ಪುರುಷರು ಯಾಕೆ ಹೀಗೆ ಮಾಡುತ್ತಾರೋ ದೇವರೇ ಬಲ್ಲ!

By Poornima heggade

ಎಲ್ಲವೂ ಹೇಳಿಯೇ ಗೊತ್ತಾಗಬೇಕೆ ಎನ್ನುವ ಮಾತು ಪುರುಷರು ಹೆಚ್ಚು ಹೇಳುತ್ತಾರೆ. ಅಂದರೆ ಅವರ ಸೂಚನೆಗಳು ಇಷ್ಟವಾಗಬೇಕು ಅವರ ಕೆಲಸಗಳು ಮೆಚ್ಚುಗೆಯಾಗಬೇಕು ಹಾಗೂ ಅವರ ಮುಂದಿನ ನಡೆಗಳು ನಮಗೆ ತಿಳಿದಿರಬೇಕು ಎನ್ನುವುದು ಇದರ ಅರ್ಥ. ಇದು ಎಲ್ಲಾ ಸಮಯದಲ್ಲೂ ನಮ್ಮಿಂದ ಸಾಧ್ಯವಾಗದೇ ಇರಬಹುದು. ಆದರೆ ಇಂತಹ ಆಸೆ ಪುರುಷರಿಗೆ ಇರುವುದಂತೂ ನಿಜ.

ಪುರುಷರು ಹಲವು ವಿಷಯಗಳನ್ನು ನಿಮ್ಮಿಂದ ಬಯಸುತ್ತಾರೆ ಆದರೆ ಅದ್ಯಾಕೋ ಏನೋ 'ತನಗೆ ಇದು ಬೇಕು' ಎಂದು ಹೇಳುವುದೇ ಇಲ್ಲ. ಅದು ಯಾಕೆ ಹೀಗೆ ಮಾಡುತ್ತಾರೋ ದೇವರೇ ಬಲ್ಲ. ತನ್ನ ಆಸೆಗಳನ್ನು ಹಂಚಿಕೊಂಡಷ್ಟು ಜೀವನ ಸುಗಮವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಾನಿದನ್ನು ಹೇಳಿಯೇ ಅರ್ಥವಾಗಬೇಕೆಂದಿಲ್ಲ ಎಂಬ ಭಾವನೆ ಇರಬಹುದು. ನೀವು ಅವರ ಬಗ್ಗೆ ಈ ವಿಷಯಗಳನ್ನು ತಿಳಿದಿದ್ದೀರಾ ಅವರು ಎಂದು ನಂಬಿರುತ್ತಾರೆ ಆದರೆ ಇದು ಬಹಳ ಸಂದರ್ಭಗಳಲ್ಲಿ ಸುಳ್ಳಾಗಿರುತ್ತದೆ. ಇಂತಹ ಕೆಲವು ವಿಷಯಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ.

ಗೌರವ

ಗೌರವ

ಹಲವು ಸಂಶೋಧನೆಗಳು ಮತ್ತು ಓದಿನ ಬಳಿಕ ಪುರುಷರು ಮಹಿಳೆಯರಿಂದ ಗೌರವವನ್ನು ಬಯಸುತ್ತಾರೆ ಎನ್ನುವುದು ಶತಸಿದ್ಧ. ನಾವು ಹೇಳಿದ ಕೂಡಲೆ ನಂಬಲೇ ಬೇಕೆಂದಿಲ್ಲ ನಿಮ್ಮ ಹುಡುಗನ ಬಳಿ ಈ ಪ್ರಶ್ನೆ ಕೇಳಿ ಉತ್ತರ ನೋಡಿ. ಇದು ಪುರುಷರು ಬಯಸುವ ಒಂದು ಅತಿ ಪ್ರಮುಖ ವಿಷಯವಾಗಿದ್ದು ನಿಮ್ಮ ಬಳಿ ಎಂದಿಗೂ ಹೇಳುವುದಿಲ್ಲ. ಹಾಗಾದರೆ ಹೇಗೆ ಗೌರವ ನೀಡಬಹುದು ಎಂಬ ಸಮಸ್ಯೆ ನಿಮ್ಮಲ್ಲಿರಬಹುದು, ಉತ್ತರ ಸರಳವಾಗಿದೆ. ಅವರ ಯೋಚನೆಗಳು, ಯೋಜನೆಗಳು, ಮಾಡಿದ ಕೆಲಸಗಳಿಗೆ ಬೆಂಬಲ ನೀಡಿ ಅದೇ ಸರಿ ಎನ್ನುವ ಭಾವನೆ ಅವರಲ್ಲಿ ಮೂಡಿಸಿ. ಅವರು ಸರಿ ಎನ್ನುವುದನ್ನು ನಿಮ್ಮ ಹಾವ ಭಾವದಿಂದ ತೋರಿಸಿಕೊಡಿ.

ಒಡನಾಟ

ಒಡನಾಟ

ತಾವು ಹೆಚ್ಚು ಕಾಳಜಿ ವಹಿಸುವ ಹುಡುಗಿಯ ಜೊತೆಗೆ ಇರಲು ಪುರುಷರು ಬಯಸುತ್ತಾರೆ. ಭಾನುವಾರ ಬೆಳಗ್ಗಿನ ಗಾಲ್ಫ್ ಆಟದಲ್ಲಿ ಅಥವಾ ಅವರ ಇಷ್ಟದ ಚಲನಚಿತ್ರ ನೋಡುವಾಗ ನೀವು ಅವರ ಜೊತೆ ಇರಬೇಕೆಂದು ಅವರು ಬಯಸುತ್ತಾರೆ, ಇದರ ಅರ್ಥ ನೀವು ಅವರ ಕಣ್ಣಿಗೆ ಕಾಣುವಂತೆ ಅವರ ಸುತ್ತ ಇದ್ದರೆ ಅವರಿಗೆ ಖುಷಿ. ಇದು ಒಳ್ಳೆಯ ವಿಷಯವೂ ಹೌದು, ಇದರ ಪ್ರಯೋಜನ ಪಡೆದುಕೊಳ್ಳಿ. ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯಿರಿ.

ಮಾತಿನ ಧಾಟಿ

ಮಾತಿನ ಧಾಟಿ

ತಾವು ಸಂಬಂಧ ಹೊದಿರುವ ಮಹಿಳೆಯರ ಮಾತಿನ ಬಗ್ಗೆಯೂ ಪುರುಷರು ಗಮನ ವಹಿಸುತ್ತಾರೆ. ಮಾತನಾಡುವಾಗ ಹಿತವಾಗಿ ನಯವಾಗಿ ಮಾತನಾಡಿದಷ್ಟೂ ಪುರುಷರು ಖುಷಿ ಪಡುತ್ತಾರೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೆ ಮಾತನಾಡಲು ಸಾಧ್ಯವಿಲ್ಲ. ಆದರೆ ಎಷ್ಟು ಸಾಧ್ಯವೋ ಅಷ್ಟು ಸಂದರ್ಭಗಳಲ್ಲಿ ಮಾತಿನ ಧಾಟಿಯ ಬಗ್ಗೆ ಗಮನವಿರಲಿ. ಕೇವಲ ಪುರುಷರು ಎಂದಲ್ಲ ಮಾತಿನ ಧಾಟಿ ಎಲ್ಲರಿಗೂ ಅಗತ್ಯ.

ಪ್ರೋತ್ಸಾಹ

ಪ್ರೋತ್ಸಾಹ

ನೀವು ಪ್ರೋತ್ಸಾಹ ಕೊಟ್ಟಷ್ಟೂ ಪುರುಷರು ಖುಷಿ ಪಡುತ್ತಾರೆ. ತಾವು ಮಾಡುವ ಕೆಲಸಗಳಿಗೆ ತನ್ನ ಪತ್ನಿಯ ಬೆಂಬಲ ಇದೆ ಎಂದು ತಿಳಿದರೆ ಬಹಳ ಉಬ್ಬಿಹೋಗುತ್ತಾರೆ. ಇದಕ್ಕೆ ಅವರಲ್ಲಿನ ನಿಮ್ಮ ನಂಬಿಕೆ ಬಹಳ ಅಗತ್ಯ. ನಿಮ್ಮ ಬೆಂಬಲ ಒಂದಿದ್ದರೆ ಅವರು ಏನನ್ನಾದರೂ ಸಾಧಿಸಬಹುದು ಎಂದು ಅವರು ನಂಬಿರುತ್ತಾರೆ. ಹೀಗೆ ನೀವು ಮಾಡಿದ್ದಲ್ಲಿ ನಿಮಗೂ ಇದೇ ಸಿಗುತ್ತದೆ ನಿಮ್ಮ ಎಲ್ಲಾ ಕೆಲಸಗಳಲ್ಲೂ ಅವರು ನಿಮ್ಮ ಬೆಂಬಲಕ್ಕಿರುತ್ತಾರೆ.

ಪ್ರಶಂಸೆ

ಪ್ರಶಂಸೆ

ಅವರು ಮಾಡಿದ ಕೆಲಸವನ್ನು ನೀವು ಮೆಚ್ಚಬೇಕು ಹಾಗೂ ಅದನ್ನು ಅವರ ಮುಂದೆ ಹೇಳಬೇಕು ಎನ್ನುವ ಆಸೆ ಅವರಲ್ಲಿ ಇದ್ದೇ ಇರುತ್ತದೆ, ಅವರೇನಾದರೂ ಸಹಾಯ ಮಾಡಿದರೆ ಒಂದು ಸಣ್ಣ ಧನ್ಯವಾದ ಅವರನ್ನು ಬಹಳ ಸಂತೋಷದಿಂದ ಇರುವಂತೆ ಮಾಡುತ್ತದೆ, ನಿಮ್ಮನ್ನು ಒಂದು ಅನಿರೀಕ್ಷಿತ ಡಿನ್ನರ್ ಗೆ ಕರೆದೊಯ್ಯಬಹುದು ಅಥವಾ ನಿಮ್ಮ ಕಾರನ್ನು ಸರಿಪಡಿಸಲು ಸಹಾಯ ಮಾಡಬಹುದು ಇಂತಹ ಸಂದರ್ಭಗಳಲ್ಲಿ ಅವರ ಕೆಲಸವನ್ನು ಪ್ರಶಂಸೆ ಮಾಡಿ. ನೀವು ಹೀಗೆ ಮಾಡಿದ್ದೇ ಆದಲ್ಲಿ ನಿಮಗೆ ಹೆಚ್ಚು ಹೆಚ್ಚು ಸಹಾಯ ಸಿಗುವುದಂತೂ ಸುಳ್ಳಲ್ಲ.

ಸ್ವಾತಂತ್ರ್ಯ

ಸ್ವಾತಂತ್ರ್ಯ

ಪುರುಷರಿಗೆ ಸ್ವಾತಂತ್ರ್ಯ ಸಿಕ್ಕಷ್ಟೂ ಹೆಚ್ಚು ಸಂತೋಷ ಪಡುತ್ತಾರೆ. ಇದರ ಅರ್ಥ ಎಲ್ಲಾ ಸಮಯಗಳಲ್ಲೂ ಅವರನ್ನು ಒಬ್ಬಂಟಿಯಾಗಿ ಬಿಡಬೇಕೆಂದಲ್ಲ ಆದರೆ ಅವರಿಗೆ ಒಂಟಿಯಾಗಿ ಮಾಡಲು ಇಷ್ಟ ಇರುವ ಕೆಲಸಗಳನ್ನು ಗಮನದಲ್ಲಿಟ್ಟು ಅಂತಹ ಕೆಲಸಗಳ ಸಮಯದಲ್ಲಿ ಅವರನ್ನು ಒಬ್ಬರೇ ಬಿಟ್ಟು ಬಿಡಿ. ಅವರ ಗೆಳೆಯರು ಅವರ ಆಸಕ್ತಿಗಳಿಗೆ ಅವರದೇ ಸಮಯವನ್ನು ನೀಡಲು ಅವಕಾಶ ಕೊಡಿ.

ಮೆಚ್ಚುಗೆ

ಮೆಚ್ಚುಗೆ

ಗೌರವದೊಂದಿಗೆ ಹತ್ತಿರದ ಸಂಬಂಧ ಇರುವ ಇನ್ನೊಂದು ಭಾವ ಮೆಚ್ಚುಗೆ. ನಿಮ್ಮ ಪತಿ ಮಾಡಿದ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ನೋಡಿ, ಬಹಳ ಖುಷಿಯಾಗುತ್ತಾರೆ. ಆದರೆ ಇದರಲ್ಲಿ ಪುರುಷರು ಬಹಳ ಜಾಗೃತೆಯಲ್ಲಿರುತ್ತಾರೆ. ನೀವು ತೋರಿಸುವ ಗೌರವ ನಿಜವೋ ಹುಸಿಯಾದುದೋ ಎಂದು ತಕ್ಷಣ ಕಂಡುಹಿಡಿಯುತ್ತಾರೆ. ಹಾಗಾಗಿ ಅವರ ಕೆಲಸವನ್ನು ಮೆಚ್ಚಲು ಆರಂಭಿಸಿ. ಹಾಗೂ ಅದನ್ನೇ ತೋರಿಸಿಕೊಡಿ.

Story first published: Saturday, August 2, 2014, 17:35 [IST]
X
Desktop Bottom Promotion