Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಫೇಸ್ ಬುಕ್ ಸಂಬಂಧಗಳ ಸಮಸ್ಯೆ ನಿವಾರಿಸುವ ಮಾರ್ಗ
ಈ ಹಿಂದೆ ನಿಮ್ಮ ಸಂಬಂಧಗಳು, ಸಂಬಂಧಗಳಲ್ಲಿನ ರಹಸ್ಯಗಳು ನಿಮ್ಮ ಕೆಲವೇ ಕೆಲವು ಸ್ನೇಹಿತರಿಗೆ ಹಾಗೂ ಅತ್ಯಂತ ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ತಿಳಿದಿತ್ತು. ಆದರೆ ಇಂದು ಇಡೀ ಜಗತ್ತೇ ನಿಮ್ಮ ಸಂಬಂಧದ ಬಗ್ಗೆ ತಿಳಿದುಕೊಳ್ಳಬಹುದು ಅದು ಫೇಸ್ ಬುಕ್ ಮೂಲಕ! ಫೇಸ್ ಬುಕ್ ನಿಂದಾಗಿ ನೀವು ನಿಮ್ಮ ಸಂಬಂಧಗಳನ್ನು ಅನೇಕ ಕಷ್ಟಗಳಿಗೆ, ಮುಜುಗರಗಳಿಗೆ ಸಿಲುಕಿಸುತ್ತೀರಿ.
ಸಂಬಂಧಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಆರು ಸಲಹೆಗಳು
ಇದರಿಂದ ಫೇಸ್ ಬುಕ್ ಅನೇಕ ದಂಪತಿಗಳ ನಡುವೆ ಕಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಫೇಸ್ ಬುಕ್ ನ ಮಾಯೆ ಅನೇಕ ಸಂಬಂಧಗಳನ್ನು ಹಾಳು ಮಾಡಬಹುದು ಎಂಬುದನ್ನು ಹಲವು ದಂಪತಿಗಳು ನಂಬುತ್ತಾರೆ! ಆದ್ದರಿಂದ ನಿಮ್ಮ ಸಂಬಂಧದ ಸಾರವನ್ನು ಇಡೀ ಜಗತ್ತಿನಿಂದ ಅಂದರೆ 'ಸೈಬರ್ ವರ್ಡ್'ನಿಂದ ದೂರವಿಡಬೇಕಾದರೆ ನೀವು ಅತ್ಯಂತ ಜಾಗರೂಕತೆಯಿಂದ ಅಂತರ್ಜಾಲವನ್ನು ಉಪಯೋಗಿಸಬೇಕು.
ಫೇಸ್ ಬುಕ್ ನಿಂದ ಉಂಟಾದ ಸಮಸ್ಯೆಯಿಂದ ಹೊರಬರಲು ನೀವು ಬಯಸಿದ್ದರೆ, ಬಹಳ ಜಾಗರೂಕತೆಯಿಂದ ಮುನ್ನಡೆಯಬೇಕು. ಮೊಟ್ಟ ಮೊದಲನೆಯದಾಗಿ ನೀವು ಫೇಸ್ ಬುಕ್ ಪೆಜ್ ನಲ್ಲಿ ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕಿಂತ ಮೊದಲು ಯೋಚಿಸಿ.
ಎರಡನೇಯದಾಗಿ ಫೇಸ್ ಬುಕ್ ಗೆ ಅಂಟಿಕೊಂಡಿರುವ ನಿಮ್ಮ ಹವ್ಯಾಸವನ್ನು ಬಿಡಿ. ನೀವು ನಿಮ್ಮ ಸಂಬಂಧಗಳ ಬಗ್ಗೆ ಫೇಸ್ ಬುಕ್ ನಲ್ಲಿ ಅಭಿವ್ಯಕ್ತಪಡಿಸಿದಷ್ಟೂ ನಿಮ್ಮ ಸಂಬಂಧಗಳು ಇನ್ನಷ್ಟು ಹಾಳಾಗುತ್ತಾ ಹೋಗುತ್ತದೆ. ಇಲ್ಲಿ ಫೇಸ್ ಬುಕ್ ನಿಂದ ಉಂಟಾದ ಸಮಸ್ಯೆಗಳನ್ನು ಸರಿಪಡಿಸಲು ಕೆಲವು ಉತ್ತಮ ಉಪಾಯಗಳನ್ನು ಹೇಳಲಾಗಿದೆ.
ಮಾಜಿ ಪ್ರೇಮಿಗೆ ಕಳುಹಿಸಬಾರದ 7 ಟೆಕ್ಸ್ಟ್ ಮೆಸೇಜ್‌ಗಳು

ಪಿಡಿಎ (public display(s) of affection) ಮಿತಿಯಲ್ಲಿರಲಿ
ನಿಮ್ಮ ಮತ್ತು ನಿಮ್ಮ ಸಂಗಾತಿಯ ಅತ್ಯಂತ ನಿಕಟ ಸಂಬಂಧವನ್ನು ಸೂಚಿಸುವ ಫೊಟೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಇಡೀ ಜಗತ್ತೇ ಅದನ್ನು ನೋಡುತ್ತದೆ. ಇದರಿಂದ ನಿಮ್ಮ ಸಂಗಾತಿಗೆ ಕಿರಿಕಿರಿ ಎನ್ನಿಸಬಹುದು. ಆದ್ದರಿಂದ ಅವರಿಗೂ ಇಷ್ಟವಾದ ವಿಷಯಗಳನ್ನು ಮಾತ್ರ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ.

ಕಾಮಪ್ರಚೋದಕ ಪ್ರತಿಕ್ರಿಯೆಗಳು
ಫೇಸ್ ಬುಕ್ ನಲ್ಲಿ ಕಾಮಪ್ರಚೋದಕ ಅಥವಾ ಉದ್ರೇಕಕಾರಿ ಪ್ರತಿಕ್ರಿಯೆ ಮತ್ತು ಜೋಕ್ ಗಳನ್ನು 'ಲೈಕ್' (ಇಷ್ಟಪಡುವುದು) ಅಥವಾ 'ಶ್ಯಾರ್' (ಹಂಚಿಕೊಳ್ಳುವುದು) ಮಾಡಬೇಡಿ. ನಿಮ್ಮ ಸಂಗಾತಿ ಇದನ್ನು ವಯಕ್ತಿಕವಾಗಿ ತೆಗೆದುಕೊಂಡು ಇದರಿಂದ ಅವಮಾನವನ್ನು ಅನುಭವಿಸಬಹುದು. ಇದರಿಂದ ನಿಮ್ಮ ನಡುವೆ ವಿನಾಕಾರಣ ಅತಿರೇಕಕಾರಿ ಜಗಳ ಸಂಭವಿಸಬಹುದು.

ಜಗಳ ಮಾಡದಿರಿ
ಸಾರ್ವಜನಿಕವಾಗಿ ನಿಮ್ಮ ಜಗಳವನ್ನು ಮುಂದುವರೆಸುವುದು ಸರಿಯಲ್ಲ. ನಿಮ್ಮ ಸಂಬಂಧಗಳಲ್ಲಿನ ಸಮಸ್ಯೆಗಳು ಕೇವಲ ವಯಕ್ತಿಕವಾಗಿರಬೇಕು. ಅಂತಹ ಸಮಸ್ಯೆಗಳಿದ್ದರೆ ನಿಮ್ಮ ಸಂಗಾತಿಯೊಂದಿಗೆ ಕುಳಿತು ನೇರವಾಗಿ ಮಾತನಾಡಿ. ಅದರ ಬದಲು ಫೇಸ್ ಬುಕ್ ನಲ್ಲಿ ಜಗಳವನ್ನು ಮುಂದುವರಿಸಬೇಡಿ.

ಸಲಹಾತ್ಮಕ ಪೋಸ್ಟ್ ಗಳನ್ನು ಬರೆಯದಿರಿ
ಫೇಸ್ ಬುಕ್ ಎನ್ನುವುದು ವಾಸ್ತವ ಸತ್ಯದ ಒಂದು ಲೋಕ. ನಿಮಗೇನಾದರೂ ಸಂಗಾತಿಗೆ ಹೇಳಬೇಕೆನಿಸಿದರೆ ಸಂದೇಶ ಕಳುಹಿಸುವುದು, ಅಥವಾ ಮೈಲ್ (ಮಿಂಚಂಚೆ) ರವಾನಿಸುವುದು ಉತ್ತಮ.

ಸಂಬಂಧಗಳ ಸ್ಟೇಟಸ್ (ಸ್ಥಿತಿ) ಬದಲಾಯಿಸಿ ಅಥವಾ ಮರೆಮಾಡಿ
ಸಂಗಾತಿಯೊಂದಿಗೆ ಜಗಳಾಡಿದಾಗ ಸಾಕಷ್ಟು ಜನರು ತಮ್ಮ ಫೇಸ್ ಬುಕ್ ಸ್ಟೇಟಸ್ ನ್ನು 'ಸಿಂಗಲ್' ಎಂದು ಬದಲಾಯಿಸುವ ಹವ್ಯಾಸ ಹೊಂದಿರುತ್ತಾರೆ. ಜೊತೆಗೆ ಅವರ ಜಗಳ ಎಂದು ಕೊನೆಗೊಳ್ಳುತ್ತದೆಯೋ ಅಂದೇ 'ಕಮಿಟೆಡ್' ಎಂದು ಪುನಃ ಬದಲಾಯಿಸುತ್ತಾರೆ. ನೀವೂ ಇಂತಹ ವಿಚಿತ್ರ ಹವ್ಯಾಸವನ್ನು ಹೊಂದಿದ್ದೀರಾ?

ಟ್ಯಾಗ್ಡ್ ಇನ್ ವಿಷಯದಲ್ಲಿ ಎಚ್ಚರ
ನಿಮ್ಮ ಸ್ನೇಹಿತರೊಂದಿಗೆ ವಿಲಕ್ಷಣ ಪಾರ್ಟಿಗಳನ್ನು ಮಾಡಿದ್ದರೆ ನಿಮ್ಮ ಸ್ನೇಹಿತರಿಗೆ ನಿಮ್ಮ ಪೋಟೋಗಳನ್ನು ನಿಮಗೆ 'ಟ್ಯಾಗ್' ಮಾಡಬಾರದೆಂದು ಮೊದಲೇ ಹೇಳಿ. ಅಲ್ಲದೇ ಫೋಟೋ ಜೊತೆಗೆ ಸ್ಥಳದ ಹೆಸರನ್ನೂ ಪ್ರಸ್ತಾಪಿಸಬೇಡಿ. ಒಂದು ಸಣ್ಣ ಸುಳ್ಳು ನಿಮ್ಮ ಸಂಬಂಧವನ್ನೇ ನಾಶಮಾಡಬಹುದು.

ಸ್ನೇಹಿತರು ಮತ್ತು ಕುಟುಂಬ
ನಿಮ್ಮ ಸಂಗಾತಿಯ ಕುಟುಂಬ, ಅವನ/ಅವಳ ಸ್ನೇಹಿತರನ್ನು ಫೇಸ್ ಬುಕ್ ನಲ್ಲಿ ಜೊತೆಗೂಡಿಸುವ/ ಆಡ್ ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಅವರ ಜೊತೆ ಎಷ್ಟು ವಯಕ್ತಿಕ ವಿಚಾರಗಳನ್ನು ನೀವು ನಿಜವಾಗಲೂ ಹಂಚಿಕೊಳ್ಳಲು ಬಯಸುತ್ತೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸ್ನೇಹಿತರ ಪಟ್ಟಿಯಲ್ಲಿ ಕಡಿಮೆ ಜನರಿರಲಿ
ಫೇಸ್ ಬುಕ್ ನಲ್ಲಿ ಕಡಿಮೆ ಜನರನ್ನು ಸ್ನೇಹಿತರನ್ನಾಗಿಟ್ಟುಕೊಳ್ಳುವುದು ನಿಮಗೇ ಒಳ್ಳೆಯದು. ನಿಮಗೆ ಚೆನ್ನಾಗಿ ಪರಿಚಯವಿರುವ ವ್ಯಕ್ತಿಗಳನ್ನು ಮಾತ್ರ ಸ್ನೇಹಿತರನ್ನಾಗಿ ಸೇರಿಸಿಕೊಳ್ಳಿ. ಫೇಸ್ ಬುಕ್ ನ ಮಾಯೆ ನಿಮ್ಮ ಸಂಬಂಧದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನೂ ಬೀರದ ರೀತಿಯಲ್ಲಿ ಅದನ್ನು ಉಪಯೋಗಿಸಿ. ಇದು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡುವಂತಿರಲಿ.



Click it and Unblock the Notifications











