For Quick Alerts
ALLOW NOTIFICATIONS  
For Daily Alerts

ಮಹಿಳೆಯರನ್ನು ಕಣ್ಣಿನಲ್ಲೇ ಸೆಳೆಯುವುದು ಹೇಗೆ?

By Hemanth P
|

ಇದು ಅಷ್ಟೊಂದು ಸುಲಭದ ಕೆಲಸವಲ್ಲ. ನಿಮ್ಮ ವಯಸ್ಸಿನ ಮಹಿಳೆ ಅಥವಾ ನಿಮಗಿಂತ ಸ್ವಲ್ಪ ಕಡಿಮೆ ವಯಸ್ಸಿನ ಮಹಿಳೆಯರನ್ನು ಆಕರ್ಷಿಸುವುದು ಸಂಪೂರ್ಣವಾಗಿ ಭಿನ್ನ ಕೆಲಸ. ಆದಾಗ್ಯೂ ನಿಮಗಿಂತ ಹೆಚ್ಚು ವಯಸ್ಸಿನ ಮಹಿಳೆಯನ್ನು ಆಕರ್ಷಿಸಲು ಹೆಚ್ಚಿನ ಪ್ರೌಢತೆ ಮತ್ತು ಅನುಭವ ಬೇಕಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಕ್ಕೆ ಫ್ಲರ್ಟಿಂಗ್ ಯಾಕೆ ಒಳ್ಳೆಯದು?

ಹೆಚ್ಚಿನ ಸಂದರ್ಭದಲ್ಲಿ ನೀವು ಆಕರ್ಷಿಸಲು ಬಯಸುವ ಮಹಿಳೆಯು ತುಂಬಾ ಅನುಭವ ಹೊಂದಿರುವಾಕೆ ಮತ್ತು ಆಕೆ ತನ್ನ ಪುರುಷನಿಂದ ದೈಹಿಕ ಆಕರ್ಷಣೆಗಿಂತ ಹೆಚ್ಚಿನದನ್ನು ನಿರೀಕ್ಷಿಸುತ್ತಾಳೆ.ನಿಮ್ಮ ವಯಸ್ಸಿನ ಮಹಿಳೆಯರಿಗೆ ಹೋಲಿಸಿದರೆ ನಿಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ತುಂಬಾ ಭಿನ್ನ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಸಂಗಾತಿಯನ್ನು ಆನ್‌ಲೈನ್‌ನಲ್ಲಿಯೇ ಹುಡುಕಿ!

ನೀವಾಗಿಯೇ ಅವರ ಹಿಂದೆ ಬೀಳಬಾರದು ಎನ್ನುವುದು ನೆನಪಿರಲಿ. ಎಲ್ಲಾ ಮಹಿಳೆಯರು ತಮಗಿಂತ ಕಡಿಮೆ ವಯಸ್ಸಿನ ಪುರುಷನನ್ನು ಬಯಸುವುದಿಲ್ಲ. ನಿಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಆಕೆ ತನಗಿಂತ ಕಡಿಮೆ ವಯಸ್ಸಿನ ಪುರುಷನತ್ತ ಆಕರ್ಷಿತಳಾಗಲು ಬಯಸಿದ್ದಾಳೆಯಾ ಎಂದು ತಿಳಿದುಕೊಳ್ಳಬಹುದು.

ಕೆಲವೊಂದು ಸಣ್ಣ ಸಲಹೆಗಳು ನಿಮಗೆ ಯಾವತ್ತೂ ನೆರವಾಗಲ್ಲ. ನಿಮಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿರುವ ಮಹಿಳೆ ಸ್ಟೈಲ್ ಗಿಂತ ಹೆಚ್ಚಾಗಿ ಕೆಲವೊಂದು ವಿಷಯಗಳನ್ನು ಬಯಸುತ್ತಾಳೆ. 40 ದಾಟಿದ ಮಹಿಳೆಯರು ದೈಹಿಕತೆಗೆ ಹೆಚ್ಚು ಅವಸರ ಮಾಡಲ್ಲ. ಇದರಿಂದಾಗಿ ಅವರನ್ನು ಆಕರ್ಷಿಸಲು ನೀವು ತುಂಬಾ ಕಠಿಣ ಶ್ರಮವಹಿಸಬೇಕಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಗಳಲ್ಲಿ ವಂಚನೆಯಾದರೆ ನಿಭಾಯಿಸುವುದು ಹೇಗೆ?

ನಿಮಗಿಂತ ದೊಡ್ಡ ವಯಸ್ಸಿನ ಮಹಿಳೆಯನ್ನು ಆಕರ್ಷಿಸಲು ನಿಮ್ಮಲ್ಲಿ ಹೆಚ್ಚಿನ ತಾಳ್ಮೆ ಮತ್ತು ಆತ್ಮವಿಶ್ವಾಸ ಬೇಕಾಗುತ್ತದೆ. ನೀವು ನೀವಾಗಿಯೇ ಇರಬೇಕಾಗುತ್ತದೆ. ಆಕೆ ತನ್ನ ಜೀವಮಾನವಿಡಿ ಅನುಭವಿಸಿದ್ದಕ್ಕಿಂತ ಭಿನ್ನವಾಗಿ ನೀವಿದ್ದರೆ ಆಗ ಮಾತ್ರ ಮಹಿಳೆ ನಿಮ್ಮತ್ತ ಆಕರ್ಷಿತಳಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹದಿಹರೆಯದ ಮಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?

1. ಆತ್ಮವಿಶ್ವಾಸ

1. ಆತ್ಮವಿಶ್ವಾಸ

ನೀವು ಯುವಕರಾಗಿ ನಿಮಗೊಂದು ಗುರುತು ಕಲ್ಪಿಸಿಕೊಳ್ಳಲು ತುಂಬಾ ಪ್ರಯತ್ನಿಸಿ ಅಸುರಕ್ಷಿತರಾಗಿರುತ್ತೀರಿ. ನಿಮಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿರುವ ಮಹಿಳೆಗೆ ಪ್ರಸ್ತಾಪಿಸುವಾಗ ನೀವು ತುಂಬಾ ಆತ್ಮವಿಶ್ವಾಸ ಮತ್ತು ಭರವಸೆಯಿಂದ ಇರಬೇಕು. ನೀವು ಮಹಿಳೆಯೊಂದಿಗೆ ನೇರವಾಗಿ ಮಾತನಾಡಬೇಕು ಮತ್ತು ಸರಾಗವಾಗಿ ಮಾತನಾಡಬೇಕು.

2. ಪ್ರೌಢತೆ

2. ಪ್ರೌಢತೆ

ನಿಮಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿರುವ ಮಹಿಳೆಯನ್ನು ಸೆಳೆಯಲು ಪ್ರಯತ್ನಿಸುವಾಗ ನೀವು ಪ್ರೌಢತೆ ಪ್ರದರ್ಶಿಸಬೇಕು. ನಿಮ್ಮ ನಡವಳಿಕೆ ಮತ್ತು ಮಾತಿನಲ್ಲಿ ಪ್ರೌಢತೆ ಇರಬೇಕು. ನಿಮ್ಮ ಮಾತು ಮತ್ತು ಆಕೆಯನ್ನು ಯಾವ ರೀತಿ ತಲುಪುತ್ತೀರಿ ಎನ್ನುವುದು ತುಂಬಾ ಮುಖ್ಯ.

3. ಸಮರ್ಥನೀಯ

3. ಸಮರ್ಥನೀಯ

ನೀವು ತುಂಬಾ ಆತ್ಮವಿಶ್ವಾಸ ಮತ್ತು ಸಮರ್ಥನೀಯವಾಗಿದ್ದರೆ ನಿಮಗಿಂತ ಹೆಚ್ಚು ವಯಸ್ಸಿನ ಮಹಿಳೆಯನ್ನು ಆಕರ್ಷಿಸಬಹುದು. ತನ್ನ ವೃತ್ತಿಯಲ್ಲಿ ಸೆಟ್ಲ್ ಆಗಿರುವ ಅಥವಾ ನಿಮಗಿಂತ ಸೀನಿಯರ್ ಆಗಿರುವ ಮಹಿಳೆ ನಿಮ್ಮಂತಹ ಅಪ್ರೌಢ ಸಂಗಾತಿಯನ್ನು ಬಯಸುವುದಿಲ್ಲ.

4. ವಿಷಯಗಳು ಸಾಗುತ್ತಿರಲಿ

4. ವಿಷಯಗಳು ಸಾಗುತ್ತಿರಲಿ

ನೀವು ಆರಂಭಿಸಿದ ಬಳಿಕ ಆಕೆ ಮಾತನಾಡಲು ಬಯಸಿದರೆ ಆಕೆಯ ಆಸಕ್ತಿ ಮಂಕಾದಂತೆ ನೀವು ಪ್ರಯತ್ನಿಸಬೇಕು. ನಿಮ್ಮ ಮಾತಿನ ಮೂಲಕ ಆಕೆಯ ಆಸಕ್ತಿ ಉಳಿಸಿಕೊಳ್ಳಿ. ನಿಮ್ಮ ಹಿಂದಿನ ಅನುಭವ ಹಂಚಿಕೊಳ್ಳಿ ಮತ್ತು ಆಕೆಗೆ ಕೆಲವೊಂದು ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಿ. ಇದು ವೈಯಕ್ತಿಕವಾಗಿರುವುದು ಬೇಡ.

5. ಹಾಸ್ಯ

5. ಹಾಸ್ಯ

ಪ್ರಬುದ್ಧತೆಯ ಹಾಸ್ಯ ಮತ್ತು ಒರಟು ಹಾಸ್ಯದ ಮಧ್ಯೆ ನೀವು ಒಂದು ಗೆರೆ ಎಳೆಯಬೇಕು. ತುಂಬಾ ಜಾಣ್ಮೆ ಮತ್ತು ನೈಜ ಹಾಸ್ಯ ನಿಮ್ಮ ಮಾತಿನಲ್ಲಿರಲಿ. ಮಹಿಳೆಯರಿಗೆ ಹಾಸ್ಯ ತುಂಬಾ ಇಷ್ಟವಾಗುತ್ತದೆ. ಯಾವುದೇ ಭಾವನೆಗಳು ಅಥವಾ ಇತರ ನಗುತರಿಸದ ಹಾಸ್ಯದಿಂದ ನಿಮ್ಮ ಭೇಟಿಯ ರೋಮಾಂಚನ ಕಿತ್ತುಹೋಗುವಂತೆ ಮಾಡಬೇಡಿ.

6. ವಯಸ್ಸಿನ ಮಾತು ಬೇಡ

6. ವಯಸ್ಸಿನ ಮಾತು ಬೇಡ

ನೀವು ಆಕೆಗೆ ತುಂಬಾ ಸಣ್ಣವ, ಇದು ರಹಸ್ಯವೇನಲ್ಲ ಅಥವಾ ಆಕೆಗೆ ಇದನ್ನು ನೆನಪಿಸಬೇಕೆಂದಿಲ್ಲ. ವಯಸ್ಸಿಗೆ ಸಂಬಂಧಿಸಿದ ಯಾವುದೇ ವಿಷಯ ಅಥವಾ ಕಾಲೇಜಿನ ಬಗ್ಗೆ ಮಾತನಾಡಬೇಡಿ. ಇದರಿಂದ ಆಕೆಗೆ ತನಗೆ ವಯಸ್ಸಾಗಿದೆ ಎನ್ನುವ ಭಾವನೆಯಾಗುತ್ತದೆ.

7. ದೈಹಿಕ ಸಂಬಂಧ

7. ದೈಹಿಕ ಸಂಬಂಧ

ನಿಮ್ಮ ಸಂಬಂಧವು ದೈಹಿಕ ಆಪ್ತತೆ ತನಕ ತಲುಪಿದರೆ ನೀವು ಸಂಶೋಧನೆ ಮಾಡಬೇಕು. ನಿಮ್ಮ ಪ್ರೀತಿಸುವ ವಿಧಾನ ತುಂಬಾ ಪ್ರೌಢ ಮತ್ತು ಹೆಚ್ಚು ಆಕರ್ಷಕವಾಗಿರಬೇಕು.

8. ಜಂಟಲ್ ಮ್ಯಾನ್ ಆಗಿರಿ

8. ಜಂಟಲ್ ಮ್ಯಾನ್ ಆಗಿರಿ

ನೀವು ಆಕೆಗಿಂತ ಸಣ್ಣ ವಯಸ್ಸಿನವರಾಗಿದ್ದರೂ ಅಪ್ರೌಢತೆಯಿಂದ ನೀವು ಆಕೆಯೊಂದಿಗೆ ವರ್ತಿಸಬಾರದು. ನೀವು ಜಂಟಲ್ ಮ್ಯಾನ್ ರೀತಿ ಗೌರವ, ಕಾಳಜಿ ಮತ್ತು ಪ್ರೀತಿಯಿಂದ ಆಕೆಯನ್ನು ನೋಡಿಕೊಳ್ಳಿ. ಮಾತು ಹಾಗೂ ಡ್ರೆಸ್ಸಿಂಗ್ ನಲ್ಲಿ ಜಂಟಲ್ ಮ್ಯಾನ್ ಟಚ್ ಇರಲಿ.

English summary

How to attract older women?

It is not the easiest of things to do. Attracting women of your age or someone who is slightly lower to your age is a totally different task that most men tend to have it in them
X
Desktop Bottom Promotion