ಮದುವೆಗೆ ನಿಮ್ಮವರು ಸಿದ್ಧ ಎಂಬುದನ್ನು ಹೀಗೆ ಅರಿತುಕೊಳ್ಳಿ

ನೀವು ನಿಮ್ಮ ಗೆಳೆಯನೊಂದಿಗೆ ಉತ್ತಮ ಸಂಬಂಧದಲ್ಲಿದ್ದು ಅದನ್ನು ಮದುವೆಯೆಂಬ ಪವಿತ್ರ ಬಂಧನದಲ್ಲಿ ಅದನ್ನು ಸಮಾಪ್ತಿಗೊಳಿಸಿ ನಿಮ್ಮ ಬಾಳ್ವೆಗೆ ಒಂದು ಅರ್ಥ ನೀಡುವ ಹಂತದಲ್ಲಿದ್ದೀರಿ. ಇಂತಹ ಪರಿಸ್ಥಿತಿಗಳಲ್ಲಿ ಮದುವೆಯ ಬಗ್ಗೆ ದೀರ್ಘ ಕಾಲದವರೆಗೆ ತಲೆಕೆಡಿಸಿಕೊಳ್ಳದೇ ಇರುವ ಹುಡುಗರನ್ನು ನೆನೆದು ಹುಡುಗಿಯರು ಹೆಚ್ಚು ಚಿಂತಿತರಾಗಿರುತ್ತಾರೆ.

ಆತನಿಗೆ ಮಡದಿಯಾಗಿ ನೀವು ಬರುವುದು ಅವನ ಬಯಕೆಯಾಗಿರುತ್ತದೆ ಎಂಬುದು ಕೆಲವೊಂದು ಅಂಶಗಳ ಮೂಲಕ ಸಾಬೀತಾಗುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಇಂತಹ ಅಂಶಗಳನ್ನು ನೀವೇ ಗುರುತಿಸಿ ನಿಮ್ಮ ಮುಂದಿನ ಬಾಳ ಹೆಜ್ಜೆಯನ್ನು ನಿಮ್ಮ ಮನಮೆಚ್ಚಿದವರೊಂದಿಗೆ ಇರಿಸಬೇಕು.

ವೃಥಾ ಚಿಂತಿತರಾಗಿ ಅವರನ್ನು ದೂರ ಮಾಡಿದಷ್ಟು ಈ ಕಷ್ಟ ಪರಿಹಾರವಾಗದೇ ಉಲ್ಬಣಿಸುತ್ತದೆ. ನೀವು ಅವರೊಂದಿಗೆ ಸದಾ ಕಾಲ ಇದ್ದು ಅವರನ್ನು ಸಂತೋಷಗೊಳಿಸಿ. ನೀವು ಅವರಿಗಾಗಿ ಎಂಬುದನ್ನು ಮನದಟ್ಟು ಮಾಡಿಸಿ. ಕೆಲವೊಂದು ಪುರುಷರು ತಮ್ಮ ಭಾವನೆಗಳನ್ನು ಹೊರ ಹಾಕುವುದಿಲ್ಲ. ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಮುತುವರ್ಜಿ ವಹಿಸಿ ಅವರ ಮನಸನ್ನು ನಿಮ್ಮತ್ತ ಸೆಳೆಯುವಂತೆ ಮಾಡಬೇಕು.

ಆತ ನಿಮ್ಮನ್ನು ಮಡದಿಯಾಗಿ ತನ್ನ ಮನೆಗೆ ತುಂಬಿಸಿಕೊಳ್ಳಲು ಸಿದ್ಧನಾಗಿರುವ ಕೆಲವೊಂದು ಸೂಚನೆಗಳನ್ನು ನೀವು ಹೆಚ್ಚಿನ ಕಾಳಜಿ ವಹಿಸಿ ಗಮನಿಸಬೇಕಾಗುತ್ತದೆ. ಕೆಲವೊಮ್ಮೆ ಪುರುಷರೂ ಕೂಡ ತಮ್ಮಾಕೆ ಮದುವೆಗೆ ಸಿದ್ಧಳಾಗಿದ್ದಾಳೆಯೇ ಎಂಬುದನ್ನು ಗಮನಿಸದೆ ಕೂಡ ಸುಮ್ಮನಿದ್ದುಬಿಡುತ್ತಾರೆ.

ಮದುವೆಯಾದ ಮೇಲೆ ಗಂಡಸರು ಮಾಡುವುದನ್ನು ನಿಲ್ಲಿಸಬೇಕಾದ 7 ಕೆಲಸಗಳು

ನಿಮ್ಮವರು ಮದುವೆಗೆ ಇನ್ನೂ ಅಣಿಯಾಗಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ ಅಥವಾ ನಿಮ್ಮನ್ನು ತಮ್ಮ ಮಡದಿಯಾಗಿ ಮಾಡಿಕೊಳ್ಳುವ ಅವರ ಬಯಕೆಯನ್ನು ಕಂಡುಹಿಡಿಯುವುದು ಹೇಗೆ ಎಂಬುದು ನಿಮ್ಮ ಚಿಂತೆಯಾಗಿದ್ದರೆ ಕೆಳಗಿನ ಸ್ಲೈಡ್‌ಗಳತ್ತ ನೋಟ ಹರಿಸಿ.

ನೀವು ಅವರ ಭವಿಷ್ಯ

ನೀವು ಅವರ ಭವಿಷ್ಯ

ಆತನ ಭವಿಷ್ಯವೇ ನೀವಾಗಿರುವಿರಿ ಎಂಬ ಅಂಶ ಬಂದಾಗ ನಿಮ್ಮನ್ನು ತಮ್ಮ ಪತ್ನಿಯಾಗಿ ಮಾಡಿಕೊಳ್ಳಬೇಕೆನ್ನುವ ಇಚ್ಛೆ ಅವರಲ್ಲಿದೆ ಎಂಬುದನ್ನು ಕಂಡುಕೊಳ್ಳಿ. ಭವಿಷ್ಯದ ಬಗ್ಗೆ ಅವರು ಯೋಜನೆಗಳನ್ನು ಮಾಡುತ್ತಿದ್ದರೆ ಅದನ್ನು ಗಮನಿಸಿ. ನಿಮಗೆ ಇದು ಗೊತ್ತಾದ ಕೂಡಲೇ, ಇದು ನಿಜಾವಾಗಿಯೂ ನಿಮ್ಮನ್ನು ಮಡದಿಯಾಗಿಸುವ ಮತ್ತು ನಿಮ್ಮ ಜೊತೆ ಬಾಳುವುದು ಅವರ ನಿರ್ಧಾರವಾಗಿದೆ ಎಂಬುದನ್ನು ಮನಗಾಣಿ.

ಹೆಚ್ಚು ಆತ್ಮೀಯತೆ

ಹೆಚ್ಚು ಆತ್ಮೀಯತೆ

ದೀರ್ಘ ಸಮಯದ ಕೆಲವೊಂದು ಸಂಬಂಧಗಳಲ್ಲಿ ಮಾತ್ರವೇ ಈ ರೀತಿಯ ಆತ್ಮೀಯತೆಯನ್ನು ನಮಗೆ ಕಾಣಬಹುದು. ನಿಮಗೆ ನಿಮ್ಮವರು ಈ ರೀತಿ ಕಂಡು ಬರದಿದ್ದಲ್ಲಿ ನಿಮ್ಮ ಅವರ ಸಂಬಂಧವನ್ನು ಇನ್ನೂ ಹೆಚ್ಚಿನ ಆತ್ಮೀಯತೆಗೆ ಕೊಂಡೊಯ್ಯುವವರಿದ್ದಾರೆ ಎಂಬುದನ್ನು ಅರಿತುಕೊಳ್ಳಿ. ತಮ್ಮಾಕೆಯೊಂದಿಗೆ ಸಲುಗೆಯಿಂದಿರುವುದು ಎಂದರೆ ಟವೆಲ್‌ಗಳನ್ನು ಹಂಚಿಕೊಳ್ಳುವುದು, ಒಂದೇ ಬಟ್ಟೆಗಳನ್ನು ಹಂಚಿಕೊಳ್ಳುವುದು, ಬ್ಲಾಂಕೆಟ್ ಹಂಚಿಕೊಳ್ಳುವುದು ಇತ್ಯಾದಿ.

ಮಕ್ಕಳ ಬಗ್ಗೆ ಮಾತನಾಡುವುದು

ಮಕ್ಕಳ ಬಗ್ಗೆ ಮಾತನಾಡುವುದು

ತಮ್ಮ ಸಂಬಂಧಕ್ಕೆ ಒಂದು ಮುಕ್ತಾಯವನ್ನು ನೀಡುವುದರ ಹೊರತಾಗಿ ಪುರುಷರು ಮಕ್ಕಳ ಬಗ್ಗೆ ಮಾತನಾಡುವುದಿಲ್ಲ. ಅವರು ತಮಗೆ ಹುಟ್ಟಲಿರುವ ಮಕ್ಕಳ ಬಗ್ಗೆ ಮಾತನಾಡುತ್ತಿದ್ದರೆ ಎಂದಾದಲ್ಲಿ ನಿಮ್ಮನ್ನು ಅವರು ತಮ್ಮವಳನ್ನಾಗಿ ಮಾಡಿಕೊಳ್ಳಬೇಕೆಂಬ ನಿರ್ಧಾರದಲ್ಲಿದ್ದಾರೆ ಎಂಬುದನ್ನು ಅರಿಯಿರಿ.

ನಿವಾಸಕ್ಕೆ ವಿನಿಯೋಗಿಸುವುದು

ನಿವಾಸಕ್ಕೆ ವಿನಿಯೋಗಿಸುವುದು

ಮದುವೆಯ ಬಗ್ಗೆ ನಿಮ್ಮವರು ಆಲೋಚಿಸುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಲು ಅವರು ನಿವಾಸದ ಕಡೆಗೆ ಹಣ ವಿನಿಯೋಗಿಸುತ್ತಿದ್ದಾರೆಯೇ ಎಂಬುದನ್ನು ಅರಿಯಿರಿ. ತಮ್ಮದೇ ಆದ ಸ್ವಂತ ಮನೆ ಎಂಬ ಭಾವನೆ ಅವರಲ್ಲಿ ಚಿಗುರೊಡೆದಿದೆ ಎಂದಾದಲ್ಲಿ ನಿಮ್ಮನ್ನು ಅವರು ಸದ್ಯದಲ್ಲೇ ವಿವಾಹವಾಗುತ್ತಿದ್ದಾರೆ ಎಂದಾಗಿದೆ.

ನಿಮ್ಮ ಮನೆಯವರೊಂದಿಗೆ ಆತ್ಮೀಯತೆಯಲ್ಲಿರುವುದು

ನಿಮ್ಮ ಮನೆಯವರೊಂದಿಗೆ ಆತ್ಮೀಯತೆಯಲ್ಲಿರುವುದು

ನಿಮ್ಮ ಮನೆಯವರ ಬೆಂಬಲ ಮತ್ತು ಪ್ರೀತಿಯನ್ನು ಗಳಿಸುವುದಕ್ಕಾಗಿ ಅವರೊಂದಿಗೆ ನಿಮ್ಮ ಭಾವೀ ಪತಿ ಹತ್ತಿರವಾಗುತ್ತಿದ್ದಾರೆ ಎಂದಾದಲ್ಲಿ ಮದುವೆ ಪಕ್ಕಾ ಖಾತ್ರಿ.

ಕುಟುಂಬವನ್ನು ಇನ್ನಷ್ಟು ಅರಿತುಕೊಳ್ಳುವುದು

ಕುಟುಂಬವನ್ನು ಇನ್ನಷ್ಟು ಅರಿತುಕೊಳ್ಳುವುದು

ನಿಮ್ಮ ಮನೆ ಮತ್ತು ಮನೆಯವರು ಸಂಬಂಧಿಕರ ಬಗ್ಗೆ ಅವರು ಹೆಚ್ಚು ಕೇಳುತ್ತಿದ್ದಾರೆ ಎಂದಾದಲ್ಲಿ ಅವರು ನಿಮ್ಮನ್ನು ವಿವಾಹವಾಗಲು ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಿ. ಅವರು ಏನೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೋ ಅದಕ್ಕೆಲ್ಲಾ ಉತ್ತರ ಕೊಡಿ. ಯಾವುದೇ ಮುಚ್ಚುಮರೆ ಬೇಡ.

ಮ್ಯೂಚುವಲ್ ಫಂಡ್‌ಗಳತ್ತ ನೋಟ ಬೀರಿದರೆ

ಮ್ಯೂಚುವಲ್ ಫಂಡ್‌ಗಳತ್ತ ನೋಟ ಬೀರಿದರೆ

ನಿಮ್ಮನ್ನು ನಾಮಿನಿಯಾಗಿಸುವ ಯಾವುದಾದರೂ ಮ್ಯೂಚುವಲ್ ಫಂಡ್‌ಗಳತ್ತ ಅವರ ನೋಟ ಇದೆ ಎಂದಾದಲ್ಲಿ ನಿಮ್ಮನ್ನು ದೀರ್ಘ ಕಾಲದ ಪ್ರೇಮ ಬಂಧನದಲ್ಲಿ ಇರಿಸಲು ಅವರು ಸಿದ್ಧ ಎಂಬುದನ್ನು ಅರಿತುಕೊಳ್ಳಿ.

ವಿವಾಹ ದಿನದ ಬಗ್ಗೆ ಮಾತನಾಡುವುದು

ವಿವಾಹ ದಿನದ ಬಗ್ಗೆ ಮಾತನಾಡುವುದು

ನಿಮ್ಮನ್ನು ತಮ್ಮ ಪತ್ನಿಯನ್ನಾಗಿ ಮಾಡಿಕೊಳ್ಳಲು ಸಿದ್ಧನಾಗದ ಹೊರತು ನಿಮ್ಮವರು ಮದುವೆಯ ದಿನದ ಬಗ್ಗೆ ನಿಮ್ಮಲ್ಲಿ ಮಾತನಾಡುವುದಿಲ್ಲ. ಈ ಸಂವಾದದಲ್ಲಿ ಅವರೊಂದಿಗೆ ತೊಡಗಿಸಿಕೊಳ್ಳಿ.

ನಿಮ್ಮೊಂದಿಗೆ ಅವರು ಸದಾ

ನಿಮ್ಮೊಂದಿಗೆ ಅವರು ಸದಾ

ನಿಮ್ಮವರು ನಿಮ್ಮೊಂದಿಗೆ ಸದಾ ಇರುತ್ತಾರೆ ಎಂದಾದಲ್ಲಿ, ನಿಮ್ಮನ್ನು ತಮ್ಮ ಪತ್ನಿಯನ್ನಾಗಿಸುವ ಅವರ ಇಚ್ಛೆ ಬಲವಾಗಿದೆ ಎಂದಾಗಿದೆ. ನಿಮ್ಮ ಸುಖ ದುಃಖ, ಕಷ್ಟ ಸುಖಗಳಲ್ಲಿ ಭಾಗಿಯಾಗುವ ಹಂಬಲ ಅವರದಾಗಿದೆ ಎಂಬುದನ್ನು ಮನಗಾಣಿ.

ಪ್ರತಿಯೊಂದೂ ಒಂದಾದಾಗ

ಪ್ರತಿಯೊಂದೂ ಒಂದಾದಾಗ

ನೀವಿಬ್ಬರೂ ಒಂದಾದಾಗ, ನಿಮ್ಮನ್ನು ಪತ್ನಿಯನ್ನಾಗಿಸಲು ಅವರು ಸಿದ್ಧ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಬಗ್ಗೆ ಅವರು ಗಂಭೀರವಾಗದೇ ಇದ್ದಲ್ಲಿ ಅವರ ವಸ್ತುಗಳನ್ನು ಎಂದಿಗೂ ನಿಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ.

ಮನೆಯ ಸಮಾರಂಭಗಳಿಗೆ ಆಹ್ವಾನಿಸುವುದು

ಮನೆಯ ಸಮಾರಂಭಗಳಿಗೆ ಆಹ್ವಾನಿಸುವುದು

ತಮ್ಮ ಮನೆಯ ಯಾವುದೇ ಸಮಾರಂಭಗಳಿಗೆ ಅವರು ನಿಮ್ಮನ್ನು ಆಹ್ವಾನಿಸಿದಲ್ಲಿ, ನಿಮ್ಮನ್ನು ಸದಾ ಕಾಲ ಎಂದೆಂದಿಗೂ ತಮ್ಮವಳನ್ನಾಗಿ ಮಾಡಿಕೊಳ್ಳಬೇಕೆಂಬ ಬಯಕೆ ಅವರದಾಗಿದೆ ಎಂಬುದನ್ನು ಅರಿಯಿರಿ.

ತಮಗೆ ತಿಳಿದವರಿಗೆ ನಿಮ್ಮನ್ನು ಪರಿಚಯಿಸುವುದು

ತಮಗೆ ತಿಳಿದವರಿಗೆ ನಿಮ್ಮನ್ನು ಪರಿಚಯಿಸುವುದು

ಸ್ನೇಹಿತರು, ಮನೆಯವರು, ಹತ್ತಿರದವರು ಹಾಗೂ ಅವರ ಸಣ್ಣ ಪ್ರಪಂಚಕ್ಕೆ ನಿಮ್ಮನ್ನು ಅವರು ಪರಿಚಯಿಸುತ್ತಿದ್ದಾರೆ ಎಂದಾದಲ್ಲಿ, ನಿಮ್ಮನ್ನು ತಮ್ಮ ಪತ್ನಿಯನ್ನಾಗಿಸಲು ಅವರು ಬಯಸಿದ್ದಾರೆ ಎಂದಾಗಿದೆ.

Story first published: Friday, August 1, 2014, 14:45 [IST]
X
Desktop Bottom Promotion