Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ನಿಮಗೋಸ್ಕರ ನೀವು ಮಾಡಬೇಕಾದ ಆರು ಕೆಲಸಗಳು
ನೀವು ಒಬ್ಬ ಹುಡುಗನನ್ನು ತುಂಬಾ ಇಷ್ಟಪಟ್ಟರೂ ಕೂಡ ಕೆಲವೊಂದು ಕೆಲಸಗಳನ್ನು ನೀವು ನಿಮಗೋಸ್ಕರ ಮಾತ್ರ ಮಾಡಿಕೊಳ್ಳಬೇಕು ನೀವು ನಿಮ್ಮ ಮನಸ್ಸು ದೇಹದ ಸ್ಥಿಮಿತದಲ್ಲಿರಬೇಕು. ನೀವು ನಿಮ್ಮ ಹುಡುಗನನ್ನು ಆಕರ್ಷಿಸಲು ಅಥವಾ ಆತ ಹೆಚ್ಚು ಇಷ್ಟಪಡಲಿ ಎಂಬ ಕಾರಣಕ್ಕೆ ಏನಾದರೂ ಮಾಡಬೇಡಿ. ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ, ಓದಿ ನೋಡಿ.

ಹಾಟ್ ಆಗಿ ಕಾಣಿಸಲು ವ್ಯಾಯಾಮ ಮಾಡಬೇಡಿ
ವ್ಯಾಯಾಮ ಮಾಡುವುದು ಮತ್ತು ಆರೋಗ್ಯಯುತವಾಗಿರುವುದು ತುಂಬಾ ಮುಖ್ಯ,ಆದರೆ ನೀವು ಇದನ್ನು ಸರಿಯಾದ ಕಾರಣಕ್ಕೆ ಮಾಡಬೇಕು.ನೀವು ವ್ಯಾಯಾಮವನ್ನು ನಿಮ್ಮ ಆರೋಗ್ಯಕ್ಕೊಸ್ಕರ ಮಾಡಬೇಕು.ನಿಮ್ಮ ಹುಡುಗ ನಿಮ್ಮನ್ನು ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಮಾಡುತ್ತಿದ್ದರೆ ಅದು ವ್ಯರ್ಥ.ಏಕೆಂದರೆ ಆತ ನಿಮ್ಮ ವ್ಯಕ್ತಿತ್ವವನ್ನು ಮೆಚ್ಚಬೇಕು ನಿಮ್ಮ ಲುಕ್ ಅನ್ನಲ್ಲ.ನಿಮ್ಮ ಹೊಟ್ಟೆ ಕರಗಿಸಿಕೊಳ್ಳಬೇಕು ಎಂಬುದು ತಪ್ಪಲ್ಲ ಆದರೆ ಅದು ಕೇವಲ ನಿಮಗಾಗಿ ಮಾತ್ರ ಮಾಡಿ,ಬೇರೆಯವರಿಗಲ್ಲ.

ಅವರು ಹೇಳಿದಂತೆ ಕೇಳಬೇಡಿ
ಕೆಲವು ಹುಡುಗರು ಅವರು ಹೇಳಿದಂತೆ ಇರಬೇಕೆಂದು ಬಯಸುತ್ತಾರೆ,ಆದರೆ ನೀವು ನಿಮಗೆ ಅನುಕೂಲವಾದಂತೆ ಇರುವುದು ರೂಡಿಸಿಕೊಳ್ಳಿ.ನಿಮಗೆ ಇಷ್ಟವಾಗದುದನ್ನು ಮಾಡುವಂತೆ ಒತ್ತಾಯಿಸಲು ಯಾರಿಗೂ ಅವಕಾಶ ನೀಡಬೇಡಿ.ನಿಮ್ಮ ದೇಹಕ್ಕೆ ನೀವೇ ಒಡೆಯ ಆದ್ದರಿಂದ ನೀವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಿ.

ನಿಮಗಾಗಿ ಶಾಪ್ ಮಾಡಿ
ನಿಮಗೆ ಇಷ್ಟವಿಲ್ಲದ ಬಟ್ಟೆ ಕೊಂಡುಕೊಳ್ಳಬೇಕು ಎಂದೇನಿಲ್ಲ.ಇಷ್ಟವಿಲ್ಲದಿದ್ದರೂ ಸ್ಕರ್ಟ್ ಹಾಕಬೇಕು ಎಂಬ ಒತ್ತಾಯವಿಲ್ಲ.ನಿಮಗೆ ಸೂಕ್ತ ಎನಿಸುವಂತೆ ನಿಮ್ಮಿಷ್ಟದ ಬಟ್ಟೆ ಧರಿಸಿ.ಸರಿಯಾದ ಹುಡುಗ ನೀವು ಹೇಗಿದ್ದೀರೋ ಹಾಗೇ ಇಷ್ಟಪಡುತ್ತಾನೆ.

ನಿಮ್ಮ ಇಚ್ಛೆ ಮೀರಿ ವರ್ತಿಸಬಹುದು ಜೋಕೆ !
ನಿಮ್ಮ ಹುಡುಗನೊಂದಿಗೆ ನೀವು ಕಳೆಯಬೇಕು ಎಂದಿದ್ದರೆ,ಗೋ ಕ್ರೇಜಿ.ಆದರೆ ಆತನೊಂದಿಗೆ ಆತ್ಮೀಯತೆ ಪಡೆಯಬೇಕು ಎಂಬ ಕಾರಣಕ್ಕೆ ಆತ ಹೇಳಿದಂತೆ ಕೇಳಬೇಕೆಂದಿಲ್ಲ.ನಿಮಗೆ ಇಷ್ಟವಿಲ್ಲದಿದ್ದರೂ ಆತ ನಿಮ್ಮನ್ನು ಒತ್ತಾಯಿಸಿದರೆ ನೀವು ಆತನನ್ನು ದೂರ ತಳ್ಳಿ.ಅಂತವರು ನಿಮ್ಮ ಪ್ರೀತಿಗೆ ಅರ್ಹರಲ್ಲ.

ಆತನ ಆಸಕ್ತಿಯನ್ನು ಗಮನಿಸಿ
ನೀವು ನಿಮ್ಮ ಹುಡುಗನೊಂದಿಗೆ ಸಂಬಂಧವನ್ನು ಇರಿಸಿಕೊಂಡಿದ್ದರೆ ಆತ ನೋಡುವ ಎಲ್ಲಾ ಶೋ ಗಳನ್ನೂ ನೋಡಿ.ಆದಾಗ್ಯೂ ನೀವು ಆತ ನಿಮ್ಮೊಂದಿಗೆ ಇಲ್ಲದಿದ್ದಾಗಲೂ ಆತ ನೋಡುವ ಎಲ್ಲಾ ಗೇಮ್ ಗಳನ್ನೂ ನೋಡಬೇಕೆಂದಿಲ್ಲ.ಆತನಿಗೆ ಇಷ್ಟವಾಗುವ ಎಲ್ಲಾ ಆಟಗಳು ನಿಮಗೆ ಇಷ್ಟವಾಗುವುದಿಲ್ಲ ಎಂಬುದನ್ನು ಆತ ಅರ್ಥ ಮಾಡಿಕೊಳ್ಳುತ್ತಾನೆ.ನೀವು ಆತನೊಂದಿಗೆ ಕುಳಿತು ಗೇಮ್ ನೋಡಿದರೆ ಆತನಿಗೆ ಇಷ್ಟವಾಗುವುದು ಹೌದು ಹಾಗೆಂದು ನೀವು ಆತನೊಂದಿಗೆ ನೋಡುತ್ತಾ ಕುಳಿತುಕೊಳ್ಳಬೇಕು ಎಂಬುದೇನು ಕಡ್ಡಾಯವಲ್ಲ.

ಆತನಿಗಾಗಿ ಅಡುಗೆ
ನಿಮಗೆ ಅಡುಗೆ ಮನೆಗೆ ಹೋಗುವುದು ಇಷ್ಟವೇ ಇಲ್ಲ ಎಂದರೆ ಎಲ್ಲಾ ಮಹಿಳೆಯೂ ಅಡುಗೆ ಚೆನ್ನಾಗಿ ಮಾಡಬೇಕು ಎಂಬುದನ್ನು ಇಟ್ಟುಕೊಳ್ಳಬೇಡಿ.ನೀವು ಓವನ್ ಹೇಗೆ ಉಪಯೋಗಿಸಬೇಕು ಎಂಬುದನ್ನು ಕಲಿಯುವುದು ಸೂಕ್ತವೇನೋ ಸರಿ ಹಾಗೆಂದು ಪ್ರತಿಯೊಂದನ್ನೂ ಕಲಿತಿರಬೇಕು ಎಂದೇನಿಲ್ಲ.ಹೌದು ನಿಮಗೆ ಬೇಕಾದ ಅಗತ್ಯ ಊಟವನ್ನು ತಯಾರಿಸಿಕೊಳ್ಳುವುದು ಸೂಕ್ತ ಅದಕ್ಕಾಗಿ ಅಡುಗೆ ಪುಸ್ತಕವನ್ನು ಬಳಸಿಕೊಂಡರೆ ತಪ್ಪೇನಿಲ್ಲ.



Click it and Unblock the Notifications