ಸಂಗಾತಿಯನ್ನು ಬಿಟ್ಟು ಬೇರೊಂದು ಸಂಬಂಧ ಏಕೆ?

By Poornima heggade

ಹುಡುಗರು ದೈಹಿಕ ಸಂಬಂಧ ಹೊಂದುವುದರಲ್ಲಿ ಬಹಳ ಆಸಕ್ತರು ಎಂಬ ಮಾತು ಬಹಳ ಪ್ರಚಲಿತ. ಆದರೆ ಇದು ಕೇವಲ ಅವರ ಸಂಬಂಧದ ಬಗ್ಗೆ ಮಾತ್ರವಲ್ಲ ಅದರ ಹೊರತಾಗಿಯೂ ಹರಡಿರುತ್ತದೆ ಎಂಬುದು ಒಂದು ಬಗೆಯ ಆಪಾದನೆ. ಹುಡುಗರಿಗೆ ಯಾವುದಾದರೂ ಹುಡುಗಿ ದೈಹಿಕ ಸಂಪರ್ಕ ಹೊಂದಲು ಆಮಂತ್ರಣ ನೀಡಿದರೆ ಹುಡುಗರು ಇಲ್ಲ ಎನ್ನಲಾರರು. ಇದು ಅವರ ಗೆಳೆಯರು ಆಗಿರಬಹುದು ಅಥವಾ ಅವರ ಸಂಬಂಧಿಕರಲ್ಲಿ ಯಾರಾದರೂ ಸರಿ.

ಇದು ಯಾಕೆ ಹೀಗೆ ಎಂದು ಕಂಡು ಹಿಡಿಯಲು ಅನೇಕ ಸಂಶೋಧನೆಗಳೂ ನಡೆದಿವೆ. ಕೆಲವರು ಇದು ತಮ್ಮ ಮೇಲೆ ತಮಗೆ ಕಡಿಮೆ ನಿಯಂತ್ರಣ ಇರುವ ಕಾರಣದಿಂದ ಎನ್ನುತ್ತಾರೆ ಇನ್ನೂ ಕೆಲವರು ಪುರುಷರಲ್ಲಿ ನೈಸರ್ಗಿಕವಾಗಿಯೇ ಲೈಂಗಿಕ ಸಂಪರ್ಕದ ಆಸೆ ಹೆಚ್ಚು ಎನ್ನುತ್ತಾರೆ. ಈ ವೈಜ್ಞಾನಿಕ ಕಾರಣಗಳೇನೆ ಇರಬಹುದು ಪುರುಷರು ತಮ್ಮ ಸಂಗಾತಿಗೆ ಮೋಸ ಮಾಡಲು ತಮ್ಮದೇ ಆದ ಕಾರಣಗಳನ್ನು ಹುಡುಕುತ್ತಾರೆ ಎನ್ನುವುದು ನಿಜ. ಇದು ಅಂತಹ ಸಂಬಂಧದಲ್ಲಿ ಪಾಲ್ಗೊಳ್ಳಲು ಇರುವ ಆಸೆ ಇರಬಹುದು ಅಥವಾ ಕುತೂಹಲವೂ ಆಗಿರಬಹುದು.

ಪುರುಷರು ಮಾಡುವ ದಾಂಪತ್ಯ ದ್ರೋಹವನ್ನು ಕೇವಲ ಕೆಲವೇ ಕಾರಣಗಳಿಂದ ಹೇಳಲು ಸಾಧ್ಯವಿಲ್ಲ. ಕೆಲವು ಬಾರಿ ಪುರುಷರು ಈ ರೀತಿ ಮೋಸ ಮಾಡಲು ಕಾರಣ ಅವರ ಸಂಗಾತಿ ಆಗಿರಬಹುದು. ತಮ್ಮ ಸಂಬಂಧದಲ್ಲಿ ಹೊಂದಾಣಿಕೆ ಇಲ್ಲದೇ ಇರುವ ಕಾರಣ ಪುರುಷರು ಈ ದಾರಿಯನ್ನು ಆರಿಸಿರಬಹುದು. ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಹಾಗೂ ಇಲ್ಲಿನ ಮದುವೆಯ ವ್ಯವಸ್ಥೆಯಲ್ಲಿ ಎರಡು ಪರಿಚಯವಿರದ ಕುಟುಂಬದ ಹುಡುಗ ಹುಡುಗಿ ಒಂದಾಗುವ ಕಾರಣ ಈ ರೀತಿ ಆಗುವ ಸಾಧ್ಯತೆಗಳಿವೆ. ಎರಡು ತೀರಾ ವಿಭಿನ್ನ ನೆಲೆಗಟ್ಟಿನಿಂದ ಬಂದ ಇಬ್ಬರಿಗೆ ಹೊಂದಾಣಿಕೆ ಸಾಧ್ಯವೇ ಆಗದೇ ಇರಬಹುದು.

ಕೆಲವು ಸಂಬಂಧಗಳ ಹೊಂದಾಣಿಕೆ ತಪ್ಪಲು ಇಬ್ಬರೂ ಕಾರಣರಾಗಿರಬಹುದು ಅಥವಾ ಇನ್ನೂ ಕೆಲವೊಮ್ಮೆ ಕೇವಲ ಒಬ್ಬರೇ ಕಾರಣವಾಗಿರಬಹುದು. ಸಂಬಂಧದಲ್ಲಿ ಬೇಸರ ಅಥವಾ ಬಳಲಿಕೆ ಅಥವಾ ನಿರಾಸಕ್ತಿ ಪುರುಷರು ಕೊಡುವ ಮೊದಲ ಮತ್ತು ಸುಲಭವಾದ ಉತ್ತರ. ಯಾವುದೇ ಸಂಬಂಧದಲ್ಲಿ ಮೊದಲ ಕೆಲವು ದಿನಗಳಲ್ಲಿ ಇರುವ ಆಸಕ್ತಿಯು ಮುಂದಿನ ದಿನಗಳಲ್ಲಿ ಕಾಣದಾಗಬಹುದು. ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರಿಸಬೇಕು ಎಂದು ಹೊಂದಾಣಿಕೆಗೆ ಪ್ರಯತ್ನ ಪಟ್ಟರೆ ಸಂಬಂಧ ಸರಿಹೊಂದುತ್ತದೆ ಹೀಗಾಗದೇ ಹೋದಲ್ಲಿ ಬೇರ್ಪಡುವುದು ಸಾಮಾನ್ಯ. ಹೀಗೆ ಹೊಸತನದ ಹುಡುಕಾಟ ತಮ್ಮ ಜೀವನ ಶೈಲಿಯ ಜೊತೆಗೆ ಲೈಂಗಿಕ ಜೀವನದಲ್ಲೂ ಬೇಕಾಗಬಹುದು. ಇದ್ಯಾವುದೂ ನಡೆಯದಿದ್ದಲ್ಲಿ ಪುರುಷರು ಬೇರೆ ಕಡೆ ಈ ಖುಷಿಯನ್ನು ಹುಡುಕುತ್ತಾರೆ. ಅದಕ್ಕೆ ಕಾರಣಗಳು ಇವುಗಳಲ್ಲಿ ಯಾವುದೂ ಆಗಿರಬಹುದು.

1. ಸಂಬಂಧದಲ್ಲಿ ಬಿಕ್ಕಟ್ಟು

1. ಸಂಬಂಧದಲ್ಲಿ ಬಿಕ್ಕಟ್ಟು

ಒಂದು ಆರೋಗ್ಯಕರ ಸಂಬಂಧದಲ್ಲಿ ಒಂದಷ್ಟು ಜಗಳಗಳು ಮತ್ತು ಮನಸ್ತಾಪಗಳು ಸಾಮಾನ್ಯ. ಆದರೆ ಈ ಜಗಳಗಳು ಮತ್ತು ಮನಸ್ತಾಪಗಳು ಬಂದಾಗ ಅದನ್ನು ಜಾಗರೂಕತೆಯಿಂದ ನಿಭಾಯಿಸದೇ ಇದ್ದಲ್ಲಿ ಇದರಿಂದ ಸಮಸ್ಯೆಗಳು ಖಂಡಿತ.

2. ಆಸಕ್ತಿಯ ಕೊರತೆ

2. ಆಸಕ್ತಿಯ ಕೊರತೆ

ಹೊಸ ಸಂಬಂಧದಲ್ಲಿ ಇರುವ ಆಸಕ್ತಿ, ಆಕರ್ಷಣೆ ಸಂಬಂಧ ಹಳೆಯದಾದಂತೆ ಇರುವುದಿಲ್ಲ. ಇಬ್ಬರೂ ಒಬ್ಬರ ಕಡೆಗೆ ಇನ್ನೊಬ್ಬರು ಆಸಕ್ತಿಯನ್ನು ಮುಂದುವರೆಸಿದರೆ ಅಥವಾ ಹೊಸತೇನಾದರೂ ಮಾಡುತ್ತಿದ್ದರೆ ಆಸಕ್ತಿ ಮುಂದುವರಿಯುತ್ತದೆ. ಇಲ್ಲವಾದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

3. ಪ್ರಯೋಗಶೀಲತೆ

3. ಪ್ರಯೋಗಶೀಲತೆ

ಹೆಚ್ಚಿನ ಸಂಶೋಧನೆಗಳು ಹೇಳುವ ಪ್ರಕಾರ ಪುರುಷರು ಹೊಸತೇನನ್ನಾದರೂ ಹುಡುಕುವ ಪ್ರಯತ್ನದಲ್ಲಿ ಹೀಗೆ ಹೊಸ ಲೈಂಗಿಕ ಸಂಗಾತಿಯ ಹುಡುಕಾಟದಲ್ಲಿ ತೊಡಗುತ್ತಾರೆ. ಇದನ್ನೇ ಅವರು ತಮ್ಮ ಸಂಗಾತಿಯ ಜೊತೆಗೆ ಪ್ರಯತ್ನಿಸಿರಲಾರರು ಎಂದು ಹೇಳಲಾಗದು ಆದರೆ ಹೊಸ ಸಂಗಾತಿಯ ಜೊತೆಗೆ ಪ್ರಯತ್ನಿಸುವ ಆಸೆ ಇದಕ್ಕೆ ಕಾರಣ ಅಂತೂ ನಿಜ.

4. ನಿಲ್ಲದ ದಾಹ

4. ನಿಲ್ಲದ ದಾಹ

ಕೆಲವರಿಗೆ ತಮ್ಮ ಸಂಗಾತಿಯ ಜೊತೆ ಕಳೆದ ಸಮಯವೆಲ್ಲಾ ಅಷ್ಟೇನು ರೋಮಾಂಚಕ ಅನ್ನಿಸುವುದಿಲ್ಲ ಸಂಬಂಧದ ಹೊರಗಿನ ಲೈಂಗಿಕ ಸಂಬಂಧಗಳೇ ಹೆಚ್ಚು ಖುಷಿ ಮತ್ತು ಆಸಕ್ತಿಯುತವಾಗಿರುತ್ತವೆ.

5. ಸೇಡಿನ ಮನೋಭಾವ

5. ಸೇಡಿನ ಮನೋಭಾವ

ಕೆಲವು ಬಾರಿ ಪುರುಷರು ತಮ್ಮ ಸಂಗಾತಿಯ ಮೊಸಕ್ಕೆ ತಕ್ಕ ಉತ್ತರ ನೀಡುವುದಕ್ಕಾಗಿ ಹೀಗೆ ಮಾಡುವುದಿದೆ. ಹೆಂಡತಿ ಬೇರೆ ಪುರುಷರೊಂದಿಗೆ ಸಂಬಂಧ ಹೊಂದಿದ ಕಾರಣ ಪುರುಷರೂ ಹೊಸ ಸಂಬಂಧವನ್ನು ಹುಡುಕುವ ಸಾಧ್ಯತೆಗಳೂ ಇಲ್ಲದಿಲ್ಲ.

6. ರೋಚಕತೆ

6. ರೋಚಕತೆ

ಸಂಗಾತಿಗೆ ಮೋಸ ಮಾಡುವುದು ನಮ್ಮ ಸಮಾಜದಲ್ಲಿ ಒಪ್ಪಿಗೆಯಿಲ್ಲ. ಇದೇ ಕಾರಣಕ್ಕಾಗಿ ಒಪ್ಪಿಗೆಯಿಲ್ಲದ ಕೆಲಸವನ್ನು ಮಾಡಿದರೆ ಸಿಗುವ ಖುಷಿಯನ್ನು ಪಡೆಯಲು ಹೀಗೆ ಮಾಡುವುದಿದೆ.

7. ಅವಕಾಶಗಳು

7. ಅವಕಾಶಗಳು

ಕೆಲವು ಬಾರಿ ಪುರುಷರು ಕೆಲಸ ಮಾಡುವ ಕಡೆಗಳಲ್ಲಿ ಇಂತಹ ಯಾರಾದರೂ ಅವಕಾಶ ನೀಡಿದರೆ ಬೇಡ ಎನ್ನುವ ಪುರುಷರು ಕಡಿಮೆ. ತಾವಾಗಿ ಅಲ್ಲದೇ ಇದ್ದರು ತಮಗೆ ಯಾರಾದರೂ ಆಹ್ವಾನ ನೀಡಿದರೆ ಕೂಡಲೆ ಒಪ್ಪಿಕೊಂಡು ಬಿಡುತ್ತಾರೆ.

8. ಪ್ರೀತಿ ಇಲ್ಲದಿರುವಿಕೆ

8. ಪ್ರೀತಿ ಇಲ್ಲದಿರುವಿಕೆ

ಹಲವು ಬಾರಿ ಸಂಬಂಧದಲ್ಲಿ ಪ್ರೀತಿ ಉಳಿದಿರುವುದಿಲ್ಲ. ಹೀಗಾದಾಗ ಹೊಸ ಸಂಬಂಧಗಳು ಮತ್ತು ಆಕರ್ಷಣೆಗಳು ದಾರಿ ತಪ್ಪಿಸುವುದು ಸಹಜ.

9. ಮುಚ್ಚಿಡಬಹುದು ಎಂಬ ನಂಬಿಕೆ

9. ಮುಚ್ಚಿಡಬಹುದು ಎಂಬ ನಂಬಿಕೆ

ಹಲವು ಬಾರಿ ತಮ್ಮ ಸಂಗಾತಿಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೂ ಬೇರೊಂದು ಸಂಬಂಧದಲ್ಲಿ ಬೀಳುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಮುಂದೆ ಇದನ್ನು ಮುಚ್ಚಿಡಬಹುದು ಯಾರಿಗೂ ಗೊತ್ತಾಗುವುದಿಲ್ಲ ಎಂಬ ನಂಬಿಕೆ.

10. ನಿರ್ಲಕ್ಷಿತ ಭಾವ

10. ನಿರ್ಲಕ್ಷಿತ ಭಾವ

ತಮ್ಮ ಸಂಗಾತಿಯ ಕಣ್ಣಲ್ಲಿ ನಿರ್ಲಕ್ಷಕ್ಕೊಳಗಾದರೆ ಹೀಗೆ ಹೊಸ ಲೈಂಗಿಕ ಸಂಗಾತಿಯ ಹುಡುಕಾತದಲ್ಲಿ ಹಲವು ಪುರುಷರು ಆಸಕ್ತರಾಗುತ್ತಾರೆ.

Story first published: Wednesday, January 1, 2014, 20:01 [IST]
X
Desktop Bottom Promotion