Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ಮದುವೆ ಮುರಿದು ಬೀಳಲು ಕಾರಣವಾಗಬಲ್ಲ ಐದು ಅಭ್ಯಾಸಗಳು
ಮದುವೆ ಅನ್ನೋದು ಒಂದು ಸಂಕೀರ್ಣ ಸಂಬಂಧ. ಸಂಗಾತಿಗಳು ಪರಸ್ಪರ ಹೊಂದಿಕೊಂಡು ಹೋದರೆ ಆಗ ಮದುವೆಗೆ ನಿಜವಾದ ಅರ್ಥ ಬರುತ್ತದೆ. ಆದರೆ ಕೆಲವೊಂದು ಕಾರಣಗಳಿಂದ ಮದುವೆ ಮುರಿದುಬಿದ್ದು ವಿಚ್ಛೇದನಕ್ಕೆ ಕಾರಣವಾಗಬಹುದು. ಮದುವೆ ಮುರಿದು ಬೀಳಲು ಕೆಲವೊಂದು ಅಚ್ಚರಿಯ ಅಭ್ಯಾಸಗಳು ಕಾರಣವಾಗಬಹುದು. ಮದುವೆಯ ಬಂಧನದಲ್ಲಿರುವ ಸಂಗಾತಿಯನ್ನು ಬೇರ್ಪಡಿಸಬಹುದಾದ 5 ಸಾಮಾನ್ಯ ಕಾರಣಗಳನ್ನು ಇಲ್ಲಿ ನೀಡಲಾಗಿದೆ.
ಯಾವ ಹಂತದಲ್ಲಿ ನೀವು ಒಂದು ಸಂಬಂಧ ಬಿಡಬೇಕು ?
ಕೆಟ್ಟ ಸಂವಹನ:
ನೀವು ಮಾತನಾಡದೆ ಇರುವುದನ್ನು ನಿಮ್ಮ ಸಂಗಾತಿ ಅರ್ಥಮಾಡಿಕೊಳ್ಳಬೇಕೆಂದು ನೀವು ನಿರೀಕ್ಷಿಸುತ್ತೀರಾ? ಅವರಿಗೆ ಇದು ಸಾಧ್ಯವಿಲ್ಲ. ಯಾವಾಗಲೂ ಸರಿಯಾಗಿ ಸಂವಹನ ಮಾಡದೆ ಇರುವುದು ವಿಚ್ಛೇದನಕ್ಕೆ ಕಾರಣವಾಗುವ ಸಾಮಾನ್ಯ ಅಭ್ಯಾಸವಾಗಿದೆ. ಇದನ್ನು ಕಡೆಗಣಿಸಿ. ನಿಮ್ಮ ಸಂಗಾತಿ ಜತೆಗೆ ನಿಯಮತವಾಗಿ ಮಾತನಾಡಿ. ಹಣದಂತಹ ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡಿ. ಯಾವುದೇ ಸಮಸ್ಯೆಯನ್ನು ಮಾತಿನ ಮೂಲಕ ಬಗೆಹರಿಸಿ. ದಿನನಿತ್ಯದ ವಿಷಯಗಳ ಬಗ್ಗೆ ಪರಸ್ಪರರೊಂದಿಗೆ ಮಾತನಾಡಿ. ನೀವು ತುಂಬಾ ವ್ಯಸ್ತರಾಗಿದ್ದರೂ ಸಮಯ ತೆಗೆದುಕೊಂಡು ಮೆಸೇಜ್ ಮಾಡಿ. ಭಯ, ಕನಸು ಮತ್ತು ಸಂತೋಷ ಹಂಚಿಕೊಳ್ಳಿ. ಸಂಗಾತಿಯನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿ.

ಗಂಡಸರನ್ನು ಅಷ್ಟು ಸುಲಭವಾಗಿ ನಂಬದಿರಲು 7 ಕಾರಣಗಳು
ನಿರಾಶವಾದ:
ನೀವು ಸಾಮಾನ್ಯವಾಗಿ ಋಣಾತ್ಮಕ ಅಥವಾ ವಿಷಯಗಳ ಬಗ್ಗೆ ನಂಬಿಕೆಯಿಲ್ಲವೇ? ಪ್ರತಿಯೊಂದು ಮತ್ತು ಪ್ರತಿಯೊಬ್ಬರನ್ನು ಕಾಡುವ ಪ್ರವೃತ್ತಿಯಿದೆಯಾ? ಇದು ಹೌದೆಂದರೆ ನಿಮ್ಮ ಮನೆಯ ವಾತಾವರಣ ತುಂಬಾ ಮಂಕಾಗಿದೆ ಮತ್ತು ನಿಮ್ಮ ಸಂಗಾತಿ ಹತಾಶೆಯಿಂದ ಇರಬಹುದು. ನಿರರ್ಥಕತೆಯಿಂದ ದೂರವಿರಿ. ನಿಮಗೆ ಯಾವುದಾದರೂ ವಿಷಯದ ಬಗ್ಗೆ ತುಂಬಾ ಚಿಂತೆಯಾಗುತ್ತಿದ್ದರೆ ಆಗ ನಿಮ್ಮ ಸಂಗಾತಿ, ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ. ಸಮಸ್ಯೆಗಳು ನಿಮ್ಮ ಸಂಬಂಧಕ್ಕೆ ಹೊರೆಯಾಗದಿರಲಿ. ನಿಮ್ಮ ಜೀವನದಲ್ಲಿ ಹಾಸ್ಯವಿರಲಿ. ಮನೆಯಲ್ಲಿ ತುಂಬಾ ಸ್ನೇಹಪರ, ಸಂಭ್ರಮದ ವಾತಾವರಣ ಸೃಷ್ಟಿಸಿ. ಪ್ರತಿಯೊಂದನ್ನು ದೊಡ್ಡ ವಿಷಯವನ್ನಾಗಿ ಮಾಡಬೇಡಿ. ವಿಷಯಗಳು ಸಾಗುತ್ತಲಿರಲಿ. ಪ್ರತೀದಿನ ನಿಮ್ಮ ಬಗ್ಗೆ ಏನಾದರೂ ತಮಾಷೆ ಮಾಡಿದರೆ ಆಗ ಮನಃಪೂರ್ವಕವಾಗಿ ನಕ್ಕುಬಿಡಿ. ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇರುತ್ತದೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಎದುರಿಸಿ ಸಂತಸದ ಜೀವನ ನಡೆಸುವುದೇ ಜಾಣ್ಮೆ.
ಸ್ವಾರ್ಥಪರತೆ:
ನಿಮ್ಮ ಸಂಗಾತಿಗೆ ಸಾಕಷ್ಟು ಜಾಗ ನೀಡುವುದು ಅಗತ್ಯವಿದೆ. ಸ್ವಾರ್ಥಪರತೆಯಿಂದ ಇರುವುದು ಒಳ್ಳೆಯದಲ್ಲ. ನಿಮ್ಮಿಂದ ಸಂಗಾತಿಯನ್ನು ದೂರವಿಡಬೇಡಿ. ಮದುವೆಯೆನ್ನುವುದು ನಾವು ಎನ್ನುವ ಅರ್ಥದಿಂದ ಕೂಡಿದೆ. ನಿಮ್ಮ ಜೀವನದಲ್ಲಿ ಸಂಗಾತಿಯನ್ನು ಸೇರಿಸಿಕೊಳ್ಳಬೇಕು. ಆಕೆ/ಆತನ ಜೀವನದ ಭಾಗವಾಗಲು ನೀವು ಪ್ರಯತ್ನಿಸಿ. ಅವರ ಕೆಲಸದ ಜೀವನ, ಆರೋಗ್ಯ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯಲು ಪ್ರಯತ್ನಿಸಿ. ಆಸಕ್ತಿ ತೋರಿ. ಅವರ ಸುತ್ತಮುತ್ತಲಿನವರ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳುತ್ತಿದ್ದೀರಿ ಎಂದು ಅನಿಸಲಿ. ನಿಸ್ವಾರ್ಥ, ಉದಾರ ಮತ್ತು ಪ್ರೌಢವಾಗಿರುವುದು ಪ್ರಮುಖ ಅಂಶ.
ಶ್ಲಾಘನೆಯಿಂದ ದೂರ ಉಳಿಯುವುದು:
ಯಾವುದೇ ವಿಷಯ ಅಥವಾ ವ್ಯಕ್ತಿಯನ್ನು ಲಘುವಾಗಿ ಪರಿಗಣಿಸುವುದು ಮನುಷ್ಯನ ಸಹಜ ಗುಣ. ಪ್ರತಿಯೊಬ್ಬ ಮನುಷ್ಯ ಕೂಡ ಮೆಚ್ಚುಗೆಗೆ ಹಪಹಪಿಸುತ್ತಿರುತ್ತಾನೆ ಎಂದು ನಿಮಗೆ ತಿಳಿದಿರಲಿ. ನಿಮ್ಮ ಸಂಗಾತಿಗಾಗಿ ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದಕ್ಕೆ ಮೆಚ್ಚುಗೆ ಬರದಿದ್ದರೆ ನಿಮಗೆ ಹೇಗಾಗಬಹುದು? ನಿಮಗೆ, ಮನೆಗೆ ಮತ್ತು ಮಕ್ಕಳಿಗೆ ಏನು ಮಾಡುತ್ತಾರೆಯಾ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಸ್ನೇಹಿತರು ಮತ್ತು ಮನೆಯವರ ಮುಂದೆ ಅವರನ್ನು ಶ್ಲಾಘಿಸಿ. ಪ್ರತೀದಿನ ಊಟ ಚೆನ್ನಾಗಿದೆ ಎಂದು ಅವರನ್ನು ಶ್ಲಾಘಿಸಿ. ಅವರ ಶಕ್ತಿ, ಮಮತೆ, ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಶ್ಲಾಘಿಸಿ. ಪ್ರೀತಿ ಪಡೆಯುವುದು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವಂತಹ ವ್ಯಕ್ತಿಯನ್ನು ಜತೆಗಿರುವುದು ನೀವು ಪಡೆಯುವ ಅತ್ಯಂತ ಸುಂದರ ಉಡುಗೊರೆ. ಇದು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುತ್ತದೆ ಎಂದು ಭಾವಿಸಬೇಡಿ.
ಗಂಡು ಹೆಣ್ಣಿನ ನಡುವಿನ ಪ್ರೀತಿ ಎಂತಹದು ಗೊತ್ತಾ?
ವಿಚಿತ್ರ ಅಭ್ಯಾಸ:
ನಿಮ್ಮ ಕಿವಿ ಅಥವಾ ಮೂಗಿಗೆ ಕೈಹಾಕುವುದು ಸಮಯ ಕಳೆಯಲು ನಿಮಗೆ ಫೇವರಿಟ್ ಅಭ್ಯಾಸವೇ? ನೀವು ವಾರವಿಡೀ ಒಂದೇ ಜತೆ ಸಾಕ್ಸ್ ಧರಿಸುತ್ತಿದ್ದೀರಾ? ಅಥವಾ ನಿಮ್ಮ ಕೈಗಳು ಅತ್ಯಂತ ವಿಚಿತ್ರ ಸ್ಥಳಕ್ಕೆ ತುರಿಸಲು ಹೋಗುತ್ತಿದೆಯಾ? ಇದು ನಿಮ್ಮ ಮದುವೆಯ ಸಂಬಂಧಕ್ಕೆ ಹಿನ್ನಡೆಯಾಗಬಹುದು. ಇದು ತುಂಬಾ ಮುಜುಗರದ ಅಭ್ಯಾಸ ಮಾತ್ರವಲ್ಲ, ಸಾಮಾಜಿಕವಾಗಿಯೂ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇಂತಹ ವಿಷಯಗಳು ನಿಮ್ಮ ಸಂಗಾತಿಗೆ ತುಂಬಾ ಕಿರಿಕಿರಿ ಉಂಟುಮಾಡಬಹುದು. ಇಂತಹ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ. ನಿಮ್ಮ ವೈಯಕ್ತಿಕ ವಸ್ತುಗಳನ್ನು ತುಂಬಾ ಸ್ವಚ್ಛ, ಸಂಯೋಜಿತ ಮತ್ತು ನಿರ್ಮಲವಾಗಿಡಿ. ನಿಮ್ಮನ್ನು ಹತ್ತಿರ ಹಾಗೂ ಇಷ್ಟಪಡುವಂತಹ ತುಂಬಾ ಹಿತಕಾರಿ ವ್ಯಕ್ತಿತ್ವವನ್ನು ನಿರ್ಮಿಸಿ.



Click it and Unblock the Notifications











