Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಸಂಬಂಧಗಳಲ್ಲಿ ವಂಚನೆಯಾದರೆ ನಿಭಾಯಿಸುವುದು ಹೇಗೆ?
ದಾಂಪತ್ಯ ಎನ್ನುವುದು ಸುಂದರ ಕಾವ್ಯ. ಇಲ್ಲಿ ಗಂಡ ಹೆಂಡತಿ ಪದಗಳಿದ್ದಂತೆ. ಸರಿಯಾಗಿ ಒಂದೊಂದು ಪದವನ್ನು ಜೋಡಿಸಿದಾಗ ಸುಂದರ ಕಾವ್ಯವಾಗಲು ಸಾಧ್ಯ. ಆದರೆ ಗಂಡ ಹೆಂಡತಿಯರ ನಡುವೆಯೇ ನಂಬಿಕೆ ದ್ರೋಹವಾದರೆ ದಾಂಪತ್ಯಕ್ಕೆ ಅರ್ಥವೆಲ್ಲಿ? ದಾಂಪತ್ಯದಲ್ಲಿ ದ್ರೋಹವಾದರೆ ಅದನ್ನು ನಿಭಾಯಿಸುವುದು ಅತ್ಯಂತ ಕಷ್ಟ.
ನಿಮ್ಮ ಧರ್ಮಪತ್ನಿ/ಪತಿ, ನೀವು ನಿಮ್ಮ ಸಂಬಂಧಕ್ಕೆ ನೀಡುವ ಮೌಲ್ಯಗಳನ್ನು ಸುಳ್ಳಾಗಿಸಿ ನಿಮ್ಮನ್ನು ವಂಚಿಸಿದರೆ ನಿಮಗೆ ಆಶ್ಚರ್ಯವಾಗುವುದು ಸಹಜ! ನಿಮಗೆ ನಿಮ್ಮ ಸಂಗಾತಿಯನ್ನು ಇನ್ನು ಮುಂದೆ ಯಾವುದೇ ವಿಷಯದಲ್ಲಿ ನೀವು ನಂಬಬೇಕೆ ಬೇಡವೇ ಎಂಬ ಗೊಂದಲಕ್ಕೆ ಒಳಗಾಗುತ್ತೀರಿ.

ಇದರಿಂದ ನಿಮಗೆ ಅಭದ್ರತೆಯ ವಾಸ್ತವ ಅರಿವಾದರೆ ನೋವುಂಟಾಗುತ್ತದೆ. ನಿಮ್ಮ ಸಂಗಾತಿ ನಿಮಗೆ ಈಗ ಯಾಕೆ ವಂಚನೆ ಮಾಡಿದರು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಈ ಪ್ರಶ್ನೆ ನಿಮ್ಮನ್ನು ಸದಾ ಕಾಡುತ್ತದೆಯಾದರೂ ನಿಮಗೆ ಉತ್ತರ ಸಿಗುವುದು ಮಾತ್ರ ಕಷ್ಟ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರು ಮಹಿಳೆಯರಲ್ಲಿ ಹೇಳಲು ಹಿಂಜರಿಯುವ 10 ವಿಷಯಗಳು
ಸಂಬಂಧಗಳು ಎಷ್ಟು ಪಾರದರ್ಶಕವಾಗಿರುತ್ತದೆಯೋ ಎಷ್ಟು ನಮ್ಮ ಸಂಬಂಧಗಳು ಗಟ್ಟಿಯಾಗಿರುತ್ತವೆ. ಕೆಲವೊಮ್ಮೆ , ನೀವು ಒಂದು ಸಂಬಂಧವನ್ನು ಎಷ್ಟೋ ದಿನಗಳಿಂದ ಉಳಿಸಿಕೊಂಡು ಬಂದಿದ್ದರೂ ನಿಮ್ಮ ಯಾವುದೇ ಒಂದು ಪ್ರತಿಕ್ರಿಯೆ ನಿಮ್ಮ ಸಂಬಂಧವನ್ನೇ ಹಾಳುಗೆಡವಬಹುದು!
ನೀವು ನಿಜವಾಗಿಯೂ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಇನ್ನೊಂದು ಅವಕಾಶ ನೀಡಲು ಬಯಸಿದರೆ ದಾಂಪತ್ಯದ ದ್ರೋಹವನ್ನು ನಿರ್ವಹಿಸಲು ಮಾರ್ಗಗಳಿವೆ. ಇಲ್ಲಿ ಸರಿಯಾಗಿ ದಾಂಪತ್ಯ ದ್ರೋಹವನ್ನು ನಿರ್ವಹಿಸಲು ಕೆಲವು ವಿಧಾನಗಳಿವೆ.
ಸಲಹೆಗಾರರು ಬೇಕು
ದಾಂಪತ್ಯದಲ್ಲಿ ವಂಚನೆಯಾದರೆ ನೀವು ಈ ವಿಷಯದೊಂದಿಗೆ ವ್ಯವಹರಿಸುವಾಗ ಕೆಲವೊಮ್ಮೆ ಮೂರನೇ ವ್ಯಕ್ತಿಯ ಸಹಾಯದ ಅಗತ್ಯವಿದೆ. ಆದ್ದರಿಂದ ಸಲಹೆಗಾರ (ಕೌನ್ಸಿಲರ್) ರೊಂದಗೆ ಮಾತನಾಡುವುದು ಒಳ್ಳೆಯದು. ನಿಮ್ಮ ಸಲಹೆಗಾರರೊಂದಿಗೆ ನಿಮ್ಮ ಭಾವನೆಗಳನ್ನು ಚರ್ಚಿಸಿದರೆ ನೀವು ನಿಮ್ಮನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.
ಆಕ್ಷೇಪ ಮಾಡುವುದು
ಹಲವಾರು ಸಂಬಂಧಗಳು ಹಾಳಾಗುವುದೇ ಒಬ್ಬರನ್ನೊಬ್ಬರು ಎಲ್ಲಾ ವಿಷಯಗಳಲ್ಲೂ ಆಕ್ಷೇಪ ಮಾಡುವುದರಿಂದ! ಯಾವಾಗ ನೀವು ಒಬ್ಬರನ್ನೊಬ್ಬರು ದೂಷಿಸುವುದನ್ನು ಬಿಡತ್ತೀರೋ ಅಂದೇ ನೀವು ಸಂಬಂಧಗಳನ್ನು ಅರಿತುಕೊಳ್ಳಲು ಸಾಧ್ಯ. ಯಾವುದೇ ವಿಷಯದ ಬಗ್ಗೆ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವುದರಿಂದ ಯಾವ ಸಮಸ್ಯೆಗಳಿಗೂ ಪರಿಹಾರ ದೊರೆಯಲು ಸಾಧ್ಯವಿಲ್ಲ.
ಸಮಸ್ಯೆ ಏನು?
ಇದು ನಿಮ್ಮ ಸಂಬಂಧಲ್ಲಿ ಇರುವ ಸಮಸ್ಯೆಗಳನ್ನು ಎದುರಿಸುವ ಸಮಯ. ನೀವು ನಿಮ್ಮ ಸಂಗಾತಿ ಜೊತೆ ಯಾವುದೇ ವಿಷಯಗಳನ್ನು ಹಂಚಿಕೆಕೊಳ್ಳುವುದರಲ್ಲಿ ತಪ್ಪೇನಿದೆ? ನಿಮ್ಮಲ್ಲಿ ಸಂವಹನದ ಸಮಸ್ಯೆಯಿದ್ದರೆ, ನೀವಿಬ್ಬರೂ ಕುಳಿತು ನಿಮ್ಮ ನಡುವೆ ಇರುವ ಸಮಸ್ಯೆಗಳನ್ನು ಗುರುತಿಸಿ ಮುಕ್ತವಾಗಿ ಚರ್ಚಿಸಿ ನಿಮ್ಮ ಅಳಿಸಿಹೋಗುವ ಸಂಬಂಧವನ್ನು ಉಳಿಸಿಕೊಳ್ಳಬಹುದು.
ಮಾತನಾಡಿ
ನಿಮ್ಮಿಬ್ಬರ ನಡುವೆಯೂ ತಪ್ಪುಗಳಿರಬಹುದು. ಆದರೆ, ನೀವು ಪರಸ್ಪರ ಮಾತನಾಡುವುದಿಲ್ಲ. ಆದರೆ ನೆನಪಿಡಿ, ಪರಸ್ವರ ಮಾತನಾಡಿದಾಗ ಮಾತ್ರ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ. ನಿಮ್ಮ ಸಂಬಂಧದಲ್ಲಿ ಮಾತುಕತೆಯ ಪ್ರಯೋಜನವನ್ನು ಪಡೆದುಕೊಳ್ಳಿ. ಒಡೆದ ಹಾಲಿನ ಬಗ್ಗೆ ಯೋಚಿಸುವುದಕ್ಕಿಂತ ನಿಮ್ಮ ಸಂಬಂಧದಲ್ಲಿ ಅನುರಾಗವನ್ನು ಬೆರೆಸಿ ಅದರ ಮೌಲ್ಯವನ್ನು ಕಾಯ್ದುಕೊಳ್ಳುವುದು ಎಷ್ಟು ಸುಂದರ ನೀವೇ ಊಹಿಸಿಕೊಳ್ಳಿ! ಆದ್ದರಿಂದ ಕೇವಲ ಮಾತನಾಡುವುದರಿಂದ ಮಾತ್ರ ನಿಮ್ಮ ಸಂಗಾತಿಯ ಉದ್ದೇಶವನ್ನು ಅರಿಯಲು ಸಾಧ್ಯ.
ಸಕಾರಾತ್ಮಕ ಚಿಂತನೆ
ನಿಮ್ಮ ಸಂಬಂಧ , ಯಾವಾಗಲೂ ಕೆಟ್ಟದಾಗಿಯೇ ಇರಲು ಸಾಧ್ಯವಿಲ್ಲ ಅಲ್ಲವೇ? ನೀವು ನಮ್ಮ ಸಂತೋಷವನ್ನೂ ಕೂಡ ಪರಸ್ಪರ ಹಂಚಿಕೊಂಡಿರುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಮದುವೆ ಅಥವಾ ನಿಶ್ಚಿತಾರ್ಥವಾಗಿದ್ದು ನಿಮ್ಮ ಅದೃಷ್ಟ ಎಂದು ನೀವು ಎಂದಿಗೂ ಪರಿಗಣಿಸಿಲ್ಲವೇ? ನಿಮ್ಮ ಸಂಗಾತಿಯ ಜೊತೆ ಉತ್ತಮ ಭಾವನೆಯೂ ಇರಬಹುದಲ್ಲವೇ? ಹಾಗಾದರೆ, ಯಾವಾಗಲೂ ವಿಷಯವು ಕೆಟ್ಟದಾಗಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಸಂಬಂಧಗಳಲ್ಲಿ ಉತ್ತಮವಾದ ಅಂಶಗಳನ್ನು ಹುಡುಕಿ. ಕೆಲವೊಮ್ಮೆ ನಿಮ್ಮ ನಡುವೆ ಇರುವ ಪ್ರೀತಿಯೇ ನಿಮ್ಮೆಲ್ಲ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಪ್ರಯತ್ನಿಸಿ ನೋಡಿ!
ನಿಮ್ಮ ಆತಂಕಗಳು ಎದುರಿಸಿ
ನಿಮ್ಮ ಸ್ವಂತ ಆತಂಕಗಳು ಎದುರಿಸಬೇಕಾದ ಸಮಯ ಇದು ! ನಿಮ್ಮ ಸಂಬಂಧಗಳಲ್ಲಿ ಭಯವನ್ನು, ಆತಂಕವನ್ನು ಹೊಂದಿದ್ದರೆ ನಿಮ್ಮ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ ಇದೇ ಆತಂಕ ಮುಂದುವರೆದರೆ ನಿಮ್ಮ ಸಂಬಂಧ ಹಾಳಾಗುವುದು ಖಂಡಿತ. ನಿಮ್ಮ ಭಾವನೆಗಳೇ ನಿಮ್ಮ ಸಂಬಂಧವನ್ನು ಉತ್ತಮ ಪಡಿಸಲು ಸಾಧ್ಯ.
ದಾಂಪತ್ಯದಲ್ಲಿ ವಂಚನೆಗಳಾದರೆ ಅದು ಸರಿಹೋಗಲು ಸ್ಪಲ್ವ ಸಮಯ ಬೇಕಾಗುತ್ತದೆ. ಆದರೆ ಯಾವುದೇ ವಿಷಯದ ಬಗ್ಗೆ ತಾಳ್ಮೆಗೆಟ್ಟು, ಸಿಟ್ಟಾಗುವುದು ಅಥವಾ ವಸ್ತುಗಳನ್ನು ಬಿಸಾಡುವುದು ಇಂತಹ ತಪ್ಪುಗಳನ್ನು ಮಾಡಬೇಡಿ. ಪ್ರತಿಯೊಂದು ಹಂತದಲ್ಲಿಯೂ ಸಂಬಂಧಗಳು ಸರಿಯಾಗುವಾಗ ಹಚ್ಚು ಸಮಯ ಬೇಕಾಗುತ್ತದೆ. ಆದರೆ ನಿಮ್ಮ ಆತ್ಮವಿಶ್ವಾಸ, ನಿಮ್ಮ ಪ್ರಯತ್ನ, ಹಾಗೂ ನೀವು ಸಂಬಂಧವನ್ನು ಸರಿಮಾಡಿಕೊಳ್ಳಲು ಮೀಸಲಿಟ್ಟ ಸಮಯ ನಿಮ್ಮ ಪ್ರೀತಿಯನ್ನು ನಿಮಗೆ ಹಿಂತಿರುಗಿಸಬಹುದು!



Click it and Unblock the Notifications











