Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮದುವೆಗೂ ಮುನ್ನ ಪುರುಷರು ಮಾಡಬೇಕಾದ 8 ಸಂಗತಿಗಳು
ಮದುವೆಯೆಂದರೆ ಪ್ರತಿಯೊಬ್ಬರಿಗು ಸ್ವಲ್ಪ ಅಳುಕು ಇರುತ್ತದೆ. ಅದರಲ್ಲೂ ಗಂಡಸರ ವಿಷಯಕ್ಕೆ ಬಂದರೆ, ಅವರ ಪಾಲಿಗೆ ಮದುವೆಯೆಂಬುದು ದೀರ್ಘವಾದ ಮತ್ತು ಪ್ರಯಾಸಕರವಾದ, ಉತ್ಸಾಹ ಹಾಗು ಹೊಸ ಪರಿಶೋಧನೆಗಳಿಂದ ಕೂಡಿದ ಪ್ರಯಾಣದ ಆರಂಭ ಎಂದೇ ಅರ್ಥ.
ಈ ಲೇಖನದಲ್ಲಿ ನಾವು ಮದುವೆಗೆ ಮೊದಲು ಪ್ರತಿಯೊಬ್ಬ ಗಂಡಸು ಗಮನ ಹರಿಸಬೇಕಾದ ಕೆಲವೊಂದು ಸಂಗತಿಗಳ ಬಗೆಗೆ ವಿವರಿಸಿದ್ದೇವೆ. ಈ ಸಂಗತಿಗಳನ್ನು ಗಂಡಸರು ತಪ್ಪದೆ ಮದುವೆಗೆ ಮುನ್ನ ಮಾಡಬೇಕು. ಕೆಲವು ಗಂಡಸರಿಗೆ ಈ ಸಂಗತಿಗಳನ್ನು ಮದುವೆಗೆ ಮುನ್ನ ಏಕೆ ಮಾಡಬೇಕು ಎಂಬುದರ ಮಹತ್ವ ಗೊತ್ತಿರುವುದಿಲ್ಲ.
ಹೆಂಗಸರಿಗೆ ಪೆದ್ದು ಗಂಡಸರು ಏಕೆ ಇಷ್ಟವಾಗುತ್ತಾರೆ?
ಗಂಡಸರಾಗಿ ನಿಮಗೆ ಕೆಲವು ಸಂಗತಿಗಳನ್ನು ಮದುವೆಯ ನಂತರ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ಅವುಗಳನ್ನು ಮದುವೆಗೆ ಮುನ್ನವೇ ಮಾಡಬೇಕು. ಹಾಗಾದರೆ ಯಾವುದು ಆ ಸಂಗತಿಗಳು ಎಂಬ ಬಗ್ಗೆ ಕುತೂಹಲವೇ? ಬನ್ನಿ ನೋಡೋಣ, ಅವು ಯಾವುವೆಂದು ಈ ಸಂಗತಿಗಳ ಒಳನೋಟವನ್ನು ನಾವು ಈಗ ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲಿದೆ ಮದುವೆಯಾಗುವ ಮುನ್ನ ಪ್ರತಿಯೊಬ್ಬ ಗಂಡಸು ಮಾಡಲೇ ಬೇಕಾದ 8 ಸಂಗತಿಗಳು, ಮುಂದೆ ಓದಿ...
ಸಮಾಗಮಕ್ಕೆ ಮಹಿಳೆಯರಿಂದ ದೊರಕುವ ಗುಪ್ತ ಸಂಜ್ಞೆಗಳು

ನಿಮ್ಮ ಸ್ನೇಹಿತರ ಜೊತೆಗೆ ಕಾಲ ಕಳೆಯಿರಿ
ಗಂಡಸರು ಮದುವೆಗೆ ಮುನ್ನ ಮಾಡಬೇಕಾದ ಮೊದಲ ಕಾರ್ಯ, ಸ್ನೇಹಿತರ ಜೊತೆ ಕಾಲ ಕಳೆಯುವುದು. ನಿಮ್ಮ ಶಾಲಾ-ಕಾಲೇಜಿನ ಸ್ನೇಹಿತರ ಜೊತೆ ಸಾಧ್ಯವಾದ ಮಟ್ಟಿಗೆ ಕಾಲ ಕಳೆಯಿರಿ. ನಿಮಗೆ ಈ ವಿಚಾರ ಅರ್ಥವಾಗಲಿಲ್ಲವೆಂದಾದಲ್ಲಿ ಮುಂದೆ ನೀವು ನಿಮ್ಮ ಸ್ನೇಹಿತರ ಜೊತೆ ಕಾಲ ಕಳೆಯಲು ಸಾಧ್ಯವಿಲ್ಲದೆ, ಪರಿತಪಿಸುತ್ತೀರಿ. ಮದುವೆಗೆ ಮುನ್ನ ಆದಷ್ಟು ಕಾಲ ಕಳೆದು ಬಿಡಿ.

ದೇವ್ರಾಣೆಗೂ ಹೆಚ್ಚು ಆಣೆ-ಪ್ರಮಾಣ ಮಾಡಬೇಡಿ!
ಮದುವೆಯಾಗದ ಗಂಡಸು ಆಣೆ-ಪ್ರಮಾಣ ಮಾಡುವುದರಲ್ಲಿ ಎತ್ತಿದ ಕೈ. ಪ್ರತಿಯೊಂದು ಸಣ್ಣ ಸಂಗತಿಗು ಆಣೆ ಮಾಡಿ, ಅದನ್ನು ನಡೆಸಿಕೊಡಲು ಹೊರಡುತ್ತಾನೆ. ಆದರೆ ಮದುವೆಯಾದ ನಂತರ ವಸ್ತು ಸ್ಥಿತಿ ತೀವ್ರವಾಗಿ ಬದಲಾಗುತ್ತದೆ. ಮದುವೆಗೆ ಮುನ್ನವೇ ಈ ಆಣೆ-ಪ್ರಮಾಣಗಳನ್ನು ಮಾಡುವುದನ್ನು ಬಿಟ್ಟು ಬಿಡಿ. ಆಗಲಿಲ್ಲವೆಂದಾದಲ್ಲಿ, ಕಡಿಮೆಯಾದರು ಮಾಡಿ.

ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಗ್ಯಾಡ್ಜೆಟ್‍ಗಳನ್ನು ಖರೀದಿಸಿ
ಮದುವೆಯಾದ ನಂತರ ನೀವು ಮಾಡುವ ಖರ್ಚಿನ ಬಗೆಗೆ ನಿರ್ಬಂಧಗಳು ಇರುತ್ತವೆ. ಆದ್ದರಿಂದಲೇ ಮದುವೆಗೆ ಮೊದಲೇ, ನಿಮ್ಮ ನೆಚ್ಚಿನ ಗ್ಯಾಡ್ಜೆಟ್‍ಗಳನ್ನು ಖರೀದಿಸಿ. ಬಿಟ್ಟರೆ ತಡವಾಗಿ ಬಿಡುತ್ತದೆ.

ಸ್ವಲ್ಪ ಮುನ್ನುಗ್ಗಿ
ನೀವು ಮದುವೆಗೆ ಮುನ್ನ ಯಾವುದಾದರು ಹುಡುಗಿಯೊಂದಿಗೆ ಓಡಾಡಿಲ್ಲವೆಂದಾದಲ್ಲಿ, ಮದುವೆಯಾದ ನಂತರ ಸ್ವಲ್ಪ ಕಷ್ಟವಾಗುತ್ತದೆ. ಕಾರಣವಿಷ್ಟೇ ನಿಮಗೆ ಹುಡುಗಿಯರ ಮನಃಸ್ಥಿತಿ ಅರ್ಥವಾಗಿರುವುದಿಲ್ಲ. ಹಾಗಾಗಿ ಮದುವೆಗೆ ಮುನ್ನ ಯಾವುದಾರು ಒಂದು ಹುಡುಗಿಯ ಜೊತೆಗಾದರು ಸ್ವಲ್ಪ ಸ್ನೇಹದ ಸಂಬಂಧವನ್ನು ಇಟ್ಟುಕೊಂಡು ಅವರೊಂದಿಗೆ ಬೆರೆಯಿರಿ. ಇದು ವಿಚಿತ್ರವೆಂದೆನಿಸಬಹುದಾದರು, ಮುಂದೆ ಇದರಿಂದ ಅನೇಕ ಪ್ರಯೋಜನಗಳು ನಿಮಗೆ ದೊರೆಯುತ್ತವೆ.

ನಿಮ್ಮ ಹಣಕಾಸು
ಇದು ತುಂಬಾ ಮುಖ್ಯವಾದ ಅಂಶ. ಮದುವೆಗೆ ಮುನ್ನ ಗಂಡಸರು ಮಾಡಬೇಕಾದ ಕೆಲಸಗಳಲ್ಲಿ ಇದು ಅತ್ಯಂತ ಪ್ರಮುಖವಾದುದು, ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಸರಿಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಹಣಕಾಸು ಸ್ಥಿತಿಗತಿಗಳು ಸರಿಯಿಲ್ಲದಿದ್ದಲ್ಲಿ, ಮದುವೆ ಮಾಡಿಕೊಳ್ಳುವುದು ಒಳ್ಳೆಯದಲ್ಲ.

ಅಡುಗೆ ಮಾಡುವುದನ್ನು ಕಲಿಯಿರಿ
ಅಡುಗೆ ಮಾಡುವುದನ್ನು ಕಲಿತರೆ ಮದುವೆಯಾದ ನಂತರ ನಿಮ್ಮ ಮಡದಿಗೆ ಒಂದು ಸಣ್ಣ ಸರ್‌ಪ್ರೈಸ್ ಕೊಡಬಹುದು. ಜೊತೆಗೆ ಆಕೆ ಊರಲ್ಲಿ ಇಲ್ಲವೆಂದಾದಲ್ಲಿ ನೀವೇ ಬೇಯಿಸಿಕೊಂಡು ತಿನ್ನಬಹುದು. ಇದು ಗಂಡಸರು ಉಡಾಫೆ ಮಾಡುವ ಅತ್ಯಂತ ಮುಖ್ಯ ವಿಚಾರವಾಗಿದೆ. ಒಂದು ವೇಳೆ ಮದುವೆಗೆ ಮುನ್ನ ಕಲಿಯಲೇ ಬೇಕಾದ ಸಂಗತಿಗಳಿದ್ದಲ್ಲಿ, ಅದರಲ್ಲಿ ಅಡುಗೆ ಮಾಡುವುದನ್ನು ಕಲಿಯುವುದು ಪಟ್ಟಿಯಲ್ಲಿ ಮೊದಲು ಇರುತ್ತದೆ.

ಏಕಾಂಗಿಯಾಗಿ ಪ್ರವಾಸ ಮಾಡಿ
ನಿಜವಾದ ಶಾಂತಿ ಬೇಕಾಗಿದ್ದರೆ, ಏಕಾಂಗಿಯಾಗಿ ಪ್ರವಾಸ ಮಾಡಿ. ಇದರಿಂದ ದೇಶ ಸುತ್ತ ಬಹುದು, ಅದರಿಂದ ಕಲಿಯಲೂ ಬಹುದು. ನಿಮ್ಮ ಜೀವನದಲ್ಲಿ ಮದುವೆಗೆ ಮೊದಲೇ ಸ್ವಲ್ಪ ಸುತ್ತಾಡಿ. ಇದರಿಂದ ನೀವು ಜೀವನವನ್ನು ನೋಡುವ ಶೈಲಿಯೇ ಬದಲಾಗಬಹುದು.

ನೀವು ಏನು ಕಲಿಯಬೇಕೆಂದಿದ್ದೀರೋ, ಅದನ್ನು ಕಲಿಯಿರಿ
ಅದು ಮಾರ್ಷಿಯಲ್ ಆರ್ಟ್ಸ್ ಆಗಿರಬಹುದು, ಗಿಟಾರ್, ಡಾನ್ಸ್ ಯಾವುದಾದರು ಸರಿ, ಮದುವೆಯ ನಂತರ ಕಲಿಯಲು ಸಮಯವಕಾಶ ಸಿಗುವುದಿಲ್ಲ. ನಿಮಗೆ ಆಸಕ್ತಿಯಿರುವ ವಿಷಯಗಳ ಪಟ್ಟಿಯನ್ನು ತಯಾರಿಸಿ, ಅದನ್ನು ಮದುವೆಗೆ ಮೊದಲೇ ಸಾಧಿಸಿ. ಏಕೆಂದರೆ ಮದುವೆಯು ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ.



Click it and Unblock the Notifications
