Latest Updates
-
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು -
ಬೆಂಗಳೂರು ಮಳೆ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಬೆಳಗಿನ ವ್ಯಾಯಾಮ ಮತ್ತು ಪ್ರಯಾಣಕ್ಕೆ ಇಲ್ಲಿದೆ ಸುರಕ್ಷತಾ ಟಿಪ್ಸ್ -
ಅಮೆರಿಕದಲ್ಲಿ ಸಮಯ ಬದಲಾವಣೆ: ಭಾರತ-ಯುಎಸ್ ಮೀಟಿಂಗ್ಗಳಲ್ಲಿ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಬಜೆಟ್ ಬಿಸಿ ತಟ್ಟದಂತೆ ಪ್ರೋಟೀನ್, ಕ್ಯಾಲ್ಸಿಯಂ ಪಡೆಯುವುದು ಹೇಗೆ? -
ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಹತ್ವದ ಸಲಹೆಗಳು! -
ದೆಹಲಿ ವಾಯು ಮಾಲಿನ್ಯ: 'ಸಿವಿಯರ್' AQI ನಡುವೆ ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಪಾಲಿಸಿ! -
ಅರ್ನಬ್ ಚಂಡಮಾರುತದ ಆರ್ಭಟ: ನಿಮ್ಮ ಕುಟುಂಬದ ಸುರಕ್ಷತೆಗಾಗಿ 30 ನಿಮಿಷದ ತುರ್ತು ಪ್ಲಾನ್ ಇಲ್ಲಿದೆ
ಬ್ರೇಕ್ ಅಪ್ನ ಎಂಟು ಘಟ್ಟಗಳು
ಬ್ರೇಕ್ ಅಪ್ ನಿಭಾಯಿಸುವಲ್ಲಿ ಪುರುಷರು ನಿಸ್ತೇಜವಾಗಿ ಹೋಗುತ್ತಾರೆ. ಹಲವಾರು ಸಲ ಬ್ರೇಕ್ ಅಪ್ ಆಗಿದ್ದರೂ ಮತ್ತು ಮತ್ತೆ ಕೆಲವು ಬ್ರೇಕ್ ಅಪ್ ಆಗುತ್ತದೆಯೆಂದು ತಿಳಿದಿದ್ದರೂ ಬ್ರೇಕ್ ಅಪ್ ಆದಾಗ ಪ್ರತೀ ಸಲ ಸಾವು ಎದುರು ಬಂದಂತಾಗುತ್ತದೆ. ಇಲ್ಲಿ ನಮ್ಮನ್ನು ಕಾಡುವಂತಹ ಏಳು ಮಟ್ಟದ ಬ್ರೇಕ್ ಅಪ್ ಗಳನ್ನು ವಿವರಿಸಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಭಾವಿ ಪತಿಯಲ್ಲಿರಬೇಕಾದ ಗುಣಗಳು!
ಆಘಾತ:
ಎಲ್ಲವೂ ಕೊನೆಯಾಗಿದೆ ಎಂದು ಆಕೆ ಹೇಳಿದಾಗ ನೀವು ತಂದೂರಿ ಚಿಕನ್ ಹುಡುಕುತ್ತಿರುತ್ತೀರಿ. ಆದರೆ ನೀವು ಇದನ್ನು ಕಡೆಗಣಿಸುತ್ತೀರಿ. ಯಾಕೆಂದರೆ ನಿಮ್ಮ ಪ್ಲೇಟ್ ನಲ್ಲಿ ಸ್ವಲ್ಪ ಆಹಾರ ಉಳಿದಿರುತ್ತದೆ ಮತ್ತು ಅದು ತುಂಬಾ ರುಚಿಯಾಗಿರುತ್ತದೆ. ಆದರೆ ಆಕೆ ನಿಮ್ಮನ್ನೇ ಅಲುಗಾಡಿಸುತ್ತಾಳೆ. ಆಕೆ ಎದ್ದು ಹೋಗುವ ಮೊದಲು ಇದನ್ನು ತುಂಬಾ ಜೋರಾಗಿ ಹೇಳುವವರೆಗೆ ನಿಮಗೆ ಆಕೆ ಜಸ್ಟಿನ್ ಬಿಬೆರ್ ಒಬ್ಬ ಹುಡುಗನೆಂದು ಹೇಳಿದಳೆಂದು ಭಾಸವಾಗಿರುತ್ತದೆ.

ನಿರಾಕರಣೆ:
ಎಲ್ಲವೂ ಅಂತ್ಯವಾಗಿದೆ? ಖಂಡಿತವಾಗಿಯೂ ಇಲ್ಲ. ಆಕೆಗೆ ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯಬೇಕಾಗಿದೆ. ಆಕೆ ಮರಳುತ್ತಾಳೆ. ಖಂಡಿತವಾಗಿಯೂ ಮರಳುತ್ತಾಳೆ. ಆಕೆ ಮರಳುವುದಿಲ್ಲವೆಂದರೆ ಏನರ್ಥ? ಹೀಗಂತ ನಿಮಗೆ ನೀವೇ ಹೇಳುತ್ತಿರುತ್ತೀರಿ. ಆಕೆಗೆ ನೀವು ಮೆಸೇಜ್ ಕಳುಹಿಸುತ್ತೀರಿ ಮತ್ತು ಆಕೆ ಇದಕ್ಕೆ ಉತ್ತರಿಸುತ್ತಾಳೆಂದು ಗಂಟೆಗಟ್ಟಲೆ ನೀವು ಕಾಯುತ್ತಿರುತ್ತೀರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಸಂಗಾತಿಯನ್ನು ಆನ್ಲೈನ್ನಲ್ಲಿಯೇ ಹುಡುಕಿ!
ಏಕಾಂಗಿತನ:
ಆಕೆ ಮರಳುವುದಿಲ್ಲ. ಆಗ ನೀವು ಸಂಪೂರ್ಣ ವಿಶ್ವದಿಂದ ನಿಮ್ಮನ್ನು ಬೇರ್ಪಡಿಸಿ ತಿಂಗಳುಗಟ್ಟಲೆ ಏಕಾಂಗಿಯಾಗಿ ಕಳೆಯುತ್ತೀರಿ. ನಿಮ್ಮ ಮೊಬೈಲ್ ತುಂಡಾಗಿರುತ್ತದೆ ಮತ್ತು ಕಳೆದ ಐವತ್ತು ವರ್ಷಗಳಿಂದ ನೀವು ಯಾರೊಂದಿಗೂ ಮಾತನಾಡಲಿಲ್ಲವೆಂಬ ಭಾವನೆ ನಿಮಗೆ ಆಗುತ್ತದೆ.
ಹತಾಶೆ:
ಸಂಬಂಧದಲ್ಲಿ ಇರುವಾಗ ನೀವು ಆಕೆಯ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಆದರೆ ಈಗ ಆಕೆ ನಿಮ್ಮನ್ನು ಬಿಟ್ಟು ಹೋದಾಗ ಉದಯ ಚೋಪ್ರಾಗೆ ಪ್ಲಾಸ್ಟಿಕ್ ಸರ್ಜನ್ ನ ಅಗತ್ಯವಿರುವಷ್ಟು ಹತಾಶೆಯಿಂದ ನೀವು ಆಕೆಯನ್ನು ಬಯಸುತ್ತೀರಿ. ಆ ಹುಡುಗಿಯೊಂದಿಗೆ ನಿಮ್ಮ ಸಂಬಂಧದ ಬಗ್ಗೆ ತುಂಬಾ ಚೌಕಾಶಿ ಮಾಡಲು ಪ್ರತಿಯೊಂದು ವಿಧಾನದಿಂದಲೂ ಬಯಸುತ್ತೀರಿ. ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನಿಗೆ ಮತ್ತೆ ಚೀಟಿ ಮಾಡಲ್ಲವೆಂದು ಭರವಸೆ ನೀಡಿದಂತೆ ಒಳ್ಳೆಯ ಜತೆಗಾರನಾಗುತ್ತೀರಿ ಎಂದು ಸಂಗಾತಿಯ ಮನವೊಲಿಸಲು ಪ್ರಯತ್ನಿಸುತ್ತೀರಿ.
ಸಿಟ್ಟು:
ಆಕೆಯಿಂದಾಗಿ ನೀವು ಹಠಾತ್ ಆಗಿ ದಿಗಿಲಾಗುತ್ತೀರಿ. ಆಕೆಯ ಬಗ್ಗೆ ಚಿಂತಿಸುವಾಗ ನಿಮ್ಮ ರಕ್ತ ಕುದಿಯುತ್ತಿರುತ್ತದೆ. ಇಂತಹ ಕೆಟ್ಟ ಹುಡುಗಿಯೊಂದಿಗಿನ ಸಂಬಂಧದ ಶಾಪದಿಂದ ಹೊರಬಂದ ಅನುಭವವಾಗುತ್ತದೆ. ಆಕೆಯ ಕೂದಲನ್ನು ನೋಡಿದರೆ ಅದು ಕೆಟ್ಟುಹೋದ ಪೊರಕೆಯಂತೆ ಭಾಸವಾಗುತ್ತದೆ. ಆಕೆಯೊಂದಿಗೆ ಡೇಟಿಂಗ್ ಗೆ ಹೋದಾಗ ಸಮಾಜ ನನ್ನ ಬಗ್ಗೆ ಏನು ಯೋಚಿಸುತ್ತಿರಬಹುದು. ನೀವು ಇನ್ನು ಮುಂದೆ ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುನಿಸಿಕೊಂಡ ಹೆಂಡತಿ ಬಳಿ ನಿಮ್ಮ ಲಾಜಿಕ್ ನಡೆಯಲ್ಲ!
ಕೊರಗು:
ನೀವು ಆಕೆಯನ್ನು ಪ್ರೀತಿಸುತ್ತಿರುತ್ತೀರಿ. ಆಕೆಯನ್ನು ನೋಡಿದಾಗ ಆಕೆಯ ಮುಖದ ಕಡೆ ನೋಡುತ್ತೀರಿ. ಆಕೆಯನ್ನು ಹೊರತುಪಡಿಸಿ ನಿಮ್ಮ ಜೀವನಕ್ಕೆ ಅರ್ಥವಿಲ್ಲದಂತಾಗುತ್ತದೆ. ನೀವು ಮತ್ತೆ ಸಂತೋಷವಾಗಿರುವುದಿಲ್ಲ. ಈ ಜಗತ್ತಿನಲ್ಲಿ ಉತ್ಪತ್ತಿಯಾದ ಅತ್ಯಂತ ಕೆಟ್ಟ ವಸ್ತು ನೀವು. ಸೊಳ್ಳೆಗಳು ಕೂಡ ನಿಮ್ಮಿಂದ ದೂರ ಓಡುತ್ತವೆ. ಇದಕ್ಕಿಂತ ಕೆಟ್ಟದು ಏನಾಗಬೇಕು? ಸಿನೆಮಾಗಳಲ್ಲಿ ಕಂಡುಬರುವಂತೆ ನೀವು ಆಲ್ಕೋಹಾಲ್ ಅಥವಾ ಡ್ರಗ್ಸ್ ಗೆ ದಾಸರಾಗುವಂತಿಲ್ಲ. ಯಾಕೆಂದರೆ ನೀವು ತುಂಬಾ ಜನರಿರುವ ಕುಟುಂಬದಲ್ಲಿ ವಾಸಿಸುತ್ತೀರಿ.
ಮರುಕಳಿಸು:
ಆಕೆ ನಿಮ್ಮನ್ನು ಬಿಟ್ಟು ಹೋದರೆ ಏನೀಗ? ಸಮುದ್ರದಲ್ಲಿ ಮತ್ತಷ್ಟು ಮೀನುಗಳಿವೆ. ಸರಿಯಾ? ನೀವು ಕೊನೆಗೂ ಮನೆಯಿಂದ ಹೊರಗೆ ಬರುತ್ತೀರಿ ಮತ್ತು ಆಗ 2050 ಆಗಿರುತ್ತದೆ. ನೀವು ಸಮೀಪದ ಕ್ಲಬ್ ಗೆ ಹೋಗುತ್ತೀರಿ ಮತ್ತು ನಾಚಿಗೆಬಿಟ್ಟು ಮಹಿಳೆಗೆ ಡಿಕ್ಕಿ ಹೊಡೆಯುತ್ತೀರಿ. ಡಜನ್ ಗಟ್ಟಲೆ ಮಹಿಳೆಯರನ್ನು ನೋಡಿದರೆ ಆಗ ನಿಮಗೆ ಮರುಕಳಿಸುವುದು ಮನವರಿಕೆಯಾಗುತ್ತದೆ ಮತ್ತು ಬೇರೇನೂ ಇಲ್ಲ.
ಸ್ವೀಕಾರ:
ಪುರುಷರೇ ಇದು ಯಾವತ್ತೂ ಸಂಭವಿಸುವುದಿಲ್ಲ! ಇದನ್ನು ಒಪ್ಪಿಕೊಳ್ಳಿ, ಆದರೂ ಈಗಲೂ ಆಕೆಯ ಬೇಟೆಯಲ್ಲಿರುತ್ತೀರಿ.



Click it and Unblock the Notifications
