ಮಹಿಳೆಯರು ಗಂಡಸರಿಗಾಗಿ ಮಾಡಲಾರದ ಕೆಲಸಗಳು....

By Deepak

ದಾಂಪತ್ಯ ಎಂಬುದು ವಿಶ್ವದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾದ ಸಂಬಂಧ. ಇಲ್ಲಿ ಎರಡು ಜೀವಗಳು ಬೇರೆ ಬೇರೆ ಸಾಮಾಜಿಕ, ಮನೋ ವೈಜ್ಞಾನಿಕ, ಆರ್ಥಿಕ ಮತ್ತು ದೈಹಿಕ ಹಿನ್ನಲೆಗಳೊಂದಿಗೆ ಬಂದು ಒಂದೇ ಕಡೆ ಕೂಡಿ ಇರುವ ಕಾಯಕವನ್ನು ನಡೆಸುತ್ತಾರೆ. ಆದರೆ ಇಲ್ಲಿ ಹೊಂದಿಕೊಂಡರೆ ಆ ಮನೆಯೇ ಸ್ವರ್ಗ.

ಅಪ್ಪಿ ತಪ್ಪಿ ಏನಾದರು ಎಡವಟ್ಟಾಯಿತೋ, ಆ ಮನೆ ನರಕಕ್ಕಿಂತ ನಿಕೃಷ್ಟವಾಗಿರುತ್ತದೆ. ಇರಲಿ ಬಿಡಿ ಇಲ್ಲಿ ಮನೆ ಮುರಿಯೋ ಕತೆ ನಮಗ್ಯಾಕೆ. ಇಲ್ಲಿ ನಾವು ಇಂತಹ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು, ತಮ್ಮ ಸ್ವ-ಅಭಿಪ್ರಾಯಕ್ಕೆ ಮನ್ನಣೆ ನೀಡಲು ಹಾತೊರೆಯುವ ಹೆಣ್ಣು ಮಕ್ಕಳ ಬಗ್ಗೆ ಮಾತನಾಡೋಣ.

ತಮ್ಮ ಪರಿಪೂರ್ಣ ಜೀವನವನ್ನು ಜೀವಿಸಲು ಹೆಂಗಸರು ಗಂಡಸರಿಗಾಗಿ ಕೆಲವು ಕೆಲಸಗಳನ್ನು ಮಾಡಲು ನಿರಾಕರಿಸುತ್ತಾರೆ. ಪ್ರೀತಿ ನಿಜಕ್ಕು ಅತ್ಯಂತ ಬಲಿಷ್ಟವಾದ ಶಕ್ತಿ, ಆದರೆ ಅದರಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಮಾತ್ರ ಇರಬಾರದು. ಅವರ ಇಚ್ಛೆಯನ್ನು ಪರಿಗಣಿಸಬೇಕು, ಆದರೆ ನಿಮ್ಮತನವನ್ನು ನೀವು ಕಳೆದುಕೊಳ್ಳಬಾರದಲ್ಲವೇ, ಅದಕ್ಕಾಗಿ ನಾವು ನಿಮಗಾಗಿ ಕೆಲವು ಸಲಹೆಗಳನ್ನು ನೀಡಿದ್ದೇವೆ ಓದಿ;-

ಇನ್ನಷ್ಟಿ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಏಳು ರೀತಿಯ ಪುರುಷರು ನಿಮ್ಮನ್ನು ಎಂದಿಗೂ ಮದುವೆಯಾಗುವುದಿಲ್ಲ !

1. ನಿಮ್ಮ ಕನಸುಗಳನ್ನು ಮರೆಯಿರಿ:

1. ನಿಮ್ಮ ಕನಸುಗಳನ್ನು ಮರೆಯಿರಿ:

ಒಂದು ವೇಳೆ ನೀವು ಶಿಕ್ಷಕಿಯಾಗಬೇಕೆಂದು ಕನಸು ಕಾಣುತ್ತಿದ್ದೀರಿ ಎಂದು ಭಾವಿಸೋಣ. ಆಗ ಆತನನ್ನು ಯಾವುದೇ ಕಾರಣಕ್ಕು ಇದರ ವಿರುದ್ಧವಾಗಿ ಅಥವಾ ಈ ವಿಷಯದಿಂದ ಹೊರಗೆ ಮಾತನಾಡಲು ಬಿಡಬೇಡಿ. ನಿಮ್ಮ ಕನಸು ಮತ್ತು ಗಂಡನನ್ನು ಸರಿದೂಗಿಸಿಕೊಂಡು ಹೋಗುವಂತಹ ಒಂದು ಸೂತ್ರವನ್ನು ಕಂಡು ಹಿಡಿದು ಅದಕ್ಕೆ ಬದ್ಧರಾಗಿ. ನಿಮ್ಮಿಬ್ಬರಲ್ಲಿ ಅನನ್ಯವಾದ ಪ್ರೀತಿ ಇದ್ದಲ್ಲಿ ಈ ವಿಚಾರ ಸಮಸ್ಯೆಯೇ ಆಗುವುದಿಲ್ಲ. ಇಬ್ಬರು ಕುಳಿತು ಇದಕ್ಕೆ ಮಾರ್ಗವನ್ನು ಹುಡುಕುವುದೇನು ಕಷ್ಟವಲ್ಲ. ಹಾಗೆಂದು ಅದೇ ವೃತ್ತಿಯಲ್ಲಿ ಜೀವನ ಪರ್ಯಂತ ಇರುತ್ತೀರಿ ಎಂಬುದು ಸುಳ್ಳು. ಹಾಗೆಂದು ಗಂಡನ ಜೊತೆ ಬಾಳುವ ಸಲುವಾಗಿ ಕನಸನ್ನು ಸಾಧಿಸುವ ಒಂದು ಪ್ರಯತ್ನವನ್ನು ಮಾಡುವ ಅವಕಾಶವನ್ನು ಹೆಂಗಸರು ಬಿಟ್ಟುಕೊಡಲು ತಯಾರಿರುವುದಿಲ್ಲ ಎಂಬುದು ತಿಳಿದಿರಲಿ.

2. ನಿಮ್ಮ ಸ್ನೇಹಿತರ ಜೊತೆ ಕಾಲ ಕಳೆಯುವ ಸಮಯವನ್ನು ತ್ಯಾಗಮಾಡುವುದು:

2. ನಿಮ್ಮ ಸ್ನೇಹಿತರ ಜೊತೆ ಕಾಲ ಕಳೆಯುವ ಸಮಯವನ್ನು ತ್ಯಾಗಮಾಡುವುದು:

ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ಮನುಷ್ಯನಿಗು ದಿನಕ್ಕೆ ಕೇವಲ 24 ಗಂಟೆಗಳು ಮಾತ್ರ ದೊರೆಯುತ್ತವೆ. ಇಷ್ಟು ಅವಧಿ ಇದ್ದರು ನೀವು ನಿಮ್ಮ ಗಂಡನ ಜೊತೆಯಲ್ಲಿ ಕಾಲ ಕಳೆಯಲು ಸಮಯಾವಕಾಶವೇ ದೊರೆಯುವುದಿಲ್ಲ. ನಿಮಗು ಗೊತ್ತಿದೆಯೋ, ಅಥವಾ ಗೊತ್ತಿಲ್ಲವೋ ತಿಳಿಯದು. ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ನಿಮ್ಮ ಅಗತ್ಯ ಅತ್ಯಗತ್ಯವಾಗಿ ಇರುತ್ತದೆ. ಅದಕ್ಕಾಗಿ ನೀವು ನಿಮ್ಮ ಸಮಯವನ್ನು ಸರಿಯಾಗಿ ಹೊಂದಿಸಿಕೊಳ್ಳಿ. ಯಾವುದೇ ಕಾರಣಕ್ಕು ನಿಮ್ಮ ಸ್ನೇಹಿತರನ್ನು ಉದಾಸೀನ ಮಾಡಬೇಡಿ. ಏಕೆಂದರೆ ಇವರ ಅಗತ್ಯ ಜೀವನ ಪರ್ಯಂತ ನಿಮಗೆ ಬೇಕಾಗಿರುತ್ತದೆ.

3. ಹುಚ್ಚುಚ್ಚಾಗಿ ಆಡಿ:

3. ಹುಚ್ಚುಚ್ಚಾಗಿ ಆಡಿ:

ಯಾವುದೇ ಕಾರಣಕ್ಕು ನೀವು ಇತರರನ್ನು ಅನುಕರಿಸಲು ಹೋಗಬೇಡಿ, ನಿಮ್ಮಂತೆ ನೀವಿರಿ. ಅವರನ್ನು ಮೆಚ್ಚಿಸಲು ಅತಿ ಬುದ್ಧಿವಂತೆಯಂತೆ ಅಥವಾ ದಡ್ಡಿಯಂತೆ ನಟಿಸುವ ಅವಶ್ಯಕತೆಯಿಲ್ಲ. ನೀವು ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ. ಪ್ರತಿ ಗಂಡಸರು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯವಿರುವ ಹೆಂಗಸರನ್ನು ಇಷ್ಟಪಡುತ್ತಾರೆ. ನೀವು ಕೆಲಸಗಳನ್ನು ನಿಭಾಯಿಸುವಂತಹ ಸಾಮರ್ಥ್ಯಕ್ಕೆ ನಿಮ್ಮವರು ಮೆಚ್ಚುಗೆಯನ್ನು ಸಹ ವ್ಯಕ್ತ ಪಡಿಸುತ್ತಾರೆ.

4. ಉಪವಾಸ ಮಾಡುವುದು:

4. ಉಪವಾಸ ಮಾಡುವುದು:

ಆರೋಗ್ಯವಾಗಿ ಇರುವುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದು ತಪ್ಪಲ್ಲ. ಒಂದುವೇಳೆ ನೀವು ವ್ಯಾಯಾಮ ಅಥವಾ ಪಥ್ಯವನ್ನು ಶುರು ಮಾಡಬೇಕೆಂದುಕೊಂಡರೆ ಒಳ್ಳೆಯದು!. ಏನೇ ಮಾಡಿ ನೀವು ಚೆನ್ನಾಗಿರಬೇಕು ಮತ್ತು ಅದು ನಿಮ್ಮ ಇಚ್ಛೆಯಾಗಿರಬೇಕು. ಯಾವುದೇ ಕಾರಣಕ್ಕು ಇತರರನ್ನು ಮೆಚ್ಚಿಸಲು, ವಿಶೇಷವಾಗಿ ನಿಮ್ಮ ಗಂಡನನ್ನು ಅಥವಾ ಸಂಗಾತಿಯನ್ನು ಮೆಚ್ಚಿಸಲು ಮಾತ್ರ ಇದನ್ನು ಮಾಡಬೇಡಿ. ಇದರ ಜೊತೆಗೆ ಮುಖ್ಯವಾದ ಅಂಶವೆಂದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ವಿಪರೀತವಾದ ಕ್ರಮಗಳನ್ನು ಅನುಸರಿಸಬೇಡಿ. ಅಂದರೆ ಉಪವಾಸ ಕೂರುವುದು ಅಥವಾ ದೇಹ ಶುದ್ಧಿಗೊಳಿಸುವುದು ಇತ್ಯಾದಿ. ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಹಲವಾರು ಆರೋಗ್ಯಕರವಾದ ಕ್ರಮಗಳು ಲಭ್ಯವಿವೆ. ಅವುಗಳಲ್ಲಿ ನಿಮಗೆ ಹೊಂದುವಂತಹ ಒಂದು ಕ್ರಮವನ್ನು ಆಯ್ದುಕೊಳ್ಳಿ.

5. ನಿಮ್ಮವರು ನಿಮ್ಮನ್ನು ನಿಯಂತ್ರಿಸಲಿ:

5. ನಿಮ್ಮವರು ನಿಮ್ಮನ್ನು ನಿಯಂತ್ರಿಸಲಿ:

ನೀವು ನಿಮ್ಮವರನ್ನು ಎಷ್ಟು ಪ್ರೀತಿ ಮಾಡುತ್ತೀರೋ, ಅಷ್ಟೇ ನಿಮ್ಮವರು ನಿಮ್ಮನ್ನು ನಿಯಂತ್ರಿಸಲು ಆಗದಷ್ಟು ದೂರವಾಗುತ್ತೀರಿ. ಒಂದು ಸಂಬಂಧದಲ್ಲಿರುವಾಗ, ಯಾವುದಾದರು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಚರ್ಚೆಯ ಅಗತ್ಯವಿರುತ್ತದೆ. ಆದರೂ ಸಹ ನೀವು ಏನಾಗಬೇಕು ಮತ್ತು ನೀವು ಏನು? ಎಂಬುದರ ಕುರಿತಾಗಿ ಆತನ ಬಳಿಯಲ್ಲಿ ಯಾವುದೇ ಕೊನೆಯ ನಿರ್ಧಾರಗಳು ಇರುವುದಿಲ್ಲ. ಕೊನೆಗೆ ನೀವು ಜೀವನದಲ್ಲಿ ಏನು ಬಯಸಿರುತ್ತೀರೋ, ಅದೇ ಮಾರ್ಗವನ್ನು ಆರಿಸಿಕೊಳ್ಳುತ್ತೀರಿ.

6. ಮಕ್ಕಳನ್ನು ಪಡೆಯಿರಿ:

6. ಮಕ್ಕಳನ್ನು ಪಡೆಯಿರಿ:

ಒಂದು ವೇಳೆ ನಿಮ್ಮ ಗಂಡ ಮತ್ತು ನಿಮಗೆ ಇಬ್ಬರಿಗು ಮಕ್ಕಳನ್ನು ಪಡೆಯುವ ಆಲೋಚನೆ ಬಂದಲ್ಲಿ ಒಳ್ಳೆಯದು. ಆದರೆ ಒಂದೊಮ್ಮೆ ನಿಮ್ಮ ಗಂಡನಿಗೆ ಮಕ್ಕಳ ಅವಶ್ಯಕತೆ ಇದ್ದು, ನಿಮಗೆ ಮಕ್ಕಳು ಬೇಕಾಗಿಲ್ಲವೆಂದಲ್ಲಿ, ಮೊದಲು ಆ ವಿಚಾರವನ್ನು ಆತನಿಗೆ ನಯವಾಗಿ ತಿಳಿಸಿ. ಮಕ್ಕಳನ್ನು ಪಡೆಯುವುದು ಒಂದು ದೊಡ್ಡ ಆಯ್ಕೆಯಾಗಿರುತ್ತದೆ. ಅದಕ್ಕೆ ಇಬ್ಬರ ಸಹಕಾರ ಅತ್ಯಗತ್ಯ. ಆತನಿಗೆ ಒಂದು ಮಗು ಬೇಕು, ಅದು ನಿಮ್ಮಿಂದ ಮಾತ್ರ ಸಾಧ್ಯ. ನಿಮ್ಮ ಸಮ್ಮತಿ ಇದರಲ್ಲಿ ತುಂಬ ಅವಶ್ಯಕ, ಈ ಅಭಿಲಾಷೆಯನ್ನು ಕಾರ್ಯರೂಪಕ್ಕೆ ತರುವ ಮಾರ್ಗವನ್ನು ಮೊದಲು ಯೋಚಿಸಿ.

X
Desktop Bottom Promotion