ಬಾಯ್ ಫ್ರೆಂಡ್‌ನನ್ನು ಮೆಚ್ಚಿಸಲು ಮಾಡಬಾರದ ವಿಷಯಗಳು

By Poornima Hegde

ನೀವು ಯಾವಾಗಲೂ ನಿಮ್ಮ ಬಾಯ್ ಫ್ರೆಂಡ್ ಗಮವವನ್ನು ಸೆಳೆಯಲು ಅವನನ್ನು ಮೆಚ್ಚಿಸುವಂತಹ ಕೆಲಸವನ್ನೇ ಮಾಡುವ ಹಲವು ಮಾರ್ಗಗಳಿವೆ! ನೀವು ಹದಿಹರೆಯದ ಹುಡುಗಿಯೇ ಆಗಿರಿ ಅಥವಾ 25 ವರ್ಷದ ಪ್ರೌಢ ಹುಡುಗಿಯೇ ಆಗಿರಲಿ, ನೀವು ನಿಮ್ಮ ಸ್ನೇಹಿತನನ್ನು ಮೆಚ್ಚಿಸಲು ಆಯ್ದುಕೊಳ್ಳುವ ವಿಧಾನಗಳು ಒಂದೇ ರೀತಿಯಾಗಿರುತ್ತದೆ!

ಆನ್‌ಲೈನ್ ಡೇಟಿಂಗ್ ಮಾಡುತ್ತಿರುವ ಹುಡುಗಿಯರೇ ಸ್ವಲ್ಪ ಹುಷಾರ್!

ಪ್ರತಿಯೊಬ್ಬ ಹುಡುಗಿಯೂ ಆತ ತನ್ನ ಆಜೀವ ಸಂಗಾತಿಯಾಗಿರಲು ಅವರಿಗೆ ಗೊತ್ತಿರುವ ವಿದ್ಯೆಗಳನ್ನೇಲ್ಲ ಉಪಯೋಗಿಸುತ್ತಾರೆ. ಆದರೆ, ಕೆಲವು ವಿಷಯಗಳು ಸಂಬಂಧವನ್ನು ಬೆಸೆಯುವ ಬದಲಿಗೆ ಸಂಬಂಧವನ್ನು ಮುರಿದದ್ದೇ ಹೆಚ್ಚು. ಆದ್ದರಿಂದ ಎಚ್ಚರಿಕೆಯಿಂದ ವರ್ತಿಸುವುದು ಅತ್ಯಗತ್ಯ.

ಒಬ್ಬ ವ್ಯಕ್ತಿ ತನ್ನ ಹುಡುಗಿಯಿಂದ ಏನನ್ನು ನಿರೀಕ್ಷೆ ಮಾಡುತ್ತಾನೆ ಮತ್ತು ಯಾವುದನ್ನು ಆತ ಇಷ್ಟಪಡುವುದಿಲ್ಲ ಎಂಬುದು ಒಬ್ಬ ಹುಡುಗನಲ್ಲದೆ ಬೇರೆ ಯಾರಿಗೆ ತಾನೇ ಗೊತ್ತು ನಾನು, ಒಬ್ಬ ಹುಡುಗನಾಗಿ, ನೀವು ನಿಮ್ಮ ಹುಡುಗನನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮಾಡಲೇಬಾರದ ವಿಷಯಗಳನ್ನು ಬಹಿರಂಗಪಡಿಸುತ್ತಿದ್ದೇನೆ!

ನಿಮ್ಮ ಪತಿಯ ವಂಚನೆಯನ್ನು ತಿಳಿಯುವ 9 ಮಾರ್ಗಗಳು

ಮೂಕರಂತೆ ನಟಿಸಬೇಡಿ

ಮೂಕರಂತೆ ನಟಿಸಬೇಡಿ

ಹುಡುಗಿಯರ ತಮ್ಮ ಹುಡುಗನ ಮುಂದೆ ಮೂಕರಾಗಿರುತ್ತಾರೆ. ವಾಸ್ತವವಾಗಿ, ಕೆಲವು ಹುಡುಗಿಯರು ಮೂಕವಾಗಿ ನಟಿಸಿದರೆ ಹುಡುಗನನ್ನು ಮೆಚ್ಚಿಸಬಹುದು ಎಂದು ಯೋಚಿಸುತ್ತಾರೆ. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ! ಹುಡುಗ ಯಾವಾಗಲೂ ಅವನನ್ನು ಅರ್ಥ ಮಾಡಿಕೊಳ್ಳಬೇಕು, ತನ್ನ ಸಂವೇದನೆಗೆ ಸ್ಪಂದಿಸುವ ಬುದ್ಧಿ ಹೊಂದಿರಬೇಕು ಎಂದೇ ಬಯಸುತ್ತಾನೆ. ಆದ್ದರಿಂದ ಪ್ರೌಢ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ. ಆಗ ನೋಡಿ ನಿಮ್ಮ ಹುಡುಗ ನಿಮ್ಮಿಂದ ಹೇಗೆ ಪ್ರಭಾವಿತನಾಗುತ್ತಾನೆ ಎಂಬುದನ್ನು!

ಯಾವಾಗಲೂ ಸಣ್ಣ ಬಟ್ಟೆಯನ್ನು ಧರಿಸಬೇಡಿ

ಯಾವಾಗಲೂ ಸಣ್ಣ ಬಟ್ಟೆಯನ್ನು ಧರಿಸಬೇಡಿ

ಹುಡುಗಿಯರು ಧರಿಸುವ ಬಟ್ಟೆಗಳಿಂದಲೇ ಅದೆಷ್ಟೋ ಸಂದರ್ಭಗಳಲ್ಲಿ ವಿಪತ್ತು ಸಂಭವಿಸಿದೆ ಎಂದರೆ ನಂಬುತ್ತೀರೇ? ಕೆಲವು ಹುಡುಗಿಯರು ತಮ್ಮ ಹುಡುಗನ ಮನಸ್ಸಿಗೆ ಹತ್ತಿರವಾಗಲು ಸಣ್ಣ ಉಡುಪುಗಳು, ಹಾಟ್ ಪ್ಯಾಂಟ್, ನಂತಹ ಸಣ್ಣ ಬಟ್ಟೆಗಳನ್ನು ಧರಿಸಿದರೆ ಸಾಧ್ಯ ಎಂದು ನಂಬಿರುತ್ತಾರೆ ಆದರೆ ನೆನಪಿಡಿ! ಹುಡುಗರು ತನ್ನ ಹುಡುಗಿಯನ್ನು ಅಂತಹ ಬಟ್ಟೆಯಲ್ಲಿ ನೋಡಲು ಇಷ್ಟಪಡುತ್ತಾರೆ ಆದರೆ ಯಾವಾಗಲೂ ಅಲ್ಲ. ತನ್ನ ಹುಡುಗಿ ಅತಹ್ವಾ ಹೆಂಡತಿಯಾಗಿ ಬರುವವಳು ಯಾವಾಗಲೂ ಇಂತಹ ಬಟ್ಟೆಯನ್ನೇ ಧರಿಸಲಿ ಎಂದು ಯಾವ ಹುಡುಗರೂ ಬಯಸುವುದಿಲ್ಲ. ಅಂತಹ ಬಟ್ಟೆಗಳನ್ನು ನೀವು ಯಾವಾಗಲೂ ಧರಿಸಿದರೆ ನೀವು ಅಸಭ್ಯರಾಗಿ ಕಾಣುವಂತೆ ಮಾಡುತ್ತದೆ. ನೀವು ನಿಜವಾಗಿಯೂ ನಿಮ್ಮ ಹುಡುಗನ ಪ್ರೇಮವನ್ನು ಪಡೆಯಲು ಬಯಸಿದ ವೇಳೆ, ಹೆಚ್ಚಿನ ಸಮಯ ಸಾಮಾನ್ಯ ಮತ್ತು ಯೋಗ್ಯ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.

ನಿಮ್ಮ ನಡವಳಿಕೆಯ ಬಗ್ಗೆ ಗಮನ

ನಿಮ್ಮ ನಡವಳಿಕೆಯ ಬಗ್ಗೆ ಗಮನ

ಹುಡುಗ ಯಾವಾಗಲೂ ಸ್ವಭಾವ ಮತ್ತು ಶಿಷ್ಟಾಚಾರದ ವರ್ತನೆಗಳನ್ನು ನೋಡಿ ಸಂಪೂರ್ಣವಾಗಿ ಹುಡುಗಿಯ ವಶವಾಗುತ್ತಾನೆ. ಇತರರಿಗೆ ಗೌರವ ಮತ್ತು ದೈನ್ಯತೆಯಿಂದ ವರ್ತಿಸುವ ನಿಮ್ಮ ಗುಣ ವಿಸ್ಮಯಕ್ಕೆ ಕಾರಣವಾಗಬಹುದು! ಹುಡುಗಿ ಯಾವಾಗಲೂ ದೈನ್ಯತೆಯಿಂದ ವರ್ತಿಸಬೇಕು ಮತ್ತು ಅಪರಿಚಿತರೊಂದಿಗೆ ಸಹ ಹೇಗೆ ಮಾತನಾಡಬೇಕು ಎಂಬುದು ಅವಳಿಗೆ ಅರಿವಿರಬೇಕು ಎಂದೇ ಹುಡುಗರು ಬಯಸುತ್ತಾರೆ. ಆದ್ದರಿಂದ, ನೆನಪಿಡಿ ನೀವು ಯಾವಾಗಲೂ ಎಲ್ಲರಿಗೂ ಗೌರವ ನೀಡುವುದನ್ನು ರೂಢಿಸಿಕೊಳ್ಳಿ ಅದು ಬೀದಿಯಲ್ಲಿರುವ ಭಿಕ್ಷುಕನೇ ಆಗಿರಬಹುದು ಅಥವಾ ನಿಮ್ಮ ತಂದೆಯ ಜೊತೆಯೇ ಮಾತನಾಡುತ್ತಿರಬಹುದು. ಇತರರಿಗೆ ಗೌರವ ಕೊಡುವ ನಿಮ್ಮ ಈ ಸ್ವಭಾವವೇ ನಿಮ್ಮ ಹುಡುಗನಿಗೂ ಇಷ್ಟ!

ಹುಡುಗನನ್ನು ದೂರಬೇಡಿ

ಹುಡುಗನನ್ನು ದೂರಬೇಡಿ

ಹೆಚ್ಚಿನ ಹುಡುಗಿಯರ ಸಮಸ್ಯೆಯೆಂದರೆ, ನಿನ್ನಲ್ಲಿ ಈ ಗುಣವಿಲ್ಲ ಮತ್ತು ನೀನು ಬದಲಾಗಬೇಕು, ಈ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಸದಾ ಹೇಳುವುದು. ನೀವು ಸೌಮ್ಯವಾಗಿ ಹೇಳುತ್ತಿರಲಿ ಅಥವಾ ನಿಮ್ಮದೇ ಮೇಲುಗೈ ಆಗಿರಲಿ, ಆದರೆ ನಿಮ್ಮ ಹುಡುಗ ನಿಮ್ಮ ಈ ಸ್ವಭಾವದಿಂದ ಅವನ ತೇಜೋವಧೆಯಾಗುತ್ತಿದೆ ಎಂದು ಭಾವಿಸುತ್ತಾನೆ. ಇದು ನಿಮ್ಮ ಸಂಬಂಧದ ಹಿಮ್ಮುಖ ಚಲನೆಗೆ ಕಾರಣವಾಗುತ್ತದೆ. ಆದ್ದರಿಂದ, ಇದನ್ನು ತಪ್ಪಿಸಲು ಸಂದರ್ಭಗಳನ್ನು ಶಾಂತವಾಗಿ ನಿರ್ವಹಿಸಲು ಪ್ರಯತ್ನಿಸಿ.

ಎಲ್ಲರೊಂದಿಗೆ ಅಂತರ ಕಾಪಾಡಿಕೊಳ್ಳುವುದು

ಎಲ್ಲರೊಂದಿಗೆ ಅಂತರ ಕಾಪಾಡಿಕೊಳ್ಳುವುದು

ತನ್ನ ಕಡೆಗೆ ಹುಡುಗನ ಗಮನವನ್ನು ಸೆಳೆಯಲು, ಹುಡುಗಿ ಎಸಗುವ ದೊಡ್ಡ ಪ್ರಮಾದ ಇದಾಗಿದೆ! ಅವನ ಸ್ನೇಹಿತರು ಮತ್ತು ಇತರ ಹುಡುಗಿಯರೊಂದಿಗೆ ಅವನನ್ನು ಬೆರೆಯಲು ಬಿಡುವುದಿಲ್ಲ ಮತ್ತು ಅವನ ಕುಟುಂಬದವರಿಂದಲೂ ಸಹ ಅವನನ್ನು ದೂರ ಇಡಲು ಪ್ರಯತ್ನಿಸುತ್ತಾಳೆ. ಇದು ನಿಮ್ಮನ್ನು ನಿಮ್ಮ ಹುಡುಗನಿಂದ ಬೇರೆ ಮಾಡುವುದಂತೂ ಶತಃಸಿದ್ಧ. ನೆನಪಿಡಿ ಯಾವಾಗಲೂ ಚೇಷ್ಟೆಯ ಈ ಬುದ್ಧಿ ನಿಮ್ಮ ಸಂಬಂಧದ ಬಲಗೊಳಿಸಲು ಸಾಧ್ಯವಿಲ್ಲ ಬದಲಿಗೆ ನಿಮ್ಮ ಸಂಬಂಧ ದುರ್ಬಲಗೊಳ್ಳುತ್ತದೆ. ಜೊತೆಗೆ, ಅವನ ಜೀವನದಲ್ಲಿ ಇತರ ಪ್ರಮುಖ ಜನರು ಇರಬಹುದು ಮತ್ತು ಅವನು ಎಲ್ಲರಿಗೂ ಸಮಯ ನೀಡಬೇಕು ಎಂಬ ವಾಸ್ತವವವನ್ನು ಅರ್ಥ ಮಾಡಿಕೊಳ್ಳಬೇಕು.

ಹುಡುಗರು ಹುಡುಗಿಯರನ್ನು, ಹುಡುಗಿಯರು ಹುಡುಗರನ್ನು ಮೆಚ್ಚಿಸುವುದು ಅದಕ್ಕಾಗಿ ತಮ್ಮದೇ ಮಾರ್ಗ ಅನುಸರಿಸುವುದು ತಪ್ಪಲ್ಲ. ಆದರೆ ಇದಕ್ಕಾಗಿ ನೀವು ಆಯ್ಕೆ ಮಾಡುವ ಯಾವ ಮಾರ್ಗಗಳೂ ಇನ್ನೊಬ್ಬರಿಗೆ ನೋವು, ತೊಂದರೆಯನ್ನು ಉಂಟುಮಾಡದಿರಲಿ. ನಿಮ್ಮ ಸಂಬಂಧ ಇನ್ನಷ್ಟು ಬೆಸೆಯುವಂತಿರಲಿ!

Story first published: Sunday, June 1, 2014, 11:00 [IST]
X
Desktop Bottom Promotion