Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಮೊದಲ ನೋಟದಲ್ಲೇ ಹೆಣ್ಣಿನ ಚಂಚಲ ಮನಸ್ಸನ್ನು ಗೆಲ್ಲಬಹುದೇ?
ಒಂದು ಕಾಲದಲ್ಲಿ ಸನ್ನೆಯ ಮೂಲಕ ಅಥವಾ ಪ್ರೇಮ ಪತ್ರದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತಿತ್ತು. ಅಂದು ಹುಡುಗಿಯರನ್ನು ಬೀಳಿಸಲು! ಇಷ್ಟು ಮಾತ್ರ ಸಾಕಿತ್ತು. ಪಾಶ್ಚತ್ಯ ದೇಶದಲ್ಲಿ ಈ ಕಾಳು ಹಾಕುವ ಬಗೆಯನ್ನು ಫ್ಲರ್ಟ್ ಎಂದು ಕರೆಯುತ್ತಾರೆ. ಅಲ್ಲಿ ಇದಕ್ಕಾಗಿ ಅವರು ನಾನಾ ತರಹದ ಮಾರ್ಗಗಳನ್ನು ಹುಡುಕುತ್ತಾರೆ.
ಎಷ್ಟಾದರು ಪ್ರೀತಿ ಮತ್ತು ಯುದ್ಧದಲ್ಲಿ ಏನೇ ಮಾಡಿದರು ಒಪ್ಪಿಕೊಳ್ಳಬಹುದು ಎಂಬ ನೀತಿಯೇ ಇವರ ಕಾರ್ಯಸೂಚಿ. ಇನ್ನು ನಮ್ಮ ಭಾರತೀಯ ಹುಡುಗರು ಫ್ಲರ್ಟ್ ಮಾಡುತ್ತಲೆ ಇರುತ್ತಾರೆ. ಇದರಿಂದ ಅವರಿಗೆ ವಿನೋದ, ಕುತೂಹಲ ಮತ್ತು ಪ್ರೀತಿ ಎಲ್ಲವೂ ಏಕಕಾಲಕ್ಕೆ ಒಟ್ಟಿಗೆ ಸಿಗುತ್ತವೆ. ಆದರೆ ಇಲ್ಲಿ ನಿಮ್ಮ ಪ್ರಚೋದನೆಗೆ ತಕ್ಕ ಪ್ರತಿ ಕ್ರಿಯೆಗಳು ಹೇಗೆ ಸಿಗುತ್ತವೆ ಎಂಬುದನ್ನು ನೀವು ತಿಳಿದುಕೊಂಡರೆ, ನಿಮ್ಮ ಕನಸಿನ ಹುಡುಗಿಯನ್ನು ನಿಮ್ಮವಳನ್ನಾಗಿಸಿಕೊಳ್ಳುವುದು ಕಷ್ಟವೇನಲ್ಲ. ಪ್ರೀತಿ ಕುರುಡು ನಿಜ, ಆದರೆ ಫ್ಲರ್ಟಿಂಗ್ ಕುರುಡಲ್ಲ!
ನಿಜವಾಗಿ ಹೇಳಬೇಕೆಂದರೆ ಫ್ಲರ್ಟ್ ಮಾಡುವುದು ಒಳ್ಳೆಯದಲ್ಲ. ಆದರೆ ಅದು ಇಂದು ಜೀವನದ ಒಂದು ಅಂಗವಾಗಿ ಹೋಗಿದೆ. ಪ್ರೀತಿಯನ್ನು ಗೆಲ್ಲಲು ಫ್ಲರ್ಟ್ ಮಾಡುವುದು ತಪ್ಪಲ್ಲ. ಅದರಲ್ಲಿ ಕೂಡಿ ಬಾಳ ಬೇಕೆಂಬ ನೈತಿಕತೆ ಇರಬೇಕು. ವಿಲಕ್ಷಣ ಆನಂದವನ್ನು ಪಡೆಯಬೇಕೆಂಬ ಕೋರಿಕೆ ಇರಬಾರದು. ನೀವು ಕೇಳಬಹುದು ಫ್ಲರ್ಟ್ ಮಾಡುವುದು ಏಕೆ ಮುಖ್ಯ? ಎಂದು. ಮೊದಲ ನೋಟಕ್ಕೆ ಪ್ರೀತಿ ಬರುತ್ತದೆ ಎಂಬ ಬಗ್ಗೆ ನಿಮಗೆ ನಂಬಿಕೆಯಿದೆಯೇ? ನಿಮಗೆ ಪ್ರೀತಿ ಬಂದರು ಅದನ್ನು ನಿಮ್ಮ ಸಂಗಾತಿಯಾಗುವವರಲ್ಲಿ ಆ ಪ್ರೀತಿಯನ್ನು ಮೊದಲ ನೋಟದಲ್ಲಿಯೇ ಮೂಡಿಸಬಲ್ಲಿರಾ? ಅಷ್ಟಕ್ಕೂ ಸುಖಿ ಸಂಸಾರದ ಹಿಂದಿರುವ ಯಶಸ್ಸಿನ ಗುಟ್ಟೇನು?
ಒಂದು ವೇಳೆ ಹುಡುಗ ಅಂತರ್ಮುಖಿಯಾಗಿದ್ದರೆ, ಮೊದಲ ನೋಟಕ್ಕೆ ಏಕೆ, ಮೂರನೆಯ ನೋಟಕ್ಕು ಸಹ ಅವನು ಹುಡುಗಿಗೆ ಅರ್ಥವಾಗುವುದಿಲ್ಲ. ಅದಕ್ಕೆ ಹೇಳುವುದು ಇಂತಹ ಸಂದರ್ಭದಲ್ಲಿ ಫ್ಲರ್ಟ್ ಎನ್ನುವ ರಣನೀತಿಯು ನಿಮ್ಮನ್ನು ಪ್ರೇಮ ಯುದ್ಧದಲ್ಲಿ ವಿಜಯಶಾಲಿಯನ್ನಾಗಿ ಮಾಡುತ್ತದೆ. ಬನ್ನಿ ಆ ತಂತ್ರಗಳು ಯಾವುವು ಮತ್ತು ಹೇಗಿರುತ್ತವೆ ಎಂಬುದು ನಿಮಗೆ ನಾವು ತಿಳಿಸಿಕೊಡುತ್ತೇವೆ. ಮುಂದೆ ಓದಿ....

ಮುಗುಳ್ನಗೆಯೊಂದಿಗೆ ಆರಂಭಿಸಿ
ಸಿಕ್ಕಾಪಟ್ಟೆ, ಹೃದಯಾಂತರಾಳದಿಂದ ನಕ್ಕು ಬಿಡಿ ಎಂದು ನಾವು ಹೇಳುವುದಿಲ್ಲ. ಹುಡುಗಿಯರನ್ನು ಆಕರ್ಷಿಸಲು ಒಂದು ಸಣ್ಣ ಮುಗುಳ್ನಗೆ ಸಾಕು. ನಿಮ್ಮ ಹೃದಯದಿಂದ ಉಕ್ಕಿ ಬರುವ ಎಲ್ಲಾ ಭಾವನೆಗಳನ್ನು ಮುಖದಲ್ಲಿ ತಡೆ ಹಿಡಿದು, ಕುಡಿ ನೋಟ ಬೀರುತ್ತ, ಒಂದು ಸಣ್ಣ ಕಿರು ನಗೆಯೊಂದಿಗೆ ಆಕೆಯನ್ನು ನೋಡಿ. ಇದು ಆರಂಭ ಮಾತ್ರ!

ನೀವು ನೀವಾಗಿರಿ
ನಮ್ಮನ್ನು ನಾವು ಹೀರೋ ಆಗಿ ತೋರಿಸಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ. ಆದರೂ ಸರಿ ಹುಡುಗಿಯರು ದಡ್ಡರಲ್ಲ ಬಾಸ್, ನೀವು ನೀವಾಗಿರಿ. ನೀವು ಮತ್ತೊಬ್ಬರಂತೆ ವೇಷ ಹಾಕಿದರೆ ಅವರು ನಿಮ್ಮತ್ತ ನಾಳೆಯಿಂದ ತಿರುಗಿ ನೋಡದೆ ಹೋಗಬಹುದು. ನಿಮ್ಮತನ ಏನು ಎಂದು ಮಾತ್ರ ತೋರಿಸಿ. ಒಂದು ವೇಳೆ ಅವರು ನಿಮ್ಮ ನಾಟಕವನ್ನು ಒಪ್ಪಿಕೊಂಡರು, ನೀವು ನಾಳೆ ಜೀವನ ಪೂರ್ತಿ ನಾಟಕ ಮಾಡಲಿಕ್ಕಾಗುವುದಿಲ್ಲ ಎಂಬುದನ್ನು ಮರೆಯಬೇಡಿ.

ಆಕೆಯನ್ನು ನಕ್ಕು ನಗಿಸಿ
ನಿಮ್ಮ ಹಾಸ್ಯ ಪ್ರಜ್ಞೆಯನ್ನು ಮತ್ತಷ್ಟು ಹರಿತಗೊಳಿಸಿಕೊಳ್ಳಿ, ಹುಡುಗಿಯರಿಗೆ ತಮ್ಮ ಹಾಸ್ಯ ಪ್ರಙ್ಞೆಯಿಂದ ಇತರರನ್ನು,ಅದರಲ್ಲೂ ತನ್ನನ್ನು ನಗಿಸುವ ಹುಡುಗ ಭಾರೀ ಇಷ್ಟವಾಗುತ್ತಾನೆ. ನಿಮ್ಮ ಜೋಕ್‌ಗಳಿಗೆ ಆಕೆ ನಗಲಿ,ಆಕೆಯ ಜೋಕ್‌ಗೆ ನೀವು ಸಹ ನಕ್ಕುಬಿಡಿ. ಈ ನಗೆಯು ನಿಮ್ಮಿಬ್ಬರ ಪ್ರೇಮ ಸೇತುವೆಯಾಗಿ ಬಿಡುತ್ತದೆ. ಆದ್ದರಿಂದ ಆದಷ್ಟು ಸಮಯಕ್ಕೆ ಸರಿಯಾಗಿ ಹಾಸ್ಯವನ್ನು ಉಕ್ಕಿಸುವ ಹಾಸ್ಯ ಪ್ರಙ್ಞೆ ನಿಮ್ಮದಾಗಲಿ. ಇದರಿಂದ ಸುಲಭವಾಗಿ ನಿಮ್ಮ ಪ್ರೀತಿಯನ್ನು ನೀವು ಪಡೆಯಬಹುದು.

ಆಕೆಯನ್ನು ಹೊಗಳಿ
ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಇದು ಸಹ ಒಂದು. ಆಕೆಯ ಕೆಲಸ ಕಾರ್ಯಗಳನ್ನು, ಉಡುಗೆ-ತೊಡುಗೆಯನ್ನು ಸ್ವಲ್ಪ ಹೊಗಳಿ. ಈ ಹೊಗಳಿಕೆಗಳು ಆಕೆಯನ್ನು ಕರಗಿಸಿ ಬಿಡುತ್ತವೆ. "ವಾವ್, ಸ್ವಲ್ಪ ಹಾಗೆ ಇಲ್ಲಿಯೇ ಓಡಾಡುತ್ತ ಇರಿ, ಈ ಏರಿಯಾದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡು ತುಂಬಾ ದಿನ ಆಯ್ತು" ಎನ್ನುವಂತಹ ಹಾಸ್ಯ ಮಿಶ್ರಿತ ಹೊಗಳಿಕೆಗಳಿಗೆ ಆಕೆಯು ಸಹ ಹುಸಿ ಮುನಿಸಿನಿಂದ ನಗುತ್ತಾಳೆ. ಇಲ್ಲಿ ಸ್ವಲ್ಪ ಪ್ರಾಮಾಣಿಕತೆಯನ್ನು ಉಳಿಸಿಕೊಂಡರೆ ಆಕೆಯು ನಿಮ್ಮ ಹೊಗಳಿಕೆಗಳು ಪೂರ್ಣ ಅಂಕ ನೀಡುತ್ತಾಳೆ.

ಆಕೆಯನ್ನು ಚುಡಾಯಿಸಿ
ನಿಮಗೆ ಗೊತ್ತೆ, ಹುಡುಗಿಯರನ್ನು ಅಣಕಿಸುವ ಮತ್ತು ಚುಡಾಯಿಸುವ ಮೂಲಕವು ಸಹ ಅವರನ್ನು ನಿಮ್ಮ ಪ್ರೀತಿಯ ಬಲೆಯಲ್ಲಿ ಬೀಳಿಸಬಹುದು. ಆದರೆ ಇದು ತುಂಟತನದ ಪರಿಮಿತಿಯಲ್ಲಿರಬೇಕು. ಫ್ಲರ್ಟ್ ಮಾಡುವಾಗ ಪರಸ್ಪರ ಕಾಲೆಳೆಯುವುದು ತೀರಾ ಸಾಮಾನ್ಯ. ನಿಮ್ಮ ಅಣಕಕ್ಕೆ ಆಕೆಯು ನಗುವಂತಿರಬೇಕು ಅಂತಹ ವಿಷಯಗಳನ್ನು ಮಾತ್ರ ಅಣಕಿಸಿ. ಆಗಾಗ ಚುಡಾಯಿಸುತ್ತಾ ಇರಿ.

ಆಕೆಯನ್ನು ಸ್ಪರ್ಶಿಸಲು ನೆಪ ಹುಡುಕಿ
ಛೇ,ಛೇ,ಛೇ! ಈ ರೀತಿ ಮಾಡಬಾರದು ಎಂದು ನೀವು ಭಾವಿಸಿರಬಹುದು. ನಮ್ಮ ಹುಡುಗರು ಪ್ರೀತಿಸುವ ಹುಡುಗಿಯಿಂದ ಮೈಲು ದೂರ ನಿಂತಿರುತ್ತಾರೆ. ಹಾಗೆ ಮಾಡಬೇಡಿ. ಸಭ್ಯತೆಯ ಮಿತಿಯೊಳಗೆ ಪೆನ್ನು ಕೇಳಲು, ಸಹಾಯ ಕೇಳಲು, ಯಾವುದೋ ಕಾರಣಕ್ಕೆ ಸ್ವೀಟ್ ನೀಡಲು, ಅಭಿನಂದಿಸಲು! ಹೀಗೆ ನಾನಾ ನೆಪಗಳ ಮೂಲಕ ಆಕೆಯನ್ನು ಸ್ಪರ್ಶಿಸಿ. ನೆನಪಿಡಿ ನಿಮ್ಮ ಸ್ಪರ್ಶವು ಆಕೆಗೆ ಮುಜುಗರ ತರಬಾರದು. ಆಕೆಗೆ ಇದರಿಂದ ನೋವುಂಟಾಗುವುದಿಲ್ಲ ಎಂದರೆ ಸ್ಪರ್ಶಿಸಿ. ನೆನಪಿಡಿ, ಪ್ರೀತಿ ಮಾಡುವಾಗ ಸಿಗುವ ಸ್ಪರ್ಶದ ರೋಮಾಂಚನ ಮದುವೆಯಾದ ಮೇಲೆ ಸಿಗುವುದಿಲ್ಲ. ಆ ರೋಮಾಂಚನವನ್ನು ನಿಮ್ಮದಾಗಿಸಿಕೊಳ್ಳಲು ಸ್ಪಲ್ಪ ಸಾಹಸ ಮನೋಭಾವ ತೋರಿಸಿ.

ಅವಕಾಶಗಳು ಕೈಜಾರದಂತೆ ನೋಡಿಕೊಳ್ಳಿ
ಕೊನೆಯ ಸಲಹೆ, ಹುಡುಗಿಯೊಂದಿಗೆ ಫ್ಲರ್ಟ್ ಮಾಡುವಾಗ ಸುಮ್ಮನೆ ಕುಳಿತು ಹಗಲುಗನಸು ಕಾಣಬೇಡಿ. ಆಕೆಯನ್ನು ಚುಡಾಯಿಸುವ, ಹೊಗಳುವ, ಸ್ಪರ್ಶಿಸುವ, ನೋಡಿ ಮುಗುಳ್ನಗುವ ಯಾವ ಒಂದು ಅವಕಾಶವನ್ನು ಸಹ ಕೈಜಾರದಂತೆ ನೋಡಿಕೊಳ್ಳಿ. ಆಕೆಗೆ ಏನು ಇಷ್ಟ, ಇಷ್ಟವಿಲ್ಲ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಇರುವಿಕೆಯು ಆಕೆಯಲ್ಲಿ ಖುಷಿ ತರಿಸಬೇಕೆ ಹೊರತು ಉಸಿರುಗಟ್ಟಿಸಬಾರದು ಎಂಬುದನ್ನು ನೆನಪಿಡಿ.



Click it and Unblock the Notifications