Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಹಿಳೆಯರಿಂದ ಪುರುಷರು ಮುಚ್ಚಿಡುವ 8 ಸಾಮಾನ್ಯ ರಹಸ್ಯಗಳು
ರಹಸ್ಯವನ್ನು ಮನಸ್ಸಿನಲ್ಲಿ ಹಾಗಯೇ ಕಾಪಾಡುವುದು ಕಷ್ಟದ ಕೆಲಸ. ನಿಮ್ಮ ಹದಯಕ್ಕೆ ಹತ್ತಿರವಾದವರಲ್ಲಿ ನೀವು ಕೆಲವೊಂದು ರಹಸ್ಯಗಳನ್ನು ಹೇಳಬೇಕಾಗುತ್ತದೆ. ನೀವು ವಿಷಯವನ್ನು ಮುಚ್ಚಿಟ್ಟಂತೆ ಅದು ನಿಮಗೆ ತಲೆನೋವಾಗುವ ಸಂಭವವೇ ಹೆಚ್ಚು.
ಆದ್ದರಿಂದ ರಹಸ್ಯ ಮಾತುಗಳನ್ನು ನಿಮ್ಮ ಮನದನ್ನೆಯಲ್ಲಿ ಹೇಳುವುದು ಸೂಕ್ತ. ಸಂಗಾತಿಗಳು ಕೆಲವೊಮ್ಮೆ ಇದೇ ತಪ್ಪುಗಳನ್ನು ಮಾಡಿ ಹಲವಾರು ಸಂದರ್ಭಗಳಲ್ಲಿ ಸಿಕ್ಕಿ ಬೀಳುತ್ತಾರೆ.
ಹೌದು ಸಂಗಾತಿಗಳು ರಹಸ್ಯವನ್ನು ಕಾಪಾಡದೇ ಮತ್ತೊಬ್ಬರಲ್ಲಿ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ ಮತ್ತು ನಿಮಗೆ ಸುರಕ್ಷತೆ ಇರುತ್ತದೆ. ಆದರೂ ಕೆಲವು ಪುರುಷರು ಮಹಿಳೆಯರಿಂದ ಕೆಲವು ವಿಷಯಗಳನ್ನು ಮುಚ್ಚಿಡುವುದೇ ಹೆಚ್ಚು. ಇದರಿಂದ ಹೊಡೆದಾಟ, ತಪ್ಪಾಗಿ ಅರ್ಥಮಾಡಿಕೊಳ್ಳುವಿಕೆ, ಸಂಬಂಧದ ಅವನತಿ ಹೀಗೆ ಕಷ್ಟಗಳ ಸರಮಾಲೆಯೇ ಬಂದೊದಗುತ್ತದೆ.

ಇಷ್ಟೆಲ್ಲಾ ಸವಾಲುಗಳನ್ನು ಒಳಗೊಂಡಿರುವ ರಹಸ್ಯಮಯ ಮಾತುಗಳು ಯಾವುವು ಮತ್ತು ಪುರುಷರು ಅದನ್ನು ಮಹಿಳೆಯರಿಂದ ಮುಚ್ಚಿಡುವುದು ಏಕೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಮುಂದೆ ಓದಿ.
ದಂಪತಿಗಳ ಸುಖ ಸಂಸಾರಕ್ಕೆ ಇಲ್ಲಿದೆ ಸುಲಭ ಸಲಹೆಗಳು!
ಹಾಸಿಗೆಯಲ್ಲಿ ಮೃಗೀಯವಾಗಿರುವುದು:
ಸೆಕ್ಸ್‌ನಲ್ಲೂ ಕೆಲವು ಪುರುಷರು ತಮ್ಮ ಮನದನ್ನೆ ಮೃಗೀಯವಾಗಿ ವರ್ತಿಸಬೇಕೆಂದು ಬಯಸುತ್ತಾರೆ. ಆದರೆ ಇದನ್ನು ಆಕೆಯಲ್ಲಿ ತೋರ್ಪಡಿಸಿದರೆ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬ ಭಯದಿಂದ ಈ ವಿಷಯವನ್ನು ಪುರುಷರು ಹಾಗೆಯೇ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ.
ಹಣ ಮೊದಲು:
ತಮ್ಮ ಮೊದಲ ಆದ್ಯತೆ ಹಣ ಎಂಬ ಅಂಶವನ್ನು ಪುರುಷರು ಮುಚ್ಚಿಡುತ್ತಾರೆ. ಇದರಿಂದ ಸಂಗಾತಿ ಏನು ಅಂದುಕೊಳ್ಳುತ್ತಾಳೋ ಎಂದೆನಿಸಿ ಇದನ್ನು ಮನಸ್ಸಿನಲ್ಲಿ ಗುಪ್ತವಾಗಿಡುತ್ತಾರೆ.
ಶಾಂತಿಯನ್ನು ಕಾಪಾಡಲು ಸುಳ್ಳು:
ಹೌದು ತಮ್ಮ ಸಹೋದ್ಯೊಗಿ ಅಥವಾ ಸ್ನೇಹಿತರಿಂದ ಬಂದತಹ ಪೋಲಿ ಸಂದೇಶಗಳನ್ನು ಮುಚ್ಚಿಡಲು ಪುರುಷರು ಸಾರಾ ಸಗಟಾಗಿ ಸುಳ್ಳನ್ನು ಹೇಳುತ್ತಾರೆ. ಈ ಸುಳ್ಳು ಮನೆಯ ಶಾಂತಿಯನ್ನು ಕಾಪಾಡಲು ಅನುಸರಿಸುವ ವಿಧಾನವಾಗಿದೆ.
ಅಭದ್ರತೆ:
ಕೆಲವು ಪುರುಷರು ತಮ್ಮ ಭಯವನ್ನು ಮಹಿಳೆಯರಿಂದ ಮುಚ್ಚಿಡುತ್ತಾರೆ. ಇದರಿಂದ ಸಂಗಾತಿ ತನ್ನನ್ನು ಹೀಯಾಳಿಸುತ್ತಾಳೆ ಎಂಬ ಹೆದರಿಕೆ ಅವರಲ್ಲಿ ಕಾಡುತ್ತದೆ. ಆಗ ಅವರಿಗೆ ಬೇಕಾಗಿರುವುದು ಪ್ರೀತಿಯಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ.
ಕಣ್ಣೀರನ್ನು ಮರೆಮಾಚುವುದು:
ಕೆಲವು ಪುರುಷರು ತಮ್ಮ ಕಣ್ಣೀರನ್ನು ಮಹಿಳೆಯರಿಂದ ಮರೆಮಾಚುತ್ತಾರೆ. ಮಹಿಳೆಯರಂತೆ ಅವರೂ ಭಾವನೆಗಳನ್ನು ಹೊಂದಿರುತ್ತಾರೆ ಎಂಬುದು ಗಮನದಲ್ಲಿರಬೇಕು.
ಹೆಂಗಸು ಕೇಳುವ 6 ಚಾಲಾಕಿನ ಪ್ರಶ್ನೆಗಳು
ತಾನು ವಿಶೇಷ ಎಂಬ ಭಾವನೆ:
ಮಹಿಳೆ ಮಾತ್ರವೇ ಈ ತರದ ಭಾವನೆಯನ್ನು ಹೊಂದಿರುವುದಿಲ್ಲ. ಪುರುಷರೂ ಕೂಡ ತಾವು ವಿಶಿಷ್ಟರು ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ನಿಮ್ಮ ಜೀವನದಲ್ಲಿ ಅವರು ಎಷ್ಟು ಮಹತ್ವತೆಯನ್ನು ಹೊಂದಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ.
ನಿಮಗಾಗಿ ಮಾತ್ರವಲ್ಲ:
ಪುರುಷರೂ ಕೆಲವೊಂದು ಕೆಲಸಗಳನ್ನು ತಮ್ಮ ಮನದನ್ನೆಗಾಗಿ ಮಾಡುತ್ತಾರೆ. ಇದರ್ಥ ಅವರೂ ತಮಗೆ ಹೀಗೆ ಮಾಡಲಿ ಎಂದಲ್ಲ. ಅವರ ಕೆಲಸಗಳನ್ನು ನೀವು ಮಾಡುವಾಗ ಅವರಿಗೆ ಸೂಚನೆಗಳನ್ನು ನೀಡುವುದನ್ನು ಅವರು ಸಹಿಸರು. ಇದನ್ನು ಅವರು ಮುಚ್ಚಿಡುತ್ತಾರೆ.
ಹೊಟ್ಟೆ ಕಿಚ್ಚನ್ನು ತೋರ್ಪಡಿಸದಿರುವುದು:
ತಮ್ಮ ಹೊಟ್ಟೆಕಿಚ್ಚನ್ನು ತೋರ್ಪಡಿಸದೇ ಮಹಿಳೆಯರಿಂದ ಮುಚ್ಚಿಡುವುದನ್ನು ಪುರುಷರು ಮಾಡುತ್ತಾರೆ. ನೀವು ಬೇರೆ ಪುರುಷನ ಬಗೆಗೆ ಆಸಕ್ತಿಯಿಂದ ಮಾತನಾಡುವಾಗ ಈ ಹೊಟ್ಟೆಕಿಚ್ಚನ್ನು ಅವರು ತೋರ್ಪಡಿಸುವುದಿಲ್ಲ.



Click it and Unblock the Notifications











