Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ನಿಮ್ಮ ಜೀವನದಲ್ಲಿ ಅನುಭವಿಸಿರುವಂತಹ ಏಳು ಬಗೆಯ ಪ್ರೀತಿ!
ಸಾಮಾನ್ಯವಾಗಿ ಎಲ್ಲರೂ ರೋಮಾಂಚನಕಾರಿ ಭಾವನೆಯನ್ನೊಳಗೊಂಡ ಪ್ರೀತಿಯ ಅನುಭವವನ್ನು ಹೊಂದಿದ್ದರೂ ಅದರ ಹೊರತಾಗಿ ಇನ್ನೂ ಹಲವು ಬಗೆಯ ಪ್ರೀತಿಯನ್ನು ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸಿಯೇ ಇರುತ್ತಾರೆ.
ಸಾಂಪ್ರದಾಯಿಕ ಪ್ರೀತಿ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವೆ ಒಗ್ಗಟ್ಟು ಬೆಳೆಸಿ ಈ ಮೂಲಕ ಕುಟುಂಬವನ್ನು ಬೆಳೆಸುವ ದೃಷ್ಟಿಕೋನವನ್ನು ಹೊಂದಿರುತ್ತದೆ. ನೀವು ಪ್ರೀತಿಯನ್ನು ಹೋಲುವ ಹಲವು ಭಾವನೆಯನ್ನು ಅನುಭವಿಸಿರಬಹುದು. ಆದರೆ ಅದು ಯಾವ ಬಗೆಯ ಪ್ರೀತಿ ಎಂಬುದನ್ನು ತಿಳಿದುಕೊಳ್ಳುವವರೆಗೂ ನಿಮಗೆ ಆ ಪ್ರೀತಿಯ ಸ್ಪಷ್ಟ ಅನುಭವವಾಗುವುದಿಲ್ಲ.
ಗಂಡಸರನ್ನು ಅಷ್ಟು ಸುಲಭವಾಗಿ ನಂಬದಿರಲು 7 ಕಾರಣಗಳು

ಪ್ರತಿಯಾಗಿ ಹಿಂದಿರುಗಿಸದ ಪ್ರೀತಿ:
ಪ್ರತಿಯಾಗಿ ಹಿಂತಿರುಗಿಸದ ಪ್ರೀತಿ ಅತ್ಯಂತ ಸವಾಲಿನಿಂದ ಕೂಡಿದ್ದು, ನಿಮ್ಮಲ್ಲಿ ವಿಶೇಷವಾದ ಹಾಗೂ ಸೊಗಸಾದ ನೋವನ್ನು ಉಂಟುಮಾಡುವಂತದ್ದು. ನೀವು ಪ್ರೀತಿಸಿದವರು ನಿಮ್ಮ ಬಗ್ಗೆ ಆ ಭಾವನೆಯನ್ನು ಹೊಂದಿಲ್ಲದಿದ್ದರೆ ಅದು ನಿಮಗೆ ಸಾಕಷ್ಟು ನೋವನ್ನುಂಟುಮಾಡಬಹುದು. ಈ ಪ್ರೀತಿ ನಿಮ್ಮನ್ನು ಯೋಗ್ಯ ಮತ್ತು ಪ್ರಭಲರನ್ನಾಗಿ ಮಾಡುತ್ತದೆ. ನೀವು ಪ್ರೀತಿಸುವ ವ್ಯಕ್ತಿಯಿಂದ ಶುದ್ಧ ಪ್ರೀತಿಯನ್ನು ಪಡೆಯಲು ನಿಮ್ಮ ಗೀಳು ಮತ್ತು ಭಾವನಾತ್ಮಕ ಬಯಕೆಯನ್ನು ನಿಯಂತ್ರಿಸಲು ಕಲಿಯಬೇಕು. ಈ ನೋವು ನಿರ್ವಹಿಸಲು ಪ್ರಯತ್ನಿಸಿ ಮತ್ತು ಈ ಸಮಸ್ಯಾತ್ಮಕ ಭಾವನೆ ಮೇಲೆ ನಿಮ್ಮ ಮನಸ್ಸು ಕೇಂದ್ರೀಕರಿಸುವುದನ್ನು ತಪ್ಪಿಸಿ. ನೀವು ಸದಾ ಮುಂದೆ ಸಾಗುತ್ತಿರಿ. ನಿಮ್ಮ ಸ್ಥಳವನ್ನು ಹುಡುಕಲು ಹೆಚ್ಚು ಅವಕಾಶಗಳು ಇದರಿಂದ ನಿಮಗೆ ದೊರೆಯುತ್ತವೆ.

ಸಾತ್ವಿಕ ಪ್ರೀತಿ:
ಈ ರೀತಿಯ ಪ್ರೀತಿಗೆ ನೀವು ಆರಾಧಿಸುವ ವ್ಯಕ್ತಿಯೊಂದಿಗೆ ದೈಹಿಕ ಅಥವಾ ಪ್ರಣಯ ಭಾವನೆಯ ಅಗತ್ಯವಿರುವುದಿಲ್ಲ. ಇದು ಇಬ್ಬರು ಸ್ನೇಹಿತರ ನಡುವೆಯೂ ಸಂಭವಿಸಬಹುದಾದಂತಹ ಪ್ರೀತಿ. ಇದು ಅತ್ಯಂತ ಸಾಮಾನ್ಯವಾದ ಪ್ರೀತಿಯ ವಿಧವಾಗಿದ್ದು ನೀವು ಪ್ರತಿದಿನ ಕೆಲಸ ಮಾಡುವ ಸ್ಥಳಗಳಲ್ಲಿ ಸಾಕಷ್ಟು ಜನರೊಂದಿಗೆ ಪರಸ್ಪರ ಸಹಕಾರ ಭಾವದಿಂದ ವರ್ತಿಸಿ ಪಡೆಯುವ ಹಾಗೂ ನೀಡುವ ಪ್ರೀತಿ! ನಿಮ್ಮ ಮನಸ್ಸು, ಆತ್ಮಕ್ಕೆ ಸ್ಫೂರ್ತಿಯನ್ನು ನೀಡುವ, ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ನಿಮ್ಮ ಗಮನವನ್ನು ಸೆಳೆಯುವ ಕೆಲವು ಉತ್ತಮ ವ್ಯಕ್ತಿಗಳೊಂದಿಗೆ ಈ ಸಾತ್ವಿಕ ಅಥವಾ ನಿಷ್ಕಾಮ ಪ್ರೀತಿಯಲ್ಲಿ ನೀವು ಬೀಳಬಹುದು.

ಸ್ವ – ಪ್ರೀತಿ/ ಸ್ವಾನುರಾಗ:
ನೀವು ನಿಮ್ಮನ್ನು ಅತ್ಯುತ್ತಮ ಅಥವಾ ಅದ್ಭುತ ವ್ಯಕ್ತಿ ಎಂಬುದನ್ನು ಕಂಡುಕೊಂಡಿದ್ದೀರೇ? ಒಂದೊಮ್ಮೆ ನಿಮ್ಮ ಉತ್ತರ ಇಲ್ಲ ಎಂದಾಗಿದ್ದರೆ ನೀವು ನಿಮ್ಮ ಸ್ವಾಭಿಮಾನದದ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಬಹುದು ಮತ್ತು ಈ ವಾಸ್ತವ ಅಂಶವನ್ನು ಅರಿತುಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಅನಿವಾರ್ಯತೆಯಿದೆ. ಪ್ರಪ್ರಥಮವಾಗಿ ಹೇಳುವುದಾದರೆ ನೀವು ನಿಮ್ಮ ಪ್ರೀತಿಯಲ್ಲಿ ಬಿದ್ದರೆ ನೀವು ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ನಿಮಗೆ ಹಿಂಜರಿಕೆಯಾದರೆ ನಿಮ್ಮ ಸ್ವಭಾವದ ಎಲ್ಲಾ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಲಕ್ಷಣಗಳನ್ನು ಪಟ್ಟಿಮಾಡಿ. ಇದರಿಂದ ನೀವು ಎಷ್ಟು ಉತ್ತಮರು ಎಂಬುದನ್ನು ನೀವೇ ಅರಿತುಕೊಳ್ಳಬಹುದು. ಸ್ಬಪ್ರತಿಷ್ಠೆಯ ವ್ಯಸನಿಯಾಗಲು ಹಿಂಜರಿಯದಿರಿ. ನೀವು ನಿಮ್ಮನ್ನು ಪ್ರೀತಿಸಿದರೆ ನಿಮ್ಮನ್ನು ಬೇರೆಯವರು ಪ್ರೀತಿಸಲು ಅರ್ಹರಾಗುತ್ತೀರಿ ಎಂಬುದನ್ನು ಅರಿತುಕೊಳ್ಳಿ.

ವಿಷಯಾಸಕ್ತ/ ಕಾಮಾಸಕ್ತಿಯುಳ್ಳ ಪ್ರೀತಿ:
ನೀವು ದಿನವೂ, ಸುಂದರವಾದ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ನಿಮಗೆ ಆ ವ್ಯಕ್ತಿಗಳ ಮೇಲೆ ಹೆಚ್ಚಿನ ಭಾವನೆಗಳುಂಟಾಗದಿದ್ದರೂ ಭಾವೋದ್ರೇಕಗೊಳ್ಳಬಹುದು. ನೀವು ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲದಿದ್ದರೂ ಅವರ ವ್ಯಕ್ತಿ ಚಿತ್ರವನ್ನು ನಿಮ್ಮ ಮನಸ್ಸಿನಲ್ಲಿ ಮೂಡಿಸಿಕೊಳ್ಳಬಹುದು. ನೀವು ಕಡೆಪಕ್ಷ ಆ ವ್ಯಕ್ತಿಯ ಹೆಸರನ್ನಾದರೂ ತಿಳಿದುಕೊಂಡಿದ್ದೀರೆ? ಬಹುಶಃ ಈ ತರಹದ ಪ್ರೀತಿಯಲ್ಲಿ ಅದರ ಅಗತ್ಯವೂ ಇಲ್ಲವೇನೋ!

ಶುದ್ಧ ಪ್ರೀತಿ:
ನೀವು ಈ ಬಗೆಯ ಪ್ರೀತಿಯನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ. ಈ ಶಕ್ತಿಯುತವಾದ ಪ್ರೀತಿ ನೀವು ಪ್ರೀತಿಸುವ ವ್ಯಕ್ತಿಯ ಮನಸ್ಸು, ದೇಹ, ಆತ್ಮವನ್ನು ಆರಾಧಿಸುವಂತೆ ಮಾಡುತ್ತದೆ. ಇದು ಇಬ್ಬರು ಸುಂದರ ವ್ಯಕ್ತಿಗಳು ನಿಯಂತ್ರಣವನ್ನು ಕಳೆದುಕೊಳ್ಳುವ ಭಾವನಾತ್ಮಕ ಸ್ಫೋಟವಾಗಿದೆ. ನಿಜವಾದ ಪ್ರೀತಿಯ ಅನುಭವವನ್ನು ಪಡೆದ ವ್ಯಕ್ತಿಗಳನ್ನು ಜಗತ್ತಿನ ಅತ್ಯಂತ ಸಂತೋಷಿಗಳು ಎನ್ನಬಹುದು. ನಿಜವಾದ ಪ್ರೀತಿ ಎನ್ನುವುದು ಒಬ್ಬರಿಗೆ ಮಾತ್ರ ನೀಡುವಂತದ್ದು ಎನ್ನುವ ನಂಬಿಕೆ ನಮ್ಮಲ್ಲಿ ಬಲವಾಗಿದೆ.

ಪಪ್ಪಿ ಪ್ರೀತಿ:
ಇದು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿರುವಂತಹ ಪ್ರೀತಿ. ಏಕೆಂದರೆ ಇದು ನೀವು ಚಿಕ್ಕವರಿರುವಾಗ ಅನುಭವಿಸಿರುವ ಪ್ರೀತಿ. ಈ ಪ್ರೀತಿ ಸಂಪೂರ್ಣ ಮುಗ್ಧತೆಯನ್ನು ಹೊಂದಿರುವಂತದ್ದು. ನೀವು ಪುಟ್ಟ ನಾಯಿಮರಿಯಂತಹ ಪ್ರೀತಿಯನ್ನು ಪಡೆದಿದ್ದರೆ ಅದನ್ನು 'ಪಪ್ಪಿ ಪ್ರೀತಿ' ಎನ್ನಬಹುದು!

ಪಡೆಯಲಾಗದ ಪ್ರೀತಿ:
ನೀವು ಎಂದಾದರೂ ಜಾನಿ ಡೆಪ್‌ನನ್ನು ಪ್ರೀತಿಸಿದ್ದೀರಾ? ಈ ಅದ್ಭುತ ಪ್ರೀತಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಿಯೇ ಇರುತ್ತಾರೆ. ಒಟ್ಟಿನಲ್ಲಿ ನಿಮ್ಮ ನೆಚ್ಚಿನ ತಾರೆಯ ಬಗ್ಗೆ ಹಗಲಿರುಳು ಕನಸುಕಂಡಿರುತ್ತೀರಿ! ನಿಮ್ಮ ನೆಚ್ಚಿನ ತಾರೆಯೊಂದಿಗೆ ಪ್ರಾಯೋಗಿಕವಾಗಿ ಜೀವಿಸಲು ಸಾಧ್ಯವಾಗದಿದ್ದರೂ ನಿಮ್ಮ ಕಾಲ್ಪನಿಕ ಪ್ರೀತಿ ಭಾವನೆ ಮಾತ್ರ ಮುಂದುವರೆಯುತ್ತಿರುತ್ತದೆ. ಕೆಲವು ನಟರು ನಿಮಗೆ ಅತ್ಯಂತ ಸೂಕ್ತ ಎನ್ನಿಸಿದರೂ ನೀವು ಅವರ ಪ್ರೀತಿಯನ್ನು ಸಾಧಿಸಲು ಸಾಧ್ಯವಿಲ್ಲ!
ದಿನಗಳೆದಂತೆ ಜೀವನದಲ್ಲಿ ಇನ್ನಷ್ಟು ಬಗೆಯ ಪ್ರೀತಿಯನ್ನು ಅನುಭವಿಸುತ್ತೇವೆ. ನೀವು ಯಾವ ಬಗೆಯ ಪ್ರೀತಿಯನ್ನು ಇನ್ನೂ ಅನುಭವಿಸಿಲ್ಲ? ನಿಮ್ಮ ಪ್ರಕಾರ ಯಾವ ವಿಧದ ಪ್ರೀತಿ, ನಿಜವಾದ ಶುದ್ಧ ಪ್ರೀತಿ?



Click it and Unblock the Notifications