ಗಂಡಸರನ್ನು ಅಷ್ಟು ಸುಲಭವಾಗಿ ನಂಬದಿರಲು 7 ಕಾರಣಗಳು

By Super

ನೈಜವಾದ ಪ್ರೀತಿಯನ್ನು ಯಾರು ತಾನೇ ಅಪೇಕ್ಷಿಸುವುದಿಲ್ಲ, ಅದರಲ್ಲೂ ವಿಶೇಷವಾಗಿ ಯೌವನಾವಸ್ಥೆಯಲ್ಲಿರುವವರು ಈ ಅಂಶವನ್ನು ಉಪೇಕ್ಷಿಸುವ ಮಾತೇ ಇಲ್ಲ ಬಿಡಿ. ಸ್ತ್ರೀ ಮತ್ತು ಪುರುಷರಿಬ್ಬರಿಗು ಪ್ರೀತಿಯ ಕುರಿತಾಗಿ ತಮ್ಮದೇ ಆದ ಮನೋಭಾವಗಳು ಇರುತ್ತವೆ. ಎಲ್ಲರಿಗು ತಿಳಿದಿರುವಂತೆ ಹುಡುಗರು ತಮ್ಮ ಕಣ್ಣಿನಿಂದ ಪ್ರೀತಿಸಲು ಆರಂಭಿಸಿದರೆ, ಹುಡುಗಿಯರು ತಮ್ಮ ಕಿವಿಗಳಿಂದ ಪ್ರೀತಿಸಲು ಆರಂಭಿಸುತ್ತಾರೆ.

ಇದರರ್ಥ ನಾವು ನಮ್ಮ ಹುಡುಗನಿಂದ ಕೇಳುವ ಪ್ರತಿಯೊಂದು ವಿಷಯವು ನಮಗೆ ಪ್ರಮುಖವಾಗಿರುತ್ತದೆ ಮತ್ತು ನಾವುಗಳು ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಅತ್ಯಂತ ನಂಬಿಕಸ್ಥಳಾಗಿರುವ ಸ್ತ್ರೀಯು ತನ್ನ ಪ್ರೀತಿಗೆ ಯೋಗ್ಯನಲ್ಲದವನಿಗೆ ತನ್ನ ಮನಸ್ಸನ್ನು ಒಪ್ಪಿಸಿಬಿಡುವ ಸಂದರ್ಭಗಳು ಅನೇಕ.

ಅದಕ್ಕಾಗಿ ಹೆಂಗಸರು ತಮ್ಮ ಸಂಬಂಧದ ವಿಚಾರದಲ್ಲಿ ಆದಷ್ಟು ಮುತುವರ್ಜಿಯಿಂದ, ಯೋಚಿಸಿ ಮುಂದಡಿ ಇಡಬೇಕೆಂಬುದು ನನ್ನ ಸಲಹೆ. ನಿಮ್ಮ ಭಾವನೆ ಮತ್ತು ಅನಿಸಿಕೆಗಳು ನಿಮ್ಮ ಮನಸ್ಸಿನ ಮೇಲೆ ಮೇಲುಗೈ ಸಾಧಿಸಲು ಬಿಡಬೇಡಿ ಏಕೆಂದರೆ ಇದರಿಂದ ನಿಮಗೆ ಕೊನೆಗೆ ಆಶಾಭಂಗವಾಗಿ ನಿರಾಸೆಯಾಗುವುದು ಖಚಿತ. ಹಿಂದೆ ಮುಂದೆ ಆಲೋಚಿಸದೆ ಮನಸ್ಸನ್ನು ಇನ್ನೊಬ್ಬರಿಗೆ ನೀಡುವ ಮೊದಲು ಈ ಕೆಳಗೆ ನೀಡಿರುವ ಕಾರಣಗಳನ್ನು ಒಮ್ಮೆ ಓದಿ ಆನಂತರ ನೀವೇ ತೀರ್ಮಾನಿಸಿ. ನಿಮ್ಮ ಜೀವನದಲ್ಲಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯಿರಿ.

ನೀವು ನೊಂದುಕೊಳ್ಳುವಿರಿ:

ನೀವು ನೊಂದುಕೊಳ್ಳುವಿರಿ:

ದುರದೃಷ್ಟವಶಾತ್ ನಾವು ಸಾಮಾನ್ಯವಾಗಿ ನೋಡಲು ಸುಂದರವಾಗಿರುವ ಗಂಡಸಿಗೆ ಸೋತು ಹೋಗಿರುತ್ತೇವೆ. ಅದು ಕೇವಲ ಆತ ನೋಡಲು ಸುಂದರವಾಗಿದ್ದಾನೆ ಎಂದಷ್ಟೆ. ಇದರ ಪರಿಣಾಮವಾಗಿ ಮುಂದೆ ನಮ್ಮ ಮನಸ್ಸು ಭಗ್ನಗೊಂಡು ಕಡೆಗೆ ನಾವು ಒಂಟಿಯಾಗುತ್ತೇವೆ. ಒಬ್ಬ ಹುಡುಗನ ಜೊತೆಗೆ ಪ್ರೀತಿಯಲ್ಲಿ ಮುಳುಗುವ ಮೊದಲು ಆತನು ಸಹ ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದಾನೆಯೆ ಎಂದು ಒಮ್ಮೆ ಪರೀಕ್ಷಿಸಿ, ಇಲ್ಲವಾದಲ್ಲಿ ಆ ಸಂಬಂಧವನ್ನು ಮೊದಲು ಕಡಿದುಕೊಳ್ಳಿ.

ಏಕೆಂದರೆ ಆ ಸಂಬಂಧ ನಿಮಗೆ ಆನಂದವನ್ನು ಎಂದೆಂದಿಗು ತರಲಾರದು. ಬಹುತೇಕ ಮಹಿಳೆಯರು ಮಾಡುವ ತಪ್ಪು ಇದೆ. ಅವರ ಪ್ರಕಾರ ಒಳ್ಳೆಯ ಸಮಯ ಬಂದಾಗ ಪರಿಸ್ಥಿತಿಯು ಆತನನ್ನು ಬದಲಾಯಿಸುತ್ತದೆ ಮತ್ತು ಆತನು ನನ್ನನ್ನು ಪ್ರೀತಿಸಲು ಆರಂಭಿಸುತ್ತಾನೆ ಎಂದು ತಮ್ಮ ಪ್ರೀತಿಯನ್ನು ಆತನೆಡೆಗೆ ಮುಂದುವರಿಸುತ್ತಾರೆ. ಆದರೆ ನನ್ನ ಪ್ರಕಾರ ಇದು ಸರಿಯಾದ ನಿರ್ಧಾರವಲ್ಲ. ಹೆಂಗಸು ಕೇವಲ ಒಂಟಿತನವನ್ನು ನೀಗಿಸಿಕೊಳ್ಳಲು ಒಂದು ಸಂಬಂಧವನ್ನು ಹುಟ್ಟುಹಾಕಲು ಹಾತೊರೆಯಬಾರದು. ಅದರ ಬದಲಿಗೆ ಒಬ್ಬನನ್ನು ನೀವು ಭೇಟಿಯಾದಾಗ, ಆತನು ನಿಮಗೆ ಹಿಡಿಸಿದಲ್ಲಿ ಮೊದಲು ಆತನಲ್ಲಿ ನೀವು ಬಯಸುವ ಎಲ್ಲಾ ಗುಣಗಳು ಇವೆಯೇ ಎಂದು ಒಮ್ಮೆ ಪರಿಕ್ಷೀಸಿ. ನಿಮ್ಮ ಸಂಗಾತಿಯಾಗುವ ಎಲ್ಲಾ ಯೋಗ್ಯತೆಗಳು ಆತನಲ್ಲಿ ಇದೆಯೆಂದು ಖಾತ್ರಿಯಾದ ಮೇಲೆ ಮುಂದುವರಿಯಿರಿ.

ಪುರುಷರು ಕಾಮಾಸಕ್ತಿಯುಳ್ಳವರು:

ಪುರುಷರು ಕಾಮಾಸಕ್ತಿಯುಳ್ಳವರು:

ಪುರುಷರಿಗೆ ಕಾಮಾಸಕ್ತಿ ಅಧಿಕ ಇದು ಎಲ್ಲರಿಗು ತಿಳಿದಿರುವ ವಿಚಾರ. ಇದರ ಕುರಿತಾಗಿ ನಾವು ಏನು ಮಾಡಲು ಸಾಧ್ಯವಾಗುವುದಿಲ್ಲ. ಈ ಒಂದು ಕಾರಣದಿಂದ ನಾವು ಗಂಡಸರನ್ನು ಬೇಗ ನಂಬಲು ಸಾಧ್ಯವಾಗುವುದಿಲ್ಲ. ಹಾಗೆಂದು ನಾನು ಎಲ್ಲಾ ಗಂಡಸರು ಹೀಗೆ ಎಂದು ಹೇಳುತ್ತಿಲ್ಲ. ಆದರೆ ಸ್ವಾಭಾವಿಕವಾಗಿ ಎಲ್ಲರಿಗು ಇರುವ ಅನಿಸಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆಯಷ್ಟೆ. ಬೇಕಾದರೆ ನೀವೆ ಗಮನಿಸಬಹುದು, ಗಂಡಸರು ಮೊದಲು ಹೆಂಗಸಿನ ಮುಖ ಮತ್ತು ದೇಹವನ್ನು ನೋಡಿ ನಂತರ ಆಕೆಯ ವ್ಯಕ್ತಿತ್ವಕ್ಕೆ ಮರುಳಾಗುತ್ತಾನೆ. ನೀವು ಒಂದು ಸದೃಢವಾದ ದೀರ್ಘಕಾಲದ ಸಂಬಂಧವನ್ನು ಹೊಂದಬೇಕೆಂದು ಇಚ್ಛಿಸಿದಲ್ಲಿ ದೈಹಿಕ ಆಕರ್ಷಣೆಯಷ್ಟೆ ಸಾಕಾಗುವುದಿಲ್ಲ. ಅದಕ್ಕಾಗಿ ನೀವು ಆತನಿಗೆ ನಿಮ್ಮ ಮನಸ್ಸನ್ನು ನೀಡುವ ಮೊದಲು ಸ್ವಲ್ಪ ಸಮಯ ಕಾಯುವುದು ಒಳಿತು.

ಮೊದಲು ನಿಮಗೆ ಏನು ಬೇಕು?ಅದನ್ನು ನಿರ್ಧರಿಸಿಕೊಳ್ಳಿ:

ಮೊದಲು ನಿಮಗೆ ಏನು ಬೇಕು?ಅದನ್ನು ನಿರ್ಧರಿಸಿಕೊಳ್ಳಿ:

ಒಬ್ಬ ಹುಡುಗನನ್ನು ನಿಮ್ಮ ಬಾಳ ಸಂಗಾತಿಯಾಗಿ ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವಾಗ ಮೊದಲು ಮಾಡಬೇಕಾಗಿರುವ ಕೆಲಸ, ಆತನಲ್ಲಿ ನೀವು ಇಚ್ಛಿಸುವ ಯಾವ ಯಾವ ಗುಣಗಳು ಇರಬೇಕು ಎಂಬುದು. ಇಂತಹ ಒಂದು ಕನಸು ನಿಮ್ಮಲ್ಲಿ ಇದ್ದಾಗ ವಾಸ್ತವದಲ್ಲಿ ಅದನ್ನು ನನಸು ಮಾಡಿಕೊಳ್ಳಲು ಆತನನ್ನು ಪರೀಕ್ಷೆ ಮಾಡುತ್ತೀರಿ. ಆದರೆ ಬಹುತೇಕ ಹುಡುಗಿಯರು ತಮ್ಮ ಹುಡುಗನ ಬಗ್ಗೆ ಇರುವ ಕಲ್ಪನೆಗಳಲ್ಲಿ ಕೆಲವು ವಿಚಾರಗಳಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ರಾಜಿ ಮಾಡಿಕೊಂಡು ಬಿಡುತ್ತಾರೆ.

ಇಂತಹ ಅನಿಶ್ಚಿತತೆಯೆ ನಿಮ್ಮನ್ನು ಯೋಗ್ಯವಲ್ಲದ ವ್ಯಕ್ತಿಯನ್ನು ಆರಿಸಿಕೊಳ್ಳುವಂತೆ ಮಾಡುತ್ತದೆ. ನಿಮ್ಮ ಮನಸ್ಸನ್ನು ಮತ್ತು ಹೃದಯವನ್ನು ಒಪ್ಪಿಸಲು ಈ ವಿಚಾರವು ಪ್ರಮುಖ ಕಾರಣವಾಗಿರುತ್ತದೆ. ಅದಕ್ಕಾಗಿ ನೀವು ಮೊದಲು ನಿಮ್ಮ ಮನಸ್ಸಿನಲ್ಲಿರುವ ಆದರ್ಶಗಳನ್ನು ಒಟ್ಟಿಗೆ ಸೇರಿಸಿ ಒಬ್ಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಿ. ಅದೃಷ್ಟವಶಾತ್ ನೀವು ಅಂತಹ ವ್ಯಕ್ತಿಯನ್ನು ಭೇಟಿಯಾದಲ್ಲಿ ಖಂಡಿತವಾಗಿ ಮುಂದೆ ಒಂದು ದಿನ ನಿಮ್ಮ ಬಾಳಿನಲ್ಲಿ ನೀವು ಇಚ್ಛಿಸಿದ ಕಾಲಕ್ಕೆ ಆ ಭೇಟಿ ಮುನ್ನುಡಿ ಬರೆಯುತ್ತದೆ.

ಬಹುಶಃ ನೀವು ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದೀರಿ:

ಬಹುಶಃ ನೀವು ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದೀರಿ:

ಬಹುಶಃ ನೀವು ಈಗಷ್ಟೆ ನಿಮ್ಮ ಹಿಂದಿನ ಸಂಗಾತಿಯಿಂದ ಬೇರಾಗಿರಬಹುದು ಅಥವಾ ನಿಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿರಬಹುದು. ನಿಮ್ಮ ಹೃದಯದಲ್ಲಿ ಉಂಟಾಗಿರುವ ಶೂನ್ಯತೆ ಮತ್ತು ನಿಮ್ಮ ಮನಸ್ಸನ್ನು ಆವರಿಸಿರುವ ವಿಷಾದ ಹಾಗು ಖಿನ್ನತೆಯಿಂದ ಹೊರಬರಲು ಒಂದು ಪ್ರೀತಿಯನ್ನು ನೀವು ಹುಡುಕುತ್ತಿರಬಹುದು. ಒಬ್ಬ ಗಂಡಸಿನಿಂದ ನೀವು ಇಚ್ಛಿಸಿದ ಪ್ರೀತಿ ಮತ್ತು ಅನುಕಂಪವನ್ನು ಪಡೆಯಲಿಲ್ಲವೆಂದಲ್ಲಿ, ಅದು ಆತ ನಿಮಗೆ ತಕ್ಕನಾದವನಲ್ಲ ಎಂಬುದರ ಸೂಚನೆಯಾಗಿರುತ್ತದೆ.

ನೀವು ಆತನ ಕುರಿತಾಗಿ ಹೊಂದಿರುವ ಭಾವನೆಗಳೆಲ್ಲವು ಕೇವಲ ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳುತ್ತಿರುವ ಪ್ರಕ್ರಿಯೆಯೆಂದು ಭಾವಿಸಿ. ಯಾವುದೇ ಕಾರಣಕ್ಕು ಆ ಹುಡುಗನನ್ನು ಪ್ರೀತಿಸಲು ಹೋಗಬೇಡಿ. ಮತ್ತೆ ನೀವು ಆತನೊಂದಿಗೆ ಏಕೆ ಇದ್ದೀರಿ? ಎಂಬ ಪ್ರಶ್ನೆ ಮೂಡಿದರೆ ಉತ್ತರ ತುಂಬಾ ಸರಳ ಆತನಿಂದ ನೀವು ಸ್ವಲ್ಪ ಬೆಚ್ಚನೆಯ ಅನುಭೂತಿ ಮತ್ತು ಆರೈಕೆಯನ್ನು ಬಯಸುತ್ತಿದ್ದೀರಿ ಎಂದರ್ಥವಷ್ಟೆ.

ಮೊದಲು ಬುನಾದಿಯನ್ನು ಭದ್ರಪಡಿಸಿಕೊಳ್ಳಿ:

ಮೊದಲು ಬುನಾದಿಯನ್ನು ಭದ್ರಪಡಿಸಿಕೊಳ್ಳಿ:

ನಿಮ್ಮ ಸಂಬಂಧದಲ್ಲಿ ಸಂತೋಷ ಮತ್ತು ಯಶಸ್ಸನ್ನು ತರುವುದರಲ್ಲಿ ಭದ್ರ ಬುನಾದಿಯು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಒಂದು ಮನೆಯನ್ನು ಕಟ್ಟುವಲ್ಲಿಯೆ ಬುನಾದಿಯು ಮಹತ್ವದ ಪಾತ್ರ ನಿರ್ವಹಿಸುವಾಗ, ಇನ್ನು ಜೀವನದ ಮಹತ್ವದ ಪಾತ್ರವನ್ನು ನಿರ್ವಹಿಸುವ ಸಂಬಂಧದ ವಿಷಯದಲ್ಲಿ ಇನ್ನು ಎಷ್ಟರ ಮಟ್ಟಿಗೆ ಪ್ರಭಾವ ಬೀರಬಹುದು ಎಂದು ನೀವೇ ಊಹಿಸಿ.

ಎಲ್ಲಾ ಪ್ರೇಮಿಗಳು ತಮ್ಮ ಸಂಬಂಧವನು ಖಚಿತಪಡಿಸಿಕೊಳ್ಳುವ ಮೊದಲು ಹಲವಾರು ಹಂತಗಳಲ್ಲಿ ಅವರ ಪ್ರೇಮವನ್ನು ಖಚಿತಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಂದ ನಿಮ್ಮ ಸಂಗಾತಿಯನ್ನು ಪರೀಕ್ಷಿಸಲು ಆರಂಭಿಸಿ, ಆನಂತರ ಅವರ ಮೇಲೆ ವಿಶ್ವಾಸವಿಡಿ. ಮುಂದೆ ನೀವೆ ಆತನಲ್ಲಿ ನಿಮಗೆ ಹೊಂದಾಣಿಕೆಯಾಗುವ ಅಸಂಖ್ಯಾತ ಗುಣಗಳನ್ನು ಕಾಣಬಹುದು. ಈ ಎಲ್ಲಾ ಹಂತಗಳನ್ನು ನೀವು ಯಶಸ್ವಿಯಾಗಿ ಪೂರೈಸಿದ ಮೇಲೆ ನೀವು ಆತನಿಗೆ ನಿಮ್ಮ ಮನಸ್ಸನ್ನು ನಿಸ್ಸಂಶಯವಾಗಿ ಒಪ್ಪಿಸಬಹುದು. ಆತನನ್ನು ನಿಮ್ಮ ಬಾಳ ಸಂಗಾತಿಯನ್ನಾಗಿ ಪಡೆಯಬಹುದು.

ನೀವು ನಿಮಗೆ ಯೋಗ್ಯವಾದವರನ್ನು ಆರಿಸಿಕೊಳ್ಳಲು ಕಾಲಾವಕಾಶವಿದೆ:

ನೀವು ನಿಮಗೆ ಯೋಗ್ಯವಾದವರನ್ನು ಆರಿಸಿಕೊಳ್ಳಲು ಕಾಲಾವಕಾಶವಿದೆ:

ಖಂಡಿತವಾಗಿ ನೀವು ನಿಮಗೆ ಯೋಗ್ಯವಾದವರನ್ನೆ ಆರಿಸಿಕೊಳ್ಳುವ ಸಮಯಾವಕಾಶ ನಿಮ್ಮ ಬಳಿ ಇದೆ ಎಂಬುದನ್ನು ಮರೆಯಬೇಡಿ. ನೀವು ಗಂಡಸಿನಲ್ಲಿ ಮೆಚ್ಚುವಂತಹ ಗುಣಗಳನ್ನು ಯಾವತ್ತಿಗು ಮರೆಯಬೇಡಿ. ಅಂತಹ ಗುಣಗಳನ್ನು ತನ್ನಲ್ಲಿ ಹೊಂದಿರುವ ವ್ಯಕ್ತಿಯನ್ನು ಹುಡುಕಿ. ಒಂದು ವೇಳೆ ಅಂತಹ ಗುಣಗಳಿಲ್ಲದ ವ್ಯಕ್ತಿಯೊಂದಿಗೆ ನಿಮ್ಮ ಒಡನಾಟವಿದ್ದರೆ ಅಥವಾ ನೀವು ನಿರೀಕ್ಷಿಸಿದ ವ್ಯಕ್ತಿಯಲ್ಲಿನ ಗುಣಗಳು ನಿಮಗೆ ತೃಪ್ತಿಯನ್ನುಂಟು ಮಾಡದಿದ್ದರೆ ಸುಮ್ಮನೆ ಕಾಲ ವ್ಯರ್ಥಮಾಡಲು ಹೋಗಬೇಡಿ.

ಒಂದು ವೇಳೆ ನಿಮಗೆ ಎಂತಹ ಸಂಗಾತಿ ಬೇಕೆಂದು ಇನ್ನೂ ನಿಮಗೆ ಗೊಂದಲಗಳಿದ್ದಲ್ಲಿ, ನೀವು ಕೇವಲ ಪ್ರೀತಿಯ ಸಲುವಾಗಿ ನಿಮ್ಮನ್ನು ಗಮನಿಸಿಕೊಳ್ಳುವಂತಹ ವ್ಯಕ್ತಿಗೆ ಮನಸ್ಸನ್ನು ನೀಡುತ್ತೀರಿ. ನೀವು ಯಾವುದೋ ಒಬ್ಬ ಸುಂದರವಾದ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿರಿ ಎಂದಿಟ್ಟುಕೊಳ್ಳಿ. ಅದರರ್ಥ ಅವನ ಅಂದ ಚಂದ ನೋಡಿ ನೀವು ಅವನನ್ನು ಇಷ್ಟಪಟ್ಟಿರಿ ಎಂದಾಗುವುದಿಲ್ಲ. ಏಕೆಂದರೆ ಅವನ ಸುಂದರವಾದ ಮೊಗಕ್ಕಿಂತ ಆತನ ವ್ಯಕ್ತಿತ್ವವು ಬಹಳಷ್ಟು ಮುಖ್ಯವಾಗುತ್ತದೆ. ಏನಾದರು ಸರಿ ನೀವು ಒಬ್ಬ ತಾರುಣ್ಯದಿಂದ ಕೂಡಿದ ಮುದ್ದಾದ ಹುಡುಗಿಯಾಗಿದ್ದು, ಭವಿಷ್ಯದಲ್ಲಿ ಇನ್ನು ಬಹಳಷ್ಟು ಜನರನ್ನು ಸಂಧಿಸುವ ಅವಕಾಶ ನಿಮಗಿನ್ನು ಇದೆ. ಅತಿ ಶೀಘ್ರದಲ್ಲಿ ಅಥವಾ ಇನ್ನು ಸ್ವಲ್ಪ ದಿನದ ನಂತರ ನೀವು ನಿಮ್ಮ ಕನಸಿನ ವ್ಯಕ್ತಿಯನ್ನು ಭೇಟಿಯಾಗಲಿದ್ದೀರಿ. ಅಲ್ಲಿಯವರೆಗು ನಿಮ್ಮ ಕನಸನ್ನು ಅನುಸರಿಸುತ್ತಾ ಇರಿ.

ಆತನು ನಿಮ್ಮಿಂದ ಕೆಲವೊಂದು ವಿಚಾರಗಳನ್ನು ಮುಚ್ಚಿಡಬಹುದು:

ಆತನು ನಿಮ್ಮಿಂದ ಕೆಲವೊಂದು ವಿಚಾರಗಳನ್ನು ಮುಚ್ಚಿಡಬಹುದು:

ನಮ್ಮ ನಿರಾಸೆಗೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದು, ನಮ್ಮನ್ನು ಪ್ರೀತಿಸುವ ಬಹುತೇಕ ಜನ ಗಂಡಸರು ಪ್ರೀತಿಸುವ ಸಮಯದಲ್ಲಿ ಕೆಲವೊಂದು ವಿಚಾರಗಳನ್ನು ಮುಚ್ಚಿಟ್ಟಿರುತ್ತಾರೆ. ನನ್ನ ಪ್ರಕಾರ ನಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಕಾದು ನೋಡುವ ತೀರ್ಮಾನ ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಇದು ಪ್ರಮುಖ ಕಾರಣ.

ಏಕೆಂದರೆ ಕಾಲವು ಅತ್ಯಂತ ಮಹತ್ವದ ಅಂಶವಾಗಿದ್ದು, ನಿಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಇದು ಉತ್ತಮ ನೆರವನ್ನು ಒದಗಿಸುತ್ತದೆ. ಅದಲ್ಲದೆ ಕೇವಲ ಸಮಯ ಮಾತ್ರ ನಿಮ್ಮ ಪ್ರಿಯಕರನ ಕುರಿತು ಹೆಚ್ಚು ತಿಳಿದುಕೊಳ್ಳಲು ಸಹಕರಿಸುತ್ತದೆ. ಜೊತೆಗೆ ಆತನು ನಿಮಗೆ ಯೋಗ್ಯನಾದವನೆ? ಅಥವಾ ಇಲ್ಲವೇ? ಎಂಬುದನ್ನು ಸಹ ಅದು ತೋರಿಸಿಕೊಡುತ್ತದೆ. ನಿಮ್ಮ ಪ್ರಿಯಕರನ ಕುರಿತಾಗಿ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಾಗುವವರೆಗೆ ಯಾವುದೇ ಕಾರಣಕ್ಕು ನಿಮ್ಮ ಒತ್ತಡ ಮತ್ತು ಹತಾಶೆಯನ್ನು ಆತನ ಮುಂದೆ ತೋರಿಸಿಕೊಳ್ಳಲು ಹೋಗಬೇಡಿ.

X
Desktop Bottom Promotion