Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಸಂಬಂಧಗಳು ನಮ್ಮನ್ನು ಸಂತೋಷಗೊಳಿಸುತ್ತವೆಯೇ?
ಪ್ರತಿಯೊಂದು ಸಂಬಂಧವೂ ಸಂಬಂಧಕ್ಕಿಂತ ಹೊರಗಿರುವ ಬಾಂಧವ್ಯವನ್ನು ಬಯಸುತ್ತದೆ. ಸಂಬಂಧದಲ್ಲೂ ಉತ್ತಮತೆಯನ್ನು ಪಡೆಯಲು ನಾವು ಬಯಸುತ್ತೇವೆ ಅದು ಹೇಗೆ ನೋಡೋಣ.ನಾವು ಸಂಪೂರ್ಣ ಮಾನವರಾಗಿದ್ದು, ನಮ್ಮ ನಡುವಿನ ಅಂತರವನ್ನು ನೀಗಿಸುವ ಸಂಬಂಧವನ್ನು ನಾವು ಬಯಸುವುದು ಸಹಜ.
ಸ್ವಾಭಾವಿಕವಾಗಿ ಸಂಬಂಧದಲ್ಲೂ ಸಂಪೂರ್ಣತೆಯನ್ನು ನಾವು ಬಯಸುವುದರಿಂದ ಸಂಬಂಧಗಳ ಮೂಲಕ ಸಂಪೂರ್ಣತೆಯನ್ನು ಪಡೆಯಲು ನಾವು ಪರಿಶ್ರಮಿಸುತ್ತೇವೆ. ನಮ್ಮ ಸುತ್ತಲಿನ ಪರಿಸರವನ್ನು ಅದಕ್ಕೆ ಬೇಕಾದಂತೆ ರೂಢಿಸಿಕೊಳ್ಳುತ್ತೇವೆ. ನಮಗೆ ಬೇಕಾದ್ದು ಪಡೆಯಲು ನಾವು ಹೋರಾಡುತ್ತೇವೆ ಕೊನೆಗೆ ಅದು ನಮಗೆ ದೊರಕುತ್ತದೆ.ಸಂಬಂಧಗಳಲ್ಲೂ ಇದೇ ರೀತಿಯ ಮಹತ್ವವಿದೆ. ಸ್ನೇಹ,ವಿಶ್ವಾಸ ಗಾಢವಾದಷ್ಟು ಸಂಬಂಧ ಆಳವಾಗುತ್ತದೆ. ಪತಿ-ಪತ್ನಿ, ತಂದೆ-ಮಗ, ತಾಯಿ-ಮಗಳು, ಅಕ್ಕ-ತಂಗಿ ಹೀಗೆ ನೂರೆಂಟು ಸಂಬಂಧಗಳ ಕೊಂಡಿ ವಿಶ್ವಾಸ, ಸ್ನೇಹವಾಗಿದೆ. ಈ ಸಂಬಂಧಗಳು ನಮ್ಮನ್ನು ಪೂರ್ಣಗೊಳಿಸುತ್ತವೆಯೇ ನಮ್ನನ್ನು ಸಂತೋಷಗೊಳಿಸುತ್ತದೆಯೇ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಪ್ರೇಮ ದಿನವನ್ನು ಈ ರೀತಿಯಾಗಿ ಆಚರಿಸಿ!
ಸಂಬಂಧಗಳನ್ನು ಈ ರೀತಿಯಾಗಿ ವರ್ಗೀಕರಿಸೋಣ
ಅಗತ್ಯ ಆಧಾರಿತ ಸಂಬಂಧಗಳು
ಬಯಕೆಗೆ ತಕ್ಕಂತೆ ನಮ್ಮ ಸಂಬಂಧಗಳನ್ನು 6 ವಿಧದಲ್ಲಿ ವರ್ಗೀಕರಿಸೋಣ
.ವೈಯಕ್ತಿಕ - ನಮಗೆ ಏನು ಬೇಕೋ ಅದು
.ವ್ಯಕ್ತಿಗಳ ನಡುವಣ - ಪರಸ್ಪರ ಅವಲಂಬಿತ
.ಯಶಸ್ಸು - ವೃತ್ತಿಪರ ಅಥವಾ ವ್ಯಾಪಾರ ಆಧಾರಿತ
.ಕಾನೂನು ಸಮ್ಮತ - ದೇಶಕ್ಕೆ ನಿಜಾವಾಗಿ ಅಗತ್ಯವಾಗಿರುವುದು
.ಸಾಮಾಜಿಕ - ಮಹತ್ವ ಮತ್ತು ನಿಲುವು
.ಆಧ್ಯಾತ್ಮಿಕ - ಸರಹದ್ದುಗಳು ಮತ್ತು ಭೂಲಿಯ ರಕ್ಷಣೆ
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರೇಮಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ ಹೇರ್‍ಲೈನ್!
ವೈಯಕ್ತಿಕ ಅಗತ್ಯಗಳು
ಒಂದು ಕಡೆ ಕೂತು ಜೀವನದಲ್ಲಿ ನೀವು ಪಡೆದದ್ದನ್ನು ಕುರಿತು ಒಂದು ಪಟ್ಟಿ ಮಾಡಿ ನಿಮಗೆ ಪ್ರೀತಿ, ಗೌರವ, ನಂಬಿಕೆ, ಬೆಂಬಲ, ಅರ್ಥಮಾಡಿಕೊಳ್ಳುವಿಕೆ, ಶಕ್ತಿ, ಹೆಸರು, ಎಲ್ಲವೂ ದೊರಕಿದೆಯೇ? ಅಥವಾ ಇನ್ನು ಏನಾದರೂ ಅವಶ್ಯಕತೆ ಇದೆಯೇ?
ಇದನ್ನೆಲ್ಲಾ ಪಡೆದುಕೊಳ್ಳಲು ಸಂಬಂಧ ನಮಗೆ ಪೂರಕವಾಗಿತ್ತೇ? ನಮ್ಮನ್ನು ನಾವು ಪರಿಪೂರ್ಣರಾಗಿಸಲು ಸಂಬಂಧವನ್ನು ಬಳಸಿಕೊಂಡಿದ್ದೇವೆಯೇ ಯೋಚಿಸಿ? ಬರಿಯ ಹೆಸರು ಪ್ರತಿಷ್ಠೆಗಾಗಿ ಸಂಬಂಧವನ್ನು ಬಳಸಿಕೊಳ್ಳುವವರು ಅದರ ಉಳಿಸುವಿಕೆಗೆ ಪ್ರಯತ್ನಿಸುವುದಿಲ್ಲ. ಸಮಾಜದಲ್ಲಿ ತೋರಿಕೆಗಾಗಿ ಮಾತ್ರವೇ ಸಂಬಂಧ ನಿಭಾವಣೆ ಇವರಿಂದ ಸಾಧ್ಯ. ಅದರಾಚೆಗೆ ಬರೀ ಶೂನ್ಯ. ಸಾಮಾಜಿಕ ಭದ್ರತೆಗಾಗಿ ತಮ್ಮ ಜೀವನವನ್ನು ಸಂಬಂಧದೊಳಗೆ ಹುದುಗಿಸುವ ಎಷ್ಟೋ ಜನರನ್ನು ನಾವು ನೋಡುತ್ತೇವೆ. ಇಂತಹವರು ಮೇಲ್ಕಾಣಿಸಿದ ಅವಶ್ಯಕತೆಗಳನ್ನು ಪೂರೈಸಲು ಮಾತ್ರವೇ ಸಂಬಂಧಕ್ಕೆ ತಲೆಬಾಗುತ್ತಾರೆ.
ಸಂಬಂಧದ ಈ ರೀತಿಯ ಬಳಕೆಯೇ ಅದರ ಅಧಃಪತನಕ್ಕೂ ಕಾರಣವಾಗುತ್ತದೆ. ವಿರಸ, ಮುನಿಸು, ಒಡಕು, ಭಿನ್ನಾಭಿಪ್ರಾಯ ಬರಿಯ ಇಂತಹವುಗಳೇ ಸಂಬಂಧದಲ್ಲಿ ತುಂಬಿರುತ್ತವೆ. ಬಾಂಧವ್ಯದ ಸವಿ ಈ ಸಂಬಂಧಕ್ಕಿರುವುದಿಲ್ಲ.
ಈ ರೀತಿಯ ಸಂಬಂಧ ಬಹುಕಾಲ ಬಾಳುವುದಿಲ್ಲ. ಆದರೂ ಕಾಲಾಯ ತಸ್ಮೈ ನಮಃ ಎಂಬಂತೆ ಈ ರೀತಿಯ ಸಂಬಂಧವನ್ನು ಸರಿಪಡಿಸುವ ವಿಧಾನ ನಮ್ಮಲ್ಲೇ ಇದೆ. ಬರಿಯ ಪ್ರತಿಷ್ಟೆ, ಕೀರ್ತಿ ಅದರಿಂದಾಚೆಗೂ ಒಂದು ಸುಂದರವಾದ ಬಾಂಧವ್ಯ ನಮ್ಮನ್ನು ಕೈ ಬೀಸಿ ಕರೆಯುತ್ತಿದೆ ಎಂಬ ಭಾವನೆ ನಮ್ಮಲ್ಲಿದ್ದರೆ ಸಾಕು ಸಂಬಂಧಕ್ಕೆ ನಾವರಿಯದ ಹೊಸ ರೂಪ, ಭಿನ್ನತೆ ಉಂಟಾಗುತ್ತದೆ. ಜಗತ್ತು ಸಂತೋಷವಾಗಿದೆ ನಾವು ಸಂತಸದಿಂದಿರುವೆವು ಎಂಬ ಪುಳಕ ನಮ್ಮಲ್ಲಿ ರಚಿತವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರೇಮಿಗಳಿಗಾಗಿ 7 ವಿಶೇಷ ದಿನಗಳ ವಿಶೇಷತೆ
ನಿಮ್ಮ ಜೀವನದಲ್ಲಿ ನೀವು ಮಾಡುವಂತಹ ಕೆಲವೊಂದು ಮಾರ್ಪಾಡುಗಳು ಸಂಬಂಧದಲ್ಲಿ ಮಧುರತೆಯನ್ನು ತಂದು ನಿಮ್ಮನ್ನು ಪೂರ್ಣಗೊಳಿಸುತ್ತವೆ ನಿಮ್ಮಷ್ಟಕ್ಕೆ ನಿಮ್ಮ ಜೀವನದ ಆಗು ಹೋಗುಗಳನ್ನು ಕುರಿತು ಒಂದು ಪಟ್ಟಿ ತಯಾರಿಸಿ ಅದು ಹೀಗಿರಲಿ
1.ನಿಮ್ಮ ಅವಶ್ಯಕತೆಗಳನ್ನು ವ್ಯಾಖ್ಯಾನಿಸಿ - ಪ್ರೀತಿ, ಪವರ್, ಅರ್ಥಮಾಡಿಕೊಳ್ಳುವಿಕೆ ಇತರೆ...
2.ನಿಮ್ಮ ಎಲ್ಲಾ ಪ್ರಸ್ತುತ ಸಂಬಂಧಗಳನ್ನು ಕುರಿತು ಪಟ್ಟಿ ಮಾಡಿ
3.ಅವುಗಳಿಂದ ನೀವು ಪಡೆಯುವ ಪ್ರತಿಯೊಂದನ್ನು ಮನದಟ್ಟು ಮಾಡಿಕೊಳ್ಳಿ ಸುಖ ಸಂತೋಷ ನೆಮ್ಮದಿ
4.ಅವುಗಳಿಂದ ಇನ್ನಷ್ಟನ್ನು ಹೇಗೆ ಪಡೆಯಬಹುದು ಎಂಬುದನ್ನು ವ್ಯಾಖ್ಯಾನಿಸಿ
5.ಆ ಸಂಬಂಧವನ್ನು ಭದ್ರಪಡಿಸಲು ನೀವು ಏನು ಮಾಡಬೇಕು?
6.ನೀವು ಪಡೆಯುವುದು ಮತ್ತು ನೀವು ನೀಡುವುದರ ಮಧ್ಯೆ ಏನಾದರೂ ಸಮಾನತೆ ಇದೆಯೇ?
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮದುವೆ ಪ್ರಸ್ತಾಪ ಮಾಡಲು ಇರುವ 10 ಅತ್ಯುತ್ತಮ ಸ್ಥಳಗಳು
ಈ ಎಲ್ಲಾ ಅಂಶಗಳನ್ನು ನಿಮ್ಮ ಸಂಬಂಧದಲ್ಲಿ ನೋಡಿ. ನೀವು ಸಂಬಂಧದಾಚೆಗೂ ಹೆಚ್ಚಿನದನ್ನು ಏನು ಮಾಡಬಹುದು ಎಂಬುದು ನಿಮಗೆ ತಿಳಿಯುತ್ತದೆ. ಬರೀ ಪ್ರತಿಷ್ಟೆಗೆ, ಸಮಾಜದ ಬೆಲೆಗೆ ಸಂಬಂಧವನ್ನು ಕಟ್ಟದೆ ಅದರಿಂದ ಉಂಟಾಗುವ ಮಾನಸಿಕ ನೆಮ್ಮದಿಯನ್ನು ಅರಸಿ. ಹೀಗೆ ಮಾಡಿದಲ್ಲಿ ಸಂಬಂಧಗಳು ನಮ್ಮನ್ನು ಸಂಪೂರ್ಣಗೊಳಿಸುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರ ತನ್ನಿಂತಾನೇ ದೊರಕುತ್ತದೆ.



Click it and Unblock the Notifications