Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು
ಮಿಲನವು ಗಂಡು ಹೆಣ್ಣನ್ನು ದೈಹಿಕವಾಗಿಯಷ್ಟೇ ಅಲ್ಲದೆ ಮಾನಸಿಕವಾಗಿ ಸಹ ಇಬ್ಬರನ್ನು ಬೆಸೆಯುವ ಒಂದು ಸಹಜ ಕ್ರಿಯೆ. ಇದು ಪ್ರತಿಯೊಂದು ಆರೋಗ್ಯಕಾರಿ ಸಂಬಂಧದ ಒಂದು ಅವಿಭಾಜ್ಯ ಅಂಗವೂ ಹೌದು. ಆದರೆ ಸುಮಾರು ಜನ ಹೆಂಗಸರು ತಮ್ಮ ಪತಿಯು ಮಿಲನಕ್ಕೆ ಇಚ್ಛಿಸಿದರೂ ಸಹ, ವಿಭಿನ್ನ ಕಾರಣಗಳ ಮೂಲಕ ಮಿಲನಕ್ಕೆ ತಡೆಯನ್ನು ಒಡ್ಡುತ್ತಾರೆ. ಹೆಂಗಸರು ಮಿಲನಕ್ಕೆ ಏಕೆ ತಡೆಯೊಡ್ಡುತ್ತಾರೆ ಎಂಬುದಕ್ಕೆ ಸಾರ್ವತ್ರಿಕವಾದ ಒಂದೇ ಒಂದು ಕಾರಣವಿಲ್ಲ.
ಪ್ರತಿ ಹೆಂಗಸು ಈ ವಿಚಾರವಾಗಿ ತನ್ನದೇ ಆದ ಒಂದು ಕಾರಣವನ್ನು ಹೊಂದಿರುತ್ತಾಳೆ. ಆದರೆ ನೀವು ಸ್ವಲ್ಪ ಬುದ್ಧಿವಂತಿಕೆಯನ್ನು ಹೊಂದಿದ್ದರೆ, ನಿಮ್ಮ ಸಂಗಾತಿಯ ಈ ನೆಪಕ್ಕೆ ಇರುವ ಕಾರಣವನ್ನು ಸುಲಭವಾಗಿ ಕಂಡು ಹಿಡಿಯಬಹುದು.
ನಿಮ್ಮಾಕೆ ನಿಮ್ಮ ಜೊತೆ ಮಿಲನಕ್ಕೆ ಸಹಕರಿಸುತ್ತಿಲ್ಲ ಏಕೆ ಎಂದು ತಲೆ ಕೆರೆದುಕೊಳ್ಳುವುದನ್ನು ಮೊದಲು ನಿಲ್ಲಿಸಿ. ಆ ಸಮಸ್ಯೆಗೆ ನೀವೇ ಕಾರಣವಲ್ಲ. ಮಹಿಳೆಯರಿಗೆ ಹಲವಾರು ತರಹದ ಸಮಸ್ಯೆಗಳು ಇರುತ್ತವೆ. ಇವುಗಳ ಪರಿಣಾಮವಾಗಿ ಅವರು ನಿಮ್ಮೊಂದಿಗೆ ಮಿಲನಕ್ಕೆ ಒಲ್ಲೇ ಎಂದು ಹೇಳಿರಬಹುದು. ಇವುಗಳಲ್ಲಿ ಕೆಲವು ಸಾಮಾನ್ಯವಾಗಿ ಎಲ್ಲಾ ಹೆಂಗಸರಲ್ಲಿಯೂ ಸಾಮಾನ್ಯವಾಗಿ ಕಂಡು ಬರುತ್ತವೆ. ಇಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ನಾವು ಕೆಲವೊಂದು ಕಾರಣಗಳನ್ನು ಪಟ್ಟಿ ಮಾಡಿದ್ದೇವೆ.
ಹಾಗೆಂದು ಇದೇ ಮಾನ ದಂಡವನ್ನು ಬಳಸಿ ಪ್ರತಿ ಹೆಂಗಸನ್ನು ಅಳೆಯಲು ಹೋಗುವುದು ಮೂರ್ಖತನವಾಗುತ್ತದೆ. ಮಹಿಳೆಯರು ಮಿಲನಕ್ಕೆ ನೋ ಎನ್ನಲು ತಮ್ಮದೇ ಆದ ವಿಶೇಷ ಕಾರಣಗಳನ್ನು ಹೊಂದಿರಬಹುದು. ಒಂದು ವೇಳೆ ನಿಮ್ಮಾಕೆ ಮಿಲನಕ್ಕೆ ಒಪ್ಪದಿದ್ದಾಗ ಅದಕ್ಕೆ ಕಾರಣವನ್ನು ಕೇಳಿ. ಆಗ ಆಕೆಯಿಂದ ಸಮಾಧಾನಕರವಾದ ಉತ್ತರವು ದೊರೆಯದಿದ್ದಾಗ ಈ ಕೆಳಗಿನ ಕಾರಣಗಳನ್ನು ಸನ್ನಿವೇಶದ ಜೊತೆಗೆ ತಾಳೆ ಹಾಕಿ.

ಆಕೆ ಕೋಪಗೊಂಡಾಗ
ಬಹುತೇಕ ಹೆಂಗಸರು ತಾವು ಕೋಪಗೊಂಡಿರುವಾಗ ಮಿಲನಕ್ಕೆ ಸುತರಾಂ ಒಪ್ಪುವುದಿಲ್ಲ. ಏಕೆಂದರೆ ಹೆಂಗಸರ ಪ್ರಕಾರ ಲೈಂಗಿಕ ಕ್ರಿಯೆಯು ಗಂಡಸಿಗೆ ಖುಷಿಪಡಿಸಲು ಮಾಡುವ ಕೆಲಸ ಎಂಬ ಭಾವನೆ ಇರುತ್ತದೆ. ಆದ್ದರಿಂದ ತಾಂತ್ರಿಕವಾಗಿ ಆಕೆ ಕೋಪಗೊಂಡಾಗ ನಿಮಗೆ ಶಿಕ್ಷೆ ನೀಡುವ ಸಲುವಾಗಿ ಮಿಲನದಲ್ಲಿ ಪಾಲ್ಗೊಳ್ಳುವುದಿಲ್ಲ.

ಅಹಂ ಪ್ರಶ್ನೆ
ಗಂಡಸರಿಗೆ ಗಂಡಸುತನದ ಅಹಂ ಇರುವಂತೆ, ಹೆಂಗಸರಿಗೆ ಹೆಂಗಸುತನದ ಅಹಂ ಇರುತ್ತದೆ. ಅವರ "ಅಹಂ"ಗೆ ಪೆಟ್ಟು ಬಿದ್ದಾಗ ಹೆಂಗಸರು ತಮ್ಮ ಸ್ವಾತಂತ್ರ್ಯವನ್ನು ಪಡೆಯುವ ಸಲುವಾಗಿ ನಿಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ.

ಆಕೆಯನ್ನು ನೀವು ಕಾಡಿ ಬೇಡಬೇಕು ಎಂಬ ಆಸೆ
ಕೆಲವೊಮ್ಮೆ ಹೆಂಗಸರಿಗೆ ನೀವು ಅವರನ್ನು ಕಾಡಿ ಬೇಡಿ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಬೇಕು ಎಂಬ ಆಸೆ ಬರುತ್ತದೆ. ಆಕೆಯ ಪ್ರೀತಿ ಮತ್ತು ಸುಖಕ್ಕಾಗಿ ನೀವು ಅವರ ಮುಂದೆ ಗೋಗರೆಯಬೇಕು. ಕೇಳಲು ಇದು ಒಂದು ರೀತಿ ಇರುತ್ತದೆಯಾದರು, ಸ್ವಾಭಾವಿಕವಾಗಿ ಹೆಣ್ಣಿಗೆ ಇಂತಹ ಆಸೆಗಳು ಸಹಜವಾಗಿ ಇರುತ್ತವೆ.

ತಟಸ್ಥವಾದ ಆಕ್ರಮಣಕಾರಿ ಪ್ರವೃತ್ತಿ
ನಿಮ್ಮಾಕೆಯಲ್ಲಿ ತಟಸ್ಥವಾದ ಆಕ್ರಮಣಕಾರಿ ಪ್ರವೃತ್ತಿಯಿದ್ದು, ಆಕೆ ನಿಮ್ಮೊಂದಿಗೆ ರಂಪ ರಾಮಾಯಣ ಮಾಡಲು ಇಷ್ಟಪಡದಿದ್ದಲ್ಲಿ, ಖಂಡಿತವಾಗಿ ನಿಮ್ಮೊಂದಿಗೆ ಮಿಲನದಲ್ಲಿ ಪಾಲ್ಗೊಳ್ಳುವುದಿಲ್ಲ. ಇದೇ ಸಂದರ್ಭವನ್ನು ಆಕೆ ನಿಮ್ಮೊಂದಿಗೆ ಬೇರೆ ಬಗೆಯಲ್ಲಿ ಜಗಳ ಮಾಡಲು ಬಳಸಿಕೊಳ್ಳುತ್ತಾಳೆ. ಈ ಬಗೆಯಲ್ಲಿ ಆಕೆ ನಿಮ್ಮ ಮೇಲೆ ತನ್ನ ಜಯ ದಾಖಲಿಸಲು ಇಷ್ಟಪಡುತ್ತಾಳೆ.

ಆಕೆ ನಿಮ್ಮೊಂದಿಗೆ ಆಟವಾಡುತ್ತಿರುತ್ತಾಳೆ
ಗಂಡಸರು ಹೆಂಗಸರನ್ನು ಪಟಾಯಿಸಲು ನೋಡುವಂತೆ, ಹೆಂಗಸರು ಗಂಡಸರನ್ನು ಸತಾಯಿಸಲು ತೊಡಗುತ್ತಾರೆ. ಆಕೆ ನಿಮ್ಮ ಆಸೆಯನ್ನು ಕೇಳಿದ ತಕ್ಷಣ ಪೂರೈಸಿದರೆ ನೀವು ಆಕೆಯಲ್ಲಿ ಆಕರ್ಷಣೆಯನ್ನು ಕಳೆದುಕೊಳ್ಳುತ್ತೀರಿ ಎಂಬ ಕಾರಣಕ್ಕೆ ಆಕೆ ನಿಮ್ಮನ್ನು ಆಟವಾಡಿಸುತ್ತಾಳೆ.

ಆಕೆ ಕಾಕ್ ಟೀಸರ್ ಆಗಿರಬಹುದು
ಕೆಲವು ಹೆಂಗಸರು ಇರುತ್ತಾರೆ ಅವರು ತಮ್ಮ ಸಂಗಾತಿಯನ್ನು ತೀವ್ರ ತರದಲ್ಲಿ ಉದ್ರೇಕಗೊಳಿಸುತ್ತಾರೆ, ಅವರನ್ನು ಮಿಲನಕ್ಕೆ ಪ್ರಚೋದಿಸುತ್ತಾರೆ. ಆದರೆ ಅಪ್ಪಿ ತಪ್ಪಿ ಸಹ ಮಿಲನದಲ್ಲಿ ಪಾಲ್ಗೊಳ್ಳದೆ ತಮ್ಮ ಸಂಗಾತಿಯನ್ನು ನಿರಾಸೆಯ ಕಡಲಲ್ಲಿ ಮುಳುಗಿಸುತ್ತಾರೆ. ಇಂತಹವರನ್ನು ಕಾಕ್ ಟೀಸರ್ ಎಂದು ಕರೆಯುತ್ತಾರೆ.

ಆಕೆ ನಿಮ್ಮ ಬದ್ಧತೆಯನ್ನು ಕೋರುತ್ತಾಳೆ
ಹೆಂಗಸಿಗೆ ತನ್ನ ಸಂಗಾತಿಯ ಬದ್ಧತೆಯ ಮೇಲೆ ಸಂದೇಹ ಬಂದಾಗ ಆಕೆಯು ಮಿಲನದಲ್ಲಿ ಪಾಲ್ಗೊಳ್ಳುವುದಿಲ್ಲ. ಪ್ರತಿ ಸಂಬಂಧವು ತನ್ನದೇ ಆದ ಬದ್ಧತೆಯನ್ನು ಕೇಳುತ್ತದೆ. ಹೆಂಗಸು ತನ್ನ ಸಂಬಂಧದ ಭವಿಷ್ಯದ ದೃಷ್ಟಿಯಿಂದ ನಿಮ್ಮ ಜೊತೆಗೆ ಮಿಲನದಲ್ಲಿ ಸಹಕರಿಸುವುದೆ ಇರುವುದಕ್ಕೆ ಇದು ಸಹ ಒಂದು ಕಾರಣವಾಗಿರುತ್ತದೆ. ಅದಕ್ಕಾಗಿ ನಿಮ್ಮ ಬದ್ಧತೆಯನ್ನು ಆಕೆಗೆ ಅರ್ಥಮಾಡಿಸಿ.

ಆಕೆ ಸಂಪ್ರದಾಯವಾದಿಯಾಗಿರಬಹುದು
ಕೆಲವು ಮಹಿಳೆಯರು ಸಂಪ್ರದಾಯವಾದಿ ಮೌಲ್ಯಗಳಿಗೆ ಬೆಲೆ ನೀಡುತ್ತಾರೆ. ಕನ್ಯೆತನಕ್ಕೆ ಇವರು ಅಧಿಕ ಮಹತ್ವವನ್ನು ನೀಡುತ್ತಾರೆ. ಇಂತಹ ಸಂಪ್ರದಾಯವಾದಿಗಳು ಮಿಲನಕ್ಕೆ ನೋ ಎನ್ನಲು ಸಾಂಪ್ರದಾಯಿಕ ಕಾರಣಗಳನ್ನು ನೀಡುತ್ತಾರೆ.

ಬಹುಶಃ ಆಕೆಗೆ ನೀವು ಬೋರ್ ಆಗಿರಬಹುದು.
ಆಕೆ ನಿಮ್ಮೊಂದಿಗೆ ಮಿಲನವನ್ನು ತಡೆಹಿಡಿಯುತ್ತಿದ್ದಲ್ಲಿ, ಈ ಮೇಲಿನ ಕಾರಣಗಳು ಯಾವುವು ನಿಮ್ಮ ಸಂಬಂಧದಲ್ಲಿ ಅನ್ವಯಿಸದೆ ಇದ್ದಲ್ಲಿ, ಬಹುಶಃ ನೀವು ಆಕೆಗೆ ಬೋರ್ ಆಗಿರಬಹುದು. ಆಕೆ ನಿಮ್ಮ ಸಂಬಂಧದಲ್ಲಿ ಮತ್ತೇನೋ ಬಯಸುತ್ತಿದ್ದಾಳೆ ಎಂದು ಭಾವಿಸಿ.



Click it and Unblock the Notifications











