ನಿಮ್ಮ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಹೇಗೆ?

By Super

ನೀವು ಇಪ್ಪತ್ತರ ಹರೆಯಕ್ಕೆ ಕಾಲಿಟ್ಟ ನಂತರ ನಿಮ್ಮಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ. ಇದಕ್ಕೆ ಸಂಬಂಧಗಳು ಸಹ ಹೊರತಲ್ಲ. ಇದು ನಿಮ್ಮ ಶಾಲೆಗೂ ಮತ್ತು ಕಾಲೇಜಿಗೂ ಇರುವ ಸ್ಪಷ್ಟ ವ್ಯತ್ಯಾಸವಾಗಿ ಕಾಣುತ್ತದೆ.

ಒಂದು ವೇಳೆ ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ, ನಿಮ್ಮ ಗಮನ ಈ ಸಂಬಂಧವನ್ನು ಉಳಿಸಿಕೊಳ್ಳುವತ್ತ ತಿರುಗುತ್ತದೆ. ಬನ್ನಿ ಸುತ್ತಿ ಬಳಸಿ ಮಾತನಾಡುವ ಬದಲು, ನಿಮಗೆ ಗಾಬರಿ ಉಕ್ಕಿಸುತ್ತಿರುವ, ಆತ್ಮ ವಿಶ್ವಾಸವನ್ನು ಕೆಣಕುವಂತಹ, ವಿಷಯಗಳಿಂದ ಮುಕ್ತಿ ಪಡೆಯುವುದು ಹೇಗೆ? ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ:

ಆಯ್ಕೆ ಬುದ್ಧಿವಂತಿಕೆಯಿಂದ ಕೂಡಿರಲಿ

ಈಗ ತಾನೇ ನೀವು ಕಾಲೇಜಿನಿಂದ ಹೊರಬಂದಿರುತ್ತೀರಿ, ನಿಮ್ಮದು ಈಗ ಬಹುತೇಕ ಪ್ರಬುದ್ಧತೆಯನ್ನು ಹೊಂದಿರುವ ಮನಸ್ಸನ್ನು ಹೊಂದಿದ್ದೀರಿ!. ಈಗ ನೀವು ಗಂಭೀರವಾಗಿ, ದೀರ್ಘ ಕಾಲ ಬಾಳಿಕೆ ಬರುವಂತಹ ಒಂದು ಸಂಬಂಧವನ್ನು ನೋಡುತ್ತಿರುವಿರಿ. ಆ ನಿಟ್ಟಿನಲ್ಲಿ ನೀವು ಮುಂದುವರಿಯುವ ಮನಸ್ಸು ಮಾಡಿರುತ್ತೀರಿ. ಆದರೆ ಅದೇ ಸಂದರ್ಭದಲ್ಲಿ ನಿಮ್ಮ ವೃತ್ತಿಪರ ಜೀವನ, ಕೌಟುಂಬಿಕ ಮೌಲ್ಯಗಳು, ನಿಮ್ಮ ಅನಿಸಿಕೆಗಳು, ಅಭಿರುಚಿಗಳು ಇತ್ಯಾದಿಗಳನ್ನು ಸಹ ಆಲೋಚಿಸಿ. ಒಂದು ವೇಳೆ ನಿಮ್ಮ ಸಂಬಂಧದಲ್ಲಿ ಸುಮಾರು 10 ವರ್ಷದ ನಂತರ ನೀವು ಧೂಮಪಾನ ಮಾಡುವುದು ಸಮಸ್ಯೆಯಾಗಿ ಕಾಡುತ್ತದೆ ಎಂದು ನಿಮಗೆ ಅನಿಸಿದಲ್ಲಿ, ಅದನ್ನು ಇಂದೇ ತೊರೆಯಲು ಮನಸ್ಸು ಮಾಡಿ. ಇದು ಕೇವಲ ಉದಾಹರಣೆಯಷ್ಟೇ, ಇಂತಹ ಲೋಪ ದೋಷಗಳನ್ನು ತಿದ್ದಿಕೊಳ್ಳಿ, ಇಲ್ಲವೇ ಆ ದೋಷವನ್ನು ಸಹಿಸಿಕೊಳ್ಳುವವರನ್ನು ಮದುವೆಯಾಗಿ.

ಒಟ್ಟಿಗೆ ಸಮಯವನ್ನು ನಿಭಾಯಿಸಿ

ನೀವು ವಯಸ್ಕಾರಾಗಿದ್ದಾಗ, ನಿಮ್ಮ ಸಂಬಂಧದ ಕುರಿತಾಗಿ ನಿಮಗೆ ಎದುರಾಗುವ ಅತಿ ದೊಡ್ಡ ಸಮಸ್ಯೆಯೆಂದರೆ ಅದು ಸಮಯಾವಕಾಶದ ಕೊರತೆಯಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ನೀವು ತುಂಬಾ ಬ್ಯುಸಿಯಾಗಿರುವ ಸಾಧ್ಯತೆಯಿರುತ್ತದೆ. ಒಂದು ವೇಳೆ ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ, ನೀವು ಏಕಕಾಲದಲ್ಲಿ ಬ್ಯುಸಿಯಾಗಿರುತ್ತೀರಿ ಮತ್ತು ಅದೇ ಸಮಯಕ್ಕೆ ಫ್ರೀ ಸಹ ಆಗಿರುತ್ತೀರಿ! ಇಲ್ಲವಾದಲ್ಲಿ ಈ ಸಮಯವು ನಿಮಗೆ ತುಂಬಾ ಕಷ್ಟಕರವಾಗಿ ಕಾಣುತ್ತದೆ. ಅದಕ್ಕಾಗಿ ನೀವು ನಿಮ್ಮ ಸಂಗಾತಿಯ ಬದ್ಧತೆಗಳನ್ನು ಮತ್ತು ಆಧ್ಯತೆಗಳನ್ನು ಅರಿತುಕೊಳ್ಳಬೇಕು. ಬಹುಶಃ ಅವರು ತಮ್ಮ ಎಲ್ಲಾ ಬಿಡುವಿನ ಅವಧಿಯಲ್ಲಿ ನಿಮ್ಮ ಜೊತೆಗೆ ಕಾಲ ಕಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಪರಸ್ಪರ ಹೆಚ್ಚಿನ ಸಮಯವನ್ನು ಕಳೆಯುವುದು ಸಾಧ್ಯವಾಗುವುದಿಲ್ಲ. ಹಾಗೆಂದು ಹೆಚ್ಚಿನ ಸಮಯವಲ್ಲದಿದ್ದರು, ಸ್ವಲ್ಪ ಸಮಯವಾದರು ನೀವು ಅವರ ಜೊತೆ ಕಳೆಯಲು ಮನಸ್ಸು ಮಾಡಿ. ಪುರುಷರ ಮನ ಸೆಳೆಯುವ ವೇಳೆ ಆಗುವ 7 ಎಡವಟ್ಟುಗಳು!

ಹಣಕಾಸಿನ ವಿಚಾರಗಳನ್ನು ನಿಭಾಯಿಸುವುದು ಹೇಗೆ?

ನೀವು ಇಪ್ಪತ್ತರ ನಡು ವಯಸ್ಸಿನಲ್ಲಿದ್ದಾಗ, ಹಣಕಾಸು ವಿಚಾರಗಳು ಸಹ ನಿಮ್ಮನ್ನು ಭಾದಿಸುತ್ತವೆ. ಏಕೆಂದರೆ ಲೌಕಿಕ ಪ್ರಪಂಚದಲ್ಲಿ ಹಣವೇ ದೈವ, ಇನ್ನು ಸಂಬಂಧಕ್ಕೆ ಅದರ ಅಗತ್ಯವಿಲ್ಲವೇನು? ನೀವು ನಿಮ್ಮ ಹುಡುಗಿಯ ಜೊತೆಗೆ ರಾತ್ರಿ ಊಟಕ್ಕೆ ಹೋದಾಗ ಅದರಲ್ಲಿ 50/50 ಮಾಡಲು ಸಾಧ್ಯವೇ, ಅಥವಾ ನಿಮ್ಮ ಸಂಗಾತಿಯು ನಿಮಗಿಂತ ಹೆಚ್ಚಿನ ಹಣವನ್ನು ಪಾವತಿಸುವರ? ನೀವು ನಿಮ್ಮ ಸಂಗಾತಿಗೆ ಒಳ್ಳೆಯ ಜೀವನ ಶೈಲಿಯನ್ನು ಒದಗಿಸಬಲ್ಲಿರೆ? ಒಂದು ವೇಳೆ ನೀವು ನಿಮಗಿಂತ ಹಣವಿರುವ ಸಂಗಾತಿಯನ್ನು ಮದುವೆಯಾದರೆ ಅಥವಾ ಪ್ರೀತಿಸಿದರೆ, ನೀವು ಯಾವ ರೀತಿಯಲ್ಲಿ ನಿಮ್ಮ ವೆಚ್ಚಗಳನ್ನು ಸರಿತೂಗಿಸಬಲ್ಲಿರಿ. ಆಕೆಯನ್ನು ಹೇಗೆ ಖುಷಿಪಡಿಸಬಲ್ಲಿರಿ. ಅದಕ್ಕಾಗಿ ಮೊದಲು ನಿಮ್ಮ ಹಣಕಾಸಿನ ವಿಚಾರಗಳನ್ನು

ಜಗಳಕ್ಕೆ ಸಿದ್ಧರಾಗಿ!

ಇದೇನಪ್ಪ ಇದು ಜಗಳ ಮಾಡಲು ಹೇಳುತ್ತೀರಲ್ಲ, ಎಂದು ಭಾವಿಸಬೇಡಿ. ನಾವು ಹೇಳುತ್ತಿರುವುದು ಜಗಳ ಬಂದೇ ಬರುತ್ತದೆ, ಅದಕ್ಕಾಗಿ ಸಿದ್ಧರಾಗಿ ಎಂದು. ಈ ಜಗಳಗಳು ಸಾಮಾನ್ಯವಾಗಿ ಹಣಕಾಸಿನ ವಿಚಾರವಾಗಿ ಹೆಚ್ಚಾಗಿ ನಡೆಯುತ್ತವೆ ಮತ್ತು ಇದು ಜಗಳಗಳಲ್ಲೆ ಪರಮ ಕೆಟ್ಟದ್ದು. ಇನ್ನುಳಿದವು ಒಂದು ಸಣ್ಣ ಪುಟ್ಟ ಅಹಂ, ಕೊಡು-ಕೊಳ್ಳು ಹೀಗೆ ಶುರುವಾಗುತ್ತವೆ. ಆದರೆ ಈ ಜಗಳಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ. ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಮತ್ತು ನಿಮ್ಮ ಮನಸ್ಸನ್ನು ನೋಯಿಸುವ ಈ ಜಗಳಗಳು ಎಲ್ಲಾ ಸಂಬಂಧಗಳಲ್ಲಿಯೂ ಸಾಮಾನ್ಯ ಎಂದು ತಿಳಿದುಕೊಳ್ಳಿ. ಜಗಳಗಳು ನಿಮ್ಮನ್ನು ಪರಸ್ಪರ ಅರ್ಥಮಾಡಿಕೊಳ್ಳುವಂತೆ ಮಾಡಬಲ್ಲವು. ಒಮ್ಮೊಮ್ಮೆ ದೂರ ಸಹ ಮಾಡಬಲ್ಲವು!
ಆದರೆ ಒಂದು ವಿಚಾರ ನೆನಪಿಡಿ, ಈ ಜಗಳಗಳು ರಾಜಿಯಾಗುವ ದೊಡ್ಡ ವಿಚಾರವನ್ನು ಬೋಧಿಸುತ್ತವೆ. ರಾಜಿಯಾದ ಮೇಲೆ ಕಪ್ಪ ಕಾಣಿಕೆಗಳನ್ನು ನೀಡುವ ಸಂಗಾತಿಯು ಸಂಬಂಧದಲ್ಲಿ ಹೊಸತನದ ಕಳೆಯನ್ನು ಮೂಡಿಸುತ್ತಾನೆ. ಇದೇ ಅಲ್ಲವೇ ಸಂಬಂಧದ ಗುಟ್ಟು. ನಿಮ್ಮ ಬಾಳ ಸಂಗಾತಿಯ ಆಯ್ಕೆಗೆ 7 ಸರಳ ಸಲಹೆಗಳು

ಬದಲಾವಣೆಯನ್ನು ನಿಭಾಯಿಸುವುದು

ಒಂದು ವೇಳೆ ನೀವು ದೀರ್ಘಕಾಲದ ಸಂಬಂಧದಲ್ಲಿದ್ದರೆ, ವಿಚಾರಗಳು ಬದಲಾಗುವುದನ್ನು ನೀವು ನೋಡಿರಬಹುದು. ನೀವು ಬದಲಾಗುತ್ತೀರಿ ಮತ್ತು ಅವುಗಳು ಬದಲಾಗುತ್ತವೆ. ಕೆಲವೊಮ್ಮೆ ನಿಮ್ಮಿಬ್ಬರ ನಡುವಿನ ಭಾವನೆಗಳು ಸಹ ಬದಲಾಗುತ್ತ ಹೋಗುತ್ತವೆ ಮತ್ತು ಅವುಗಳು ನಿಮ್ಮನ್ನು ಕಾಲ ಕ್ರಮೇಣ ಬದಲಾಯಿಸುತ್ತ ಬರುತ್ತವೆ. ಒಂದು ವೇಳೆ ನೀವು ಈ ಬದಲಾವಣೆಗಳಿಗೆ ಗುರಿಯಾಗದಿದ್ದಲ್ಲಿ, ಅದು ನಿಮ್ಮಿಬ್ಬರ ನಡುವೆ ಗಂಭೀರ ಸಮಸ್ಯೆಯನ್ನು ತಂದು, ಸಂಬಂಧವನ್ನು ವಿಕೋಪಕ್ಕೆ ತೆಗೆದುಕೊಂಡು ಹೋಗಬಹುದು. ಆದ್ದರಿಂದ ಬದಲಾವಣೆಗಳಿಗೆ ಸಿದ್ಧರಾಗಿರಿ, ಏಕೆಂದರೆ ಬದಲಾವಣೆಗಳಿಗೆ ತೆರೆದುಕೊಳ್ಳದ ಯಾವುದೇ ಸಂಬಂಧಗಳು ಪ್ರಪಂಚದಲ್ಲಿ ಉಳಿಯುವುದಿಲ್ಲ.

X
Desktop Bottom Promotion