತ್ತದೆ ಅಥವಾ ಒಂದು ಹುಡುಗಿಯನ್ನು ಹಾಗೆ ನಾಚುವಂತೆ ಮಾಡಲು ಸಹ ಕಷ್ಟವಾಗುತ್ತದೆ.
ಆದರೆ ಒಂದು ಮಾತು ನೆನಪಿಡಿ, ನೀವು ನಿಜವಾಗಿ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದಲ್ಲಿ, ಆಕೆ ನಿಮ್ಮ ಮುಂದೆ ನಾಚಿ ನೀರಾದರೆ, ಆಗ ಅದರಿಂದ ನಿಮಗೆ ಆತ್ಮ ವಿಶ್ವಾಸ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ಬನ್ನಿ ಅದಕ್ಕಾಗಿ ನಾವು ನೀಡಿರುವ ಸಲಹೆಗಳನ್ನು ಪಾಲಿಸಿ:

ಆಕೆಯ ಪೋಷಕರನ್ನು ಮೆಚ್ಚಿಸಿ
ಆಕೆಯ ಪೋಷಕರನ್ನು ಮೆಚ್ಚಿಸಲು ಆರಂಭಿಸಿ. ಒಮ್ಮೆ ಆಕೆಯ ಪೋಷಕರು ನಿಮ್ಮನ್ನು ಮೆಚ್ಚಿಕೊಂಡರೆ ಸಾಕು, ಅವರು ತಮ್ಮ ಮಗಳ ಇಷ್ಟಾನಿಷ್ಟಗಳ ಸಂಪೂರ್ಣ ವರದಿಯನ್ನು ನಿಮ್ಮ ಮುಂದೆ ಇಡುತ್ತಾರೆ. ಇದನ್ನು ನಿಮ್ಮ ಆಯುಧವಾಗಿ ಬಳಸಿಕೊಂಡರೆ ಸಾಕು ಆಕೆ ನಾಚಿ ಕೆಂಪಾಗುತ್ತಾಳೆ.

ಆಕೆಗೆ ಹೇಳಿ ನೀನೇ ನಿಜವಾದ ಸುಂದರಿ
ಇದನ್ನು ಕೇಳಿ ಆಕೆ ಮೂಗು ಮುರಿಯಬಹುದು, ಆದರೆ ಅದರ ಹಿಂದೆಯೇ ಆಕೆಯ ಮುಖ ಕೆಂಪಾಗುವುದನ್ನು ನೀವು ನೋಡಬಹುದು. ಅದನ್ನು ಸಾಧಿಸಲು ನೀವು ಆಕೆಯ ಸೌಂದರ್ಯವನ್ನು ಹೊಗಳುತ್ತ ಹೋಗಿ, ಆ ನಿನ್ನ ಮುಂಗುರುಳು, ಕಣ್ಣು, ಇತ್ಯಾದಿ ಆಗ ನೋಡಿ ಆಕೆ ಹೇಗೆ ನಾಚುತ್ತಾಳೆ ಎಂದು!.

ಸಾರ್ವಜನಿಕವಾಗಿ ಆಕೆಯನ್ನು ಹೆಸರು ಹಿಡಿದು ಕರೆಯಿರಿ
ಪ್ರತಿಯೊಬ್ಬರಿಗು ಕೆಲವೊಂದು ರಹಸ್ಯವಾದ ಹೆಸರುಗಳು ಇರುತ್ತವೆ. ಅದರಲ್ಲೂ ಗಂಡಸರು ತಮ್ಮ ಪ್ರೀತಿ ಪಾತ್ರ ಹುಡುಗಿಯನ್ನು ಅಥವಾ ಹೆಂಗಸನ್ನು ಕರೆಯುವುದು ಅಡ್ಡ ಹೆಸರು ಅಥವಾ ಮುದ್ದು ಹೆಸರಿನಿಂದಲೆ, ಆಕೆಯ ಮುಖವನ್ನು ಕೆಂಪಗೆ ಮಾಡಲು ನಿಮಗೆ ಆಸೆಯೇ, ಹಾಗಾದರೆ ಆಕೆಯ ಆ ಮುದ್ದು ಹೆಸರನ್ನು ಅದು ಸ್ವೀಟಿಯೋ, ಚಿನ್ನೂನೋ, ರಾಣಿಯೋ, ಯಾವುದಾದರು ಸರಿ ಜನರ ನಡುವೆ ಕರೆಯಿರಿ. ಆಗ ನೋಡಿ ಆಕೆಯ ಮುಖವನ್ನು !!!!.

ಆಕೆಗೆ ಸರ್‌ಪ್ರೈಸ್ ಆಗಿ ಒಂದು ಉಡುಗೊರೆ ನೀಡಿ
ಒಂದು ವೇಳೆ ನೀವು ಆಕೆಯನ್ನು ಮೆಚ್ಚಿಸಲು ಇಷ್ಟಪಟ್ಟಲ್ಲಿ, ಮೊದಲು ಆಕೆಗೆ ಏನೆಲ್ಲ ಇಷ್ಟ ಎಂಬುದನ್ನು ತಿಳಿದುಕೊಳ್ಳಬೇಕು. ಸಂದರ್ಭಕ್ಕೆ ತಕ್ಕ ಉಡುಗೊರೆಯೊಂದು ನೀವು ಯಾವಾಗಲು ನೀಡಬಹುದು. ಆದರೂ ಆಕೆ ಎದುರು ನೋಡದ ಒಂದು ಉಡುಗೊರೆಯನ್ನು ನೀಡಿ. ಆಗ ಇದರಿಂದ ಆಕೆಯ ಮುಖ ಕೆಂಪೇರುತ್ತದೆ.

ಆಕೆಯ ಸ್ನೇಹಿತರ ಮುಂದೆ ಆಕೆಯನ್ನು ಚುಡಾಯಿಸಿ
ನಿಮ್ಮ ಹುಡುಗಿಯನ್ನು ಆಕೆಯ ಸ್ನೇಹಿತರ ಮುಂದೆ ಚುಡಾಯಿಸಿ, ಆಕೆಯ ಹೆಸರನ್ನು ಸ್ವಲ್ಪ ವ್ಯತ್ಯಾಸ ಮಾಡಿ ಕರೆಯಿರಿ, ಅದು ಸ್ವಲ್ಪ ವಿನೋದಾತ್ಮಕವಾಗಿ ಇದ್ದರೆ ಮತ್ತೂ ಚೆಂದ. ಬಹುತೇಕ ಸಮಯದಲ್ಲಿ, ಈ ಉಪಾಯವು ಹೆಂಗಸರನ್ನು ನಾಚಿ ಕೆಂಪೇರುವಂತೆ ಮಾಡುತ್ತದೆ.

ಆಕೆಯನ್ನೇ ನೋಡಿ
ಒಂದು ವೇಳೆ ನೀವು ನಿಮ್ಮ ಸ್ನೇಹಿತರ ಜೊತೆ, ಆಕೆ ಆಕೆಯ ಸ್ನೇಹಿತರ ಜೊತೆ ಇರುವಾಗ, ಕಣ್ಣು ಮಿಟುಕಿಸದೆ ಆಕೆಯನ್ನೇ ನೋಡುತ್ತಾ ಇರಿ. ಇದು ಆಕೆಗೆ ಗೊತ್ತಾಗದೆ ಹೋಗುವುದಿಲ್ಲ. ಆಗ ನೋಡಿ, ಆಕೆಯ ಕೆನ್ನೆಗಳು ಹೇಗೆ ಕೆಂಪಾಗುತ್ತವೆ ಎಂದು.

ಕೆನ್ನೆಯನ್ನು ಚಿವುಟಿ
ಇದು ಶೇಖಡಾ ನೂರಕ್ಕೆ 99% ಕೆಲಸ ಮಾಡುತ್ತದೆ! ಆಕೆಯ ಮುಖ ಕೆಂಪಗಾಗಿ, ಆಕೆ ನಿಮ್ಮ ಮುಂದೆ ಮುಗುಳ್ನಗಬೇಕೆ. ಆಕೆಗೆ ಗೊತ್ತಿಲ್ಲದಂತೆ ಯಾಮಾರಿಸಿ, ಕೆನ್ನೆಯನ್ನು ಹಿಂಡಿ. ಆಗ ನೋಡಿ ಆಕೆಯನ್ನು!



Click it and Unblock the Notifications
