Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ನಿಮ್ಮ ಪತಿಯ ವಂಚನೆಯನ್ನು ತಿಳಿಯುವ 9 ಮಾರ್ಗಗಳು
ಪತಿ-ಪತ್ನಿಯ ಸಂಬಂಧವೆನ್ನುವುದು ಹಾಲು ಜೇನಿನಂತೆ ಇರಬೇಕೆನ್ನುವುದು ನಿಜ. ಆದರೆ ಇಂದಿನ ದಿನಗಳಲ್ಲಿ ಮದುವೆಯ ಸಂಬಂಧವು ಮೊದಲ ದಿನದಿಂದಲೇ ಸಂಶಯದ ಗೂಡಾಗಿ ಹೋಗುತ್ತದೆ. ಈ ಒಂದು ಕಾರಣದಿಂದಲೇ ಮದುವೆಯಾದ ಕೆಲವೇ ವರ್ಷಗಳಲ್ಲಿ ಸಂಬಂಧ ಮುರಿದುಹೋಗುತ್ತದೆ. ಇದಕ್ಕೆ ಯಾರೇ ಕಾರಣವಾಗಿರಬಹುದು. ಆದರೆ ಪತಿಯ ಕೆಲವೊಂದು ವರ್ತನೆ ಪತ್ನಿಯ ಚಿಂತೆಗೆ ಕಾರಣವಾಗಬಹುದು.
ನಿಮ್ಮ ಪತಿಯ ವಿಶಿಷ್ಟ ವರ್ತನೆ, ಹೊಸ ಬದಲಾವಣೆ, ನಿಮ್ಮಿಂದ ದೂರ ಕಾಯ್ದುಕೊಳ್ಳುವುದು ಮತ್ತು ರಹಸ್ಯ ರೀತಿಯ ಬಗ್ಗೆ ನಿಮಗೆ ಚಿಂತೆಯಾಗಿದ್ದರೆ ನೀವು ತುಂಬಾ ಅಸೂಯೆ ಪಡುವವರಾ ಅಥವಾ ವಾಸ್ತವಿಕವಾಗಿ ಆತ ಒಳ್ಳೆಯವನಲ್ಲವೇ ಎನ್ನುವುದನ್ನು ಈ ಲೇಖನದಿಂದ ತಿಳಿದುಕೊಳ್ಳಬಹುದು.
ಮೊದಲ ನೋಟದಲ್ಲಿ ಮಹಿಳೆಯರಲ್ಲಿ ಪುರುಷರು ಗಮನಿಸುವ 7 ಅಂಶಗಳು

ಗುಟ್ಟಾಗಿ ಫೋನ್ ಮಾಡುವುದು ಅಥವಾ ಸ್ವೀಕರಿಸುವುದು
ಕೆಲವೊಂದು ಫೋನ್ ಕರೆಗಳನ್ನು ಗೌಪ್ಯತೆಯಿಂದ ಸ್ವೀಕರಿಸಬೇಕಾಗುತ್ತದೆ. ಆದರೆ ಪ್ರತೀ ಸಲ ಫೋನ್ ರಿಂಗ್ ಆದಾಗ ಆತ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಓಡುತ್ತಿದ್ದಾನೆಯಾ? ಇದನ್ನು ನೀವು ತುಂಬಾ ಹೊಸತಾಗಿ ಅಥವಾ ಪದೇಪದೇ ನೋಡುತ್ತಿದ್ದರೆ ಆಗ ನೀವು ಆತನ ಮೇಲೆ ಒಂದು ಕಣ್ಣಿಡಬೇಕು. ಯಾಕೆಂದರೆ ಇದು ಪತಿಯು ನಿಮಗೆ ವಂಚಿಸುವ ಲಕ್ಷಣವಾಗಿರಬಹುದು.

ಟೆಕ್ಸ್ಟ್ ಮೆಸೇಜ್ ಡಿಲೀಟ್ ಮಾಡುವುದು
ಹೆಚ್ಚಿನ ಜನರು ತಮ್ಮ ಮೊಬೈಲ್ ನ ಇನ್ ಬಾಕ್ಸ್ ನಲ್ಲಿ ತುಂಬಿರುವ ಟೆಕ್ಸ್ಟ್ ಮೆಸೇಜ್ ಬಗ್ಗೆ ಚಿಂತೆ ಮಾಡುವುದಿಲ್ಲ. ಕೆಲವು ಮಂದಿ ತಮ್ಮ ಇನ್ ಬಾಕ್ಸ್ ತುಂಬಿದ ಕೂಡಲೇ ಡಿಲೀಟ್ ಮಾಡುತ್ತಾರೆ. ಆದರೆ ನಿಮ್ಮ ಪತಿ ಪ್ರತಿ ಟೆಕ್ಸ್ಟ್ ಮೆಸೇಜ್ ಕಳುಹಿಸಿದ ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದಾನೆಯಾ? ಹಾಗಿದ್ದರೆ ಆ ಟೆಕ್ಸ್ಟ್ ನಲ್ಲಿ ಏನೋ ಇದೆ.

ಪಾರ್ಟಿ ಮತ್ತು ಕಾರ್ಯಕ್ರಮದ ಕಡೆಗಣನೆ
ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಮ್ಮ ಸಂಗಾತಿ ತುಂಬಾ ಕಡಿಮೆ ಸಮಯ ಕಳೆಯುತ್ತಿದ್ದಾರೆಯಾ? ಕುಟುಂಬದ ಕಾರ್ಯಕ್ರಮ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆಯಾ? ಪ್ರಾಜೆಕ್ಟ್ ಅಥವಾ ಟಾಸ್ಕ್ ಇದೆಯೆಂದು ಕಚೇರಿಗೆ ಬೇಗನೆ ಹೋಗಿ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದರೆ, ಆಗ ಆತ ಬೇರೆ ಯಾರಿಗೋ ಸಮಯ ನೀಡುತ್ತಿದ್ದಾನೆ ಎಂದರ್ಥ. ಇದು ಫೋನ್ ಅಥವಾ ಕಂಪ್ಯೂಟರ್ ಅಥವಾ ವೈಯಕ್ತಿಕವಾಗಿರಬಹುದು.

ಬೇರೆ ವ್ಯಕ್ತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವುದು
ಹಠಾತ್ ಆಗಿ ತನ್ನ ಯಾರಾದರೂ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಅದರಲ್ಲೂ ತನ್ನ ವಿರುದ್ಧ ಲಿಂಗದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರೆ, ಆಗ ನೀವು ಅವರಿಬ್ಬರ ನಡುವಿನ ಸಂಬಂಧ ಏನೆಂದು ಹುಡುಕಬೇಕು.

ಮನೆಗೆ ತುಂಬಾ ಉಲ್ಲಾಸದಿಂದ ಬರುವುದು
ಪತಿಯ ದೇಹದಿಂದ ಯಾವುದೇ ರೀತಿಯ ಭಿನ್ನ ಬ್ರಾಂಡ್ ನ ಪರ್ಫ್ಯೂಮ್ ನ ಸುವಾಸನೆ ಬರುತ್ತಿದೆಯಾ? ಹೊರಗಡೆ ಸ್ನಾನ ಮಾಡಿ ಅಥವಾ ದಿನವಿಡಿ ಕೆಲಸವಿದ್ದರೂ ಬೆಳಿಗ್ಗೆ ಮನೆಯಿಂದ ತೆರಳಿದಂತೆ ತುಂಬಾ ಉಲ್ಲಾಸಿತನಾಗಿ ಮರಳುತ್ತಿದ್ದಾನೆಯಾ? ಹೀಗಿದ್ದರೆ ಆತ ಬೇರೆ ಯಾರೊಂದಿಗೂ ಸಮಯ ಕಳೆಯುತ್ತಿದ್ದಾನೆ ಎಂದರ್ಥ.

ವಾತ್ಸಲ್ಯ
ಇತ್ತೀಚೆಗಷ್ಟೇ ನಡೆದಿರುವ ಜಗಳ ಅಥವಾ ಬಗೆಹರಿಸಲಾಗದ ಸಮಸ್ಯೆ ಅಥವಾ ಸಂವಹನದ ಕೊರತೆಯಿಂದಾಗಿ ವಾತ್ಸಲ್ಯ ಕಡಿಮೆಯಾಗಬಹುದು. ಆದರೆ ಹಠಾತ್ ಆಗಿ ಆತ ಯಾವುದೇ ಕಾರಣವಿಲ್ಲದೆ ನಿಮ್ಮನ್ನು ದೂರ ಮಾಡುತ್ತಿದ್ದಾನೆಯಾ ಅಥವಾ ತಕ್ಷಣ ಮನ್ನಿಸಲು ಹಿಂದೇಟು ಹಾಕುತ್ತಿದ್ದಾನೆ ಎಂದಾದರೆ ಆತ ಯಾವುದಾದರೂ ಹೊಸ ಸಂಬಂಧದಲ್ಲಿದ್ದಾನೆ ಎಂದರ್ಥ.

ಅತಿಯಾಗಿ ಜಗಳವಾಡುವುದು
ಸಣ್ಣ ಚರ್ಚೆ ಅಥವಾ ತಪ್ಪು ದೊಡ್ಡ ಮಟ್ಟದ ಜಗಳ ಅಥವಾ ಚರ್ಚೆಗೆ ಕಾರಣವಾಗುತ್ತಿದೆಯಾ? ಆತನ ಬಟ್ಟೆಗಳು ಎಲ್ಲಾದರೂ ತಪ್ಪಿಹೋಗುತ್ತಿದೆಯಾ ಎಂದು ನೀವು ಗಮನಿಸಿ.

ಅಧಿಕ ರಹಸ್ಯ
ಆತ ಹಠಾತ್ ಆಗಿ ನಿಮ್ಮಿಂದ, ನಿಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಮಾರಂಭ, ಪಿಕ್ನಿಕ್, ಉಡುಗೊರೆಯಿಂದ ತನ್ನನ್ನು ದೂರವಿರಿಸಿಕೊಂಡು, ಫೋನ್ ಕರೆಗಳ ಬಗ್ಗೆ ಗೌಪ್ಯತೆ ಕಾಪಾಡುತ್ತಿದ್ದರೆ ಆಗ ನಾವು ಸಲಹೆ ಮಾಡುವುದೆಂದರೆ ನೀವು ಆತನ ಹೊಸ ಚಟುವಟಿಕೆ ಮತ್ತು ಸಂಬಂಧದ ಬಗ್ಗೆ ತಿಳಿದುಕೊಳ್ಳಿ.



Click it and Unblock the Notifications