Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಚುಂಬಿಸುವಾಗ ನಿಮ್ಮ ಸಂಗಾತಿಯನ್ನು ಹೀಗೆ ಬಂಧಿಸಿ!
ಹಲವಾರು ಜನರು ತಮ್ಮ ಸಂಬಂಧದಲ್ಲಿ ತುಂಬಾ ಮುಂದುವರೆಯುವುದಿಲ್ಲ. ಮದುವೆಗೆ ಮುನ್ನ ದೈಹಿಕವಾಗಿ ಮುನ್ನಡೆಯಲು ಕೆಲವು ಹೆಂಗಳೆಯರು ಹಿಂಜರಿಯುತ್ತಾರೆ. ಆದರೆ ಚುಂಬನದ ವಿಷಯಕ್ಕೆ ಬಂದಾಗ ಆಕೆಗೆ ಯಾವುದೇ ತಕರಾರು ಇರುವುದಿಲ್ಲ? ಆಕೆಯೂ ಚುಂಬನದಲ್ಲಿ ಒಂದಾಗುತ್ತಾಳೆ ಅಲ್ಲವೇ?
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರಥಮ ಚುಂಬನ ಯಶಸ್ವಿಯಾಗಲು ಕೆಲವು ಸಲಹೆಗಳು!
ಮೊದಲ ಪ್ರಭಾವ ಕೊನೆಯ ಪ್ರಭಾವ ಎಂಬಂತೆ ನಿಮ್ಮ ಮೊದಲ ಚುಂಬನ ಆಕೆಗೆ ಆತನಿಗೆ ಮುದವನ್ನೀಯಬೇಕು. ನಿಮ್ಮ ಸಂಗಾತಿಗೆ ಹೇಗೆ ಚುಂಬಿಸಬೇಕು ಆಕೆಯನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಕಲೆಯೂ ನಿಮಗೆ ತಿಳಿದಿರಬೇಕು. ಹೀಗಿದ್ದರೆ ಮಾತ್ರ ಚುಂಬನದ ಸುಖ ಶಾಶ್ವತವಾಗಿರುತ್ತದೆ ಆ ಕ್ಷಣ ಮಧುರವಾಗಿರುತ್ತದೆ.
ನೀವು ಚುಂಬಿಸುವಾಗ ನಿಮ್ಮ ಸಂಗಾತಿಯನ್ನು ನೀವು ಭದ್ರವಾಗಿ ಹಿಡಿದಿಟ್ಟುಕೊಳ್ಳುವ ರೀತಿ ಪ್ರಮುಖವಾಗಿರುತ್ತದೆ. ನೀವು ಆಕೆಯನ್ನು ಅಥವಾ ಆತನನ್ನು ಎಷ್ಟು ಆರಾಧಿಸುತ್ತೀರಿ ಎಂಬುದು ಇದರಿಂದ ತಿಳಿದುಬರುತ್ತದೆ. ಆಕೆಯನ್ನು ನಿಮ್ಮ ಬಾಹುಗಳಲ್ಲಿ ಬಂಧಿಸಿ ಅಧರ ರಸವನ್ನು ಹೀರಬೇಕೆಂಬುದು ಆಕೆಯ ಬಯಕೆಯಾಗಿರುತ್ತದೆ ಈ ಕ್ಷಣದ ಒಂದೊಂದು ಸಮಯವನ್ನು ಆಕೆ ತನ್ನಲ್ಲಿ ಬಂಧಿಸಿಡಲು ಕಾತರಳಾಗಿರುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ
ಆದ್ದರಿಂದ ಹುಡುಗರೇ! ನಿಮ್ಮ ಸಂಗಾತಿಯನ್ನು ಚುಂಬಿಸುವಾಗ ಆಕೆಯನ್ನು ನಿಮ್ಮ ಬಾಹುಗಳಲ್ಲಿ ಹೇಗೆ ಬಂಧಿಸಬೇಕು ಎಂಬುದನ್ನು ಕುರಿತು ಕೆಲವು ಸಲಹೆಗಳು ಇಲ್ಲಿವೆ. ಇದರತ್ತ ಕಣ್ಣು ಹಾಯಿಸಿ ಮತ್ತು ನಿಮ್ಮ ರೊಮ್ಯಾಂಟಿಕ್ ಪ್ರದರ್ಶನವನ್ನು ತೋರಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾಹ್ 10 ವಿಭಿನ್ನ ಚುಂಬನಗಳು ಮತ್ತು ಮಹತ್ವಗಳು

ಆಕೆಯ ಕುತ್ತಿಗೆ ಸುತ್ತ:
ನಿಮ್ಮ ಸಂಗಾತಿಯನ್ನು ಚುಂಬಿಸುವಾಗ ಆಕೆಯ ಕುತ್ತಿಗೆಯ ಸುತ್ತ ಕೈಗಳನ್ನು ಬಳಸಿ ಹಿಡಿದುಕೊಳ್ಳುವುದು ಸರಿಯಾದ ಚುಂಬನದ ಭಂಗಿಯಾಗಿದೆ. ಆಕೆಯ ಕುತ್ತಿಗೆಯ ಸುತ್ತ ನಿಮ್ಮ ಕೈಗಳಿಂದ ಆಕೆಯನ್ನು ಬಂಧಿಸುವುದು ಇನ್ನಷ್ಟು ನಿಮ್ಮ ಸಂಗಾತಿಯನ್ನು ಪ್ರಚೋದಿಸುತ್ತದೆ.

ಆಕೆಯ ಕೂದಲಲ್ಲಿ ಬೆರಳಾಡಿಸುವುದು:
ನಿಮ್ಮ ಬೆರಳುಗಳ ಭದ್ರತೆಯನ್ನು ಆಕೆಗೆ ತಿಳಿಸಲು ಮತ್ತು ಚುಂಬಿಸುವಾಗ ಆಕೆಯನ್ನು ಹಿಡಿದುಕೊಳ್ಳಲು ಸೂಕ್ತ ಸ್ಥಳವೆಂದರೆ ಆಕೆಯ ಕೂದಲಲ್ಲಿ ಬೆರಳಾಡಿಸುವುದಾಗಿದೆ.

ಅದ್ಭುತ ಸೊಂಟ:
ಹೆಚ್ಚಿನವರು ಸೊಂಟವನ್ನು ಹಿಡಿದುಕೊಳ್ಳಲು ಬಯಸುತ್ತಾರೆ. ಚುಂಬಿಸುವಾಗ ಆಕೆಯ ಸೊಂಟ ಬಳುಕುವುದನ್ನು ಗಮನಿಸಲು ಮರೆಯದಿರಿ. ಆಕೆ ಚುಂಬನದ ರಸ ನಿಮಿಷವನ್ನು ಅನುಭವಿಸುತ್ತಿದ್ದಾಳೆ ಎಂಬುದನ್ನು ತೋರ್ಪಡಿಸಲು ಇದೊಂದೇ ಸಾಕ್ಷಿಯಾಗಿದೆ.

ಗಲ್ಲವನ್ನು ಹಿಡಿಯುವುದು:
ನಾಚಿಕೆ ಮಾಡುವ ಹುಡುಗರಿಗೆ ಇದೊಂದು ಲಾಭಕರವಾದ ಅಂಶವಾಗಿದೆ. ಚುಂಬಿಸುವಾಗ ಆಕೆಯ ಗಲ್ಲವನ್ನು ಹಿಡಿಯುವುದು ಆಕೆಯನ್ನು ಬಂಧಿಸಲು ಸುಲಭ ಮತ್ತು ಪ್ರಶಸ್ತ ಸ್ಥಳವಾಗಿದೆ.

ಕೈಗಳಲ್ಲಿ ಬಂಧಿಸಿ:
ಆಕೆಯ ಕೈಗಳನ್ನು ನಿಮ್ಮ ಕೈಗಳಲ್ಲಿ ಬಂಧಿಸುತ್ತಾ ಅಧರ ಸವಿಯನ್ನು ಸವಿಯಬಹುದು. ಆಕೆಯ ಕೈಯನ್ನು ನಿಮ್ಮ ಕೈಗಳೊಳಗೆ ಬೆಸೆಯುತ್ತಾ ಚುಂಬನದ ಸ್ವರ್ಗ ಸುಖವನ್ನು ಆಕೆಗೆ ಉಣಿಸಿ.

ಕೆನ್ನೆಯನ್ನು ಹಿಡಿಯುತ್ತಾ:
ಚುಂಬಿಸುವಾಗ ನಿಮ್ಮ ಸಂಗಾತಿಯನ್ನು ಉದ್ರೇಕಿಸುವಂತೆ ಮಾಡಲು ಎಲ್ಲಿ ಹಿಡಿದುಕೊಳ್ಳಬೇಕೆಂದು ಇನ್ನೂ ಆಲೋಚಿಸುತ್ತಿರುವಿರಾ? ಆಕೆಯ ಹೊಳೆಯುವ ಕೆನ್ನೆಗಳನ್ನು ನಿಮ್ಮ ಕರಗಳಲ್ಲಿ ಬಂಧಿಸಿ. ಆಕೆಯ ಕಣ್ಣುಗಳನ್ನು ದಿಟ್ಟಿಸುತ್ತಾ ಅಧರ ಸುಖವನ್ನು ಸವಿಯಿರಿ. ಆಕೆಯ ಕೆನ್ನೆಯನ್ನು ನೀವು ಹಿಡಿದುಕೊಂಡಿರುವಾಗ, ಫೋರ್ಸ್‌ನಲ್ಲಿ ನೀವು ಆಕೆಯನ್ನು ಚುಂಬಿಸಬಹುದು. ಕೆನ್ನೆ ನಿಮಗೆ ಬೇಕಾದ ಭಂಗಿಯಲ್ಲಿದ್ದರೆ ಮಾತ್ರ ಇದು ಸಾಧ್ಯ.

ಪೃಷ್ಠ ಭಾಗವನ್ನು ಹಿಡಿಯುತ್ತಾ:
ನಿಮ್ಮ ಸಂಗಾತಿ ದೊಡ್ಡ ಪೃಷ್ಠವನ್ನು ಹೊಂದಿದ್ದರೆ, ಹುಡುಗರೇ ಅದರ ಬಳಕೆಯನ್ನು ಮಾಡಿ! ನಿಮ್ಮಾಕೆಯನ್ನು ಚುಂಬಿಸುವಾಗ ಆಕೆಯ ಪೃಷ್ಠವನ್ನು ಹಿಡಿದುಕೊಳ್ಳಿ. ಆಕೆ ಖಂಡಿತ ಇದನ್ನು ಇಷ್ಟಪಡುತ್ತಾಳೆ.

ಆಕೆಯ ಬೆನ್ನು ಮೂಳೆಯ ಜುಮ್ಮೆನ್ನಿಸುವಿಕೆ:
ನೀವು ಆಕೆಯನ್ನು ಚುಂಬಿಸುತ್ತಿರುವಾಗ ಆಕೆಯ ಬೆನ್ನು ಮೂಳೆ ಜುಮ್ಮೆನ್ನಲಿ. ತೀರಾ ಸನಿಹಕ್ಕೆ ಬಂದಂತೆ ಆಕೆಯ ಬೆನ್ನುಮೂಳೆ ಸುಖದಿಂದ ನಡುಗುವುದನ್ನು ನೀವು ಗಮನಿಸಬಹುದು.



Click it and Unblock the Notifications