Latest Updates
-
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ!
ಪ್ರೀತಿಯೆಂಬ ಮಾಯಾಲೋಕದ ರಹಸ್ಯವನ್ನು ಭೇದಿಸಲು ಸಾಧ್ಯವೇ?
ಪ್ರೀತಿ ಎಂಬ ಮಾತು ಕೇಳಿದರೆ ಸಾಕು ಸುಮಾರು ಜನರ ಎದೆಯಲ್ಲಿ ಏನೋ ಒಂಥರಾ,,, ಆಗುತ್ತದೆ. ಅದು ಬರೀ ಎದೆಯಲ್ಲಿಯೇ ಅಲ್ಲದೆ ದೇಹದ ಇತರೆಡೆಗಳಲ್ಲಿಯೂ ಅನುಭವಕ್ಕೆ ಬರಬಹುದು. ಅವರ ಇಡೀ ದೇಹವೆ ಚಿಟ್ಟೆಯಷ್ಟು ಹಗುರಾಗಿ ಗಾಳಿಯಲ್ಲಿ ತೇಲಾಡುವ ಅನುಭವವನ್ನು ಅವರು ಪಡೆಯುತ್ತಿರುತ್ತಾರೆ. ಈ ಅನುಭವವನ್ನು ಪ್ರತಿಯೊಬ್ಬರು ತಮ್ಮ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಪಡೆದಿರುತ್ತಾರೆ.
ಈ "ಪ್ರೀತಿ" ಅಥವಾ "ಪ್ರೇಮ" ಎಂದು ಕರೆಯಲ್ಪಡುವ, ತಲೆತಲಾಂತರಗಳ ರಹಸ್ಯದ ಕುರಿತು ಒಂದು ನೋಟವನ್ನು ಹರಿಸೋಣ ಹಾಗೂ "ಪ್ರೇಮ" ಎಂದು ಕರೆಯಲ್ಪಡುವ ಈ ಒಂದು ಪುಟ್ಟ, ವಿಸ್ಮಯಕರವಾದ ವಿಚಾರದ ಕುರಿತು ಅರೆಕ್ಷಣ ಮೈಮರೆಯೋಣ. ಒಳ್ಳೆಯ ಸಂಗಾತಿ ಅನ್ನಿಸಿಕೊಳ್ಳಲು ಇರಬೇಕಾದ ಗುಣಗಳು
ಪ್ರೇಮದ ಸಹಜವಾದ ಪ್ರಕ್ರಿಯೆ
ಮನಶಾಸ್ತ್ರಜ್ಞರು ಹಾಗೂ ಮನೋವಿಶ್ಲೇಶಕರು ಈ ಪ್ರೀತಿಯನ್ನು ಮತ್ತೂ ಮುಂದುವರೆದ ರೀತಿಯಲ್ಲಿ ವಿವರಿಸುತ್ತಾರೆ. ಅವರ ಪ್ರಕಾರ, ಈ ಪ್ರೀತಿಯೆನ್ನುವುದು ಆಕಸ್ಮಿಕವಲ್ಲ, ಅತಾರ್ಕಿಕವಲ್ಲ, ಬದಲಾಗಿ ನಮ್ಮ ಸುಪ್ತ ಮನಸ್ಸು ಆ ವಿಶೇಷವಾದ ವ್ಯಕ್ತಿಯೊಂದಿಗೆ ನಮ್ಮನ್ನು ಪ್ರೀತಿಯಲ್ಲಿ ಕೆಡವುತ್ತದೆ. ಮುಖಭಾವ, ಧ್ವನಿ, ಅಥವಾ ಆಂಗಿಕ ಭಾವಗಳು ನಮ್ಮಲ್ಲಿ ಪ್ರೀತಿಯ ಕುರಿತಾದ ಸಕಾರಾತ್ಮಕ ಲಕ್ಷಣಗಳನ್ನು ವ್ಯಕ್ತಪಡಿಸುತ್ತವೆ. ನೀವು ಪ್ರೇಮಜ್ವರದಿಂದ ಬಳಲುತ್ತಿರುವಾಗ, ನೀವು ಪ್ರಬಲವಾದ ಭಾವನೆಗಳು ಹಾಗೂ ಅತಿಯಾದ, ಅವ್ಯಕ್ತವಾದ ಸಂತೋಷವನ್ನು ಅನುಭವಿಸುವುದು ಸ್ಪಷ್ಟ.

ನಿಮಗೆ ಲೋಕವೆಲ್ಲವೂ ಗುಲಾಬಿ ವರ್ಣದ ಗಾಜಿನ ನೋಟದಂತೆ ಮಧುರವಾಗಿ ಕಾಣಿಸುತ್ತದೆ. ನೀವು ಪ್ರೀತಿಗಾಗಿ ಹಂಬಲಿಸುತ್ತಿರುವಾಗ, ನಿಮ್ಮ ಕಣ್ಣುಗಳು ಹಾಗೂ ಕಿವಿಗಳು ನಿಮ್ಮ ನಿರೀಕ್ಷೆಗೆ ಅನುಗುಣವಾದ ವ್ಯಕ್ತಿಯ ಕುರಿತು ಹುಡುಕುತ್ತಿರುತ್ತವೆ ಹಾಗೂ ಕೇಳುತ್ತಿರುತ್ತವೆ. ಪ್ರೀತಿಸುವ ವ್ಯಕ್ತಿಯಲ್ಲಿರಬಹುದಾದ ದೋಷಗಳು ಲೆಕ್ಕಕ್ಕೆ ಬರುವುದಿಲ್ಲ ಹಾಗೂ ಕೇವಲ ನಮ್ಮ ಪ್ರಬಲ ಅಸೆ, ಆಕಾಂಕ್ಷೆಗಳು ಮಾತ್ರವೇ ಪ್ರೇಮಿಯ ಕುರಿತು ವ್ಯಕ್ತವಾಗುತ್ತದೆ. (ಪ್ರೇಮ ಕುರುಡು ಎನ್ನುವುದು ಇದಕ್ಕೇ...) ಪ್ರೇಮವು ನಮ್ಮ ನಡವಳಿಕೆಯನ್ನು ಬದಲಿಸುತ್ತದೆ.
ನಿಮ್ಮ ಮನಸ್ಥಿತಿಯಲ್ಲಿ ತೀವ್ರ ಬದಲಾವಣೆ
ಸಂಶೋಧಕರು ಪ್ರೀತಿಯ ಕುರಿತು ಇನ್ನೂ ಅನೇಕ ವಿಚಾರಗಳನ್ನು ಹೇಳಬಲ್ಲರು. ಪ್ರೀತಿಯ ಸುರಕ್ಷತೆ ಹಾಗೂ ದೈಹಿಕ ಸುಖದ ಕುರಿತ ಗಾಢವಾದ ಇಚ್ಛೆಯೊಂದಿಗೆ, ಈ ಪ್ರೀತಿಯೆoಬುದು ನಿಮ್ಮ ಶರೀರದಲ್ಲಿ ಹಾರ್ಮೋನುಗಳ ಪ್ರಮಾಣದಲ್ಲಿ ನಿಜಕ್ಕೂ ಅಗಾಧ ಬದಲಾವಣೆಯನ್ನು ಉಂಟು ಮಾಡಬಲ್ಲುದು.
ಪುರುಷರು ಮತ್ತು ಸ್ತ್ರೀಯರ ನಡುವಿನ ವ್ಯತ್ಯಾಸ
ಪ್ರೇಮದಿಂದ ಉಂಟಾಗುವ ಭಾವನೆಗಳು ಹಾಗೂ ಬಿಡುಗಡೆಯಾಗುವ ಚೋದಕಗಳು ಪುರುಷರು ಮತ್ತು ಸ್ತ್ರೀಯರಲ್ಲಿ ಹೆಚ್ಚು ಕಡಿಮೆ ಒಂದೇ ತೆರನಾಗಿರುತ್ತದೆ. ಆದರೆ, ಅವು ಉಂಟು ಮಾಡುವ ಬದಲಾವಣೆಗಳು ಬೇರೆ ಬೇರೆ ರೀತಿಯಲ್ಲಿ ಗ್ರಾಹ್ಯವಾಗಿರುತ್ತವೆ. ಒಳ್ಳೆಯ ಸಂಗಾತಿ ಅನ್ನಿಸಿಕೊಳ್ಳಲು ಇರಬೇಕಾದ ಗುಣಗಳು
ನಮ್ಮ ಮಾನಸಿಕ ಸುಸ್ಥಿತಿಗೆ ಪ್ರೀತಿ ಅತ್ಯವಶ್ಯಕ
ನಮ್ಮ ಮಾನಸಿಕ ಹಾಗೂ ಬೌಧ್ಧಿಕ ಸುಸ್ಥಿತಿಗೆ ಪ್ರೀತಿಯ ಅವಶ್ಯಕತೆ ಇದೆ. ಪ್ರೀತಿಯ ವ್ಯಕ್ತಿಯನ್ನು ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಥವಾ ಮತ್ತೊಮ್ಮೆ ಭೇಟಿಯಾಗಬಹುದು ಅಥವಾ ಪ್ರೀತಿಯ ಸನ್ನಿವೇಶವು ಜೀವನದಲ್ಲಿ ಅನೇಕ ಬಾರಿ ಎದುರಾಗಬಹುದು ಎಂಬುದು ನಿಮ್ಮ ನoಬಿಕೆಯಾಗಿದ್ದರೂ ಕೂಡ, ಕ್ಲಿಷ್ಟಕರವಾದ ಸಂಗತಿಯೆಂದರೆ, ಪ್ರೀತಿಯ ಜ್ವಾಲೆಯನ್ನು ಪ್ರತಿದಿನವೂ ಜೀವಂತವಾಗಿರಿಸುವುದು. ಪ್ರೇಮಿಯ ಬಗ್ಗೆ ಕಾಳಜಿ ವಹಿಸುವುದು, ಪ್ರೇಮಿಗಳಿಬ್ಬರ ನಡುವೆ ಬಯಕೆಗಳ ಪ್ರವಾಹದ ನಿರಂತರತೆ, ಅಭಿರುಚಿಗಳನ್ನು ಪರಸ್ಪರ ಹಂಚಿಕೊಳ್ಳುವುದು, ಇವೇ ಮೊದಲಾದವುಗಳು ಪ್ರೇಮದ ಚಿರಂತನದ, ನಿತ್ಯನೂತನದ ರಹಸ್ಯಗಳಾಗಿವೆ.



Click it and Unblock the Notifications











