ನಿಮ್ಮ ಪ್ರಿಯಕರನಿಗೆ ಇಷ್ಟವಾಗದೇ ಇರುವಂತಹ ಗುಣ ಯಾವುದು?

By Poornima Hegde

ಹುಡುಗಿಯರಿಗೆ ಹುಡುಗರಲ್ಲಿ ಕೆಲವು ವಿಷಯಗಳು ಇಷ್ಟ ಆಗದಿರುವಂತೆಯೇ, ಹುಡುಗರಿಗೂ ಹುಡುಗಿಯರ ಕೆಲವು ವಿಷಯಗಳು ಇಷ್ಟವಾಗುವುದಿಲ್ಲ. ಹುಡುಗಿಯರು ಹುಡುಗರಿಗೆ ಇಷ್ಟ ಎಂದುಕೊಂಡ ವಿಷಯಗಳು ನಿಜವಾಗಿಯೂ ಹುಡುಗರಿಗೆ ಇಷ್ಟವಾಗುವುದಿಲ್ಲ.

ಉದಾಹರಣೆಗೆ: ಅತೀಯಾಗಿ ಸುಗಂಧ ದ್ರವ್ಯಗಳನ್ನು ಬಳಸುವುದು ಹಾಗೂ ತನ್ನ ಹಿಂದಿನ ಪ್ರಿಯಕರನ ಬಗ್ಗೆ ಕಥೆಗಳನ್ನು ಹೇಳುವುದು, ಹುಡುಗರಿಗೆ ಇಷ್ಟ ಎಂದುಕೊಂಡಿದ್ದರೆ ಅದು ತಪ್ಪು. ಹೀಗಾಗಿ ಹುಡುಗರಿಗೆ ಇಷ್ಟ ಆಗದ ವಿಷಯಗಳನ್ನು ತಿಳಿದಿರುವುದು ಬಹಳ ಅಗತ್ಯ.

ಉದ್ದವಾದ ಕೈ ಉಗುರುಗಳು

ಉದ್ದವಾದ ಕೈ ಉಗುರುಗಳು

ಉದ್ದವಾದ ಉಗುರುಗಳು ಅತ್ಯಂತ ಸುಂದರವಾಗಿರುತ್ತವೆ ಹಾಗೂ ಅದನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಸಂಗಾತಿಗೆ ಸಂತೋಷವಾಗುತ್ತದೆ ಎಂದು ಭಾವಿಸಿದ್ದೀರಲ್ಲವೇ? ಆದರೆ ಇದು ಖಂಡಿತ ತಪ್ಪು. ಹುಡುಗರು ನಿರೀಕ್ಷೆ ಮಾಡದ ಒಂದು ಪ್ರಮುಖ ವಿಷಯ ಇದು. ಅವರಿಗೆ ಸಹಜವಾದ ಉಗುರುಗಳು ಇಷ್ಟವೇ ಹೊರತು ಉದ್ದವಾಗಿ ಬೆಳೆಸಿಕೊಂಡ ಉಗುರುಗಳಲ್ಲ. ನಿಮ್ಮೊಂದಿಗಿದ್ದಾಗ ಉದ್ದವಾದ ಉಗುರುಗಳು ತೊಂದರೆ ಉಂಟುಮಾಡಬಹುದು! ಆದ್ದರಿಂದ ಗೆಳತಿಯರೇ, ನಿಮ್ಮ ಉಗುರುಗಳನ್ನು ಸಹಜವಾಗಿ, ಸರಿಯಾಗಿ ಕತ್ತರಿಸಿ. ಉದ್ದವಾದ ಉಗುರು ನಿಮ್ಮ ಸ್ನೇಹಿತ ಖಂಡಿತವಾಗಿ ಇಷ್ಟಪಡುವುದಿಲ್ಲ!

ಅತಿಯಾದ ಸುಗಂಧ ದ್ರವ್ಯ ಲೇಪನ

ಅತಿಯಾದ ಸುಗಂಧ ದ್ರವ್ಯ ಲೇಪನ

ನಿಮಗೆ ಇಷ್ಟವಾದ ಸುಗಂಧ ದ್ರವ್ಯದ ಪರಿಮಳ ನಿಮ್ಮ ಸಂಗಾತಿಗೂ ಇಷ್ಟವಾಗಬಹುದು. ಆದರೆ ಅದು ಸೌಮ್ಯವಾದ (ಲೈಟ್) ಪರಿಮಳವಾಗಿದ್ದರೆ ಮಾತ್ರ! ನಿಮಗೆ ಸುಗಂಧ ದ್ರವ್ಯ ಇಷ್ಟ ಎನ್ನುವ ಕಾರಣಕ್ಕೆ ಅದನ್ನೇ ಮತ್ತೆ ಮತ್ತೆ ದೇಹಕ್ಕೆ ಬಳಸಿದರೆ ಆ ಪರಿಮಳ ಹಾಗೆಯೇ ಉಳಿದುಬಿಡುತ್ತದೆ. ಆದರೆ ಅತಿಯಾದ ಈ ಸುವಾಸನೆ ಅವನಿಗೆ ಇಷ್ಟವಾಗದೇ ಇರಬಹುದು. ಆದ್ದರಿಂದ ಸೂಕ್ಷ್ಮ ಪರಿಮಳವಿರುವ ಸುಗಂಧ ದ್ರವ್ಯವನ್ನು ಬಳಸಿ!

ಹತಾಶೆ

ಹತಾಶೆ

ಹುಡುಗರು, ಹುಡುಗಿಯರಲ್ಲಿ ಇಷ್ಟಪಡದೇ ಇರುವ ಇನ್ನೊಂದು ಪ್ರಮುಖ ಅಂಶ, ಹುಡುಗಿಯರು ಹತಾಶೆ/ನಿರಾಶಾವಾದಿಗಳಾಗಿರುವುದು! ನೀವು ಸದಾ ನಿಮ್ಮ ಹುಡುಗನನ್ನೇ ಸುತ್ತುವುದು, ನೀನಿಲ್ಲದಿದ್ದರೆ ನಾನು ಬದುಕಲಾರೆನು ಎಂಬಂತೆ ಸದಾ ಅವನಿಗಂಟಿಕೊಂಡಿರುವುದನ್ನು ಅವರು ಇಷ್ಟಪಡುವುದಿಲ್ಲ. ಹುಡುಗರಿಗೆ, ಹುಡುಗಿಯರು ಸ್ವತಂತ್ರವಾಗಿರುವುದು ಇಷ್ಟ. ನಿಜವಾದ ಅಗತ್ಯವಿದ್ದಾಗ ಮಾತ್ರ ಅವರನ್ನು ಅವಲಂಬಿಸುವುದನ್ನು ಸ್ವಾಗತಿಸುತ್ತಾರೆ. ಆದರೆ ಹುಡುಗಿಯರೇ, ನೀವು ನಿಮ್ಮ ಪ್ರಿಯಕರನನ್ನು ಸದಾ ಅಂಟಿಕೊಂಡಿದ್ದರೆ, ಅದು ಅವರಿಗೆ ಇಷ್ಟವಾಗದೇ ಇರಬಹುದು ಎಚ್ಚರ!

ಮೂಕರಂತೆ ಇರುವುದು

ಮೂಕರಂತೆ ಇರುವುದು

ಮಾತನಾಡದೇ ಮೂಕರಂತೆ ಇದ್ದರೆ ಹುಡುಗರಿಗೆ ಇಷ್ಟವಾಗುತ್ತದೆ ಎಂದು ಹುಡುಗಿಯರು ಭಾವಿಸುತ್ತಾರೆ. ಆದ್ದರಿಂದ ಆಗಾಗ ಮೂಕರಂತೆಯೇ ಇರುತ್ತಾರೆ. ಆದರೆ ಈ ಅಭಿಪ್ರಾಯ ಖಂಡಿತ ತಪ್ಪು. ಹುಡುಗರು ನಿಮ್ಮ ಉತ್ತಮ, ಬುದ್ಧಿವಂತ ಅಭಿಪ್ರಾಯಕ್ಕಾಗಿ ಸದಾ ಕಾಯುತ್ತಾರೆ. ಆದರೆ ನೀವು ಮಾತನಾಡದೇ ಇರುವುದನ್ನು ಅವರು ನಿರೀಕ್ಷೆ ಮಾಡುವುದಿಲ್ಲ!

ಮಾಜಿ ಸ್ನೇಹಿತನ ಬಗ್ಗೆ ಮಾತನಾಡುವುದು

ಮಾಜಿ ಸ್ನೇಹಿತನ ಬಗ್ಗೆ ಮಾತನಾಡುವುದು

ನಿಮ್ಮ ಮೊದಲಿನ ಸ್ನೇಹಿತನ ಬಗ್ಗೆ ಪದೇ ಪದೇ ಮಾತನಾಡುವುದನ್ನು ಹುಡುಗರು ಇಷ್ಟಪಡುವುದಿಲ್ಲ. ನಿಮಗೆ ನಿಮ್ಮ ಮಾಜಿ ಪ್ರಿಯಕರನ ಮೇಲೆ ಇನ್ನೂ ಪ್ರೀತಿ ಇದ್ದರೆ ಖಂಡಿತವಾಗಿ ಇನ್ನೊಂದು ಸಂಬಂಧ

ಬೆಳೆಸುವುದು ಸರಿಯಲ್ಲ. ನೀವು ಮತ್ತೆ ಮತ್ತೆ ನಿಮ್ಮ ಮಾಜಿ ಪ್ರಿಯಕರನ ಬಗ್ಗೆ ಮಾತನಾಡುತ್ತಿದ್ದರೆ, ನೀವು ಅವನ ಬಗ್ಗೆ ಇನ್ನೂ ಭಾವನೆಗಳನ್ನು ಇಟ್ಟುಕೊಂಡಿದ್ದಿರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದು ನಿಮ್ಮ ಸ್ನೇಹಿತ ನಿಮ್ಮಿಂದ ನಿರೀಕ್ಷೆ ಮಾಡದೇ ಇರುವ ಇನ್ನೊಂದು ಪ್ರಮುಖ ವಿಷಯ!

ನಿಷ್ಠುರ ಮಾತು

ನಿಷ್ಠುರ ಮಾತು

ಕೊನೆಯದಾಗಿ ಹುಡುಗರು ಹುಡುಗಿಯರಲ್ಲಿ ನಿರೀಕ್ಷೆ ಮಾಡದೇ ಇರುವ ಸಂಗತಿ ನಿಷ್ಠುರವಾದ ಮಾತುಗಳು! ಹುಡುಗಿ ತನ್ನೊಡನೆ ಅಥವಾ ಬೇರೆಯವರೊಂದಿಗೆ ಕಠೋರವಾಗಿ ಮಾತನಾಡುವುದನ್ನು ಹುಡುಗರು ಖಂಡಿತವಾಗಿ ಇಷ್ಟಪಡುವುದಿಲ್ಲ. ಎಲ್ಲಾ ದಿನವೂ ಖುಷಿಯಲ್ಲಿಯೇ ಕಳೆಯಬಹುದು ಎಂದು ಹೇಳುತ್ತಿಲ್ಲ. ಆದರೆ ಯಾವುದೇ ಸಮಯದಲ್ಲಿ ಯಾರೊಂದಿಗೂ ನಿಷ್ಠುರವಾಗಿ ವರ್ತಿಸದೆ ಸಮಾಧಾನದಿಂದ ಮಾತನಾಡಬೇಕು. ಇದನ್ನೇ ನಿಮ್ಮ ಹುಡುಗ ನಿಮ್ಮಿಂದ ನಿರೀಕ್ಷಿಸುವುದು ಕೂಡ!

ಗಾಸಿಪ್ (ಅಂತೆ ಕಂತೆ ಮಾತುಗಳು)

ಗಾಸಿಪ್ (ಅಂತೆ ಕಂತೆ ಮಾತುಗಳು)

ನೀವು ಇತರ ಹುಡುಗಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನೀವು ನಿಮ್ಮ ಸ್ನೇಹಿತನ ದೃಷ್ಟಿಯಲ್ಲಿ ಚಿಕ್ಕವರಾಗುತ್ತೀರಿ! ನೀವು ಹೇಳುತ್ತಿರುವ ವಿಷಯ ನಿಜವೇ ಆಗಿದ್ದರೂ ಅದರ ಬಗ್ಗೆ ಅತಿಯಾಗಿ ಮಾತನಾಡುವುದು ನಿಮ್ಮ ಸ್ನೇಹಿತನಿಗೆ ನಿಮ್ಮ ಬಗೆಗಿನ ಗೌರವವನ್ನು ಕಡಿಮೆ ಮಾಡಬಹುದು. ಬೇರೆಯವರ ಬಗ್ಗೆ ಮಾತನಾಡುವುದರಿಂದಾಗಿ ನಿಮ್ಮ ಸ್ನೇಹಿತ ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವಂತಾಗದಿರಲಿ! ನೀವು ಅವನ ದೃಷ್ಟಿಯಲ್ಲಿ ಅದ್ಭುತ ಸಂಗಾತಿ ಎನಿಸಿಕೊಳ್ಳುವುದು ಮುಖ್ಯ!

ಅವನನ್ನು ಬದಲಾಯಿಸುವ ಪ್ರಯತ್ನ

ಅವನನ್ನು ಬದಲಾಯಿಸುವ ಪ್ರಯತ್ನ

ತಾವು ಇದ್ದಂತೆ ತಮ್ಮ ಪ್ರೇಯಸಿ ತಮ್ಮನ್ನು ಒಪ್ಪಿಕೊಳ್ಳಬೇಕು ಎಂದು ಹುಡುಗರು ಬಯಸುತ್ತಾರೆ. ನೀವು ಅವನ ಸ್ವಭಾವವನ್ನು ಬದಲಾಯಿಸಲು ಪ್ರಯತ್ನಿಸಿದರೆ ತಾನು ತನ್ನ ಪ್ರೇಯಸಿಗೆ ಸರಿಯಾದವನಲ್ಲ ಎಂದೇ ಭಾವಿಸುತ್ತಾರೆ. ಇದರಿಂದ ನೀವು ಅವರ ಸ್ವಾಭಿಮಾನವನ್ನು ನೋಯಿಸಿದಂತಾಗುತ್ತದೆ. ನಿಮಗೆ ಅವನು ಇಷ್ಟವಾಗದಿದ್ದರೆ ನಿಮಗೆ ಸರಿಹೊಂದುವಂತಹ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ಇಬ್ಬರ ನಡುವೆ ಉಂಟಾಗುವ ಮನಸ್ತಾಪಗಳೂ ತಪ್ಪುತ್ತವೆ.

X
Desktop Bottom Promotion