ಮೊದಲ ನೋಟದಲ್ಲಿ ಮಹಿಳೆಯರಲ್ಲಿ ಪುರುಷರು ಗಮನಿಸುವ 7 ಅಂಶಗಳು

By Deepak M

ಮಹಿಳೆಯರು ಸಾಧಾರಣವಾಗಿ ತಮ್ಮ ನೋಟದ ಬಗ್ಗೆ ಸದಾ ಎಚ್ಚರಿಕೆಯನ್ನು ವಹಿಸುತ್ತಾರೆ. ಇವರು ತಮ್ಮ ಅಂದ ಚಂದವನ್ನು ತನ್ನ ಸುತ್ತಲಿನ ಪುರುಷರು ಗಮನಿಸುತ್ತಾರೆ ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡೆ ನಿರ್ವಹಿಸುತ್ತಾರೆ. ಗಂಡಸರು ತಮ್ಮಲ್ಲಿ ಏನನ್ನು ನಿರೀಕ್ಷಿಸುತ್ತಾರೆ ಎಂಬುದರ ಬಗ್ಗೆ ಇವರು ಯಾವಾಗಲು ಗೊಂದಲಕ್ಕೆ ಒಳಗಾಗುತ್ತಾರೆ.

ಒಟ್ಟಿನಲ್ಲಿ ತನ್ನ ಸುತ್ತಲಿನ ಗಂಡಸರು ತನ್ನ ನೋಟವನ್ನು ಸ್ವಲ್ಪ ಹೆಚ್ಚಾಗಿ ಮೆಚ್ಚಿಕೊಳ್ಳಬೇಕು ಮತ್ತು ತನ್ನತ್ತ ಗಮನ ಹರಿಸಬೇಕೆಂಬ ಕೋರಿಕೆ ಎಲ್ಲಾ ಹೆಂಗಸರಿಗು ಇರುತ್ತದೆ, ಅದಕ್ಕಾಗಿ ಅವರು ಕಷ್ಟ ಸಹ ಪಡುತ್ತಾರೆ. ಆದರೆ ನಾವು ಒಂದು ವಿಚಾರ ನಿಮಗೆ ಹೇಳಲು ಇಷ್ಟಪಡುತ್ತೇವೆ ಅದೇನೆಂದರೆ, ಈ ವಿಚಾರದಲ್ಲಿ ಗಂಡಸರು ತಮ್ಮ ಪಾರದರ್ಶಕ ಅಭಿಪ್ರಾಯವನ್ನು ಸದಾ ವ್ಯಕ್ತಪಡಿಸುತ್ತಾರೆ.

ಅವರು ಮಹಿಳೆಯರಲ್ಲಿ ಏನನ್ನು ಗಮನಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ನೀವು ಸಹ ಅರ್ಥ ಮಾಡಿಕೊಳ್ಳಬಹುದು. ಬಹುತೇಕ ಮಹಿಳೆಯರು ಗಂಡಸರು ತಮ್ಮ ದೈಹಿಕ ಸೌಂದರ್ಯವನ್ನು ಮಾತ್ರ ಗಮನಿಸುತ್ತಾರೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದು ಪೂರ್ಣ ಸತ್ಯವಲ್ಲ, ಕೆಲವು ಗಂಡಸರು ಕೇವಲ ಮಹಿಳೆಯರ ಸೌಂದರ್ಯಕ್ಕೆ ಮಾತ್ರ ಮರುಳಾಗುವುದಿಲ್ಲ.

ಗೆಳತಿಯ ಅಸೂಯೆ ಗುಣವನ್ನು ಪರೀಕ್ಷಿಸುವುದು ಹೇಗೆ?

ನಾವು ಇಲ್ಲಿ ಪುರುಷರು ಮಹಿಳೆಯರನ್ನು ನೋಡಿದ ಮೊದಲ ನೋಟದಲ್ಲಿ ಗಮನಿಸುವ ಕೆಲವು ಅಂಶಗಳನ್ನು ನೀಡಿದ್ದೇವೆ ಓದಿಕೊಳ್ಳಿ.

7 Things That Men Notice in Women at First Sight

1. ಮಂತ್ರ ಮುಗ್ಧಗೊಳಿಸುವ ಕಣ್ಣುಗಳು:
ಮಹಿಳೆಯರನ್ನು ನೋಡಿದ ತಕ್ಷಣ ಗಂಡಸರನ್ನು ಮೊದಲು ಆಕರ್ಷಿಸುವ ಅಂಶ ಅದು ಕಣ್ಣು. ಈ ಕಣ್ಣುಗಳು ಗಂಡಸರನ್ನು ಮಹಿಳೆಯತ್ತ ಸೆಳೆಯುವ ಸೂಜಿಗಲ್ಲಿನಂತೆ ವರ್ತಿಸುತ್ತದೆ. ಏಕೆಂದರೆ ಕಣ್ಣುಗಳೆ ಆ ವ್ಯಕ್ತಿಯ ಕುರಿತಾಗಿ ಸಂಪೂರ್ಣವಾಗಿ ವಿವರಿಸುವ ಅಂಗವಾಗಿರುತ್ತದೆ. ಅವರ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಈ ಕಣ್ಣುಗಳೆ ಗಂಡಸಿಗೆ ಪರಿಚಯ ಮಾಡಿಕೊಡುತ್ತವೆ. ಅದಕ್ಕೆ ಅಲ್ಲವೇ ಹೆಣ್ಣು ಮಕ್ಕಳಿಗೆ ಮೀನಾಕ್ಷಿ, ಸೋನಾಕ್ಷಿ, ನಳಿನಾಕ್ಷಿ ಇತ್ಯಾದಿ ಹೆಸರುಗಳನ್ನು ಇಡುವುದು!.

2. ನಗು
"ಚೆಲುವೆ ನೀನು ನಕ್ಕರೆ, ಬದುಕು ಹಾಲು ಸಕ್ಕರೆ" ಸಿನಿಮಾ ಹಾಡು ತಾನೇ ಎಂದು ಮೂಗು ಮುರಿಯದಿರಿ. ಮಹಿಳೆಯರ ನಗುವಿಗೆ ಸೋಲದ ಗಂಡಸು ಪ್ರಪಂಚದಲ್ಲಿ ಸಿಗುವುದು ದುರ್ಲಭ. ಈ ನಗು ಗಂಡಸರು ಹೆಂಗಸರಲ್ಲಿ ಗಮನಿಸುವ ಅಂಶಗಳಲ್ಲಿ ಎರಡನೆ ಸ್ಥಾನವನ್ನು ಗಳಿಸಿದೆ. ನಿಮ್ಮ ನಗು ನೋಡುವ ಗಂಡಸಿನ ಎದೆಯ ಗೂಡಿನಲ್ಲಿ ವಾಯುಭಾರ ಕುಸಿತವನ್ನು ಉಂಟು ಮಾಡುವಷ್ಟು ಸಾಮರ್ಥ್ಯ ಹೊಂದಿದೆ ಎಂಬ ಅಂಶ ಅವನಿಗಷ್ಟೇ ಅಲ್ಲ ನಿಮಗೂ ಗೊತ್ತಿಲ್ಲವೇನು? ನಕ್ಕು ಬಿಡಿ, ಪಕ್ಕನೆ ಒಮ್ಮೆ ನಕ್ಕು ಬಿಡಿ. ಚಿಕ್ಕ ಮುತ್ತು ಸುರಿದು ಹೋಗಲಿ!.

ಸಂಬಂಧದಲ್ಲಿ ಒಳ್ಳೆಯ ಆಲಿಸುವವರಾಗುವುದು ಹೇಗೆ?

3. ಕೂದಲು
ಪ್ರತಿಯೊಬ್ಬ ಹೆಂಗಸು ತನ್ನ ಕೂದಲಿನ ಕುರಿತಾಗಿ ವಿಶೇಷ ಕಾಳಜಿಗಳನ್ನು ತೆಗೆದುಕೊಳ್ಳುತ್ತಾಳೆ. ತನ್ನ ಕೂದಲು ಗಂಡಸರನ್ನು ವಿಶೇಷವಾಗಿ ಆಕರ್ಷಿಸುತ್ತದೆ ಎಂಬ ಅಂಶ ಆಕೆಗೆ ಚೆನ್ನಾಗಿ ಗೊತ್ತು. ಗಂಡಸರು ಸುಗಂಧಭರಿತ, ಹೊಳೆಯುವ ಮತ್ತು ಸುಂದರವಾದ ಕೂದಲಿರುವ ಹೆಂಗಸರ ಸುತ್ತಲೇ ತಿರುಗುತ್ತಾರೆ ಎಂದು ಅಧ್ಯಯನಗಳು ಕೂಡ ಸಾಭೀತುಪಡಿಸಿವೆ.

4. ಕಾಲುಗಳು
ಅಚ್ಚರಿಪಡಬೇಡಿ!, ಕಾಲುಗಳು ಸಹ ಗಂಡಸರನ್ನು ಆಕರ್ಷಿಸುತ್ತವೆ. ಹೌದು, ನೀವು ನಂಬಿದರು ಅಥವಾ ನಂಬದಿದ್ದರು ಸಹ ಇದು ಸತ್ಯ. ಇದನ್ನು ಅಧ್ಯಯನಗಳು ಸಹ ದೃಢಪಡಿಸಿವೆ. ಸಾಧಾರಣಕ್ಕಿಂತ ಉದ್ದನೆಯ ಕಾಲನ್ನು ಹೊಂದಿರುವ ಹೆಂಗಸರನ್ನು ಗಂಡಸರು ಇಷ್ಟಪಡುತ್ತಾರೆ. ಇದರ ಜೊತೆಗೆ ಅತ್ತ ಸಣ್ಣದು ಅಲ್ಲದ ಇತ್ತ ದಪ್ಪವು ಅಲ್ಲದ ಕಾಲುಗಳನ್ನು ಹೊಂದಿರುವ ಹೆಂಗಸರು ಸಹ ಗಂಡಸರನ್ನು ಆಕರ್ಷಿಸುತ್ತಾರೆ. ಅದಕ್ಕಾಗಿ ಕಾಲನ್ನು ಸಹ ಅಲಕ್ಷಿಸಲು ಹೋಗಬೇಡಿ. ಯಾರಿಗೆ ಗೊತ್ತು ಒಳ್ಳೆಯ ಕಾಲ ಬಂದಾಗ ಕಾಲಿಗು ಸಹ ಬೇಡಿಕೆ ಸೃಷ್ಟಿಯಾಗುತ್ತದೆ!.

5. ಸ್ತನಗಳು
ಹಲವಾರು ಮಹಿಳೆಯರು ಮತ್ತು ಗಂಡಸರು ಇಬ್ಬರೂ ಹೆಂಗಸರಲ್ಲಿ ಇರುವ ಪ್ರಾಥಮಿಕ ಅಂಶ ಯಾವುದು ಎಂದು ಹೇಳಿದರೆ ಒಮ್ಮತದಿಂದ ಒಪ್ಪುವ ಅಂಶ ಅದು ಸ್ತನಗಳು. ಆದರೆ ಬಹುತೇಕ ಮಂದಿ ತಪ್ಪು ತಿಳಿದುಕೊಂಡಂತೆ ಗಂಡಸರು ಮೊದಲು ಹೆಂಗಸಿನ ಸ್ತನಗಳ ಮೇಲೆಯೇ ಗಮನ ಕೇಂದ್ರೀಕರಿಸುವುದಿಲ್ಲ. ಕಣ್ಣು ಮತ್ತು ನಗುವನ್ನು ಗಮನಿಸಿದ ನಂತರವಷ್ಟೇ ಗಂಡಸು ಆಕೆಯ ಸ್ತನಗಳ ಕಡೆಗೆ ಗಮನಹರಿಸುತ್ತಾನೆ. ಸ್ತನಗಳು ಸಂತಾನೋತ್ಪತಿಯ ಸಂಕೇತ. ಅಧ್ಯಯನಗಳ ಪ್ರಕಾರ ಗಂಡಸು ತಾನು ನೋಡಬಾರದು ಎಂದು ಕೊಂಡು ಭಾವಿಸಿದರು ಸಹ ಹೆಂಗಸಿನ ಸ್ತನಗಳನ್ನು ನೋಡುತ್ತಾನಂತೆ. ಆದರೆ ಇದನ್ನು ಇಂದ್ರೀಯಗಳ ನಿಗ್ರಹದ ಮೂಲಕ ನಿಯಂತ್ರಿಸಬಹುದು. ದೃಢಮನಸ್ಸಿನ ಗಂಡಸರು ಇಂತಹ ಸನ್ನಿವೇಶವನ್ನು ತಮ್ಮ ಮನೋಬಲದಿಂದ ತಮ್ಮ ಕಣ್ಣುಗಳನ್ನು ನಿಯಂತ್ರಿಸುತ್ತಾರೆ.

6. ಉಡುಗೆ- ತೊಡುಗೆ
ಈ ಮೇಲಿನ ಎಲ್ಲಾ ಅಂಶಗಳನ್ನು ತಿಳಿದುಕೊಂಡ ಮೇಲೆ ನಿಮ್ಮ ಗಮನಕ್ಕೆ ಬರುತ್ತದೆ, ಉಡುಗೆ - ತೊಡುಗೆ ಹೆಂಗಸಿನ ಆಕರ್ಷಣೆಯಲ್ಲಿ ಯಾವ ಸ್ಥಾನವನ್ನು ಗಳಿಸುತ್ತದೆ ಎಂದು. ಕನಿಷ್ಟ ಪಕ್ಷ ಉಡುಗೆ - ತೊಡುಗೆಗೆ ಸ್ಥಾನವಾದರು ಪ್ರಾಪ್ತವಾಗಿದೆಯಲ್ಲವೆ ಎಂದು ನಿಟ್ಟುಸಿರು ಬಿಡಬೇಕು. ಹೌದು, ಹೆಂಗಸಿನ ಉಡುಗೆ ತೊಡುಗೆ ನೋಡುವ ಮುನ್ನ ಗಂಡಸು ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿರುತ್ತಾನೆ ಎಂಬುದನ್ನು ಮರೆಯಬೇಡಿ. ಹಾಗಾಗಿ ಮೊದಲು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಂಶಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಗಮನಹರಿಸಿ, ನಂತರ ಬಟ್ಟೆ- ಬರೆಗಳ ಕಡೆಗೆ ಗಮನ ಹರಿಸಿ. ಆದಷ್ಟು ಸದ್ಯ ಚಾಲ್ತಿಯಲ್ಲಿರುವಂತಹ ಉಡುಗೆಗಳನ್ನು ಧರಿಸಿ. ನಿಮ್ಮ ಬಟ್ಟೆಗಳು ಟ್ರೆಂಡಿಯಾಗಿದ್ದಷ್ಟು ನಿಮ್ಮ ನೋಟ ಮತ್ತಷ್ಟು ಸುಧಾರಿಸುತ್ತದೆ ಎಂಬುದನ್ನು ಮರೆಯಬೇಡಿ. ಅದಕ್ಕಾಗಿ ಎಲ್ಲೆ, ವೋಗ್ ಮುಂತಾದ ಮ್ಯಾಗಜೀನ್‍ಗಳನ್ನು ಓದಿ, ಕಾಲಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳಿ.

ತಾಳಿಕಟ್ಟಲು ಇರುವ 10 ಅತ್ಯುತ್ತಮ ಕಾರಣಗಳು

7. ತ್ವಚೆ
ಹೆಂಗಸರಲ್ಲಿ ಗಂಡಸರು ಇಷ್ಟಪಡುವ ಸಾಮಾನ್ಯ ಅಂಶಗಳಲ್ಲಿ ತ್ವಚೆಯು ಸಹ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಅದಕ್ಕಾಗಿ ನೀವು ತ್ವಚೆಯ ಕುರಿತಾಗಿ ಸಹ ಕಾಳಜಿವಹಿಸಬೇಕಾದುದು ಅಗತ್ಯ. ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಅಗತ್ಯವಾದ ತೇವಾಂಶವನ್ನು ಒದಗಿಸಿ, ಯಾವುದೇ ಕಾರಣಕ್ಕು ಅದು ಒಣಗಲು ಬಿಡಬೇಡಿ. ಇದರ ಜೊತೆಗೆ ಗಂಡಸರು ಆರೋಗ್ಯಯುತವಾದ, ಕಾಂತಿಯಿಂದ ಕೂಡಿದ ತ್ವಚೆಯನ್ನು ಇಷ್ಟಪಡುತ್ತಾರೆ. ಕಾಂತಿಯಿಂದ ಕೂಡಿದ ಒಳ್ಳೆಯ ತ್ವಚೆಯು ಎಂತಹವರನ್ನು ಆಕರ್ಷಿಸುತ್ತದೆ. ಒಳ್ಳೆಯ ತ್ವಚೆ ಎಂದರೆ ಹೊಳಪಿನಿಂದ ಕೂಡಿದ ತ್ವಚೆಯಲ್ಲ. ಒಳ್ಳೆಯ ತ್ವಚೆ ಎಂದರೆ ಪರಿಪೂರ್ಣವಾಗಿ ಏಕ ಪ್ರಕಾರದ ಬಣ್ಣವನ್ನು ಹೊಂದಿರುವ ತ್ವಚೆ ಎಂದರ್ಥ. ಪ್ರತಿಯೊಬ್ಬ ಗಂಡಸು ಗೋಧಿ ಬಣ್ಣದಿಂದ ಹಿಡಿದು ಹೊಳೆಯುವ ಮತ್ತು ಗಾಢವಾದ ಬಣ್ಣದವರೆಗೆ ಹಲವು ತರಹದ ಮೈಬಣ್ಣಗಳಿಗೆ ಮಾರು ಹೋಗುವ ಸ್ವಭಾವವನ್ನು ಹೊಂದಿರುತ್ತಾನೆ.

ಈ ಎಲ್ಲಾ ಅಂಶಗಳನ್ನು ಚಾಚೂ ತಪ್ಪದೆ ತಿಳಿದುಕೊಂಡು ನಿಮ್ಮ ನಿಲುವು ಮತ್ತು ನೋಟವನ್ನು ಸುಧಾರಿಸಿಕೊಳ್ಳಿ. ಆಗ ನೋಡಿ ನಿಮಗೆ ಎಂತಹ ಗಂಡಸು ಸಹ ಮರುಳಾಗಿ ಹೋಗುತ್ತಾನೆ.

Story first published: Thursday, May 29, 2014, 19:00 [IST]
X
Desktop Bottom Promotion