Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಪುರುಷರ ಮನ ಸೆಳೆಯುವ ವೇಳೆ ಆಗುವ 7 ಎಡವಟ್ಟುಗಳು!
ಈ ಶೀರ್ಷಿಕೆಯನ್ನು ಓದುವಾಗ ನಿಮಗೆ ಆಶ್ಚರ್ಯವಾಗಿರಬಹುದು. ಹೌದು ನಾನು ಹೇಳುತ್ತಿರುವುದು ನಿಜ, ಹೆಂಗಸರು ಗಂಡಸರನು ಆಕರ್ಷಿಸಲು ಪ್ರಯತ್ನಿಸುವಾಗ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಏಕೆಂದರೆ ಕೆಲವೊಮ್ಮೆ ಅವರು ತುಂಬಾ ಕಷ್ಟ ಪಟ್ಟು ಪ್ರಯತ್ನಿಸುತ್ತಾರೆ (ಅಥವಾ ಇನ್ನೂ ಕಷ್ಟಪಡುತ್ತಾರೆ ಎಂದು ಹೇಳಬಹುದು), ಬಹುಶಃ ಅವರು ತಮ್ಮ ಪ್ರಿಯಕರನಿಗೆ ತಪ್ಪು ಸಂದೇಶವನ್ನು ರವಾನಿಸುತ್ತಾರೆ, ಇದರಿಂದ ಅವರು ಆತನನ್ನು ಕಳೆದುಕೊಳ್ಳಲೂಬಹುದು.
ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಸಹ ತಮ್ಮ ಭವಿಷ್ಯದ ದೃಷ್ಟಿಯಿಂದ ವೃತ್ತಿಗಳಲ್ಲಿ ಬೆಳವಣಿಗೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಅವರಿಗೆ ಇತ್ತೀಚೆಗೆ ಗೊತ್ತಾಗಿದೆ ( ಅಥವಾ ತಿಳಿದುಕೊಂಡಿದ್ದಾರೆ) ತಾವು ಅಂದುಕೊಂಡಂತೆ ನಡೆಯಬೇಕು ಎಂದರೆ ಪರಿಸ್ಥಿತಿ ಅವರ ನಿಯಂತ್ರಣದಲ್ಲಿ ಇರಬೇಕು ಎಂದು. ಆದರೂ ಕೆಲವೊಮ್ಮೆ ತುಂಬಾ ಪ್ರಸಂಗಗಳಲ್ಲಿ ಸ್ವಾಭಾವಿಕವಾಗಿ ತಪ್ಪುಗಳು ನಡೆದು ಬಿಡುತ್ತವೆ. ಹಾಗಾದರೆ ಬನ್ನಿ ಗಂಡಸರನ್ನು ಆಕರ್ಷಿಸಲು ಹೋಗುವಾಗ ಹೆಂಗಸರು ಮಾಡುವ 7 ತಪ್ಪುಗಳು ಯಾವುವು ಎಂಬುದನ್ನು ಮುಂದೆ ನೋಡೋಣ:
ತುಂಬಾ ಮೇಕಪ್ ಧರಿಸುವುದು

ಇದು ಗಂಡಸರನ್ನು ಆಕರ್ಷಿಸಲು ಹೋಗುವಾಗ ಹೆಂಗಸರು ಮಾಡುವ ಸಾಮಾನ್ಯ ತಪ್ಪು. ಅವರು ಅವಶ್ಯಕತೆಯಿಲ್ಲದಿದ್ದರು, ಅತಿ ಹೆಚ್ಚಿನ ಮೇಕಪ್ ಧರಿಸಿರುತ್ತಾರೆ. ಬಹುಶಃ ನೀವು ಈ ತಪ್ಪನ್ನು ಒಮ್ಮೆ ಮಾಡಿರಬಹುದು ಅಥವಾ ಮಾಡಬಹುದು. ಆದರೆ ಒಂದು ಮಾತು ತಿಳಿದುಕೊಳ್ಳಿ. ಸ್ವಾಭಾವಿಕವಾದ ಸೌಂದರ್ಯಕ್ಕೆ ಮೆರಗನ್ನು ನೀಡಲು ಮೇಕಪ್ ಬೇಕೆ ಹೊರತು, ಮೇಕಪ್ಪೆ ಸೌಂದರ್ಯವಲ್ಲ. ಆದ್ದರಿಂದ ನಿಮ್ಮ ತ್ವಚೆಗೆ ಸ್ವಲ್ಪ ಆಯಾಸ ನೀಡುವುದನ್ನು ಕಡಿಮೆ ಮಾಡಿ. ಅದು ಕೂಡ ಉಸಿರಾಡಲಿ, ಮೇಕಪ್ ಹಾಕಿದರು, ಹಾಕದಿದ್ದರು ನಿಮ್ಮ ಹುಡುಗನಿಗೆ ನೀವು ಚೆನ್ನಾಗಿ ಕಾಣುತ್ತೀರಿ!
ಕಾಯಿಸುವ ಹುಡುಗಿಯರು
ಬಹುಶಃ ನೀವು ಹಳೆಯ ಮಾತೊಂದನ್ನು ನೆನಪಿಸಿಕೊಳ್ಳಬಹುದು. ಹೆಂಗಸರು ಯಾವಾಗಲು ಲೇಟ್, ಎಂದು. ಹೌದು ಅದಕ್ಕೆ, ಇದಕ್ಕೆ, ತಡವಾದರೆ ಪರವಾಗಿಲ್ಲ. ಹೋಗಿ ಹೋಗಿ ಪ್ರೀತಿ ಮಾಡಲು ತಡವಾದರೆ, ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು, ಎಂದು ಹಾಡು ಹೇಳುತ್ತಾರೆ ಹುಡುಗರು. ಅವರಿಗೇನು ಗೊತ್ತು? ಗಂಡಸು ಹೇಗೆ ಆಕೆಯನ್ನು ನೋಡಲು ಚಡಪಡಿಸುತ್ತ ಕೂತಿರುತ್ತಾನೋ, ಹಾಗೆಯೇ ಹೆಂಗಸರು ಸಹ ಆತನನ್ನು ನೋಡಲು ಅವರಿಗಿಂತ ಹೆಚ್ಚು ಖಾತರದಿಂದ ಕಾಯುತ್ತಿರುತ್ತಾಳೆ. ಹಾಗೆಂದು ಪ್ರೀತಿ ಮಾಡುವಾಗ ತಡ ಮಾಡಲು ಹೋಗಬೇಡಿ. ಪ್ರತಿಯೊಬ್ಬರ ಸಮಯಕ್ಕೆ ಮೌಲ್ಯವಿರುತ್ತದೆ. ಆತನ ಸಮಯಕ್ಕೆ ಬೆಲೆ ಕೊಡಿ, ಹೇಳಿದ ಸಮಯಕ್ಕೆ ಹೋಗಿ. ಇದರಿಂದ ನೀವು ಕೀಳಾಗುತ್ತೀರಿ ಎಂಬ ಭಾವನೆ ಬೇಡ. ನಿಮ್ಮೆಡೆಗೆ ಆತನ ಬದ್ಧತೆ ಮತ್ತಷ್ಟು ಹೆಚ್ಚಾಗುತ್ತದೆ. ತಡವಾದುದಕ್ಕೆ ಕಾರಣಗಳು ಸಾವಿರ ನೀಡುವ ಸಾಮರ್ಥ್ಯ ನಿಮಗಿರಬಹುದು. ಆದರೆ ಆತನನ್ನು ಪ್ರೀತಿಸಲು ನಿಮಗೆ ಲಕ್ಷ ಕಾರಣಗಳು ಇಲ್ಲವೇನು? ತಡ ಮಾಡಬೇಡಿ! ಯುವತಿಯರು ಪರ್ಯಾಯ ಪ್ರಿಯಕರನನ್ನು ಬಯಸುತ್ತಾರೆಯೇ?
ಉಪವಾಸ ಸತ್ಯಾಗ್ರಹ!
ಅತ್ಯಂತ ದುಃಖಕರವಾದ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಅದು,ಇದು ನೆಪ ಹೇಳುತ್ತ ಉಪವಾಸ ಮಾಡುತ್ತಿರುತ್ತಾರೆ. ಕೆಲವರಿಗೆ ಡಯಟ್ ಚಿಂತೆ, ಇನ್ನು ಕೆಲವರಿಗೆ ಪ್ರೀತಿ ಚಿಂತೆ, ಇನ್ನೂ ಕೆಲವರಿಗೆ ಇನ್ನೇನೋ ಚಿಂತೆ. ಈ ಎಲ್ಲಾ ಚಿಂತೆಗಳ ಕಾರಣದಿಂದ ಅವರು ಉಪವಾಸ ಮಾಡುತ್ತಾರೆ. ಮುಂದೆ ಅವರು ಊಟ ಮಾಡಬೇಕೆಂದರು ಅವರ ದೇಹ ಅವರಿಗೆ ಸಹಕರಿಸುವುದಿಲ್ಲ. ನಿಮ್ಮ ದೇಹ ಬಲೂನಿನಂತೆ ಒಂದೇ ರಾತ್ರಿಯಲ್ಲಿ ದೊಡ್ಡದಾಗುವುದಿಲ್ಲ. ಸತ್ಯಾಂಶ ಗೊತ್ತಾ? ಎಲ್ಲಾ ಹುಡುಗರು ತಾವು ಊಟ ಮಾಡುವಾಗ ತಮ್ಮ ಹುಡುಗಿ ಜೊತೆಯಾಗಿ ಕುಳಿತು, ಕೇಳಿ, ಕೇಳಿ ತಿನ್ನಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಸರಿಯಾಗಿ ಊಟ ಮಾಡದೆ ಇರುವ ಹುಡುಗಿ, ಡಯಟ್, ಅದೂ ಇದು ನೆಪ ಹೇಳಿ ಊಟ ಮಾಡದ ಹುಡುಗಿಯರು ಹುಡುಗರ ಅಸಡ್ಡೆಗೆ ಗುರಿಯಾಗುತ್ತಾರೆ. ಊಟ ಮಾಡುವುದರಿಂದ ನಿಮ್ಮ ವ್ಯಕ್ತಿತ್ವ, ಸೌಂದರ್ಯ ಹಾಳಾಗುವುದಿಲ್ಲ. ಎದ್ದೇಳಿ, ಮೊದಲು ಏನಾದರು ತಿನ್ನಿ.
ತುಂಬಾ ಚಿಕ್ಕದಾದ ಉಡುಗೆಗಳನ್ನು ಧರಿಸುವುದು
ಇದು ಹೆಂಗಸರು ಮಾಡುವ ಇನ್ನೊಂದು ತಪ್ಪು. ಇವರು ಗಂಡಸರನ್ನು ಆಕರ್ಷಿಸಲು ತುಂಬಾ ಚಿಕ್ಕದಾದ ಬಟ್ಟೆಗಳನ್ನು ಧರಿಸುತ್ತಾರೆ. ಏಕೆಂದರೆ ಸ್ವಲ್ಪ ತಮ್ಮ ತ್ವಚೆಯನ್ನು ಹುಡುಗರಿಗೆ ತೋರಿಸುವುದರಿಂದ ಒಬ್ಬ ಒಳ್ಳೆಯ ಹುಡುಗ ಖಂಡಿತ ಇವರತ್ತ ಆಕರ್ಷಿತನಾಗುತ್ತಾನೆ ಎಂಬ ಭಾವನೆ ಇವರಿಗಿರುತ್ತದೆ. ಆದರೆ ಇದು ತಪ್ಪು, ಏಕೆಂದರೆ ನೀವು ಹೀಗೆ ಮಾಡುವುದರಿಂದ ನಿಮ್ಮ ಸೌಂದರ್ಯವನ್ನು ಮಾತ್ರ ಇಷ್ಟ ಪಟ್ಟು ದೈಹಿಕ ಕಾಮನೆಗಳಿಗಾಗಿ ನಿಮ್ಮತ್ತ ಆಕರ್ಷಿತನಾಗುವ ಹುಡುಗ ನಿಮಗೆ ಸಿಗಬಹುದು. ಇವರಿಗೆ ಅಂದ ಮುಖ್ಯವೇ ಹೊರತು, ಈ ಸಂಬಂಧದ ಒಳಗೆ ಇರುವ ದೈವೀಕವಾದ ಪ್ರೀತಿಯು ಮುಖ್ಯವಲ್ಲ. ಹಾಗಾಗಿ ಈ ತಪ್ಪು ಮಾಡಬೇಡಿ. ಇದು ಹುಡುಗರಿಗೆ ನಿಮ್ಮ ಬಗ್ಗೆ ತಪ್ಪು ಸಂದೇಶ ರವಾನಿಸುತ್ತದೆ. ಮಿತ ಖರ್ಚಿನಲ್ಲಿ ವಂಡರ್ ಫುಲ್ ಡೇಟಿಂಗ್ ಹೇಗೆ?
ಅವರು ಬೇರೆಯವರಂತಿರಲು ಪ್ರಯತ್ನಿಸುತ್ತಿರುತ್ತಾರೆ
ಗಂಡಸರು ಯಾವಾಗಲು ಹೆಂಗಸರ ಪ್ರತ್ಯೇಕ ಗುಣಗಳಿಗೆ ಮಾರು ಹೋಗುತ್ತಿರುತ್ತಾರೆ. ಅದನು ಬಿಟ್ಟು ಅವರು ಬೇರೆ ಯಾರದೋ ಪ್ರತಿರೂಪವಾಗಿರುವ ಹುಡುಗಿಯನ್ನು ಇಷ್ಟಪಡುವುದಿಲ್ಲ. ನಿಮ್ಮನ್ನು ಯಾರೋ ಬದಲಾಯಿಸಲು ಬಿಡಬೇಡಿ. ನಿಮ್ಮಲ್ಲಿ ಕೆಲವೊಂದು ಗುಣಗಳು ಬದಲಾವಣೆಯಾಗಬೇಕು ಎಂದು ನೀವು ಬಯಸಿದಲ್ಲಿ, ಅದನ್ನು ನಿಮ್ಮಲ್ಲಿ ತನ್ನಿ. ಅದನ್ನು ಬಿಟ್ಟು ನೀವು ಯಾರೋ ಮೈ ಮೇಲೆ ಆವಾಹನೆಯಾದ ಹಾಗೆ ಅವರಂತೆ ವರ್ತಿಸಲು ಹೋಗಬೇಡಿ! ಪ್ರತಿ ಗಂಡಸರು ತಮ್ಮದೇ ಆದ ಗುಣ ವಿಶೇಷತೆಗಳುಳ್ಳ ಹುಡುಗಿಯನ್ನು ಇಷ್ಟಪಡುತ್ತಾನೆ. ಏಕೆಂದರೆ ಅವನ ಕನಸಿನ ಕನ್ಯೆ ನೀವಾಗಿರಬಹುದಲ್ಲವೇ. ನಿಮ್ಮಂತೆ ನೀವಾಗಿ...
ಕಾಲ ಕಳೆದಂತೆ ಅವರು ತಮ್ಮ ಇಚ್ಛೆಯೊಂದಿಗೆ ರಾಜಿಯಾಗುತ್ತಾರೆ
ಇದು ಬಹುತೇಕ ಹೆಣ್ಣು ಮಕ್ಕಳು ಮಾಡುವ ತಪ್ಪಾಗಿದೆ. ಅವರು ಎಲ್ಲರೂ ಒಬ್ಬ ಪುರುಷೋತ್ತಮನಿಗಾಗಿ ಕಾದು ಕುಳಿತಿರುತ್ತಾರೆ. ಬಂದವರಲ್ಲಿ ಒಂದೊಂದು ಹುಳುಕುಗಳನ್ನು ನೋಡಿ ಕಳುಹಿಸುತ್ತಿರುತ್ತಾರೆ. ಕಾಲ ಕಳೆದಂತೆ ಅವರು ಈ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡು ಯಾರಾದರು ಸರಿ ಎಂಬ ಭಾವನೆಯನ್ನು ತಾಳುತ್ತಾರೆ.
ಹೀಗೆ ತಮ್ಮ ಇಚ್ಛೆಯೊಂದಿಗೆ ಇವರು ರಾಜಿಯಾಗುತ್ತಾರೆ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ಅವರು 30ಕ್ಕೆ ಮದುವೆಯಾಗುತ್ತಾರೆ, 35ಕ್ಕೆ ಎರಡು ಮಕ್ಕಳ ತಾಯಿಯಾಗಿರುತ್ತಾರೆ. ಹೀಗೆ ಕಾಯುವಾಗ ಕಾಲವು ಅವರ ಮನಸ್ಸಿನಲ್ಲಿ ಹತಾಶೆನ್ನುಂಟು ಮಾಡುತ್ತದೆ. ಇದರಿಂದ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ಹೆಚ್ಚು. ಯಾರಿಗೆ ಗೊತ್ತು ನಿಮ್ಮ ಬಾಳ ಸಂಗಾತಿ ಯಾವಾಗ ಬರುತ್ತಾರೋ ಮತ್ತು ನಿಮ್ಮ ಜೀವನ ಎಂದು ಸುಖಮಯವಾಗುತ್ತದೋ, ತಾಳ್ಮೆ ಇರಲಿ ವಯಸ್ಸು ಇದ್ದಾಗಲೇ ಬಹುತೇಕ ಮಟ್ಟಿಗೆ ಒಳ್ಳೆಯವನೊಬ್ಬನನ್ನು ಮದುವೆಯಾಗಿ.
ಅವರು ಆಗಾಗ ನಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಿರುತ್ತಾರೆ
ಒಂದು ವೇಳೆ ನೀವು ಸಂಕೋಚದ ವ್ಯಕ್ತಿಯಾಗಿದ್ದಲ್ಲಿ, ನೀವು ನಿಮ್ಮ ಸ್ವಾಭಿಮಾನದ ಜೊತೆಗೆ ಸ್ವಲ್ಪ ಸಮಸ್ಯೆಗಳನ್ನು ಎದುರಿಸುತ್ತೀರಿ. ಆಗ ನೀವು ನಿಮ್ಮನ್ನು ಯಾರೂ ಪ್ರೀತಿಸುವುದಿಲ್ಲ, ನಿಮ್ಮ ಕುರಿತಾಗಿ ಯಾರೂ ಆಸಕ್ತಿ ವಹಿಸುವುದಿಲ್ಲ ಎಂದು ಆಲೋಚನೆ ಮಾಡುತ್ತೀರಿ. ಮೂಲತಃ, ನೀವು ನಿಮ್ಮ ಕುರಿತಾಗಿಯೇ ಸಕಾರಾತ್ಮಕ ಭಾವನೆಗಳಿಗಿಂತ, ನಕಾರಾತ್ಮಕ ಭಾವನೆಗಳನ್ನೆ ಹೆಚ್ಚಾಗಿ ಹೊಂದಿರುತ್ತೀರಿ. ನಿಮ್ಮ ಭಾವನೆಗಳು ಎಷ್ಟು ಶಕ್ತಿಶಾಲಿ ಎಂಬುದನ್ನು ನೀವು ಅರಿತಿರಲಾರಿರಿ. ಕೇವಲ ನಕಾರಾತ್ಮಕ ಭಾವನೆಗಳನ್ನು ಹೊಂದುವ ಬದಲು ಸಕಾರಾತ್ಮಕ ಭಾವನೆಗಳನ್ನು ಹೊಂದಲು ಪ್ರಯತ್ನಿಸಿ. ಇದರಿಂದ ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಿ. ಇದರಿಂದ ನೀವು ಕೇವಲ ಗಂಡಸರನ್ನು ಮಾತ್ರವಲ್ಲ, ಎಲ್ಲರನ್ನೂ ಆಕರ್ಷಿಸಬಹುದು. ನೀವೂ ಸಹ ಖುಷಿಪಡಬಹುದು.



Click it and Unblock the Notifications

















