Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಸಂಸಾರವನ್ನು ನಿಭಾಯಿಸುವುದು ನೀರು ಕುಡಿದಷ್ಟು ಸುಲಭವಲ್ಲ!
ನಾವು ಒಂದು ಸಂಬಂಧಕ್ಕೆ ಕಟ್ಟುಬಿದ್ದಾಗ, ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಕುರಿತಾಗಿ ಆಲೋಚಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ಸ್ನೇಹಿತರು ಮತ್ತು ನಮ್ಮ ಕುಟುಂಬದ ಸದಸ್ಯರು ನೀಡುವ ಸಲಹೆಗಳನ್ನು ಕೇಳಿ, ಅದರಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ಈ ಸಲಹೆಗಳು ಅನೇಕ ಬಾರಿ ನಮಗೆ ಗೊಂದಲವನ್ನುಂಟು ಮಾಡುತ್ತಾ ಇರುತ್ತದೆ.
ಇಂದು ನಾವು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಅಗತ್ಯವಾದ ಕೆಲವೊಂದು ಸಲಹೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಈ ಅಂಕಣದಲ್ಲಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ನೀವು ಮಾಡಬೇಕಾದ ಕಾರ್ಯಗಳನ್ನು ಸಹ ತಿಳಿಸಿಕೊಡುತ್ತೇವೆ.
ನಮಗೆಲ್ಲ ತಿಳಿದಿರುವಂತೆ ಸಂಬಂಧವನ್ನು ಗಟ್ಟಿಗೊಳಿಸಲು ಮುಖ್ಯವಾಗಿ ನಂಬಿಕೆ ಬೇಕಾಗುತ್ತದೆ. ಅದೊಂದೇ ನಿಮ್ಮ ಸಂಬಂಧವನ್ನು ಉಳಿಸುತ್ತದೆ ಮತ್ತು ಬೆಳೆಸುತ್ತದೆ. ಕೆಲವೊಮ್ಮೆ ನಿಮ್ಮ ಕುಟುಂಬದವರ ಮತ್ತು ಸ್ನೇಹಿತರ ಸಲಹೆಗಳು ನಿಮ್ಮ ಸಂಬಂಧದಲ್ಲಿ ಸುಧಾರಣೆಯನ್ನು ತರಲು ಸಹಾಯ ಮಾಡಬಹುದು. ಆದರೆ ಕೆಲವೊಮ್ಮೆ ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಸಹ ಹೋಗಬಹುದು.

ನಿಮ್ಮ ಸಂಬಂಧದಲ್ಲಿರುವ ಸಮಸ್ಯೆಗಳ ಕುರಿತು ನೀವು ನಂಬುವಂಥಹ ವ್ಯಕ್ತಿಯೊಂದಿಗೆ ಚರ್ಚೆ ಮಾಡುವುದರಿಂದ ಸಮಸ್ಯೆ ಬಗೆ ಹರಿಯುತ್ತದೆ. ಬನ್ನಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಇರುವ ಸಲಹೆಗಳನ್ನು ಒಮ್ಮೆ ತಿಳಿದುಕೊಂಡು ಬರೋಣ. ಎಚ್ಚರ: ದಾಂಪತ್ಯ ಬಿರುಕಿಗೆ ಸ್ನೇಹಿತರೇ ಕಾರಣವಾಗಬಲ್ಲರು!
ವಾದ ಮಾಡಿ
ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಇರುವ ಒಂದು ಒಳ್ಳೆಯ ಮಾರ್ಗ. ಆದರೆ ಇದನ್ನು ಮುತುವರ್ಜಿಯಿಂದ ಮಾಡಬೇಕು, ವಾದ ಮಾಡುವಾಗ ಕೆಟ್ಟ ಪದಗಳು ಮತ್ತು ನಿಂದನೆಯನ್ನು, ಟೀಕೆಯನ್ನು ಬಳಸಬಾರದು. ಒಂದು ವೇಳೆ ನಿಮ್ಮ ಸಂಬಂಧವು ಕೆಲವೊಂದು ಕಾರಣಗಳಿಂದ ಹಾಳಾಗಿ ಹೋಗುತ್ತಿದೆ ಎಂದು ಅನಿಸಿದಾಗ ಇದನ್ನು ಬಳಸಿ. ನಿಮ್ಮ ಸಂಗಾತಿಯ ಜೊತೆಗೆ ಮುಖಾಮುಖಿಯಾಗಿ ಕುಳಿತು ಮಾತನಾಡಿ. ಆಗ ಸಮಸ್ಯೆ ಪರಸ್ಪರರಿಗೆ ಅರ್ಥವಾಗಿ ಪರಿಹಾರವಾಗಬಹುದು.
ಕೇಳಿ
ಒಂದು ವೇಳೆ ನಿಮ್ಮ ಸಂಗಾತಿಯು ನಿಮಗೆ ಕೆಲವೊಂದು ವಿಷಯಗಳನ್ನು ತಿಳಿಸಲು ಪ್ರಯತ್ನಿಸುತ್ತಿದ್ದರೆ, ಅಥವಾ ಅವರಿಗೆ ಕೆಲವೊಂದು ವಿಷಯಗಳು ತೊಂದರೆಯನ್ನುಂಟು ಮಾಡುತ್ತಿದ್ದಲ್ಲಿ, ಅವುಗಳ ಕುರಿತು ಕೇಳಿ ತಿಳಿದುಕೊಳ್ಳಿ. ಅವರ ಸಮಸ್ಯೆಗಳನ್ನು ಕೇಳುವುದರಿಂದ ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರವನ್ನು ಹುಡುಕುವುದರಿಂದ ನಿಮ್ಮ ಸಂಬಂಧ ಗಟ್ಟಿ ಮುಟ್ಟಾಗುತ್ತದೆ.
ನೋವು
ಒಂದು ವೇಳೆ ನಿಮ್ಮ ಸಂಗಾತಿ ಬಳಸಿದ ಒಂದು ಪದ ಅಥವಾ ಮಾತುಗಳು ನಿಮಗೆ ನೋವುಂಟು ಮಾಡಿದರೆ ಅದನ್ನು ಮುಚ್ಚಿಟ್ಟುಕೊಳ್ಳಲು ಹೋಗಬೇಡಿ. ನಿಮ್ಮ ಮನಸ್ಸು ಪ್ರಶಾಂತವಾಗಿರುವಾಗ, ಅದನ್ನು ಸಮಾಧಾನದಿಂದ ನಿಮ್ಮ ಸಂಗಾತಿಗೆ ತಿಳಿಸಿ. ಇದರಿಂದ ಅವರು ಆ ಪದಗಳನ್ನು ಮತ್ತೆ ಬಳಸುವುದು ನಿಲ್ಲುತ್ತ್ತದೆ. ಈ ಸಲಹೆಯು ಸಹ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸಂಗಾತಿಯಾಗುವವರಲ್ಲಿ ನೀವು ಅಪೇಕ್ಷಿಸುವ ಗುಣಗಳೇನು?
ಕಾಳಜಿ
ನಿಮ್ಮ ಸಂಗಾತಿಯನ್ನು ಕಾಳಜಿಯಿಂದ ನೋಡಿಕೊಳ್ಳುವುದು ತೀರಾ ಅಗತ್ಯ. ಇಡೀ ದಿನ ಕೆಲಸದ ಒತ್ತಡದಲ್ಲಿ ಸಿಕ್ಕಿ ಬಳಲಿ ಬೆಂಡಾಗಿ ಬಂದಾಗ, ಒಂದು ನಗು ಮತ್ತು ಒಂದು ಅಪ್ಪುಗೆಯನ್ನು ಅವರಿಗೆ ನೀಡಿ. ಇದರಿಂದ ನಿಮ್ಮ ಮತ್ತು ಅವರ ಒತ್ತಡಗಳೆರಡು ಇಳಿದು ಹೋಗುತ್ತವೆ. ಸಾಧ್ಯವಾದಷ್ಟು ಜಗಳವಾಡಬೇಡಿ. ಇದರಿಂದ ನಿಮ್ಮ ನಡುವೆ ಬಿರುಕುಗಳು ಉಂಟಾಗಬಹುದು.



Click it and Unblock the Notifications













