ಮದುವೆ ಮೊದಲು ಮಾಡಲೇಬೇಕಾದ ಕೆಲವೊಂದು ವಿಷಯಗಳು!

By Vishwanth

ಬ್ರಹ್ಮಚಾರಿಯಾಗಿರುವವರು ಗೃಹಸ್ಥಾಶ್ರಮಕ್ಕೆ ಕಾಲಿಡಲು ಬಯಸಿದ್ದೀರಾ? ಹಾಗಾದರೆ ಮದುವೆಯ ಅನುಭವಕ್ಕೆ ಮೊದಲು ನಿಮಗೆ ಸಂತೋಷ ನೀಡುವಂತಹ ಕೆಲವೊಂದನ್ನು ನೀವು ಪ್ರಯತ್ನಿಸಬಹುದು. ಭವಿಷ್ಯದಲ್ಲಿ ಇದನ್ನು ಮಾಡಬಹುದೆಂದು ಮುಂದೂಡಿದರೆ ಆ ವಿಷಯಗಳ ಬಗ್ಗೆ ಅನುಭವಿಸುವಂತಹ ಭಾವನೆ ಪಡೆಯಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಮದುವೆಗೆ ಮೊದಲು ಪುರುಷರು ಪ್ರಯತ್ನಿಸಬೇಕಾದ 15 ವಿಷಯಗಳು ಇಲ್ಲಿವೆ.

ಗ್ಯಾಜೆಟ್ ಗಳನ್ನು ಖರೀದಿಸಿ

ಗ್ಯಾಜೆಟ್ ಗಳನ್ನು ಖರೀದಿಸಿ

ನಿಮಗೆ ಬೇಕಾಗಿರುವ ಎಲ್ಲಾ ಗ್ಯಾಜೆಟ್ ಗಳನ್ನು ಖರೀದಿಸಿ. ನಿಮ್ಮ ಪತ್ನಿ ಅದನ್ನು ಖರೀದಿಸುವ ಸ್ವಾತಂತ್ರ್ಯ ನೀಡುತ್ತಾಳೆಯಾ ಎನ್ನುವುದು ಯಾರಿಗೆ ಗೊತ್ತು.

ಆ್ಯಕ್ಷನ್ ಚಿತ್ರಗಳನ್ನು ನೋಡಿ

ಆ್ಯಕ್ಷನ್ ಚಿತ್ರಗಳನ್ನು ನೋಡಿ

ನಿಮಗೆ ಇಷ್ಟವಿರುವ ಎಲ್ಲಾ ಆ್ಯಕ್ಷನ್ ಚಿತ್ರಗಳನ್ನು ನೋಡಿ. ಮದುವೆಯ ಬಳಿಕ ಸಿನೆಮಾಗಳ ಬಗ್ಗೆ ನಿಮ್ಮ ರುಚಿ ಬದಲಾಗಬಹುದು.

ಪ್ರತಿಜ್ಞೆ ಮಾಡದಿರಲು ಕಲಿತುಕೊಳ್ಳಿ.

ಪ್ರತಿಜ್ಞೆ ಮಾಡದಿರಲು ಕಲಿತುಕೊಳ್ಳಿ.

ನಿಮಗೆ ಇದು ಅಭ್ಯಾಸವಾಗಿದ್ದರೆ ಸಮಸ್ಯೆಯಾಗಬಹುದು. ಹಾನಿಕರವಲ್ಲದಿದ್ದರೂ ಯಾವಾಗಲೂ ಪ್ರತಿಜ್ಞೆ ಮಾಡುವುದನ್ನು ಯಾವುದೇ ಮಹಿಳೆ ಒಪ್ಪಿಕೊಳ್ಳುವುದಿಲ್ಲ.

ಗೆಳೆಯರನ್ನು ಭೇಟಿ ಮಾಡಿ

ಗೆಳೆಯರನ್ನು ಭೇಟಿ ಮಾಡಿ

ನಿಮ್ಮ ಶಾಲೆ ಮತ್ತು ಕಾಲೇಜಿನ ಎಲ್ಲಾ ಗೆಳೆಯರನ್ನು ಕರೆದು ಅವರನ್ನು ಭೇಟಿಯಾಗಿ. ಅವರು ತೆರಳುವ ಮೊದಲು ಅವರಿಗೆ ನಿಮ್ಮ ಮದುವೆ ಬಗ್ಗೆ ಹೇಳಿ ಮತ್ತು ಆಹ್ವಾನ ಪತ್ರಿಕೆ ನೀಡಿ.

ಮನಸ್ಸು ಬೇರೆಯಾಗಬಹುದು

ಮನಸ್ಸು ಬೇರೆಯಾಗಬಹುದು

ಮಹಿಳೆಯರೊಂದಿಗೆ ಹೇಗೆ ಮಾತನಾಡಬೇಕು ಮತ್ತು ನಿಮ್ಮನ್ನು ಹೇಗೆ ಪರಿಚಯಿಸಿಕೊಳ್ಳಬೇಕೆಂದು ತಿಳಿಯದೇ ಇದ್ದರೆ ನಿಮ್ಮ ಮದುವೆ ಬೇಗನೆ ಮುರಿಯಬಹುದು. ಮಹಿಳೆಯರೊಂದಿಗೆ ಯಾವ ರೀತಿ ಭಾವನೆಗಳನ್ನು ವ್ಯಕ್ತಪಡಿಸಬೇಕೆಂದು ನಿಮಗೆ ತಿಳಿಯದೇ ಇದ್ದರೆ ಮದುವೆ ಜೀವನ ಕೆಲವು ಸಮಯದ ಬಳಿಕ ತುಂಬಾ ಕಷ್ಟವಾಗುತ್ತದೆ. ಇದನ್ನು ಕಲಿತುಕೊಳ್ಳುವುದು ಒಲಿತು.

ಅಡುಗೆ ಮಾಡುವುದನ್ನು ಕಲಿಯಿರಿ

ಅಡುಗೆ ಮಾಡುವುದನ್ನು ಕಲಿಯಿರಿ

ಇದು ನಿಮ್ಮ ಪತ್ನಿಯಿಂದ ಮೆಚ್ಚುಗೆಯನ್ನು ಪಡೆಯುವುದು ಮಾತ್ರವಲ್ಲದೆ, ಅನಿರೀಕ್ಷಿತ ಸಂದರ್ಭಗಳಲ್ಲಿ ಇದು ನಿಮ್ಮ ನೆರವಿಗೆ ಬರುತ್ತದೆ.

ಆರ್ಥಿಕ ವ್ಯವಹಾರಗಳು ಸರಿಯಾಗಿರಲಿ

ಆರ್ಥಿಕ ವ್ಯವಹಾರಗಳು ಸರಿಯಾಗಿರಲಿ

ಇಷ್ಟರವರೆಗೆ ನೀವು ಹೇಗೆ ಇದ್ದರೂ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಉತ್ತಮವಾಗಿರಲೇಬೇಕು.

ಏಕಾಂಗಿಯಾಗಿ ಪ್ರಯಾಣಿಸಿ

ಏಕಾಂಗಿಯಾಗಿ ಪ್ರಯಾಣಿಸಿ

ಯಾವುದಾದರೂ ಸ್ಥಳಕ್ಕೆ ಭೇಟಿ ನೀಡಿ ಮತ್ತು ನಿಮಗೆ ಅಗತ್ಯವಿರುವ ಸಂತೋಷವನ್ನು ಪಡೆಯಿರಿ. ಈ ಅನುಭವ ನಿಮಗೆ ಅತ್ಯಾನಂದ ನೀಡಲಿದೆ.

ನಿಮಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಕಲಿತುಕೊಳ್ಳಿ

ನಿಮಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಕಲಿತುಕೊಳ್ಳಿ

ಗಿಟಾರ್ ಕಲಿಯಬೇಕೇ ಅಥವಾ ಸ್ಪೆನಿಶ್ ಕಲಿಯಬೇಕೇ? ಈಗಲೇ ಅದನ್ನು ಮುಗಿಸಿಬಿಡಿ.

ನಿಮ್ಮ ಪ್ಯಾಶನ್ ಬಿಡಬೇಡಿ

ನಿಮ್ಮ ಪ್ಯಾಶನ್ ಬಿಡಬೇಡಿ

ಹೆಚ್ಚಿನವರು ತಮ್ಮ ಕೆಲಸ ಮತ್ತು ಏನು ಮಾಡಬೇಕೆಂದು ಮೊದಲೇ ಅಂದು ಕೊಂಡಿರುತ್ತಾರೆ ಆದರೆ ಅದರಿಂದ ಸಂಪರ್ಕ ಕಳಕೊಂಡಿರುತ್ತಾರೆ. ನಿಮ್ಮ ಪ್ಯಾಶನ್ ಏನೆಂದು ಗುರುತಿಸಿ ಮತ್ತು ಅದನ್ನು ಮಾಡಿ. ಬೃಹತ್ ಗದ್ದೆಯ ಮಧ್ಯೆ ಮಾಡಿರುವ ಮನೆಯಲ್ಲಿ ವಾಸಿಸುವುದು ಇದರಲ್ಲಿ ಒಂದಾಗಿರಬಹುದು.

ಮಕ್ಕಳ ಬಗ್ಗೆ ನೀವು ನಿರ್ಧಾರ ಮಾಡಿ

ಮಕ್ಕಳ ಬಗ್ಗೆ ನೀವು ನಿರ್ಧಾರ ಮಾಡಿ

ಯಾವಾಗ? ಎಷ್ಟು? ಮಕ್ಕಳನ್ನು ಪಡೆಯುವ ಮೊದಲು ಬೇಕಾಗಿರುವ ಆರ್ಥಿಕ ಪರಿಸ್ಥಿತಿ? ಇದರ ಬಗ್ಗೆ ಮದುವೆಗೆ ಮೊದಲು ಸರಿಯಾಗಿ ಚರ್ಚೆ ಮಾಡಿ ಮತ್ತು ಬಳಿಕ ಮದುವೆಯಾಗಿ.

ಸಭ್ಯ ವ್ಯಕ್ತಿಯಾಗಿರಲು ಕಲಿಯಿರಿ

ಸಭ್ಯ ವ್ಯಕ್ತಿಯಾಗಿರಲು ಕಲಿಯಿರಿ

ಸಿಗರೇಟಿನ ತುಂಡುಗಳು ಮತ್ತು ಬಾಟಲಿಗಳು ಮನೆಯಲ್ಲೆಲ್ಲಾ ಚೆಲ್ಲಿದ್ದರೆ ಸಭ್ಯವಾಗಿರಲು ನೀವು ಕಲಿಯಬೇಕು. ನೀವು ಇನ್ನು ಮುಂದೆ ಯಾವುದೇ ಹಾಸ್ಟೆಲ್ ಅಥವಾ ಪಿಜಿಯಲ್ಲಿ ಉಳಿಯುವುದಿಲ್ಲವೆನ್ನುವುದು ನೆನಪಿರಲಿ.

ನಿಮ್ಮ ಮಿತಿಗಳ ಬಗ್ಗೆ ತಿಳಿದಿರಲಿ

ನಿಮ್ಮ ಮಿತಿಗಳ ಬಗ್ಗೆ ತಿಳಿದಿರಲಿ

ಮದುವೆಗೆ ಮೊದಲು ನಿಮ್ಮ ಮಿತಿ ತಿಳಿದಿದ್ದರೆ ಅದರ ಬಳಿಕ ಜತೆಗಾರರನ್ನು ಪಡೆಯಬಹುದು. ಮದುವೆ ಬಳಿಕ ದೈನಂದಿನ ಜೀವನದಲ್ಲಿ ಹಲವಾರು ರೀತಿಯ ಪರಿಸ್ಥಿತಿಗಳು ನಿಮ್ಮನ್ನು ಪರೀಕ್ಷೆಗೊಡ್ಡಬಹುದು. ನಿಮ್ಮ ನಿರೀಕ್ಷೆ ಮತ್ತು ನಿಮ್ಮ ಬಗ್ಗೆ ಸಂಪೂರ್ಣವಾಗಿ ಪ್ರಾಮಾಣಿಕವಾಗಿರಿ.

X
Desktop Bottom Promotion