ನಿಮ್ಮ ಬಾಳ ಸಂಗಾತಿಯ ಆಯ್ಕೆಗೆ 7 ಸರಳ ಸಲಹೆಗಳು

By Super

ನೆಮ್ಮದಿಯಿಂದ ವೈವಾಹಿಕ ಜೀವನವನ್ನು ನಡೆಸಲು ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವುದು ಅಗತ್ಯ. ಹಾಗಾದರೆ ನೀವು ಹೇಗೆ ನಿಮಗೆ ಅತ್ಯಂತ ಸೂಕ್ತವಾದ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವುದು ಎಂಬುದನ್ನು ಮುಂದೆ ಓದಿ. ಹೀಗೆ ಆಯ್ಕೆಮಾಡಿಕೊಳ್ಳುವಾಗ ಅನೇಕ ಅಗತ್ಯವಿರುವ ಅಂಶಗಳನ್ನು ನೀವು ಪರಿಗಣಿಸಬೇಕು. ಹಾಗೆ ಮಾಡುವ ಮುನ್ನ ನೀವು ಅತ್ಯಂತ ನಿರ್ಣಾಯಕ ದೃಷ್ಟಿಕೋನಗಳನ್ನು ಪರಿಶೀಲಿಸುವುದು ಒಂದು ಪ್ರಮುಖ ಅಂಶವಾಗಿದೆ.

ಸುಲಭವಾಗಿ ನೀವು ಸಂಪರ್ಕಮಾಡಲು ಸಾಧ್ಯವಾಗುವವರನ್ನು ಹುಡುಕಿ
ನೀವು ಸುಲಭವಾಗಿ ಯಾರಾದರೂ ಸಂಭಾಷಣೆಯಲ್ಲಿ ಆಸಕ್ತಿಯುಳ್ಳವರನ್ನು ಆಯ್ಕೆಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗೆ ಮಾಡುವುದರಿಂದ ನೀವು ಜೊತೆಯಲ್ಲಿ ಮಾತನಾಡುತ್ತಾ ನಿಮ್ಮ ಕೆಲಸಗಳನ್ನು ಯಾವ ಬೇಸರವೂ ಇಲ್ಲದೆ ಆನಂದದಿಂದ ಮಾಡಬಹುದು.

7 ways to choose the right life partner

ಸಂಭಾವ್ಯ ಸಮಾನಾರ್ಥಕ ಸಂಗಾತಿಯನ್ನು ಪರಿಗಣಿಸಿ
ನಿಮ್ಮ ಸಮಾನ ಆಸಕ್ತಿಗಳನ್ನು ಹಂಚಿಕೊಳ್ಳುವ ಸಂಗಾತಿಯನ್ನು ಆಯ್ಕೆಮಾಡಿದರೆ ನಿಮ್ಮ ಕೆಲಸಕಾರ್ಯಗಳು ನಿಮಗನಿಸಿದಂತೆಯೇ ಆಗುತ್ತವೆ. ನಿಮ್ಮ ಎಲ್ಲಾ ಆಸಕ್ತಿಗಳು ನಿಜವಾಗಿಯೂ ಅವರಲ್ಲಿರಬೇಕೆಂಬುದೇನಿಲ್ಲ ಆದಾಗ್ಯೂ ಕೆಲವಂತೂ ಇದ್ದರೆ ಒಳ್ಳೆಯದು. ಚಿಕಿತ್ಸಕ ಮನಶಾಸ್ತ್ರಜ್ಞ ಮತ್ತು ಸಂಬಂಧಗಳ ನಿಪುಣ ಸೀಮಾ ಹಿಂಗೋರಾರಿ ಹೇಳುವುದೇನೆಂದರೆ, "ನೀವು ನಿಮ್ಮ ಜೀವನವನ್ನು ಒಬ್ಬರ ಜೊತೆ ಕಳೆಯಲು ನಿರ್ಧರಿಸಿದಮೇಲೆ ನೀವಿಬ್ಬರೂ ಸೇರಿ ಒಟ್ಟಿಗೆ ಸಂತೋಷದಿಂದ ಮಾಡುವ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು. ಉದಾಹರಣೆಗೆ, ನೀವು ಸಿನೆಮಾಪ್ರೇಮಿಯಾಗಿದ್ದರೆ, ನಿಮ್ಮ ಹಾಗೆಯೇ ಸಿನೆಮಾಗಳನ್ನು ನೋಡಲು ಇಷ್ಟಪಡುವವರನ್ನು ಆರಿಸಿಕೊಳ್ಳುವುದು ನಿಮ್ಮ ಆದರ್ಶಕ್ಕೆ ಸರಿಹೋಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಜೀವನವು ಆಸಕ್ತಿಯಿಂದ ಕೂಡಿರುತ್ತದೆ."

ನೀವು ಜೀವನವನ್ನು ಸ್ವಲ್ಪ ಆರಾಮವಾಗಿ ತೆಗೆದುಕೊಳ್ಳವರಾಗಿದ್ದರೆ ಮತ್ತು ನಿಮ್ಮ ಸಂಗಾತಿಯು ಸಕ್ರಿಯ ಅಧಿಕ ಕ್ರಿಯಾಶೀಲತೆಯುಳ್ಳವರಾಗಿದ್ದರೆ ನಿಮ್ಮ ವೈವಾಹಿಕ ಜೀವನಕ್ಕೆ ತೊಂದರೆಯಾಗಬಹುದು. ನೀವಿಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಯೋಚಿಸಿ ಮುಂದುವರೆದರೆ ಒಳ್ಳೆಯದು. ಇಂತಹ 13 ಬಗೆಯ ಪ್ರೇಯಸಿಯರಿಂದ ದೂರವುಳಿದರೆ ಒಳಿತು!

ಒಂದು ಜೀವನದ ಅಂತಸ್ತನ್ನು ಇಟ್ಟುಕೊಳ್ಳುವುದು ಒಳ್ಳೆಯದು
ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ನಿಮ್ಮ ಮತ್ತು ನಿಮ್ಮ ಸಂಸಾರದ ಜೀವನ ಮಟ್ಟವನ್ನು ಪರಿಗಣಿಸುವ ಅಗತ್ಯವಿದೆ. ನಿಮ್ಮ ಪಂಗಡದಲ್ಲಿ ಅಥವ ಸಮಾಜದಲ್ಲಿ ಇರದ ಬೇರೆಯವರನ್ನು ಆಯ್ಕೆಮಾಡಿದರೂ ಸಹ ಅಂತಹ ವ್ಯಕ್ತಿಯು ನೀವು ಬಯಸುವ ಹೊಂದಾಣಿಕೆಯಿಂದ ದೂರವಿರಬಾರದೆಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮಲ್ಲಿ ಪರಸ್ಪರ ಗೌರವವಿರಬೇಕು
ನೀವು ನಿಮಗೆ ಗೌರವಕೊಡದ ಅಥವ ನೀವು ಬಯಸಿದ ಜೀವನದ ಗುರಿಗಳಿಗೆ ಗಮನಕೊಡದ ಸಂಗಾತಿಯೊಡನೆ ನಿಸ್ಸಂಶಯವಾಗಿ ಜೀವನ ನಡೆಸುವುದು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಜೀವನದ ಉಳಿದ ಭಾಗವನ್ನು ನಿಮ್ಮ ಜೀವನ ಗುರಿಗಳಿಗೆ ಸ್ಪಂದಿಸುವ ಸಂಗಾತಿಯನ್ನು ಆಯ್ಕೆಮಾಡುವುದು ಒಳ್ಳೆಯದು.

ನಿಮ್ಮ ಸಂಗಾತಿಯಾಗುವವರು ವಿಶ್ವಾಸಾರ್ಹರಾಗಿದ್ದಾರೆಯೇ?
ಪ್ರಸ್ತುತ ಕಾಲದಲ್ಲಿ ನೀವು ನಂಬಿಕೆಯಿಟ್ಟುಕೊಳ್ಳುವವರನ್ನು ಆಯ್ಕೆಮಾಡುವುದು ಅತ್ಯಂತ ಮುಖ್ಯ. ನೀವಿಬ್ಬರೂ ಪರಸ್ಪರ ನಂಬಿಕೆಯಿಟ್ಟುಕೊಂಡಿಲ್ಲವಾದರೆ ಅಥವ ವಿಶ್ವಾಸವಿಲ್ಲದಿದ್ದರೆ ಸುಖಮಯ ಜೀವನ ನಡೆಸುವುದು ಖಂಡಿತವಾಗಿ ಸಾಧ್ಯವಿಲ್ಲ.

ಸಂಗಾತಿಯೊಡನೆ ಕಾಲ ಕಳೆಯಿರಿ
ಇಬ್ಬರೂ ಸಮಾನ ಆಸಕ್ತಿಗಳನ್ನು ಹೊಂದಿರುವುದು ಮುಖ್ಯವಾಗಿರುವ ಹಾಗೆ, ನೀವು ಸಾಕಷ್ಟು ಸಮಯವನ್ನು ನಿಮ್ಮ ಜೊತೆ ಸಮಯ ಕಳೆಯುವುದಕ್ಕೆ ಯಾರು ಇಷ್ಟಪಡುತ್ತಾರೋ ಅಂತಹವರ ಜೊತೆ ಜೀವನ ನಡೆಸಲು ಕೂಡ ಬಹಳ ಅವಶ್ಯ.

X
Desktop Bottom Promotion