Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಪುರುಷರು ತನ್ನ ಸಂಗಾತಿಯಲ್ಲಿ ಇರಬೇಕೆಂದು ಇಚ್ಛಿಸುವ 10 ಗುಣಗಳು
ಪ್ರಕೃತಿಯಲ್ಲಿ ಗಂಡು ಹೆಣ್ಣಿನ ನಡುವೆ ಆಕರ್ಷಣೆ ಇರಿಸಿರುವುದು ನಿಸರ್ಗದ ಕೊಡುಗೆ. ಪ್ರತಿ ಜೀವಿಯೂ ತನ್ನ ಸಂಗಾತಿಯನ್ನು ಆಕರ್ಷಿಸಲು ತನ್ನ ಹಲವು ಗುಣಲಕ್ಷಣಗಳನ್ನು ಪ್ರಕಟಿಸುತ್ತದೆ. ನವಿಲಿನ ನರ್ತನ, ಕಪ್ಪೆಯ ವಟಗುಟ್ಟುವಿಕೆ ಮೊದಲಾದವು ಈ ಆಕರ್ಷಣೆಗಳ ಕೆಲವು ಉದಾಹರಣೆಗಳು. ಬುದ್ಧಿ ಜೀವಿಗಳಾದ ಮಾನವರಲ್ಲಿ ಬಾಹ್ಯ ಲಕ್ಷಣಗಳ ಸಹಿತ ಹಲವು ಮಾನಸಿಕ ಅಥವಾ ಆಂತರಿಕ ಗುಣಲಕ್ಷಣಗಳೂ ಸಂಗಾತಿಯನ್ನು ಆಕರ್ಷಿಸಲು ನೆರವಾಗುತ್ತವೆ.
ಹೆಣ್ಣು ತನ್ನ ಪುರುಷನಲ್ಲಿ ಬಲಿಷ್ಟತೆ ಮತ್ತು ಸೌಂದರ್ಯಗಳ ಹೊರತಾಗಿ ಆತನ ಆಂತರಿಕ ಗುಣಗಳನ್ನೇ ಹೆಚ್ಚು ಇಷ್ಟಪಡುತ್ತಾಳೆ. ಅದೇ ಪುರುಷರು ತನ್ನ ಸಂಗಾತಿಯಾಗುವವಳಲ್ಲಿ ಸೌಂದರ್ಯವನ್ನು ಪ್ರಮುಖವಾಗಿ ಅಪೇಕ್ಷಿಸುತ್ತಾರಾದರೂ ಸೌಂದರ್ಯವೊಂದನ್ನೇ ಅಳತೆ ದಂಡವನ್ನಾಗಿ ಉಪಯೋಗಿಸುವುದಿಲ್ಲ. ಒಂದು ವೇಳೆ ಹಾಗಾಗುವುದಿದ್ದರೆ ಸೌಂದರ್ಯದ ವಿಷಯದಲ್ಲಿ ಹಿಂದಿರುವ ಮಹಿಳೆಯರೆಲ್ಲಾ ಅವಿವಾಹಿತರಾಗಿಯೇ ಉಳಿಯಬೇಕಿತ್ತು. ಹಾಗಾದರೆ ಪುರುಷರು ಅಪೇಕ್ಷಿಸುವ ಇತರ ಗುಣಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಆಕೆ ಒಂಟಿಯಾಗಿರಬೇಕು
ನಿಸರ್ಗನಿಯಮದಂತೆ ಪ್ರತಿ ಹೆಣ್ಣಿಗೊಂದು ಗಂಡು ಇರಬೇಕು. ತಾನು ವರಿಸಲಿಚ್ಛಿಸುವ ಹೆಣ್ಣು ಒಂಟಿಯಾಗಿರಬೇಕು ಹಾಗೂ ವಿವಾಹದ ಬಳಿಕ ತನ್ನ ಜೀವನವನ್ನು ಕೇವಲ ತನ್ನೊಂದಿಗೆ ಕಳೆಯಬೇಕೆಂದು ಗಂಡು ಇಚ್ಛಿಸುತ್ತಾನೆ.

ಆಕೆಯ ಶರೀರ ಆಕರ್ಷಕವಾಗಿರಬೇಕು
ಗಂಡನ್ನು ಅತಿ ಹೆಚ್ಚಾಗಿ ಆಕರ್ಷಿಸುವುದೆಂದರೆ ಹೆಣ್ಣಿನ ಮೈಮಾಟ. ಈ ಮೈಮಾಟ ಸೂಕ್ತ ಅಳತೆಗಳಲ್ಲಿರಬೇಕೆಂದು ಗಂಡು ಬಯಸುತ್ತಾನೆ.

ಆಕೆ ಸ್ವಾಭಿಮಾನಿಯಾಗಿರಬೇಕು
ತನ್ನ ಬಗ್ಗೆ, ತನ್ನ ಕುಟುಂಬ, ಊರು, ಹಿರಿಯರು ಹಾಗೂ ದೇಶದ ಬಗ್ಗೆ ಉತ್ತಮ ಭಾವನೆಗಳನ್ನಿಟ್ಟುಕೊಂಡಿರಬೇಕು ಹಾಗೂ ಸ್ವಾಭಿಮಾನಿಯಾಗಿರಬೇಕೆಂದು ಗಂಡು ಬಯಸುತ್ತಾನೆ.

ಆಕೆ ಚತುರೆಯಾಗಿರಬೇಕು
ನಮ್ಮ ಕೈಲಾಗದ ಎಷ್ಟೋ ಕೆಲಸಗಳನ್ನು ನಾವು ಇನ್ನೊಬ್ಬರಿಂದ ಮಾಡಿಸಿಕೊಳ್ಳಬೇಕಾದರೆ ಚತುರರಾಗಿರುವುದು ಅವಶ್ಯ. ಸಮಯ ಸ್ಫೂರ್ತಿ, ಸಂದರ್ಭಕ್ಕೆ ತಕ್ಕಂತೆ ಸನ್ನಿವೇಶಗಳನ್ನು ನಿಭಾಯಿಸುವುದು, ಕಿರಿಯರಿಗೆ ಸೂಕ್ತ ಮಾರ್ಗದರ್ಶನ ಮೊದಲಾದ ಗುಣಲಕ್ಷಣಗಳನ್ನು ಆತ ಇಷ್ಟಪಡುತ್ತಾನೆ.

ಆಕೆ ವಿವೇಕವುಳ್ಳವಳಾಗಿರಬೇಕು
ಕೆಲವೊಮ್ಮೆ ಅತಿ ಸುಂದರ ಯುವತಿಯರೂ ಸೌಂದರ್ಯ ಸ್ಪರ್ದೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಪೆದ್ದು ಪೆದ್ದಾಗಿ ಉತ್ತರಿಸಿ ಸ್ಪರ್ಧೆಯಿಂದ ಹೊರನಡೆಯುತ್ತಾರೆ. ವಿಶ್ವಸುಂದರಿ ಸುಶ್ಮಿತಾ ಸೇನ್ ರ ವಿವೇಕಯುಕ್ತ ಉತ್ತರವೇ ಅವರನ್ನು ಆ ಪಟ್ಟಕ್ಕೇರಿಸಿತು.

ಭಾವನಾತ್ಮಕವಾಗಿ ಬಲಶಾಲಿಯಾಗಿರಬೇಕು
ತಾನು ವರಿಸಲಿರುವವಳು ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಬಲಶಾಲಿಯಾಗಿರಬೇಕೆಂದು ಗಂಡು ಬಯಸುತ್ತಾನೆ. ತಾನು ಈಕೆಯ ಭರವಸೆಯಲ್ಲಿ ನಿಶ್ಚಿಂತನಾಗಿರಬಹುದು ಎಂಬ ನಂಬಿಕೆ ಆತನಲ್ಲಿ ಮೂಡುತ್ತದೆ.

ಆಕೆ ಪ್ರೇರಣೆ ನೀಡುವವಳಾಗಿರಬೇಕು
ಎಷ್ಟೋ ಸಲ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಈ ಸೂಕ್ಷ್ಮ ವಿಷಯಗಳನ್ನು ಕಂಡುಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಅಥವಾ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ಪ್ರೇರಣೆ ನೀಡುವವಳಾಗಿರಬೇಕೆಂದು ಗಂಡು ಬಯಸುತ್ತಾನೆ.

ಆಕೆ ಸಮರ್ಥನೆ ನೀಡುವವಳಾಗಿರಬೇಕು
ತಮ್ಮ ಭಾವನೆಗಳನ್ನು ನೇರವಾಗಿ ಪ್ರಕಟಿಸುವುದರಲ್ಲಿ ಪುರುಷರು ಯಾವಾಗಲೂ ಹಿಂದಿರುತ್ತಾರೆ. ಎಷ್ಟೋ ಸಲ ಅವಶ್ಯ ಭಾವನೆಗಳನ್ನು ಹೇಳದೇ ಅವಕಾಶದಿಂದ ವಂಚಿತರಾಗುತ್ತಾರೆ. ಇಂತಹ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ತನಗೆ ಸಮರ್ಥನೆ ನೀಡುವವಳಾಗಬೇಕು ಎಂದು ಗಂಡು ಅಪೇಕ್ಷಿಸುತ್ತಾನೆ.

ಆಕೆ ಪ್ರಣಯಾಸಕ್ತಳಾಗಿರಬೇಕು
ಪ್ರಣಯದಲ್ಲಿ ಆಸಕ್ತಿ ಇಲ್ಲದ ಮಹಿಳೆಯರಲ್ಲಿ ಗಂಡಿಗೆ ಯಾವುದೇ ಆಕರ್ಷಣೆ ಉಳಿಯುವುದಿಲ್ಲ. ಅಂತಹ ಮಹಿಳೆಯರನ್ನು ಅವರು ಸನ್ಯಾಸಿನಿಯ ದೃಷ್ಟಿಯಿಂದ ಕಾಣತೊಡಗುತ್ತಾರೆ. ಏಕಾಂತದಲ್ಲಿ ತನ್ನ ಪ್ರಣಯಾಸಕ್ತಿಯನ್ನು ಮುಕ್ತವಾಗಿ ಪ್ರಕಟಿಸಿ ಇನಿಯನ ಹೃದಯ ಗೆಲ್ಲುವ ಮಾನಿನಿಯರು ಅತಿ ಆಕರ್ಷಣೀಯರು.

ಸ್ವಲ್ಪ ಉದ್ಧಟತನವೂ ಇರಬೇಕು
ಕೇಳಲು ಕೊಂಚ ಹಿತಕರವಲ್ಲದಿದ್ದರೂ ಗಂಡು ಅಪೇಕ್ಷಿಸುವ ಗುಣಗಳಲ್ಲಿ ಉದ್ಧಟತನವೂ ಒಂದು. ಏಕೆಂದರೆ ಏನೂ ಮಾತನಾಡದೇ, ಯಾವ ಪ್ರತಿಕ್ರಿಯೆ ನೀಡದೇ ಗೌರಮ್ಮನಾಗಿರುವ ಹೆಂಗಸರು ಕಳ್ಳರ, ಸುಲಿಗೆಕೋರರ, ನಯವಂಚಕರಿಗೆ ಸುಲಭವಾಗಿ ಬಲಿಯಾಗುತ್ತಾರೆ. ದಿನದ ಇಪ್ಪತ್ತನಾಲ್ಕೂ ಘಂಟೆಯೂ ಗಂಡು ಆಕೆಯ ರಕ್ಷಣೆ ಮಾಡುತ್ತಾ ಇರುವಂತಿಲ್ಲವಲ್ಲ? ಆಕೆ ಒಂಟಿಯಾಗಿದ್ದಾಗ ಅಥವಾ ಮಕ್ಕಳೊಂದಿಗೆ ಹೊರಗಿದ್ದಾಗ ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಕೊಂಚ ಉದ್ಧಟತವವೂ ಅಗತ್ಯ. ಅಲ್ಲದೇ ನಾಲ್ಕು ಜನರ ಮಧ್ಯೆ ಏನೂ ಮಾತನಾಡದೇ ಸುಮ್ಮನಿರುವ ಬದಲು ಸನ್ನಿವೇಶಕ್ಕೆ ತಕ್ಕಂತೆ ತನ್ನ ಅನಿಸಿಕೆಗಳನ್ನು ಸ್ಪಷ್ಟವಾಗಿ ತಿಳಿಸುವವರು ಗಂಡಿಗೆ ಇಷ್ಟವಾಗುತ್ತಾಳೆ.



Click it and Unblock the Notifications











