Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸಂತೋಷಕರವಾದ ವೈವಾಹಿಕ ಜೀವನಕ್ಕೆ ಪ್ರೀತಿಯ ಸಲಹೆಗಳು!
ವೈವಾಹಿಕ ಜೀವನವೆಂದರೆ ಇಬ್ಬರು ಭಿನ್ನ ವ್ಯಕ್ತಿಗಳು, ಭಿನ್ನ ಸನ್ನಿವೇಶದಲ್ಲಿ ಬೆಳೆದವರು, ಒಟ್ಟಿಗೆ ಹಲವಾರು ಸ್ಮರಣೀಯ ಸಂಗತಿಗಳನ್ನು ಮತ್ತು ಸನ್ನಿವೇಶಗಳನ್ನು ಹಂಚಿಕೊಳ್ಳುವ ಜೀವನವಾಗಿರುತ್ತದೆ. ಇಲ್ಲಿ ಇಬ್ಬರೂ ಸಂತೋಷವಾಗಿರಬೇಕೆಂದರೆ ಇಲ್ಲಿ ಪರಸ್ಪರರನ್ನು ಪ್ರಾಮಾಣಿಕವಾಗಿ ಖುಷಿಪಡಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಈ ಅಂಕಣದಲ್ಲಿ ನಾವು ಸುಖಿ ವೈವಾಹಿಕ ಜೀವನಕ್ಕೆ ಅಗತ್ಯವಾದ ಕೆಲವೊಂದು ಪ್ರೀತಿಯ ಸಲಹೆಗಳನ್ನು ನೀಡುತ್ತಿದ್ದೇವೆ. ನಿಮ್ಮ ಬಾಳ ಸಂಗಾತಿಯ ಆಯ್ಕೆಗೆ 7 ಸರಳ ಸಲಹೆಗಳು
ಇಲ್ಲಿ ನಾವು ವೈವಾಹಿಕ ಜೀವನದಲ್ಲಿ ಬದುಕಲು ಇರುವ ಮಾರ್ಗೋಪಾಯಗಳ ಕುರಿತು ಗಮನ ಹರಿಸಿದ್ದೇವೆ. ಏಕೆಂದರೆ ಇದಕ್ಕೆ ಗೌರವ, ಪ್ರೀತಿ, ಬದ್ಧತೆ ಮತ್ತು ತುಡಿತ ಎಲ್ಲದರ ಅಗತ್ಯವಿದೆ. ಪ್ರತಿಯೊಬ್ಬರು ತಮ್ಮ ವೈವಾಹಿಕ ಜೀವನವನ್ನು ಆನಂದಿಸುವುದಿಲ್ಲ. ಇದನ್ನು ನೀವು ಸಹ ಒಪ್ಪುವಿರಲ್ಲವೆ. ಈ ಆಲೋಚನೆಯೆ ನಿಮ್ಮನ್ನು ಚಿಂತನೆಗೆ ಹಚ್ಚಬಲ್ಲದು. ಬಹುತೇಕ ಜನ ಮದುವೆಯೆಂದರೆ ಖುಷಿಯಾಗಿ ಕಾಲ ಕಳೆಯುವ ಕಾಲ ಎಂದುಕೊಂಡಿರುತ್ತಾರೆ.
ಆ ಕಾಲವನ್ನು ನೀವು ಅಂದುಕೊಂಡಂತೆಯೇ ಕಳೆಯಬೇಕು ಎಂದಾದಲ್ಲಿ ನಾವು ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿ. ಬನ್ನಿ ಇನ್ನೂ ತಡ ಮಾಡದೆ ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಗೆದ್ದು ಸಂತೋಷಕರವಾದ ವೈವಾಹಿಕ ಜೀವನವನ್ನು ನಡೆಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮುಂದೆ ಓದಿ.... ಬೇರ್ಪಟ್ಟ ಸಂಬಂಧ ನೀಡುವುದೇ ಹೊಸ ತಿರುವು?

ಜವಾಬ್ದಾರಿಗಳನ್ನು ವಿಂಗಡಿಸಿಕೊಳ್ಳುವುದು
ಯಶಸ್ವಿ ವಿವಾಹಗಳ ಗುಟ್ಟು ಇಲ್ಲಿಯೇ ಚಿಗುರೊಡೆಯುವುದು. ಇಲ್ಲಿ ಮಹಿಳೆಯು ಮಾತ್ರ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳಬೇಕು ಎಂಬುದಲ್ಲ. ನೀವು ಸಹ ಆಕೆಗೆ ಒತ್ತಾಸೆಯಾಗಿ ಆಕೆಯ ಕೆಲಸಗಳನ್ನು ವಿಂಗಡಿಸಿಕೊಂಡು ನೋಡಿಕೊಂಡು ಹೋಗಿ. ಆಗ ಆಕೆಗೂ ಹೊರೆ ತಪ್ಪುತ್ತದೆ. ನಿಮ್ಮೆಡೆಗೆ ಪ್ರೀತಿ ಹೆಚ್ಚಾಗುತ್ತದೆ.

ದಿನ ಎಲ್ಲಾ ಏನು ಮಾಡಿದಿರಿ ಎಂದು ರಾತ್ರಿ ಮಾತನಾಡಿ
ಇದು ಬಹುತೇಕ ಸುಖಿ ದಂಪತಿಗಳು ಮಾಡುವ ಕೆಲಸ. ಅಂದು ನಡೆದ ಎಲ್ಲಾ ವಿಚಾರಗಳನ್ನು ಅವರು ತಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳುತ್ತಾರೆ. ಇದರಿಂದ ಅವರ ಸಂವಹನ ಮತ್ತಷ್ಟು ಬೆಳೆಯುತ್ತದೆ. ಇದರಿಂದ ನಿಮ್ಮ ದಾಂಪತ್ಯ ಸುಖಮಯವಾಗುತ್ತದೆ. ಮಾತನಾಡಿ, ಖುಷಿ, ದುಃಖ, ಅಚ್ಚರಿ ಇತ್ಯಾದಿ, ಇತ್ಯಾದಿ.

ನಿಮ್ಮ ಸಂಗಾತಿಯನ್ನು ಅಭಿನಂದಿಸಿ
ಯಾವಾಗಲು ತೀರ್ಮಾನಗಳನ್ನು ನೀಡುವ ನ್ಯಾಯವಾದಿಯ ರೀತಿ ಆಡಬೇಡಿ. ನಿಮ್ಮ ಸಂಗಾತಿಯ ಓರೆ,ಕೋರೆಗಳನ್ನು ನೋಡುತ್ತ ಕುಳಿತುಕೊಳ್ಳಬೇಡಿ. ಅವರು ಮನುಷ್ಯರಲ್ಲವೇ, ತಪ್ಪುಗಳಾಗುತ್ತದೆ ಬಿಡಿ. ಆದರೆ ಅವರ ಪ್ರಯತ್ನ ಮತ್ತು ಕೊಡುಗೆಯನ್ನು ಮರೆಯಬೇಡಿ. ಅವರನ್ನು ಅಭಿನಂದಿಸಿ, ಕೃತಜ್ಞತಾಪೂರ್ವಕತೆಯನ್ನು ನಡೆ ನುಡಿಯಲ್ಲಿ ವ್ಯಕ್ತಪಡಿಸಿ. ಇದರಿಂದ ನಿಮ್ಮ ದಾಂಪತ್ಯ ಜೀವನ ಸಹ ಸುಖಮಯವಾಗುತ್ತದೆ.

ದೈಹಿಕ ಸಂಬಂಧ
ಯಾವಾಗಲು ದೈಹಿಕ ಸುಖಕ್ಕಾಗಿ ಹಾತೊರೆಯಬೇಡಿ. ಮದುವೆಯ ಮೊದಲ ಹಂತದಲ್ಲಿ ದೈಹಿಕ ಸುಖಗಳು ನಿಮ್ಮ ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ ಎಂಬುದು ನಿಜ. ನಂತರದ ದಿನಗಳಲ್ಲಿ ಆಗಾಗ್ಗೆ ಮಿಲನದಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧ ಮತ್ತಷ್ಟು ಗಾಢವಾಗುತ್ತದೆ.

ನಿಮ್ಮ ಕುಟುಂಬಕ್ಕಾಗಿ ಹೆಚ್ಚಿನ ಕಾಲ ಮೀಸಲಿಡಿ
ನಿಮ್ಮ ಕೆಲಸ ಕಾರ್ಯಗಳು ಎಷ್ಟೇ ಇದ್ದರು, ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ನೀವು ನಿಮ್ಮ ಕುಟುಂಬಕ್ಕು ಸಹ ಆಧ್ಯತೆಯನ್ನು ನೀಡಬೇಕು. ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಕಾಲವನ್ನು ಕಳೆಯುವುದರಿಂದ, ಅವರು ನಿಮ್ಮ ಬಾಳಿನಲ್ಲಿ ಎಷ್ಟು ಮಹತ್ವವನ್ನು ಪಡೆದಿದ್ದಾರೆ ಎಂದು ತೋರಿಸಬಹುದು. ಇದನ್ನು ಅವರು ನಿಮ್ಮ ಊಹೆಗು ನಿಲುಕದ ರೀತಿಯಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ.



Click it and Unblock the Notifications