Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಈ ಏಳು ರೀತಿಯ ಹುಡುಗರನ್ನು ಹುಡುಗಿಯರು ತೆಗೆದುಹಾಕುವುದಿಲ್ಲ !
ಕೆಲವು ಹುಡುಗರು ಬೆಸ್ಟ್ ಹುಡುಗಿಯನ್ನು ಪಡೆಯುವಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂದು ಯಾವಾಗಲೂ ಆಶ್ಚರ್ಯವಾಗುತ್ತದೆ.ಇದರ ಹಿಂದಿರುವ ರಹಸ್ಯ ಸುಂದರವಾಗಿರುವುದು ಅಥವಾ ಸಿಕ್ಸ್ ಪ್ಯಾಕ್ ಹೊಂದಿರುವುದಲ್ಲ. ಹುಡುಗಿಯರು ಹುಡುಗರ ಕೆಲವು ವಿಷಯಗಳಿಗೆ ಆಕರ್ಷಕರಾಗುವುದು ನಿಜವಾದ ರಹಸ್ಯ.
ಫಾಕ್ಸ್ ನ್ಯೂಸ್ ವರದಿಯ ಪ್ರಕಾರ ಈ ಕೆಳಗೆ ನೀಡಿರುವ ಏಳು ಟಿಪ್ಸ್ ಹುಡುಗಿಯರನ್ನು ಬೀಳಿಸಲು ಹೊಂದಿರಬೇಕಾದ ಗುಣಗಳು. ಈ ಕೆಳಗೆ ನೀಡಿರುವ ವಿವರಣೆಯಲ್ಲಿ ನಿಮ್ಮಿಂದ ಹುಡುಗಿಯರು ಏನು ಬಯಸುತ್ತಾರೆ ಎಂಬುದನ್ನು ತಿಳಿಯಲು ಅನುಕೂಲವಾಗಬಹುದು.

ಬುದ್ದಿವಂತ
ನೀವು ಆಕೆಯ ಮಾತನ್ನು ಜವಾಬ್ದಾರಿಯುತವಾಗಿ ಅರ್ಥಮಾಡಿಕೊಳ್ಳುತ್ತಿದ್ದರೆ, ಬೌದ್ಧಿಕವಾಗಿ ಉತ್ತೇಜಿಸುವ ಮಾತನಾಡುತ್ತಿದ್ದರೆ ಆಕೆಗದು ಇಷ್ಟವಾಗುತ್ತದೆ. ಮಹಿಳೆಯರು ಬಯಸುವ ಹುಡುಗ ಆಕೆಯನ್ನು ನಗಿಸುವ, ತಮಾಷೆಯಿಂದ ಖುಷಿಪಡಿಸುವಂತವನಾದರೆ ಆಕೆಗದು ಇಷ್ಟವಾಗುತ್ತದೆ. ಯಾವಾಗಲೂ ಬೋರಿಂಗ್ ಅನಿಸದಂತೆ ನೋಡಿಕೊಳ್ಳುವ ಬುದ್ದಿವಂತಿಕೆ ಹುಡುಗನಲ್ಲಿರಬೇಕು. ಸಂಬಂಧಗಳಲ್ಲಿ ಬೌದ್ಧಿಕ ಉತ್ತೇಜನ ತುಂಬಾ ಮುಖ್ಯ, ಅದು ನಿಮ್ಮಲ್ಲಿದೆ ಎಂಬುದು ಆಕೆಗೆ ತಿಳಿದುಬಿಟ್ಟರೆ ಆಕೆ ನಿಮ್ಮೊಂದಿಗೆ ಬೆರೆಯಲು ಇಷ್ಟಪಡುವುದು ಖಂಡಿತ.

ಆತ್ಮವಿಶ್ವಾಸವುಳ್ಳ ವ್ಯಕ್ತಿ
ಆತ ಮೊದಲು ಸುರಕ್ಷಿತ ಎಂಬ ಭಾವ ಹೊಂದಿರಬೇಕು. ಹಾಗಿದ್ದಲ್ಲಿ ಇತರರೊಂದಿಗೆ ಬೆರೆಯುವಾಗ ಸೆಳೆಯುವ ವ್ಯಕ್ತಿತ್ವದವನಾಗುತ್ತಾನೆ. ಆಗ ತನ್ನ ಗೆಳತಿಯನ್ನು ಇತರರು ಆಕರ್ಷಿಸಬಲ್ಲರು ಎಂಬ ಅಸೂಯೆ ಆತನಿಗಿರುವುದಿಲ್ಲ. ಹುಡುಗಿಯರು ಆತ್ಮವಿಶ್ವಾಸ ಇರುವವರನ್ನು ಹೆಚ್ಚು ಇಷ್ಟಪಡುತ್ತಾರೆ. ನಿಮಗೆ ನೀವು ಗ್ರೇಟ್ ಎಂಬ ಭಾವನೆ ಹೊಂದಿದ್ದರೆ ಬಹುಶಃ ನಿಮ್ಮ ಗೆಳತಿಗೂ ಕೂಡ ಅಂತಹದೇ ಭಾವನೆ ಬರುತ್ತದೆ. ಆತ್ಮವಿಶ್ವಾಸ ಇರುವ ಹುಡುಗ ಹುಡುಗಿಯ ಒಪ್ಪಿಗೆಗೆ ಕಾಯುವುದಿಲ್ಲ ಇದರಿಂದಾಗಿ ಹುಡುಗಿಯರು ಆತನನ್ನು ಬೇಗ ಒಪ್ಪಿಕೊಳ್ಳುತ್ತಾರೆ.

ಕಲಾತ್ಮಕ ವ್ಯಕ್ತಿ
ಕಲಾತ್ಮಕನಾದ ವ್ಯಕ್ತಿ ಸ್ವಾಭಾವಿಕ ಮತ್ತು ಆ ಕ್ಷಣಕ್ಕಾಗಿ ಜೀವಿಸುತ್ತಾನೆ. ಆತ ತನ್ನ ಕಲಾತ್ಮಕತೆ ಮತ್ತು ಸೃಜನಶೀಲತೆಯಿಂದಾಗಿ ಜನರ ಮನ ಒಲಿಸಿಕೊಳ್ಳುತ್ತಾನೆ ಮತ್ತು ಇತರರ ಗಮನ ಸೆಳೆಯುತ್ತಾನೆ. ಪ್ರತಿಯೊಬ್ಬ ಮಹಿಳೆಯೂ ಕೂಡ ವಿಶಿಷ್ಟವಾಗಿ ಮತ್ತು ವಿಶೇಷವಾಗಿ ಇರಲು ಬಯಸುತ್ತಾಳೆ. ಕಲಾತ್ಮಕತೆಯನ್ನು ತೋರಿಸುವುದರ ಮೂಲಕ ಆಕೆಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಸೃಜನಶೀಲ ಕಲೆಯ ಮೂಲಕ ಆಕೆಯನ್ನು ಮರುಳುಮಾಡಬಹುದು.

ವಿಲಕ್ಷಣ ಅಂಶ
ಆತ ಬೇರೆಯದೇ ದೇಶದಿಂದ ಬಂದಿದ್ದಾನೆ ಮತ್ತು ತನ್ನದೇ ರೀತಿಯಲ್ಲಿ ಪ್ರಪಂಚ ನೋಡುತ್ತಾನೆ ಮತ್ತು ವಿವಿಧ ರೀತಿಯಲ್ಲಿ ಯೋಚಿಸುವ ಶಕ್ತಿ ಹೊಂದಿದ್ದಾನೆ ಎಂದರೆ ಹುಡುಗಿಯರು ಮರುಳಾಗುತ್ತಾರೆ.ಆತನ ಸಾಮಾಜಿಕ ಸಂಪ್ರದಾಯಗಳು ಭಿನ್ನವಾಗಿದ್ದರೂ ಕೂಡ ಆತ ಎಲ್ಲರೊಂದಿಗೆ ಭಿನ್ನವಾಗಿ ಕಾಣಿಸಿಕೊಳ್ಳುತ್ತಾನೆ. ಬೇರೆ ಸಂಪ್ರದಾಯದವರೊಂದಿಗೆ ಬೆರೆಯಲು ಒಂದು ರೀತಿಯ ಕುತೂಹಲ ಹುಟ್ಟುಹಾಕುವ ಇಂತಹ ಹುಡುಗರು ಹುಡುಗಿಯರಿಗೆ ಬಲು ಬೇಗ ಇಷ್ಟವಾಗುತ್ತಾರೆ.

ವಿವೇಚನೆಯುಳ್ಳ ವ್ಯಕ್ತಿ
ಆಕೆಗೆ ಕಾರು ಬಾಗಿಲು ತೆಗೆಯಲು ಸಹಕರಿಸುತ್ತಾನೆ. ಹೊಟೇಲ್‌ನಲ್ಲಿ ಊಟ ಕೊಡಿಸಿ ಕೊನೆಯಲ್ಲಿ ಆತನೇ ಬಿಲ್ ಪಾವತಿಸುತ್ತಾನೆ. ಯಾವಾಗಲೂ ಆತ ಆಕೆಯನ್ನು ಮನೆಯ ಬಾಗಿಲಿಗೆ ಬಂದು ಕರೆದುಕೊಂಡು ಹೋಗುತ್ತಾನೆ. ಆಕೆ ಯಾವ ರೀತಿ ಭಾವನೆ ಹೊಂದಿದ್ದಾಳೆ ಎಂಬುದರ ಬಗ್ಗೆ ಸದಾ ಎಚ್ಚೆತ್ತಿರುತ್ತಾನೆ. ಒಮ್ಮೆ ಮಹಿಳೆಗೆ ಹುಡುಗನೊಂದಿಗೆ ಕೆಟ್ಟ ಅನುಭವವಾಗಿಬಿಟ್ಟರೆ ಆಕೆಗೆ ಬೇರೆಯವರ ಮೇಲೆ ನಂಬಿಕೆ ಹೊರಟುಹೋಗುತ್ತದೆ. ಅವರಿಗೆ ಅದರಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗುತ್ತದೆ ಮತ್ತು ಆ ಅನುಭವದಿಂದ ಪರಿಪಕ್ವಗೊಂಡ ಇವರು ಆಕೆಯನ್ನು ಚೆನ್ನಾಗಿ ನಡೆಸಿಕೊಳ್ಳುವ ಹುಡುಗನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನೆನಪಿಡಿ ನಿಮ್ಮ ಯಾವುದೇ ಗುಣಗಳು ಫೇಕ್ ಎಂದು ಆಕೆಗೆ ಅನಿಸದಿರುವುದು ಕೂಡ ಅಷ್ಟೇ ಮುಖ್ಯ.

ಶಾಶ್ವತ ಪ್ರೇಮ
ಆತ ಶಾಶ್ವತ ಪ್ರೇಮವನ್ನು ಒಪ್ಪುತ್ತಾನೆ. ಆಕೆಗೆ ಆತ ಹೂವು, ಚಾಕೊಲೇಟ್ ಇವುಗಳನ್ನೆಲ್ಲ ನೀಡುತ್ತಾನೆ. ಆಗಾಗ ಆಕೆಗೆ ಕರೆ ಮಾಡಿ ತಾನು ಆಕೆಯನ್ನು ನೆನೆಪಿಸಿಕೊಳ್ಳುತ್ತಿರುವುದಾಗಿ ಹೇಳುತ್ತಾನೆ. ಮಹಿಳೆ ತನ್ನನ್ನು ಹೊಗಳುವವರನ್ನು ಇಷ್ಟಪಡುತ್ತಾಳೆ, ರೋಮ್ಯಾಂಟಿಕ್ ಹುಡುಗ ಆಕೆಯ ಇಚ್ಚೆಯನ್ನು ಈಡೇರಿಸುತ್ತಾನೆ. ಇಂತಹ ಹುಡುಗನನ್ನು ಆಕೆ ಇಷ್ಟಪಡುತ್ತಾಳೆ.

ಮುಕ್ತ ವ್ಯಕ್ತಿತ್ವ
ಮುಕ್ತ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಲ್ಲಿ ಬೇಕೆಂದರಲ್ಲಿ ಹೋಗಲು ತಯಾರಿರುತ್ತಾನೆ. ಆತ ಆಫೀಸನ್ನು ತಪ್ಪಿಸಿ ಆಕೆಯನ್ನು ರೋಡ್ ಟ್ರಿಪ್ ಗೆ ಕರೆದುಕೊಂಡು ಹೋಗಲು ಬಯಸಬಹುದು. ಆತ ಪರಿಣಾಮಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಹೆಚ್ಚು ತಲೆಕೆಡಿಸಿಕೊಳ್ಳದೇ ಬಿಂದಾಸಾಗಿ ಇರಬಯಸುವ ಹುಡುಗನನ್ನು ಇಷ್ಟಪಡುತ್ತಾಳೆ. ಕೆಟ್ಟ ಚೇತನ ಹೊಂದಿದ ಹುಡುಗ ತಾರುಣ್ಯದಲ್ಲಿ ಮಾತ್ರ ಸಂಬಂಧ ಇರಿಸಿಕೊಳ್ಳಲು ಇಚ್ಚಿಸುತ್ತಾನೆ ಆಕೆಗೆ ಇದು ಇಷ್ಟವಾಗಲಾರದು.



Click it and Unblock the Notifications
