Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರು ಯಾಕೆ ತಾಯಿಯಂತೆ ಕಾಣುವ ಮಹಿಳೆಯರನ್ನು ಮದುವೆಯಾಗುತ್ತಾರೆ?
ಪುರುಷರು ತಮ್ಮ ತಾಯಿಯನ್ನು ಹೋಲುವ ಮಹಿಳೆಯರನ್ನು ಲಗ್ನವಾಗಲು ಏಕೆ ಇಷ್ಟಪಡುತ್ತಾರೆಯೆಂಬುದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಆದರೂ ನಾವು ಸ್ವಲ್ಪಬುದ್ಧಿ ಉಪಯೋಗಿಸಿ ಇದಕ್ಕೆ ಕಾರಣಗಳನ್ನು ಕಂಡುಹಿಡಿಯಬಹುದು. ಪುರುಷರು ಕೆಲವು ವಿಧದ ಮಹಿಳೆಯರನ್ನು ಇಷ್ಟಪಡುತ್ತಾರೆ.
ಪ್ರತಿಯೊಬ್ಬ ಪುರುಷನಿಗೆ ತನ್ನದೇ ಆದ ವಿಶಿಷ್ಟ ಇಚ್ಚೆಯ ಮಹಿಳೆಯಿರುತ್ತಾಳೆ. ಸಾಮಾನ್ಯವಾಗಿ ಹುಡುಗರು ಸಣ್ಣವರಾಗಿದ್ದಾಗ ತಮ್ಮ ತಾಯಿಯನ್ನು ದೇವತೆಯಂತೆ ಕಾಣುತ್ತಾರೆ. ಸಹಜವಾಗಿಯೇ ಹುಡುಗರು ದೊಡ್ಡವರಾದಮೇಲೆ ತಮ್ಮ ತಾಯಿಯ ಗುಣಗಳಿರುವ ಸಂಗಾತಿಯನ್ನು ಬಯಸುತ್ತಾರೆ.
ಹೀಗಾಗಿ ಕೊನೆಯಲ್ಲಿ ಕೆಲವು ಪುರುಷರು ಸ್ಪಷ್ಟವಾಗಿ ಅರಿವಿಲ್ಲದೆಯೇ ತಮ್ಮ ತಾಯಿಯ ಲಕ್ಷಣಗಳಿರುವ ಮಹಿಳೆಯರನ್ನು ಲಗ್ನವಾಗುತ್ತಾರೆ. ಲಗ್ನವಾಗುವ ಜೀವನಸಂಗಾತಿಯನ್ನು ಆಯ್ಕೆಮಾಡಲು ಕೆಲವು ಅಂಶಗಳು ವಿಶಿಷ್ಟವಾಗಿರುತ್ತವೆ. ನಾವು ಕೊನೆಗೆ ಮದುವೆಯಾದಮೇಲೆ ನಮ್ಮ ನಿರ್ಧಾರಗಳನ್ನು ತರ್ಕಬದ್ಧವಾಗಿ ವಿವರಿಸುತ್ತೇವೆ. ಆದರೆ ವಾಸ್ತವವಾಗಿ ನಾವು ಹುಡುಕುತ್ತಿರುವುದು ಇಂತಹ ಪುರುಷ ಅಥವಾ ಮಹಿಳೆಯನ್ನೇ ಎಂದು ಹೇಳಲು ನಮಗೇ ಗೊತ್ತಿಲ್ಲದಿರುವುದು. ಪುರುಷರು ಚಿಕ್ಕ ವಯಸ್ಸಿನ ಹುಡುಗಿಯರಲ್ಲಿ ತಮ್ಮ ತಾಯಿಯ ಗುಣಗಳನ್ನು ಕಂಡು ಲಗ್ನವಾಗುವ ವಿಷಯಕ್ಕೆ ಸಂಭಂದಿಸಿದಂತೆ ಕೆಲವು ವಿವರಣೆಗಳು ಹೀಗಿವೆ:
ಫೇಸ್ ಬುಕ್ ಸಂಬಂಧಗಳ ಸಮಸ್ಯೆ ನಿವಾರಿಸುವ ಮಾರ್ಗ

ಹೊಂದಾಣಿಕೆಯಿಂದ ನೆಮ್ಮದಿ
ಅನೇಕ ಪುರುಷರು ಅನ್ಯೋನತೆಯಲ್ಲಿ ನೆಮ್ಮದಿ ಮತ್ತು ಆರಾಮವನ್ನು ಎದುರುನೋಡುತ್ತಾರೆ. ಅವರಿಗೆ ಪರಿಚಯವುಳ್ಳ ಮತ್ತು ಗೊತ್ತಿರುವ ಮಹಿಳೆಯರ ಜೊತೆ ಹೆಚ್ಚು ಹೊಂದಾಣಿಕೆಯಿಂದ ಆರಾಮದಿಂದ ಜೀವನ ನಡೆಸಬಹುದೆಂದು ಭಾವಿಸುತ್ತಾರೆ.

ಹೊಂದಾಣಿಕೆ
ಪುರುಷರಿಗೆ ತಾವು ಮದುವೆಯಾಗುವ ಮಹಿಳೆಯು ತಮ್ಮ ಕುಟುಂಬದಲ್ಲಿ ಸರಿಹೊಂದದೇ ಇರಬಹುದೆಂಬ ಹೆದರಿಕೆ ಕಾಡುತ್ತದೆ. ಪ್ರತಿ ಮನುಷ್ಯನೂ ಶಾಂತಿಯುತ ಕುಟುಂಬ ಜೀವನ ನಡೆಸಲು ಇಚ್ಚಿಸುತ್ತಾನೆ. ಅದಕ್ಕೋಸ್ಕರ ತಾಯಿಯಗುಣಗಳಿಂದ ಕೂಡಿದ ಮಹಿಳೆಯನ್ನು ತನ್ನ ಸಂಸಾರಕ್ಕೆ ಸೂಕ್ತವೆಂದು ಖಚಿತಪಡಿಸಿಕೊಂಡು ಮದುವೆಯಾಗಲು ಇಚ್ಚಿಸುತ್ತಾನೆ.

ತಾಯಿ ವಿರುದ್ಧ ಹೆಂಡತಿ
ಸಾಧಾರಣವಾಗಿ ಮನೆಯಲ್ಲಿ ಹೆಂಡತಿಯು ತನ್ನ ಅತ್ತೆಯಜೊತೆ ಒಳ್ಳೆಯ ಹೊಂದಾಣಿಕೆಯಿಂದ ಇರುವುದಿಲ್ಲವೆಂದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಈ ರೀತಿ ಆಗಬಾರದೆಂದು ಒಳ್ಳೆಯ ದೃಷ್ಟಿಯಿಂದ ಪುರುಷನು ತನ್ನ ತಾಯಿಯಂತಿರುವ ಮಹಿಳೆಯನ್ನು ಮದುವೆಯಾದರೆ ಇಬ್ಬರೂ ಒಂದೇ ರೀತಿಯ ಗುಣಗಳನ್ನು ಹೊಂದಿದ್ದು ಪರಸ್ಪರ ಜಗಳವಾಡುವುದಿಲ್ಲವೆಂದು ಭಾವಿಸುತ್ತಾನೆ.

ತಾಯಿ ಮಾಡಿದ ಅಡುಗೆ
ಪುರುಷರು ತಾಯಿ ಮಾಡಿದ ಅಡುಗೆಯನ್ನು ತಮ್ಮ ಜೀವಮಾನದಿಡೀ ಅನುಭವಿಸಲು ಸಾಧ್ಯವಿಲ್ಲದ್ದರಿಂದ ಅದರಿಂದ ವಂಚಿತರಾಗುತ್ತಾರೆ. ಅವರು ಕಾಣುವ ಮಹಿಳೆಯರಲ್ಲಿ ತಮ್ಮ ತಾಯಿಯ ಕೈರುಚಿ ಇರುವ ಮಹಿಳೆಯನ್ನೇ ಮದುವೆಯಾಗಲು ನೋಡುತ್ತಾರೆ.

ಹಳೆಯ ತಪ್ಪುಗಳನ್ನು ಸರಿಪಡಿಸುವುದು
ಕೆಲವು ಪುರುಷರು ಮಾತ್ರ ತಮ್ಮ ತಾಯಿಯ ಗುಣಗಳಿರುವ ಮತ್ತು ಅವರ ನೆನಪುಬರಿಸುವ ಮಹಿಳೆಯರನ್ನು ಇಷ್ಟಪಡುವುದಿಲ್ಲ. ಯಾಕೆಂದರೆ ಅಂತಹ ಪುರುಷರು ತಾವು ಸಣ್ಣವರಾಗಿದ್ದಾಗ ತಮ್ಮ ತಾಯಂದಿರ ಕೆಲವು ಜಟಿಲ ಸಂಬಂಧಗಳ ನೆನಪುಗಳಿಂದ ದೂರವಿರಲು ಬಯಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಪುರುಷರು ತಮ್ಮ ತಾಯಂದಿರು ಮಾಡಿದ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಮಹಿಳೆಯನ್ನು ಮದುವೆಯಾಗುತ್ತಾರೆ.

ಫ್ರಾಯಿಡ್ ಸಿದ್ಧಾಂತ
ಜರ್ಮನ್ ಸಿದ್ಧಾಂತಿ ಸಿಗ್ಮಂಡ್ ಫ್ರಾಯಿಡ್ ಹೇಳುವಂತೆ ಹುಡುಗನ ಮೊದಲ ಆಕರ್ಷಣೆ ಅವನ ತಾಯಿ. ಹೀಗಿದ್ದಾಗ ಅವನು ತನ್ನ ತಂದೆಯನ್ನೇ ಕೊಂದು ಅವನ ಸ್ಥಾನವನ್ನು ಗಿಟ್ಟಿಸಲು ಬಯಸುತ್ತಾನೆ. ಇಂತಹ ಪ್ರಸಂಗಕ್ಕೆ ಓಡಿಪಸ್ ಸಂಕೀರ್ಣ ಎನ್ನುತ್ತಾರೆ. ಅಂತಿಮವಾಗಿ ಪುರುಷನು ತನ್ನ ತಾಯಿಯಂತಿರುವ ಮಹಿಳೆಯನ್ನು ಮದುವೆಯಾಗಿ ತನ್ನ ಮೊದಲನೇ ಹಾರೈಕೆ ಈಡೇರಿಸಿಕೊಳ್ಳುತ್ತಾನೆ.



Click it and Unblock the Notifications
