Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ಗಂಡು ಹೆಣ್ಣಿನ ನಡುವಿನ ಪ್ರೀತಿ ಎಂತಹದು ಗೊತ್ತಾ?
ಗಂಡು ಹೆಣ್ಣಿನ ನಡುವಿನ ನಿಜವಾದ ಪ್ರೀತಿಯನ್ನು ಮೀರಿದ ಭಾವನಾತ್ಮಕ ಸಂಬಂಧ ಇಡೀ ಪ್ರಪಂಚದಲ್ಲಿಯೇ ಯಾವುದು ಇಲ್ಲ ಎಂದು ಅದನ್ನು ಅನುಭವಿಸಿದವರಿಗೆ ಗೊತ್ತು. ನೀವು ನಿಮ್ಮ ಕುಟುಂಬದವರಲ್ಲದ, ಸ್ನೇಹಿತರಲ್ಲದ, ವ್ಯಕ್ತಿಯೊಂದಿಗೆ ಅದರಲ್ಲು ನಿಮ್ಮ ವಿರುದ್ಧ ಲಿಂಗದವರೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಮತ್ತು ಅವರೊಂದಿಗೆ ಸಮಯ ಕಳೆಯಲು ಹಾತೊರೆಯುವ ಹಾಗು ಹೆಚ್ಚಿನ ಸಮಯವನ್ನು ಕಳೆಯುವ ಪ್ರಕ್ರಿಯೆಗೆ ಪ್ರೀತಿ ಎಂದು ಹೆಸರು.
ಇಲ್ಲಿ ಪ್ರೀತಿಗೆ ಜಯ, ಅದೇ ಜಗತ್ತನ್ನು ಆಳುವ ಶಕ್ತಿಯಾಗಿರುತ್ತದೆ. ಈ ಪ್ರೀತಿಯು ವರ್ಷಾಕಾಲದ ಮಳೆಯಂತೆ ಗುಡುಗು-ಮಿಂಚು- ಸಿಡಿಲುಗಳ ಆರ್ಭಟದೊಂದಿಗೆ ಬರುವುದಿಲ್ಲ. ವಸಂತ ಋತುವಿನ ಹೂವಿನಂತೆ ಎದೆಯಾಳದಿಂದ ಅರಳಿ ಎದುರಿಗೆ ನಿಲ್ಲುತ್ತದೆ, ನಿಂತು ಕಾಡುತ್ತದೆ, ಕಾಡಿ ಆಟವಾಡಿಸುತ್ತದೆ! ಅದೇಗೆ ಎಂದು ಕೇಳುತ್ತಿದ್ದೀರಾ? ಮುಂದೆ ಓದಿ; ಪ್ರೀತಿ, ಪ್ರೇಮ ,ಪ್ರಣಯದ ವೃತ್ತಾಂತವನ್ನು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರಥಮ ರಾತ್ರಿಗೆ ಸಿದ್ಧಗೊಳ್ಳಲು ಸಹಾಯಕ ಈ 10 ವಿಧಾನಗಳು!

ದೈಹಿಕ ಆಕರ್ಷಣೆ;
ಗಂಡು ಮತ್ತು ಹೆಣ್ಣಿನ ನಡುವೆ ಪ್ರೀತಿ ಉಕ್ಕಲು ಪ್ರಮುಖ ಕಾರಣವಾಗುವುದು ದೈಹಿಕ ಆಕರ್ಷಣೆ. ಇದಕ್ಕೆ ಮುಖ್ಯ ಕಾರಣ ಗಂಡು ಮತ್ತು ಹೆಣ್ಣಿನ ನೈಸರ್ಗಿಕ ಅಂಗ ರಚನೆಗಳು ಮತ್ತು ಲಕ್ಷಣಗಳೆ ಕಾರಣ. ಈ ವ್ಯತ್ಯಾಸಗಳು ಇವರಿಬ್ಬರು ಒಟ್ಟಿಗೆ ಇದ್ದಷ್ಟು ಮತ್ತಷ್ಟು ಹೆಚ್ಚಾಗುವುದು ಸಹಜ.

ಸ್ನೇಹ;
ಇದು ಸ್ವಲ್ಪ ಭಿನ್ನವಾಗಿರುವ ಪ್ರಕ್ರಿಯೆ. ಇಲ್ಲಿ ಗಂಡು ಹೆಣ್ಣನ್ನು ಇಷ್ಟಪಡುತ್ತಾನೆ ಮತ್ತು ಹೆಣ್ಣು ಸಹ ಗಂಡನ್ನು ಇಷ್ಟಪಡುತ್ತಾಳೆ. ಆದರೆ ಇಲ್ಲಿ ದೈಹಿಕ ಆಕರ್ಷಣೆಗಿಂತ ಹೊರತಾದ ಕೆಲವು ಆಲೋಚನೆ ಮತ್ತು ಅಭಿಪ್ರಾಯಗಳಲ್ಲಿ ಅನುರೂಪವಾದ ಸಾಮ್ಯತೆಯು ಇವರಿಬ್ಬರ ಮಧ್ಯೆ ಇರುತ್ತದೆ. ಅದೇ ಇವರ ಪ್ರೇಮಕ್ಕೆ ಅಂಕುರವಾಗಿ ಮಾರ್ಪಾಡಾಗುತ್ತದೆ. ಒಂದೊಮ್ಮೆ ಇಬ್ಬರೂ ಒಬ್ಬರನ್ನೊಬ್ಬರು ದೈಹಿಕವಾಗಿ ಇಷ್ಟಪಟ್ಟಲ್ಲಿ ಅದು ಕೇವಲ ಆಕರ್ಷಣೆಯಾಗಿಯೇ ಉಳಿದುಹೋಗುತ್ತದೆ. ಆ ಸಂಗಾತಿಗಳಲ್ಲಿ ಸಾಮಾನ್ಯ ಆಸಕ್ತಿ ಇಲ್ಲವಾದಲ್ಲಿ ಅವರ ಪ್ರೀತಿಗೆ ಉಳಿಗಾಲವಿರುವುದಿಲ್ಲ. ಅದೇ ಅವರು ಸ್ನೇಹದ ಮಟ್ಟದಲ್ಲಿ ಈ ಆಸಕ್ತಿಗಳನ್ನು ಒಬ್ಬರೊಂದಿಗೆ ಒಬ್ಬರು ಹಂಚಿಕೊಂಡರೆ ಖಂಡಿತ ಅವರ ಪ್ರೀತಿಗೆ ಒಂದು ಹೆದ್ದಾರಿಯು ದೊರೆತಂತಾಗುತ್ತದೆ.

ಪ್ರೀತಿ
ಪ್ರೀತಿಯು ಗಂಡು ಮತ್ತು ಹೆಣ್ಣು ಇಬ್ಬರನ್ನು ಭಾವನಾತ್ಮಕವಾಗಿ ಎರಡು ದೇಹ ಒಂದು ಜೀವ ಎಂಬಂತೆ ಮಾಡುತ್ತದೆ. ಏಕೆಂದರೆ ಈ ಅಂಶವು ಇವರ ಮುಂದಿನ ಬಾಳಿನಲ್ಲಿ ಅತ್ಯಂತ ಮಹತ್ವದ ಅಂಶವಾಗಿ ಪರಿಗಣಿಸಲ್ಪಡುತ್ತದೆ. ಕಾರಣ ಇವರಿಬ್ಬರು ವಿಭಿನ್ನ ಲಿಂಗಗಳಾಗಿದ್ದು, ಒಟ್ಟಿಗೆ ಬಾಳುವ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿರುತ್ತದೆ. ಹೀಗೆ ಇಬ್ಬರು ವ್ಯಕ್ತಿಗಳು ತಮ್ಮ ಭಾವನಾತ್ಮಕ ತಳಹದಿಯ ಮೇಲೆ ಹೊಸ ಜೀವನವನ್ನು ಕಟ್ಟಲು ಪ್ರೀತಿಯು ಆಧಾರ ಸ್ತಂಭವಾಗಿ ಕಾರ್ಯ ನಿರ್ವಹಿಸುತ್ತದೆ.

ಪ್ರೀತಿಗೆ ಯಾವುದೇ ಸ್ವರೂಪವಿಲ್ಲ.
ಸಾಂಪ್ರದಾಯಿಕವಾಗಿ ಸ್ವಲ್ಪ ವಯಸ್ಸಾದ ಗಂಡಸು ತನಗಿಂತ ವಯಸ್ಸಿನಲ್ಲಿ ಚಿಕ್ಕವಳಾದ ಸ್ತ್ರೀಯನ್ನು ಇಷ್ಟಪಡುವುದನ್ನು ಪ್ರೀತಿ ಎಂದು ಕರೆಯುತ್ತಿದ್ದರು. ಆದರೆ ನಿಜವಾಗಿ ಹೇಳಬೇಕೆಂದರೆ ಪ್ರೀತಿಗೆ ವಯಸ್ಸಿನ ಜೊತೆಗೆ ಅಸಲು ಸಂಬಂಧವಿರುವುದಿಲ್ಲ. ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಸ್ನೇಹದ ಹಿನ್ನಲೆಯಲ್ಲಿ ನೋಡಿದರೆ ಯಾರು ಯಾರ ಜೊತೆ ಪ್ರೀತಿಯಲ್ಲಿ ಮುಳುಗಿ ತೇಲುತ್ತಿದ್ದಾರೆ ಎಂಬುದು ತಿಳಿಯುವುದೇ ಇಲ್ಲ. ಇದರ ಸಲುವಾಗಿಯೇ ಇತ್ತೀಚೆಗೆ ನಾವು ವಯಸ್ಸಾದ ಸ್ತ್ರೀಯು, ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಪುರುಷನೊಂದಿಗೆ ಸಂಬಂಧವನ್ನು ಬೆಳೆಸುತ್ತಿರುವ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ.

ಮದುವೆ ; ಪ್ರೀತಿಯ ಸಾರ್ಥಕತೆಯ ಪರಮಾವಧಿ?
ಮದುವೆಯು ಪ್ರೀತಿಯ ಸಾರ್ಥಕತೆಯ ಪರಮಾವಧಿಯೇ? ಮೊದಲು ಗಂಡು - ಹೆಣ್ಣು ಪ್ರೀತಿಸಿ ಮದುವೆಯಾದಾಗ ಹಾಗೆ ಕರೆಯುತ್ತಿದ್ದರು. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಅವರಿಬ್ಬರು ಅನ್ಯೋನ್ಯವಾದ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ, ಅವರಿಬ್ಬರನ್ನು ಬ್ರಹ್ಮ ಬಂದರು ಬೇರೆ ಮಾಡಲು ಆಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಇಂದು ಯಾರೋ ಯಾರನ್ನೋ ಮದುವೆಯಾಗಿರುತ್ತಾರೆ. ಸುಮ್ಮನೆ ಅವರನ್ನೊಮ್ಮೆ ನೋಡಿ. ಇಲ್ಲವಾದಲ್ಲಿ ಲಾಸ್ ವೆಗಾಸ್‍ನಲ್ಲಿ ಚಾಲ್ತಿಯಲ್ಲಿರುವ ಶೆನಾನಿಗನ್ಸ್ ಅನ್ನು ಒಮ್ಮೆ ನೋಡಿ. ಅವರಿಂದ ತಿಳಿದು ಬರುವುದೇನೆಂದರೆ ' ಮದುವೆಯು ನೈಜ ಪ್ರೇಮದ ಪ್ರತಿರೂಪವೇ ಹೊರತು, ಅದೇ ಅದರ ಮಾನದಂಡವಲ್ಲ"



Click it and Unblock the Notifications











