ಪುರುಷರು ತಮ್ಮ ಗೆಳೆತಿಯಿಂದ ಇಷ್ಟಪಡದಿರುವ ವಿಷಯಗಳಿವು

ತಮ್ಮ ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಯಲ್ಲಿ ಮಹಿಳೆಯರು ಹಾಗೂ ಪುರುಷರು ಭಿನ್ನವಾಗಿರುತ್ತಾರೆ. ನೀವು ತುಂಬಾ ಒಳ್ಳೆಯದೆಂದು ಇಷ್ಟಪಡುವ ವಿಷಯವು ಇನ್ನೊಬ್ಬರಿಗೆ ಕೋಪ ತರಿಸಬಹುದು ಮತ್ತು ಕಿರಿಕಿರಿಯುಂಟು ಮಾಡಬಹುದು.

ಪುರುಷರು ತಮಗೆ ಹೇಳದಿರುವ ವಿಷಯದ ಬಗ್ಗೆ ಮಹಿಳೆಯರು ವಿಶೇಷ ಅರ್ಥ ಕಲ್ಪಿಸಿಕೊಳ್ಳುತ್ತಾರೆ. ಆದರೆ ಪುರುಷರು ಇದನ್ನು ಇಷ್ಟಪಡುವುದಿಲ್ಲ. ಪುರುಷರು ನಿಮ್ಮಿಂದ ನಿರೀಕ್ಷಿಸದ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಇಂತಹ ವಿಷಯಗಳ ಬಗ್ಗೆ ನಿಯಂತ್ರಣ ಸಾಧಿಸಿ ಅವರನ್ನು ಸಂತೋಷವಾಗಿರಿಸಿ.

Things men don’t want from their women

ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುವುದು:
ನಿಮ್ಮ ಸಂಬಂಧವು ಹೊಸತಾಗಿದ್ದರೆ ಆಗ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುವುದರಿಂದ ತುಂಬಾ ಸಂತೋಷವಾಗುತ್ತದೆ. ಆದರೆ ಸಮಯ ಕಳೆದಂತೆ ಗಂಟೆಗಟ್ಟಲೆ ಅಥವಾ 15 ನಿಮಿಷ ಫೋನ್‌ನಲ್ಲಿ ಮಾತನಾಡುವುದರಲ್ಲಿ ಯಾವುದೇ ಉಪಯೋಗವಿಲ್ಲ. ಸಾಯುವ ತನಕ ಪರಸ್ಪರ ಪ್ರೀತಿಸುವವರ ಮಧ್ಯೆ ನಡೆಯುವ ಸಾಮಾನ್ಯ ಮಾತುಕತೆ ಜೀವನ ಮತ್ತು ಸಾವಿನ ಚರ್ಚೆಯ ಹೊರತುಪಡಿಸಿ ಐದು ನಿಮಿಷದೊಳಗೆ ಇರುತ್ತದೆ. ದೀರ್ಘಕಾಲದ ಮಾತುಕತೆ ಪುರುಷರಿಗೆ ಇಷ್ಟವಾಗಲ್ಲ. ಅವರು ಇದರ ಬಗ್ಗೆ ನಿಮಗೆ ಹೇಳುವುದಿಲ್ಲ. ಆದರೆ ಇದು ಸತ್ಯ.

ಹುಡುಗಿಯರು ನಿಮ್ಮಿಂದ ಏಕೆ ದೂರ ಸರಿಯುತ್ತಾರೆ ಗೊತ್ತೇ?

ಅಧಿಕಾರದ ಹೆಣಗಾಟ
ರಿಮೋಟ್ ತೆಗೆದುಕೊಳ್ಳಿ, ಟಿವಿ ಸಮಯ ಹೆಚ್ಚಿಸಿ, ಹೆಚ್ಚು ಸಂಪಾದಿಸಿ, ಪಾರ್ಟಿ ಮಾಡಿ, ಪುರುಷ ನಿಮ್ಮೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುವ ತನಕ ಅಧಿಕಾರದ ಹೆಣಗಾಟ ಇರುವುದಿಲ್ಲ. ಹೆಚ್ಚಿನ ಸಮಯದಲ್ಲಿ ಮಹಿಳೆಯರು ಹೆಚ್ಚು ಸಂಪಾದನೆ ಮಾಡಿದರೆ, ಸುಂದರವಾಗಿ ಕಾಣಿಸುತ್ತಿದ್ದರೆ ಅಥವಾ ಹೆಚ್ಚು ವಿದ್ಯಾಭ್ಯಾಸ ಹೊಂದಿದ್ದರೆ ಪುರುಷರು ಭಯಪಡುತ್ತಾರೆ. ಕೆಲವೊಮ್ಮೆ ಅಧಿಕಾರದ ಹೆಣಗಾಟವು ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತದೆ.

ಬದಲಾವಣೆಯ ಚಳವಳಿಗಾರ
ಹೆಚ್ಚಿನ ಪುರುಷರು ಹಳೆಯ ನಿಯಮಗಳಿಗೆ ಜೋತು ಬೀಳುತ್ತಾರೆ. ಅದು ಮುರಿಯದೇ ಇದ್ದರೆ ಅದನ್ನು ಸರಿಪಡಿಸಬೇಡಿ. ಪುರುಷ ಯಾವ ರೀತಿ ಇದ್ದಾನೆಯಾ ಅದೇ ರೀತಿ ಆತನನ್ನು ಪ್ರೀತಿಸುತ್ತಿದ್ದರೆ ಮತ್ತು ಅದನ್ನೇ ಮುಂದುವರಿಸುವುದಾದರೆ ಆತನ ಸುತ್ತಲೂ ಇರುವುದನ್ನು ಬದಲಾವಣೆ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಸಂಗೀತ, ಬಟ್ಟೆ, ಗೆಳೆಯರ ಬಗ್ಗೆ ಇರುವ ಆತನ ಅಭಿರುಚಿ ಸಾಮಾನ್ಯ ಮತ್ತು ಅದು ಆತನ ಜೀವನಕ್ಕೆ ಅನಿವಾರ್ಯ ಕೂಡ. ಇದರಲ್ಲಿ ಕೆಲವೊಂದು ಬದಲಾವಣೆ ಮಾಡಬೇಕೆಂದು ಬಯಸಿದರೂ ಅದನ್ನು ಪುರುಷರು ಇಷ್ಟಪಡಲಾರರು.

ನಾಚಿಕೆಪಡುವಂತೆ ನಟನೆ
ಕೆಲವು ಸಮಯ ಹೆಚ್ಚಿನ ಪುರುಷರು ಮಿಶ್ರ ಸಂಕೇತ ಪಡೆಯುವುದರಿಂದ ತುಂಬಾ ದಂಗುಬಡಿದಂತಾಗುತ್ತಾರೆ. ಮಹಿಳೆಯರು ರೋಮ್ಯಾಂಟಿಕ್ ಮತ್ತು ಸುಂದರವಾಗಿ ಇರುವ ಬದಲು ನಾಚಿಕೆಪಟ್ಟುಕೊಂಡರೆ ಆಗ ಪುರುಷರು ಗೊಂದಲಕ್ಕೀಡಾಗುತ್ತಾರೆ. ಪುರುಷರು ಸಂಕೀರ್ಣತೆ ಅರಿತುಕೊಳ್ಳಲು ಅಸಮರ್ಥರೆಂದಲ್ಲ. ಆದರೆ ಮಹಿಳೆಯರು ಹೊರಗೆ ಹೋಗುವ ಎಂದು ಕೇಳಿದಾಗ ಪುರುಷರು ಗೊಂದಲಕ್ಕೀಡಾಗುತ್ತಾರೆ. ಪುರುಷ ನಿಮ್ಮನ್ನು ಪ್ರಸ್ತಾಪಿಸಬೇಕೆಂದಿದ್ದರೆ ಆಗ ಒಂದು ಸಣ್ಣ ಸುಳಿವು ಸಾಕಾಗುತ್ತದೆ. ಕಾಲೇಜು ದಿನಗಳಂತೆ ನಿಮ್ಮನ್ನು ಆತ ಹಿಂಬಾಲಿಸಿಕೊಂಡು ಬರುತ್ತಾನೆ ಎಂದು ಭಾವಿಸಬೇಡಿ. ಪುರುಷರು ಖಂಡಿತವಾಗಿಯೂ ಇದನ್ನು ಮಾಡುವುದಿಲ್ಲ.

ಭಾವನಾತ್ಮಕ ಹಿಡಿತ ಸಾಧಿಸುವುದು
ಒಬ್ಬ ವ್ಯಕ್ತಿಯನ್ನು ನೀವು ಹೇಗೆ ಅರ್ಥಮಾಡಿಕೊಂಡಿದ್ದೀರಿ ಎನ್ನವುದನ್ನು ತೋರಿಸುವುದೇ ಭಾವನೆಗಳು. ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಇರುವುದೇ ಭಾವನೆಗಳು. ಭಾವನೆಗಳನ್ನು ಬಳಸಿಕೊಂಡು ಪುರುಷರನ್ನು ಹಿಡಿತ ಸಾಧಿಸುವುದು ಅಥವಾ ಆತನಿಗೆ ಇಷ್ಟವಿಲ್ಲದೆ ಇರುವ ಕೆಲಸವನ್ನು ಮಾಡಿಸುವುದು ಸ್ವಾಭಾವಿಕವಾಗಿ ಸರಿಯಲ್ಲ. ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪುರುಷರು ಸ್ವಲ್ಪ ಹಿಂದೆ. ಆದರೆ ಅವರು ಸಂವಹನ ಮಾಡುವುದಿಲ್ಲವೆಂದಲ್ಲ. ನೀವು ಬಯಸುವ ವಿಷಯಗಳು ಅಷ್ಟು ಸುಲಭವಲ್ಲ. ಆದರೆ ನೀವು ಪ್ರೀತಿಸುವ ವ್ಯಕ್ತಿಯ ಬಗ್ಗೆ ಪ್ರಾಮಾಣಿಕವಾಗಿರಬೇಕು.

X
Desktop Bottom Promotion