Latest Updates
-
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ!
ತನ್ನ ಗಂಡನ ಸಹಕಾರವಿಲ್ಲದೆ ಮಹಿಳೆಯರು ಏನೆಲ್ಲಾ ಮಾಡಬಹುದು?
ಇತ್ತೀಚೆಗೆ ಗಂಡ ಹೆಂಡತಿ ಇಬ್ಬರೂ ದುಡಿಯುವ ಸಂದರ್ಭಗಳು ಹೆಚ್ಚು. ಪರಸ್ಪರರಿಗೆ ರಜೆ ಸಿಕ್ಕಾಗ ಇವರ ಸಂತೋಷ. ಹೀಗೆ ಎಲ್ಲವೂ ಒಟ್ಟಿಗೆ ಸಂತೋಷಪಡುವ ಸಂದರ್ಭವನ್ನು ಪರಸ್ಪರ ಯೋಜನೆ ಮಾಡಿಕೊಳ್ಳುತ್ತಾರೆ. ದಂಪತಿಗಳು. ದಾಂಪತ್ಯದಲ್ಲಿದ್ದಾಗ ಪರಸ್ಪರ ಅವಲಂಬನೆಯ ಮನೋಭಾವ ಎಲ್ಲರಲ್ಲು ಸಹಜವೆ. ಅದರಲ್ಲು ಇಂತಹ ಮನೋಭಾವವು ಸ್ತ್ರೀಯರಲ್ಲಿ ಹೆಚ್ಚಾಗಿ, ಅವರು ತಮ್ಮ ಗಂಡನ ಮೇಲೆ ಅವಲಂಬನೆಯಾಗುವಂತಹ ಸಂದರ್ಭಗಳೆ ಹೆಚ್ಚು.
ಇಂದಿನ ಕಾಲದಲ್ಲಿ ಹೆಣ್ಣು ಸಹ ಸ್ವತಂತ್ರವನ್ನು ಬಯಸುತ್ತಾಳೆ. ಅದರರ್ಥ ನೀವು ನಿಮ್ಮ ಗಂಡನ ಮೇಲೆ ಸ್ವಲ್ಪವೂ ಅವಲಂಬನೆಯಾಗಬೇಡಿ ಎಂದು ನಾವು ಹೇಳುತ್ತಿಲ್ಲ. ಹೆಂಗಸು ತನ್ನ ಗಂಡನ ಸಹಾಯವಿಲ್ಲದೆ ಮಾಡಬಹುದಾದ ಕೆಲವೊಂದು ಕೆಲಸಗಳು ಸರಳವಾಗಿರುತ್ತವೆ. ಮೊದಲಿಗೆ ಆಕೆಯು ಒಬ್ಬಳೇ ಶಾಪಿಂಗ್ ಮಾಡಬಹುದು. ನಿಮ್ಮ ಗಂಡನೊಂದಿಗೆ ಶಾಪಿಂಗ್ ಹೋಗುವುದೆಂದರೆ ಆತನಿಗೆ ಬೋರ್ ಮಾಡುವುದಷ್ಟೇ ಅದರ ಉದ್ದೇಶವಾಗಿಬಿಡಬಹುದಾದ ಅಪಾಯವಿರುತ್ತದೆ.
ಎರಡನೆಯದಾಗಿ, ಹೆಂಗಸು ಒಬ್ಬಳೆ ಪ್ರವಾಸ ಮಾಡಬಹುದಾದಂತಹ ಧೈರ್ಯವನ್ನು ಪಡೆದುಕೊಳ್ಳಬೇಕು. ಕೆಲವೊಂದು ಹೆಂಗಸರು ಇಡೀ ವಿಶ್ವವನ್ನೆ ಏಕಾಂಗಿಯಾಗಿ ಸುತ್ತಾಡಿಕೊಂಡು ಬರುವ ಧೈರ್ಯವನ್ನು ಸಹ ತೋರಿರುತ್ತಾರೆ. ಆದರೆ ಬಹುತೇಕ ಮಂದಿ ಈ ವಿಚಾರದಲ್ಲಿ ಹಿಂದು- ಮುಂದು ನೋಡುತ್ತಾರೆ.
ಒಂದು ಹೆಂಗಸು ಸಂಬಂಧದಲ್ಲಿದ್ದಾಗ ಮಾಡಬಹುದಾದ ಎರಡು ಅಂಶಗಳಿವೆ. ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ಕೊಳ್ಳಲು ತನ್ನ ಗಂಡನ ಮೇಲೆ ಹೆಂಡತಿಯರು ಅವಲಂಬಿತರಾಗಿರುತ್ತಾರೆ. ಆದರೆ ಇದನ್ನು ಹೆಂಗಸರೆ ಏಕಾಂಗಿಯಾಗಿ ಮಾಡಿಕೊಳ್ಳಬಹುದು. ಹೆಂಗಸರು ತಮ್ಮ ಗಂಡಂದಿರನ್ನು ಮನೆಯ ಕೆಲಸಗಳಿಗೆ ಹಚ್ಚುವುದರಲ್ಲಿ ಬುದ್ಧಿವಂತರು. ಆದ್ದರಿಂದ ಇವರು ಸ್ವತಂತ್ರರಾಗಿ ಇರಬೇಕು ಎಂದರೆ ಅವರ ಪಾಡಿಗೆ ಅವರು ಕೆಲವೊಂದು ಕೆಲಸಗಳನ್ನು ಮಾಡಿಕೊಳ್ಳಬೇಕು. ಇಲ್ಲಿ ನಾವು ಅಂತಹ ಕೆಲಸಗಳ ಕುರಿತಾಗಿ ನಿಮಗೆ ಹೇಳುತ್ತಿದ್ದೇವೆ.
ಸಂಬಂಧಗಳನ್ನು ಮಧುರವಾಗಿಸಿಕೊಳ್ಳುವಲ್ಲಿ ಜನರು ಏಕೆ ವಿಫಲವಾಗುತ್ತಿದ್ದಾರೆ?

ಒಬ್ಬರೆ ಶಾಪಿಂಗ್ ಮಾಡಿ
ಗಂಡಸರಿಗೆ ಶಾಪಿಂಗ್ ಎಂದರೆ ಅಷ್ಟಕ್ಕಷ್ಟೇ. ಅವರಿಗೆ ನಿಮ್ಮ ಶಾಪಿಂಗ್ ವೈಖರಿಯ ಬಗ್ಗೆ ಸುತರಾಂ ಇಷ್ಟವಾಗುವುದಿಲ್ಲ. ಆದ್ದರಿಂದ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕೆಂದರೆ ನಿಮ್ಮ ಪಾಡಿಗೆ ನೀವೇ ಶಾಪಿಂಗ್ ಮಾಡಿ. ಇದರಿಂದ ಅವರಿಗೆ ಖುಷಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಡ್ರೈವ್ ಮಾಡಲು ಹೋಗಿ
ಹೆಂಗಸರು ಒಬ್ಬರೇ ಮಾಡಬಹುದಾದ ಕೆಲವೊಂದು ಕೆಲಸಗಳಲ್ಲಿ ಇದು ಒಂದು. ನಿಮ್ಮಲ್ಲಿ ಕಾರ್ ಇದ್ದಲ್ಲಿ, ಡ್ರೈವಿಂಗ್‍ಗಾಗಿ ಗಂಡನಿಗಾಗಿ ಕಾಯದೆ ನೀವೇ ಒಮ್ಮೊಮ್ಮೆ ಲಾಂಗ್ ಡ್ರೈವ್ ಹೋಗಿ ಬನ್ನಿ. ಸಂಜೆಯಾಗುವವರೆಗೆ ಡ್ರೈವ್ ಮಾಡಿಕೊಂಡು ಬರುವುದರಿಂದ ನಿಮಗೆ ನಿಮ್ಮೊಂದಿಗೆ ಕಾಲ ಕಳೆಯುವ ಭಾಗ್ಯವು ದೊರೆಯುತ್ತದೆ. ಇದು ಪ್ರತಿಯೊಬ್ಬರ ಜೀವನದಲ್ಲಿಯು ಅಗತ್ಯವಾಗಿ ಬೇಕಾಗಿರುವ ಅಂಶವಾಗಿದೆ.

ಮಾಲ್‍ಗಳಿಗೆ ಹೋಗಿ ಬನ್ನಿ
ಮಾಲ್‍ಗಳು ವಿಶೇಷವಾಗಿ ಸ್ತ್ರೀಯರಿಗಾಗಿಯೆ ಮಾಡಿರುತ್ತಾರೆ. ಯಾವುದೇ ಮಾಲ್‍ಗೆ ಹೋಗಿ, ಅಲ್ಲಿ ಹೆಂಗಸರದೆ ದರ್ಬಾರ್ ನಡೆದಿರುತ್ತದೆ. ನಿಮ್ಮ ಅವಧಿಯನ್ನು ಇಲ್ಲಿನ ವಿಂಡೋ ಶಾಪಿಂಗ್‍ನಲ್ಲಿ ನೀವು ಕಳೆಯಬಹುದು.

"ನಿಮ್ಮ" ನೆಚ್ಚಿನ ತಿಂಡಿಯನ್ನು ತಯಾರಿಸಿ
ನೀವು ನಿಮ್ಮ ಗಂಡನ ನೆಚ್ಚಿನ ತಿಂಡಿಯನ್ನು ತಯಾರಿಸಲಿಲ್ಲವೇ? ಇಂದು ಸಮಯ ಮರಳಿ ಬಂದಿದೆ. ನಿಮ್ಮ ಅಡುಗೆ ಪುಸ್ತಕವನ್ನು ಮತ್ತೊಮ್ಮೆ ತೆಗೆಯಿರಿ ಮತ್ತು ನಿಮಗೆ ಇಷ್ಟವಾಗುವ ಅಡುಗೆಯನ್ನು ಮಾಡಿಕೊಳ್ಳಿ. ಇದು ಸ್ತ್ರೀಯರಿಗೆ ಸಂತೋಷವನ್ನು ತರುವ ಕೆಲಸ, ಬಿಡಬೇಡಿ ಮಾಡಿ ತಿನ್ನಿ.

ಸಣ್ಣದಾಗಿ ನಿದ್ದೆ ಮಾಡಿ
ಒಬ್ಬರೇ ಏಕಾಂತದಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡಿ. ಇದೇನು ಎಲ್ಲರೂ ಮಾಡುತ್ತಾರೆ ಅದರಲ್ಲೇನು ವಿಶೇಷ ಎನ್ನಬೇಡಿ. ನಿಮಗೆ ಇಷ್ಟವಾಗುವ ಮೃದುವಾದ ತಲೆದಿಂಬುಗಳನ್ನು ಇಟ್ಟುಕೊಂಡು, ಕೇವಲ ನಿಮ್ಮ ಮನಸ್ಸಂತೋಷಕ್ಕಾಗಿ ನಿದ್ದೆ ಮಾಡಿ. ಇದಕ್ಕೇನು ಯಾರ ಅನುಮತಿಯು ಬೇಕಾಗಿಲ್ಲ!

ನೀವು ನಿಮ್ಮಂತೆ ಸ್ವಲ್ಪ ಹೊತ್ತು ಇರಿ
ಯಾವಾಗಲು ನಿಮ್ಮ ಗಂಡನನ್ನು ಮೆಚ್ಚಿಸಲು ಪ್ರಯತ್ನಿಸುತ್ತ ಕೂರಬೇಡಿ. ಅದು ಒಳ್ಳೆಯ ಆಲೋಚನೆಯು ಅಲ್ಲ. ಹಸ್ತಮೈಥುನ ಮಾಡಿಕೊಳ್ಳುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ. ಆದ್ದರಿಂದ ಸಮಯ ಸಿಕ್ಕಾಗ ನಿಮ್ಮನ್ನು ನೀವು ಸಂತೋಷಪಡಿಸಿಕೊಳ್ಳಿ.

ಸ್ವಲ್ಪ ಸಮಯ ಪೋಲಿ ಟಿವಿಯನ್ನು ನೋಡಿ
ನಿಮ್ಮ ಬೆಡ್‍ರೂಮಿನಲ್ಲಿ ನೀವು ಮಾತ್ರ ಇರುವಾಗ ಇದನ್ನು ಮಾಡಬಹುದು. ಯಾರು ಹೇಳಿದ್ದು, ಕೇವಲ ಗಂಡಸರು ಮಾತ್ರ ಪೋಲಿ ವಯಸ್ಕ ಚಿತ್ರಗಳನ್ನು ನೋಡಬೇಕೆಂದು!, ಇದನ್ನು ನೋಡುವುದರಿಂದ ಹೆಂಗಸರಿಗು ಕೆಲವೊಂದು ವಿಚಾರಗಳು ಗೊತ್ತಾಗುತ್ತವೆ. ಸ್ವಲ್ಪ ಮಸಾಲೆ ಇರಲಿ, ನಿಮ್ಮ ಜೀವನಕ್ಕೆ ಬಿಡುವು ಸಿಕ್ಕಾಗ ನೋಡಿ.

ಒಬ್ಬಳೇ ಚಲನಚಿತ್ರವನ್ನು ನೋಡಿ
ಹೆಂಗಸು ಒಬ್ಬಳೇ ಇದ್ದಾಗ ಚಲನಚಿತ್ರವನ್ನು ನೋಡಬಹುದು. ಹೀಗೆ ಮಾಡುವುದರಿಂದ ನಿಮಗಿಷ್ಟ ಬಂದಾಗ ಕಣ್ಣೀರು ಹಾಕಬಹುದು ಅಥವಾ ನಗು ಬಂದಾಗ ಕೇಕೆ ಹಾಕಿ ನಗಬಹುದು.

ವೀಡಿಯೋ ಗೇಮ್‍ನಲ್ಲಿ ಮೋಸ ಮಾಡಬಹುದು
ಹೆಂಗಸರು ಯಾವಾಗಲು ವೀಡಿಯೋ ಗೇಮ್‍ನಲ್ಲಿ ಸೋಲುತ್ತಿರುತ್ತಾರೆ. ನೀವು ಕೆಲವೊಂದು ಲೆವೆಲ್‍ಗಳನ್ನು ಸ್ಕಿಪ್ ಮಾಡಬೇಕಾದಲ್ಲಿ ಒಬ್ಬಳೇ ಇದ್ದಾಗ ಮಾಡಿ. ಇದರಿಂದ ನಿಮಗೆ ಸಂತೋಷ ಸಿಗುತ್ತದೆ. ನೀವು ಗೆದ್ದಿರಿ ಎಂಬ ಸುಳ್ಳು ಭಾವನೆಯು ಸಹ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.

ನಿಮ್ಮ ದಾಹ ತೀರಿಸಿಕೊಳ್ಳಲು ಹೊರಗೆ ಹೋಗಿ ಬನ್ನಿ
ನಿಮಗೆ ಇಷ್ಟವಾಗುವ ಪಾನೀಯಗಳನ್ನು ಸೇವಿಸಲು ನಿಮ್ಮ ಗಂಡನ ಜೊತೆಯಲ್ಲಿಯೇ ಹೋಗಬೇಕು ಎಂದೆನಿಲ್ಲ. ನೀವು ಒಬ್ಬರೇ ಹೋಗಿ ಬರಬಹುದು. ಅದು ಯಾವುದೋ ಕಾಫಿ ಬಾರ್ ಆಗಿರಬಹುದು, ಜ್ಯೂಸ್ ಬಾರ್ ಆಗಿರಬಹುದು ಅಥವಾ ಯಾವುದೇ ಕ್ಲಬ್‍ನ ಪಬ್ ಆಗಿರಬಹುದು. ಹೋಗಿ ಬನ್ನಿ. ಒಂದು ವೇಳೆ ನೀವು ಬೀರ್ ಮುಂತಾದ ಪಾನೀಯಗಳನ್ನು ಸೇವಿಸುವ ಅಭ್ಯಾಸವಿರಿಸಿಕೊಂಡಿದ್ದಲ್ಲಿ, ಸೇವನೆಯ ಮಿತಿಯನ್ನು ಇರಿಸಿಕೊಳ್ಳಿ. ಯಾವುದೇ ಕಾರಣಕ್ಕು ನಿಮ್ಮನ್ನು ನೀವು ಮರೆಯುವಷ್ಟು ಕುಡಿಯಬೇಡಿ.



Click it and Unblock the Notifications











