ನಿಮ್ಮ ಗಂಡನಿಗಾಗಿ ಕೆಲವು ಮುದ್ದು ಹೆಸರುಗಳು

By Deepak M

ಪ್ರಪಂಚದಲ್ಲಿ ಗಂಡ- ಹೆಂಡತಿಯರ ಸಂಬಂಧ ತುಂಬಾ ಅದ್ಭುತವಾದಂತಹುದು. ಈ ಸಂಬಂಧ ತನ್ನೊಳಗೆ ಪ್ರೀತಿ, ನಂಬಿಕೆ ಮತ್ತು ಅಪ್ಯಾಯಮಾನತೆಯಿಂದ ಕೂಡಿರುತ್ತದೆ. ಈ ಪ್ರೀತಿ ಮತ್ತು ಅನುಬಂಧವನ್ನು ಹಲವಾರು ವಿಧಗಳಲ್ಲಿ ಅಭಿವ್ಯಕ್ತಿಪಡಿಸಬಹುದು. ದೈಹಿಕ ಅನುಭೂತಿಗಳು, ಪ್ರೀತಿಯ ವಿಹಾರಗಳು ಮತ್ತು ಮಧುರವಾದ ಸಲ್ಲಾಪಗಳ ಮೂಲಕ ಇಬ್ಬರು ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಾಮಾನ್ಯವಾಗಿ ಪುರುಷರು ತಮ್ಮ ಹೆಂಡತಿಯರನ್ನು ಪ್ರಿಯವಾದ ಮುದ್ದು ಹೆಸರುಗಳಿಂದ ಕರೆಯುತ್ತಿರುತ್ತಾರೆ. ಅದರ ಮೂಲಕ ಅವರನ್ನು ವಿಶೇಷವಾದ ಆದರದಿಂದ ಅವರು ಗುರುತಿಸುತ್ತಿರುತ್ತಾರೆ. ಇದು ಸಹಜವಾಗಿ ಹೆಂಗಸರನ್ನು ಖುಷಿಪಡಿಸುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಗಂಡಸರು ತಮ್ಮ ಹೆಂಡತಿಯರು ಮುದ್ದು ಹೆಸರಿನಿಂದ ಕರೆದರೆ ಇಷ್ಟಪಡುವುದಿಲ್ಲ. ಮೊದ ಮೊದಲು ಅವರು ತಮ್ಮ ಹೆಂಡತಿ ಕರೆಯುವ ಮುದ್ದು ಹೆಸರನ್ನು ಒಪ್ಪಿಕೊಂಡರು, ಅದು ಶಾಶ್ವತವಲ್ಲ.

Cute nicknames for your lovely husband

ಕೆಲವರಿಗೆ ಅದು ಇಷ್ಟವಾಗಬಹುದು ಮತ್ತು ಕೆಲವರಿಗೆ ಇಷ್ಟವಾಗದಿರಬಹುದು. ಈ ಚಿಕ್ಕದಾದ ಮುದ್ದು ಹೆಸರುಗಳು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ ಅನುಬಂಧವನ್ನು ಹೆಚ್ಚಿಸುತ್ತವೆ.ಒಮ್ಮೊಮ್ಮೆ ಈ ಹೆಸರುಗಳು ಹೆಂಡತಿಯು ಗಂಡನಿಂದ ತನಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಲು ನೆರವಾಗುತ್ತವೆ.

ಪ್ರತಿಯೊಬ್ಬ ಗಂಡಸಿಗು ಆತನ ಹೆಂಡತಿ ತುಂಟತನದಿಂದ ಕೂಡಿದ ಒಂದು ಅಡ್ಡ ಹೆಸರನ್ನು ಇಟ್ಟಿರುತ್ತಾಳೆ. ಅದರಲ್ಲಿ ವಿವಿಧ ವರ್ಗದ ಅಡ್ಡ ಹೆಸರುಗಳು ಇವೆ. ಅವುಗಳಲ್ಲಿ ಕೆಲವೊಂದು ವರ್ಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ಓದಿ ತಿಳಿಯಿರಿ ;-

ಮಧುರವಾದ ಸಲ್ಲಾಪಕ್ಕಾಗಿ ಒಂದು ಮುದ್ದು ಹೆಸರು
ಈ ಅಡ್ಡ ಹೆಸರು ತನ್ನ ಹೆಸರಿನಲ್ಲಿಯೇ ಜೇನಿನಂತಹ ಸವಿಯನ್ನು ಹೊಂದಿರುತ್ತದೆ. ಇದು ಗಂಡನನ್ನು ಸಮ್ಮೋಹನಗೊಳಿಸುವಂತಹ ಒಂದು ಹೆಸರಾಗಿದ್ದು, ಕೇವಲ ಆತನ ವಿಶೇಷ ಪ್ರೀತಿ ಪಾತ್ರ ವ್ಯಕ್ತಿ ಮಾತ್ರ ಕರೆಯುವ ಏಕೈಕ ಹೆಸರಾಗಿರುತ್ತದೆ. ಉದಾಹಾರಣೆಗೆ "ರ್ರೀ,,,,,,,,," , " ಏನೂಂದ್ರೇ,,,,", " ಚಿನ್ನೂ,,,,", " ಅಪ್ಪೀ,,,," ಹೀಗೆ ರಾಗವಾಗಿ ನುಲಿಯುವ ಹೆಂಡತಿ ಗಂಡನ ಹೃದಯದಲ್ಲಿ ಮಧುರ ಅಲೆಗಳನ್ನೆಬ್ಬಿಸಿ, ಆತನ ಅರಗಿಣಿಯಾಗುತ್ತಾಳೆ. ಆತ ಆಕೆಯ ಬಾಯಿಂದ ಈ ಹೆಸರನ್ನು ಕರೆಸಿಕೊಳ್ಳಲು ಇಷ್ಟಪಡುತ್ತಾನೆ. ಒಮ್ಮೆ ನಿಮ್ಮ ವೈವಾಹಿಕ ಜೀವನವನ್ನು ತಿರುಗಿ ನೋಡಿ ನಿಮ್ಮ ಹೆಂಡತಿ ನಿಮ್ಮನ್ನು ಹೀಗೆ ಎಂದಾದರು ಕರೆದಿರಬಹುದು.

ತಡ ರಾತ್ರಿಯ ತುಂಟ ಹೆಸರುಗಳು
ಈ ಅಡ್ಡ ಹೆಸರುಗಳನ್ನು ನಿಮ್ಮ ಗಂಡ ನಿಮ್ಮಿಂದ ರಾತ್ರಿಗಳಲ್ಲಿ ದೂರವಿದ್ದಾಗ ನೀವು ಬಳಸುತ್ತೀರಿ. ಅದರಲ್ಲೂ ಆಗ ತಾನೇ ಮದುವೆಯಾದವರು ಮತ್ತು ವೈವಾಹಿಕ ಜೀವನದ ಸವಿಯನ್ನು ಸರಿಯಾಗಿ ಸವಿಯದವರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇಂತಹ ಸಮಯದಲ್ಲಿ ರಾತ್ರಿಯ ಹೊತ್ತು ನೀವು ನಿಮ್ಮ ಗಂಡನನ್ನು ಇಂತಹ ತುಂಟ ಹೆಸರುಗಳಿಂದ ಕರೆಯುತ್ತೀರಿ. ಉದಾಹರಣೆ ;- "ಛೀ ತುಂಟ,,,". " ತರ್ಲೆ,,,,", " ಅಯ್ಯೋ ಪಾಪಿ,,,,", " ಹೌದು ಪಾಪ ಮಗೂ" ಹೀಗೆ ನಾನ ತರಹದ್ದು,,,,,, ಇರಲಿ ಬಿಡಿ, ಅಷ್ಟು ಮಾತ್ರ ಇರಲಿಲ್ಲ ಅದೆಂತಹ ಸಂಬಂಧರೀ. ಇಂತಹದು ಎಲ್ಲರ ಜೀವನದಲ್ಲು ಇರಬೇಕು ಆಗಲೇ ಅದಕ್ಕೆ ಒಂದು ಮಜಾ.

ಸಾಮಾನ್ಯವಾದ ಭಾರತೀಯ ಹೆಸರುಗಳು
ಭಾರತೀಯರಿಗೆ ಸಾಮಾನ್ಯವಾಗಿ ಭಾರತೀಯ ಅಡ್ಡ ಹೆಸರುಗಳೆ ಸರಿ, ಈ ಅಡ್ಡ ಹೆಸರುಗಳೆ ಸರಿ. ನಾನಿಲ್ಲಿ ಹೇಳುತ್ತಿರುವುದು ಭಾರತದಾದ್ಯಂತ ಚಾಲ್ತಿಯಲ್ಲಿರುವ ಅಡ್ಡ ಹೆಸರುಗಳನ್ನು, ಇವುಗಳಲ್ಲಿ ಸಹ ಪ್ರೀತಿ ಅಪ್ಯಾಯಮಾನತೆಯನ್ನು ನಾವು ಕಾಣಬಹುದು. ಇವುಗಳು ಅಂದಿನಿಂದ ಇಂದಿನವರೆಗು ತಮ್ಮ ವರ್ಚಸ್ಸನ್ನು ಉಳಿಸಿಕೊಂಡು ಬಂದಿವೆ. ಉದಾಹರಣೆಗೆ ;- "ಜಾನೂ" , "ಜಾನೇಮನ್", " ಬಾಬು', " ಷೋನ" ಇತ್ಯಾದಿಗಳು. ಈ ಹೆಸರುಗಳು ಭಾರತದ ಎಲ್ಲಾ ಭಾಷೆಗಳಲ್ಲಿ ಚಾಲ್ತಿಯಲ್ಲಿವೆ.

ಗಂಡನಿಗಾಗಿಯೇ ಇರುವ ಪ್ರತ್ಯೇಕ ಅಡ್ಡ ಹೆಸರುಗಳು
ನಮ್ಮ ದೇಶದಲ್ಲಿ ಬಹುತೇಕ ಮಂದಿ ಹೆಂಡತಿಯರು ತಮ್ಮ ಗಂಡಂದಿರನ್ನು ಹೆಸರು ಹಿಡಿದು ಕರೆಯುವುದಿಲ್ಲ. ಬದಲಿಗೆ ಅವರಿಗೆ ಸಾಮಾನ್ಯವಾಗಿ ಒಂದು ಹೆಸರನ್ನು ನೀಡುತ್ತಾರೆ. ಅದರ ಪ್ರಕಾರ ಅವರನ್ನು ಕರೆಯುತ್ತಾರೆ. ಅದು ಎಲ್ಲರ ಮುಂದೆ! ಉದಾಹರಣೆಗೆ ; " ರೀ", " ಏನ್ರೀ", " ಏನೂ", ಇತ್ಯಾದಿಗಳು. ಇವು ಕೇವಲ ಸಂಬೋಧನೆಗೆ ಮತ್ತು ಇತರರ ಮುಂದೆ ಗೌರವ ಪೂರ್ವಕವಾಗಿ ಬಳಕೆಯಾಗುತ್ತದೆ.

ಇನ್ನುಳಿದಂತೆ ಇದೇ ಹೆಸರುಗಳು ರಾಗ ಬದಲಾಯಿಸಿಕೊಂಡು ಬೇರೊಂದು ಸಂದರ್ಭದಲ್ಲಿ ಬಳಕೆಯಾಗುತ್ತವೆ. ಹೊಸದಾಗಿ ಮದುವೆಯಾದ ಗಂಡನಂತು ತನ್ನ ಹೆಂಡತಿ ಎಂದು ಹೀಗೆ ಕರೆಯುತ್ತಾಳೆ ಎಂದು ಉತ್ಸುಕನಾಗಿರುತ್ತಾನೆ. ಒಮ್ಮೆ ಕರೆಯಿರಿ, ಪಾಪ ಎಷ್ಟಾದರು ನಿಮ್ಮ ಗಂಡನಲ್ಲವೆ? ಆತನಿಗು ತಾನು ಗಂಡ ಎಂಬ ಸಹಜವಾದ ಅಹಂ ಇರುತ್ತೆ. ಕರೆದು ಬಿಡಿ, "ರೀ,,, ಕೇಳಿಸ್ತಾ"

ರೊಮ್ಯಾಂಟಿಕ್ ಹೀರೋಗಳ ಹೆಸರುಗಳು
ರೊಮ್ಯಾಂಟಿಕ್ ಹೀರೋಗಳು ಯಾರಿಗೆ ತಾನೇ ಇಷ್ಟವಾಗೊಲ್ಲ, ಹಲವಾರು ಜನ ಹೆಂಗಸರು ತಮ್ಮ ಗಂಡಂದಿರನ್ನು ಈ ನಾಯಕರ ಹೆಸರುಗಳಿಂದ ಕರೆಯಲು ಇಷ್ಟಪಡುತ್ತಾರೆ. ಉದಾಹರಣೆಗೆ " ರೋಮಿಯೋ", " ಪ್ರೀತಂ", " ರಾಹುಲ್" ಇತ್ಯಾದಿ. ಇವುಗಳಲ್ಲಿ ಕೆಲವು ದುರಂತ ಪ್ರೇಮ ಕತೆಯ ನಾಯಕರ ಹೆಸರುಗಳು, ಅವು ಇಂದು ಹೆಂಡತಿಯರ ಪಾಲಿಗೆ ಗಂಡನ ಮುದ್ದು ಹೆಸರುಗಳಾಗಿ ಬದಲಾಗಿವೆ.

ಇಂತಹ ಹೆಸರುಗಳನ್ನು ಕರೆದರೆ ಗಂಡಸಿಗೆ ಇಷ್ಟವಾಗುವುದಿಲ್ಲ, ಆದರೂ ಹೆಂಡತಿಯರಿಗೆ ಅಷ್ಟು ಸಾಕಲ್ಲವೆ? ತಮ್ಮ ಗಂಡನನ್ನು ಹಂಗಿಸಿ, ಮೂದಲಿಸಿ, ಗೋಳು ಉಯ್ದುಕೊಂಡು ಸರಸ ಸಲ್ಲಾಪದಲ್ಲಿ ತೊಡಗಲು. ಗಂಡ ಎನಿಸಿಕೊಂಡಿರುವವರೆಲ್ಲರಿಗು ನಾವು ನೀಡುವ ಸಲಹೆ ಹೀಗೆ ಕರೆದಾಗ ಕೋಪಿಸಿಕೊಳ್ಳಬೇಡಿ. ಹುಸಿ ಮುನಿಸು ತೋರಿ, ನಿಮ್ಮ ಅಹಂ ಪಕ್ಕಕ್ಕಿಟ್ಟು ಸ್ವಲ್ಪ ಹೊತ್ತು ಮುನಿಸಿಕೊಂಡೆ ಆಟವಾಡಿ. ನಿಮ್ಮ ಅರಗಿಣಿ ನಿಮಗಾಗಿ ಒಂದು ಮಧುರ ಅನುಭವವನ್ನು ಸ್ವಲ್ಪ ಹೊತ್ತಿನಲ್ಲಿಯೇ ನೀಡಬಹುದು. ಆಲ್ ದಿ ಬೆಸ್ಟ್.

X
Desktop Bottom Promotion