Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ನಿಮ್ಮ ಸಂಗಾತಿಯನ್ನು ಆನ್‌ಲೈನ್‌ನಲ್ಲಿಯೇ ಹುಡುಕಿ!
ಜೀವನದಲ್ಲಿ ಸಂಗಾತಿಯ ಪ್ರಾಮುಖ್ಯ ಹೆಚ್ಚಿನದು. ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸಿ ಜೀವನಪೂರ್ತಿ ಪ್ರೀತಿಯ ಅಪ್ಪುಗೆಯಲ್ಲಿ ಬಂಧಿಸುವ ಜೊತೆಗಾತಿ ನಮ್ಮೊಡನಿರಬೇಕೆಂಬ ಮಹದಾಸೆ ಪ್ರತಿಯೊಬ್ಬರಿಗಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಸಂಗಾತಿಯ ಅನ್ವೇಷಣೆ ಕೂಡ ಸುಲಭಸಾಧ್ಯವಾಗಿದೆ.
ಇದೀಗ ಆನ್‌ಲೈನ್ ಮೂಲಕ ಕೂಡ ಜೊತೆಗಾತಿಯನ್ನು ಹುಡುಕಬಹುದಾಗಿದೆ. ಇದರ ಮೂಲಕ ಮನಸ್ಸು, ಭಾವನೆಯನ್ನು ಅರ್ಥಮಾಡಿಕೊಳ್ಳುವ ಸಂಗಾತಿ ಜೊತೆಗಿರುತ್ತಾನೆ. ಆನ್‌ಲೈನ್ ಸಂಗಾತಿಯನ್ನು ನಿಮ್ಮವನಾಗಿಸಲು ನೀವು ಕೆಲವೊಂದು ತಂತ್ರಗಳನ್ನು ಅರಿತುಕೊಳ್ಳಲೇಬೇಕು.

ಈ ತಂತ್ರಗಳು ನಿಮಗೆ ಸುಲಭವಾಗಿ ಒಲಿದರೆ ನೀವು ಈ ವಿಷಯದಲ್ಲಿ ಜಯಶಾಲಿಯಾದಂತೆ. ಸಂಗಾತಿಯನ್ನು ಪಡೆಯಲು ನೀವು ಯಶಸ್ವಿಯಾದರೆ ಸಾಲದು ಆ ಬಾಂಧವ್ಯವನ್ನೂ ಹಾಗೆಯೇ ಜೀವಿತಕಾಲ ಕೊಂಡೊಯ್ಯಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹದಿಹರೆಯದ ಮಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನಿಮ್ಮ ಆನ್‌ಲೈನ್ ಸಂಗಾತಿಯೊಂದಿಗಿನ ಬಾಂಧವ್ಯವನ್ನು ಸುಭದ್ರವಾಗಿಸುವ ಕೆಲವೊಂದು ಸಲಹೆಗಳು ಇಲ್ಲಿವೆ.
ಶಾಂತವಾಗಿರಿ: ಸಮುದ್ರದಲ್ಲಿ ಹಲವಾರು ಮೀನುಗಳಿರುತ್ತವೆ. ಆದರೆ ಸರಿಯಾದ ಒಂದು ಮೀನನ್ನು ಹಿಡಿಯುವುದು ಸುಲಭವಲ್ಲ ಅದಕ್ಕೆ ತಾಳ್ಮೆ ಬೇಕು. ಇದೇ ಅನುಸರಣೆಯನ್ನು ನಿಮ್ಮ ಜೀವನಸಂಗಾತಿಯ ವಿಷಯದಲ್ಲೂ ಮಾಡಬೇಕು. ಅವಸರ ಅಪಾಯವನ್ನು ತರಬಹುದು. ಆದ್ದರಿಂದ ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯವನ್ನು ಶಾಂತವಾಗಿ ಕೊಂಡೊಯ್ಯಬೇಕು.
ಸಂವಹನದ ಮೇಲೆ ಹಿಡಿತವಿರಲಿ:
ನಿಮ್ಮ ಹಾದಿಯಲ್ಲಿ ನಿಮಗೆ ಸಾಗಲು ನೀವು ಬುದ್ಧಿವಂತರಾಗಿರಬೇಕು. ಅದರಲ್ಲೂ ನಿಮ್ಮ ಸಂಗಾತಿಯನ್ನು ಆನ್‌ಲೈನ್‌ನಲ್ಲಿ ಅನ್ವೇಷಿಸುವ ವಿಷಯದಲ್ಲಿ ನೇರ ಹಾಗೂ ಬುದ್ಧಿವಂತರಾಗಿರಬೇಕು. ಇನ್ನೊಬ್ಬರ ಭಾವನೆಯನ್ನು ಅರ್ಥಮಾಡಿಕೊಂಡು ನೀವು ಸಂವಾದಕ್ಕಿಳಿಯಬೇಕು. ಪರಸ್ಪರ ಅನ್ಯೋನ್ಯತೆ ಮುಖ್ಯವಾಗಿರಬೇಕು.
ಅರ್ಥಮಾಡಿಕೊಳ್ಳುವಿಕೆ:
ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು ಬಾಂಧವ್ಯದಲ್ಲಿ ಅನಿವಾರ್ಯ ಇಲ್ಲದಿದ್ದರೆ ಒಡಕು ಸರ್ವೇಸಾಮಾನ್ಯ. ನಿಮ್ಮ ಸಂಗಾತಿಯೊಂದಗೆ ವಿಶೇಷ ಬಾಂಧವ್ಯವನ್ನು ನಿರ್ಮಿಸಿಕೊಳ್ಳುವುದು ಪ್ರೀತಿ ಹಾಗೂ ಉತ್ತಮ ಬಾಂಧವ್ಯಕ್ಕೆ ನಾಂದಿಯಾಗುತ್ತದೆ.
ನಂಬಿಕೆ ಇರಿಸಿ:
ನಂಬಿಕೆ ಸಂಬಂಧದ ಪ್ರಮುಖ ಅಂಶ. ಆನೆ್‌ಲೈನ್‌ನೊಂದಿಗೆ ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಯ ಮೇಲೆ ವಿಶ್ವಾಸವಿರಿಸಿ. ಅನಾವಶ್ಯಕ ಸಂಶಯ, ತಪ್ಪುಕಲ್ಪನೆ ಮಾಡಬೇಡಿ. ಇದರಿಂದ ಬಾಂಧವ್ಯ ಹಾಳಾಗುತ್ತದೆ.
ಸ್ವೀಕರಿಸುವಂತವರಾಗಿ:
ಜೀವನದ ಸಿಹಿ ಕಹಿ ಅಂಶವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಿಮ್ಮದಾಗಿರಲಿ. ಪರಿಸ್ಥಿತಿಯನ್ನು ಹೇಗಿದೆಯೋ ಹಾಗೆಯೇ ಸ್ವೀಕರಿಸಿ. ಸಂಕಷ್ಟಗಳಿದ್ದರೆ ಅದನ್ನು ನಿವಾರಿಸಿಕೊಳ್ಳುವ ಮನಸ್ಸನ್ನು ನಿರ್ಮಿಸಿಕೊಳ್ಳಿ.
ಈ ವಿಧಾನಗಳನ್ನು ಅನುಸರಿಸಿಕೊಂಡು ನಿಮ್ಮ ಆನ್‌ಲೈನ್ ಸಂಗಾತಿಯ ಬಾಂಧವ್ಯವನ್ನು ಚೆನ್ನಾಗಿ ಇರಿಸಿಕೊಳ್ಳಿ.



Click it and Unblock the Notifications