Latest Updates
-
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ
ವಿವಾಹಿತ ಪುರುಷನ ಪ್ರೀತಿಸುವ ಮಹಿಳೆಯರಿಗೆ ಟಿಪ್ಸ್‌ಗಳು
ಪ್ರೀತಿಯಲ್ಲಿ ಬೀಳುವುದು ನಿಮ್ಮ ಜೀವನದ ಸುಂದರ ಘಟನೆ. ನೀವು ಪ್ರೀತಿಸುತ್ತಿದ್ದರೆ ಇದು ಎಷ್ಟು ಸುಂದರ ಹಾಗೂ ಸಂಪೂರ್ಣ ದಿವ್ಯ ಭಾವನೆ ಮೂಡಿಸುತ್ತದೆ ಎಂದು ನಿಮಗೆ ತಿಳಿದಿರಬಹುದು. ಆದರೆ ನೀವು ಪ್ರೀತಿಸುವವರಿಗೆ ನೆರವಾಗುತ್ತೀರಾ?
ನೀವು ಪ್ರೀತಿಸುವ ವ್ಯಕ್ತಿ ಅಸಮರ್ಥನಾಗಿದ್ದರೆ ಅಥವಾ ಈಗಾಗಲೇ ಯಾವುದಾದರೂ ಸಂಬಂಧದಲ್ಲಿರುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೀರಾ? ಮದುವೆಯಾಗಿರುವ ಮತ್ತು ಜೀವನದಲ್ಲಿ ಒಂದು ನೆಲೆ ಕಂಡಿರುವ ವ್ಯಕ್ತಿಯನ್ನು ಪ್ರೀತಿಸುವ ಸಾಧ್ಯತೆಗಳು ಇದೆ.
ಇದರ ಬಗ್ಗೆ ನೀವು ನಾಚಿಕೆಪಡಬೇಕೆಂದಿಲ್ಲ. ಆದರೆ ಸಮಸ್ಯೆ ಮತ್ತು ನಿಜವಾದ ತೊಂದರೆ ಮದುವೆಯಾಗಿರುವ ವ್ಯಕ್ತಿ ನಿಮ್ಮನ್ನು ಪ್ರೀತಿಸಲು ಆರಂಭಿಸಿದಾಗ. ಮದುವೆಯಾದ ವ್ಯಕ್ತಿಯೊಂದಿಗೆ ಸಂಬಂಧವಿರಿಸಿಕೊಳ್ಳುವುದು ಅತೀ ದೊಡ್ಡ ಸಮಸ್ಯೆ. ನೀವು ಏಕಾಂಗಿಯಾಗಿ ಕುಳಿತಿರುವಾಗ ಕೆಳಗೆ ಕೊಟ್ಟಿರುವ ಕೆಲವೊಂದು ಅಂಶಗಳನ್ನು ಪರಿಗಣಿಸಿ, ಆಗ ನಿಮಗೆ ಈ ಸಮಸ್ಯೆಯ ಸುಳಿಯಿಂದ ಬೇಗನೆ ಹೊರಬರಲು ನೆರವಾಗುತ್ತದೆ.
ಮಾತಿಲ್ಲದೆ ಐ ಲವ್ ಯೂ ಹೇಳುವ ವಿಧಾನಗಳು

ನಿಮ್ಮ ಆತ್ಮಗೌರವ ಎಲ್ಲಿಗೆ ಹೋಗಿದೆ?:
ಹೌದು, ಪ್ರೀತಿಸಲ್ಪಡುವುದು ಹಾಗೂ ಇತರರು ನಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುವಾಗ ಒಳ್ಳೆಯದೆನಿಸುತ್ತದೆ. ಆದರೆ ಇದು ನಿಜವಾಗಿಯೂ ಮೌಲ್ಯಯುತವೇ? ನಿಮ್ಮ ಆತ್ಮಗೌರವ ಕಳಕೊಳ್ಳುತ್ತಿಲ್ಲವೇ? ಆತನಿಗೆ ಒಂದು ಕುಟುಂಬವಿದೆ ಮತ್ತು ಆತ ಅಲ್ಲಿಯೇ ವಾಸಿಸಲಿದ್ದಾನೆ. ನೀವು ಆತನ ಪ್ರೀತಿ. ಆದರೆ ವಾಸ್ತವವಾಗಿ ನಿಮ್ಮ ಸಂಬಂಧಕ್ಕೆ ಯಾವುದೇ ಭವಿಷ್ಯವಿಲ್ಲ. ನಿಮ್ಮನ್ನು ಮನೆಮುರುಕಿ ಮತ್ತು ಸ್ವಾರ್ಥಿ ಹುಡುಗಿ ಎಂದು ಕರೆಯಲಾಗುತ್ತದೆ. ಇಂತಹ ಸಂಬಂಧ ನಿಮಗೆ ನೋವು ಹಾಗೂ ಕಣ್ಣೀರಿನ ಹೊರತಾಗಿ ಬೇರೇನೂ ನೀಡದು. ಇದರ ಬಗ್ಗೆ ಯೋಚಿಸಿ.
ಆತ ಪತ್ನಿಯನ್ನು ದೂರ ಮಾಡುತ್ತಾನೆಯಾ?:
ಆತನಿಗೆ ಮದುವೆಯಾಗಿದೆ ಎಂದು ಗೊತ್ತಿದ್ದರೂ ನೀವು ಆತನೊಂದಿಗೆ ಸಂಬಂಧ ಬೆಳೆಸಿಕೊಂಡು ಅದನ್ನು ಪೋಷಿಸುತ್ತಿದ್ದೀರಾ? ಆತ ಕುಟುಂಬದಿಂದ ದೂರವಾಗುತ್ತಾನೆಂದು ನಿಮಗನಿಸುತ್ತಿದೆಯಾ? ಆತನಿಗೆ ಒಂದು ಕುಟುಂಬವಿದೆ. ಅದು ಸಂತೋಷದ ಕುಟುಂಬ. ನೀವು ಆತ ತಿನ್ನುವ ಕೇಕ್ ನ ಒಂದು ಭಾಗವಷ್ಟೇ.
ದಂಪತಿಗಳ ಸುಖ ಸಂಸಾರಕ್ಕೆ ಇಲ್ಲಿದೆ ಸುಲಭ ಸಲಹೆಗಳು!
ಮಕ್ಕಳ ಗತಿ ಏನು?:
ನೀವು ಆತನ ಮಕ್ಕಳು, ಪತ್ನಿಯ ಬಗ್ಗೆ ಯಾವಾಗಲಾದರೂ ಚಿಂತಿಸಿದ್ದೀರಾ? ಅವರ ಜಾಗದಲ್ಲಿ ನೀವಿದ್ದರೆ ಏನಾಗುತ್ತಿತ್ತು? ನಂಬಿಕೆ ದ್ರೋಹ ಮಾಡಿದ ವಿಷಯ ಜೀವಮಾನವಿಡಿ ನಿಮ್ಮನ್ನು ಕಾಡುತ್ತಿರಲಿಲ್ಲವೇ? ಮುರಿದ ಮನೆಯಲ್ಲಿ ಮಕ್ಕಳು ಹೇಗೆ ಬದುಕು ಸಾಗಿಸಬಹುದು? ಆತನ ಪತ್ನಿ ನಂಬಿಕೆ ಹಾಗೂ ಜೀವನದ ಸಂಬಂಧ ಕಳಕೊಳ್ಳಬಹುದಲ್ಲವೇ? ಇದರ ಬಗ್ಗೆ ಕೂಡ ನೀವು ಚಿಂತಿಸಬೇಕು.
ನಿಮಗೆ ಇದಕ್ಕಿಂತ ಉತ್ತಮವಾಗಿರುವುದು ಸಿಗಲಿದೆ:
ಮದುವೆಯಾದ ಪುರುಷ ನಿಮಗೆ ಸಿಗುವ ಆಯ್ಕೆಯಾ? ಮದುವೆಯಾಗದಿರುವ ವ್ಯಕ್ತಿ ನಿಮ್ಮನ್ನು ಪ್ರೀತಿಸಲು ಹಾಗೂ ಕಾಳಜಿ ವಹಿಸಲು ತಯಾರಿಲ್ಲವೇ? ನೀವು ತುಂಬಾ ಸುಂದರ ಹುಡುಗಿ ಮತ್ತು ನಿಮ್ಮ ಕಾಲ ಮೇಲೆ ನಿಲ್ಲಬಲ್ಲ ಎಲ್ಲಾ ಸಾಮರ್ಥ್ಯ ನಿಮ್ಮಲಿದೆ. ಮದುವೆಯಾಗಿರುವ ವ್ಯಕ್ತಿಯೊಂದಿಗೆ ಯಾಕೆ ಸಂಬಂಧ ಬೆಳೆಸುತ್ತೀರಿ. ಈ ಸಂಬಂಧದಿಂದ ಹೊರಬನ್ನಿ ಮತ್ತು ನಿಮಗಾಗಿ ಕಾಯುತ್ತಿರುವ ಮದುವೆಯಾಗದಿರುವ ವ್ಯಕ್ತಿಯ ಆಯ್ಕೆ ಮಾಡಿ. ಹೊರಬಂದು ನೋಡಿ ಹಲವಾರು ಆಯ್ಕೆಗಳು ನಿಮಗಿವೆ.
ಪ್ರಥಮ ರಾತ್ರಿಗೆ ಸಿದ್ಧಗೊಳ್ಳಲು ಸಹಾಯಕ ಈ 10 ವಿಧಾನಗಳು!
ಪ್ರೀತಿ ಪ್ರೀತಿಯೇ:
ಪ್ರೀತಿ ಎನ್ನುವುದು ನಿಷ್ಕಲ್ಮಶ ಮತ್ತು ಭಾವನೆಯ ಹೊರತು ಬೇರೇನೂ ಕಾಣದು. ನೀವು ಪ್ರೀತಿಯಲ್ಲಿ ಬಿದ್ದಾಗ ನಿಮಗೆ ಅಮೋಘ ಭಾವನೆಯಾಗುತ್ತದೆ. ಇದರಿಂದ ಹೊರಬರುವುದು ತುಂಬಾ ಕಠಿಣ. ಆದರೆ ಇದರಲ್ಲೇ ಇದ್ದುಕೊಂಡು ಸಮಸ್ಯೆಗೆ ಒಳಗಾಗುವುದರ ಬದಲು ಹೊರಬರುವುದೇ ಒಳ್ಳೆಯದು. ಈ ಸಂಬಂಧದಿಂದ ಹೊರಬನ್ನಿ ಮತ್ತು ಯಾವುದಾದರೂ ಪ್ರವಾಸಿ ಸ್ಥಳಕ್ಕೆ ಹೋಗಿ, ನಿಮ್ಮ ನಂಬರ್ ಕೂಡ ಬದಲಾಯಿಸಿ. ಆತನಿಂದ ದೂರ ಉಳಿಯಿರಿ. ನೀವಾಗಿಯೇ ಇದನ್ನು ಮಾಡಿ, ಬೇರೆ ಯಾರೋ ಹೇಳಿದರೆಂದು ಮಾಡಬೇಡಿ. ನಿಮಗೆ ಸಾಕಷ್ಟು ನಿರ್ಣಯಗಳಿವೆ, ಇದು ನಿಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ನೀವು ಸಾಕಷ್ಟು ಉತ್ತಮ ಮೌಲ್ಯ ಹೊಂದಿದ್ದೀರಿ ಎಂದು ಯಾವಾಗಲೂ ನೆನಪಿರಲಿ.



Click it and Unblock the Notifications