ನಿಮ್ಮ ಸ್ನೇಹಿತನ ಪ್ರೀತಿಯನ್ನು ತಿಳಿಯಲು 6 ಸಲಹೆಗಳು

By Super

ಎಲ್ಲರಿಗೂ ಸ್ನೇಹಿತ/ಸ್ನೇಹಿತೆಯರಿರುವುದು ಸಾಮಾನ್ಯ. ಆದರೆ ಕೆಲವು ಸಂಬಂಧಗಳು ಸ್ನೇಹವನ್ನೂ ಮೀರಿದ್ದಾಗಿರುತ್ತದೆ. ಆದರೆ ಅವರು ನಿಮ್ಮೊಳಗೆ ಮೋಹಗೊಂಡಿದ್ದಾರೆಯೇ ಎನ್ನುವುದು ನಿಮಗೆ ಗೊತ್ತಾಗುವುದು ಕಷ್ಟ. ಆದ್ದರಿಂದ ಕೆಲವು ಅವರ ವರ್ತನೆಯ ಚಿಹ್ನೆಗಳನ್ನು ಗಮನಿಸುವುದರ ಮೂಲಕ ಅವರು ನಿಮ್ಮನ್ನು ಮೋಹಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಆದರೆ ಅವರ ವರ್ತನೆಯನ್ನು ನೋಡಿ ಹೀಗೆಯೇ ಎಂದು ಹೇಳುವುದು ಕಷ್ಟ,

ಆದರೆ ನೀವು ನಿಮ್ಮ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ಮುಂದಿನ ಬಾರಿ ಅವರನ್ನು ಭೇಟಿಯಾದಾಗ ಅವರನ್ನು ಹೆಚ್ಚಾಗಿ ಗಮನಿಸಿ. ಅವರ ಕೆಲವು ವರ್ತನೆಗಳು ಅವರಿಗೆ ನಿಮ್ಮ ಮೇಲೆ ಮೋಹವಿದೆ ಎಂಬುದನ್ನು ಸೂಚಿಸದೇ ಇರಬಹುದು. ಆದರೆ ಅವರ ಪ್ರತಿಯೊಂದು ವರ್ತನೆಯನ್ನೂ ಗಮನಿಸಿ, ನೀವು ಒಂದು ನಿರ್ಧಾರಕ್ಕೆ ಬರಬಹುದು. ಯುವತಿಯರು ಪರ್ಯಾಯ ಪ್ರಿಯಕರನನ್ನು ಬಯಸುತ್ತಾರೆಯೇ?

ಅವರು ಹೊರಗೆ ಹೋದಾಗ ನಿಮಗೆ ಸಂದೇಶವನ್ನು ಕಳುಹಿಸುತ್ತಾರೆ

ನಮ್ಮ ಸ್ನೇಹಿತ ನಿಮ್ಮ ಮೇಲೆ ಮೋಹಗೊಂಡಿದ್ದಾರೆ ಎಂಬುದನ್ನು ತಿಳಿಯಲು ಅತ್ಯಂತ ಸುಲಭದ ಮಾರ್ಗ: ಅವರು ಹೊರಗಡೆ ಹೋದ ಸಂದರ್ಭದಲ್ಲಿ ಅಥವಾ ಅವರ ಬಿಡುವಿನ ವೇಳೆಯಲ್ಲಿ ಅವರು ನಿಮಗೆ ಸಂದೇಶವನ್ನು ಕಳುಹಿಸುತ್ತಾರೆ. ಅವರ ಸ್ನೇಹಿತರ ಜೊತೆಯಲ್ಲಿಯೇ ಅವರಿದ್ದರೂ ಅವರ ಮನಸ್ಸಿನಲ್ಲಿ ನೀವಿದ್ದರೆ ಆಗಾಗ ನಿಮಗೆ ಸಂದೇಶ ಕಳುಹಿಸುತ್ತಾರೆ. ನಿಮ್ಮ ಬಗ್ಗೆ ವಿಚಾರಿಸುತ್ತಾರೆ.

ಬೇಸರಗೊಳ್ಳುತ್ತಾರೆ (ನರ್ವಸ್ ಆಗುತ್ತಾರೆ)

ಒಬ್ಬ ವ್ಯಕ್ತಿ ನಿಮ್ಮ ಬಗ್ಗೆ ಯಾವುದಾದರೂ ಭಾವನೆಯನ್ನು ಹೊಂದಿದ್ದರೆ ಮಾತ್ರ ಆತಂಕ/ ನರ್ವಸ್ ಆಗುತ್ತಾರೆ. ಇಲ್ಲವಾದರೆ ಇದು ಸಹಜವಾಗಿ ಹುಡುಗರಲ್ಲಿರುವ ಗುಣವಲ್ಲ. ನಿಮ್ಮೊಂದಿಗೆ ಇರುವಾಗ ಆತ ಸಣ್ಣಗೆ ಬೆವರಿದರೆ ಅಥವಾ ಮಾತನಾಡಲು ತಡವರಿಸಿದರೆ ಖಂಡಿತವಾಗಿಯೂ ಅವನಿಗೆ ನಿಮ್ಮ ಮೇಲೆ ಬೇರೆಯದೇ ಭಾವನೆ ಮೂಡಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.

ನಿಮ್ಮನ್ನು ಅಭಿನಂದಿಸುವುದು

ನೀವು ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೂ ನಿಮ್ಮನ್ನು ಅವರು ಅಭಿನಂದಿಸುತ್ತಾರೆ ಎಂಬುದನ್ನು ಗಮನಿಸಿದ್ದೀರೆ? ಆದರೆ ಕೆಲವೊಮ್ಮೆ ಆತ ನಿಮ್ಮೊಂದಿಗೆ ವಿಲಕ್ಷಣವಾಗಿ ವರ್ತಿಸಿದರೆ ಅವನು ನಿಮ್ಮ ಬಗ್ಗೆ ಮೋಹದ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದರ್ಥ. ನೀವು ಅವನನ್ನು ಭೇಟಿಯಾದ ಪ್ರತಿ ಬಾರಿಯೂ ಅವರು ನಿಮ್ಮ ಸೌಂದರ್ಯವನ್ನು ಹೊಗಳಬಹುದು. ನಿಮ್ಮ ಯಾವುದೇ ಮಾತಿಗೆ ಆತ ನಗಬಹುದು. ಆತ ಅವನ ಸ್ನೇಹಿತರೊಂದಿಗೆ ಇರುವಾಗಲೂ ನಿಮ್ಮ ಬಗ್ಗೆಯೇ ಉಸುರುತ್ತಿದ್ದರೆ ಖಂಡಿತವಾಗಿಯೂ ಇದು ನಿಮ್ಮ ಮೇಲಿನ ಮೋಹವೇ ಸರಿ!

ನಿಮ್ಮ ಇಷ್ಟಗಳು ಮತ್ತು ಅಪ್ರಿಯವಾದವುಗಳನ್ನು ಅರಿತಿರುತ್ತಾನೆ

ನಿಮ್ಮ ಸ್ನೇಹಿತರು ನಿಮ್ಮ ಇಷ್ಟಗಳು ಮತ್ತು ಇಷ್ಟಪಡದಿರುವ ವಸ್ತುಗಳ ಬಗ್ಗೆ ಅರಿತಿರಬಹುದು. ಆದರೆ ಈತ ಅವರಿಗಿಂತ ಮುಂದಿನದನ್ನು ಯೋಚಿಸುತ್ತಾನೆ. ಉದಾ: ನಿಮ್ಮ ಹುಟ್ಟುಹಬ್ಬ ಅಥವಾ ಕ್ರಿಸ್ಮಸ್ ಉಡುಗೊರೆಯನ್ನು ನೀಡುವುದರ ಬಗ್ಗೆ ಆಲೋಚಿಸುತ್ತಾನೆ. ನಿಮ್ಮ ಇಷ್ಟ ಕಷ್ಟಗಳು ಹಾಗೂ ನೀವು ಹೇಳಿರುವ ಪ್ರತಿಯೊಂದು ಮಾತುಗಳನ್ನು ಆತ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.

ಕಣ್ಣೋಟ (ಆತನ ದೃಷ್ಟಿ)

ನೀವು ತರಗತಿಯಲ್ಲಿರುವಾಗ ಆತ ನಿಮ್ಮನ್ನು (ಪ್ರೀತಿಯಿಂದ ಅಥವಾ ಕೆಟ್ಟದಾಗಿ) ನಿಮ್ಮನ್ನು ದಿಟ್ಟಿಸುತ್ತಿರುವುದನ್ನು ಗನಮನಿಸಿದ್ದೀರಾ? ಅಥವಾ ನೀವು ಆಗಾಗ್ಗೆ ಅವರೊಂದಿಗೆ ಮಾತನಾಡುವಾಗ ನಿಮ್ಮ ಮಾತಿನ ಬಗ್ಗೆ ಅವನಿಗಿರುವ ಆಸಕ್ತಿಯನ್ನು ಗುರುತಿಸಿದ್ದೀರಾ? ನೀವು ಏನು ಹೇಳುತ್ತೀರಾ ಎಂಬುದನ್ನು ಕೇಳುವ ಕುತೂಹಲ ಅವನಲ್ಲಿರುತ್ತದೆ ಮತ್ತು ನಿಮ್ಮ ಮಾತಿನಲ್ಲಿ ಆತನಿಗೆ ಹೆಚ್ಚು ಆಸಕ್ತಿಯಿರುತ್ತದೆ. ನಿಮ್ಮ ಯಾವುದೇ ಮಾತುಗಳನ್ನಾದರೂ ಬಹಳ ಆಸಕ್ತಿಯಿಂದ ಕೇಳುತ್ತಾನೆ. ಮತ್ತು ನಿಮ್ಮ ಪ್ರತಿಯೊಂದು ಅಭಿಪ್ರಾಯಗಳೂ ಆತನಿಗೆ ಮುಖ್ಯವಾಗಿರುತ್ತವೆ. ಪುರುಷರು ತಮ್ಮ ಗೆಳೆತಿಯಿಂದ ಇಷ್ಟಪಡದಿರುವ ವಿಷಯಗಳಿವು

ನಿಮ್ಮ ಇನ್ನೊಂದು ಸ್ನೇಹಿತನ ಬಗ್ಗೆ ಅಸೂಯೆ ಹೊಂದಿರುತ್ತಾರೆ

ಕೆಲವು ಸ್ನೇಹಿತರು ತಮ್ಮ ಸ್ನೇಹಿತರ ಬಗ್ಗೆ ಕಾಳಜಿಯನ್ನು ಹೊಂದಿರುತ್ತಾರೆ ಎನ್ನುವುದು ಸತ್ಯ. ಆದರೆ ನಿಮ್ಮ ಈ ಸ್ನೇಹಿತ ನಿಮ್ಮ ಮೇಲೆ ಇಟ್ಟಿರುವ ಕಾಳಜಿ ಉಳಿದವರಿಗಿಂತ ಸ್ವಲ್ಪ ವಿಭಿನ್ನ! ನೀವು ಹೊರಗಡೆ ಯಾವುದಾದರೂ ಸ್ಥಳಗಳಲ್ಲಿದ್ದರೆ ನಿಮ್ಮ ಬೇರೆ ಸ್ನೇಹಿತರೊಂದಿಗಿದ್ದರೆ, ನಿಮ್ಮ ಈ 'ಸ್ನೇಹಿತ' ಹತ್ತಿರ ಬಂದು ನೀವು ಯಾವುದಾದರೂ ತೊಂದರೆಯಲ್ಲಿದ್ಡೀರೇ? ಎಂಬುದನ್ನು ಕೇಳಿ ಹಾಗೇನಾದರೂ ಇದ್ದರೆ ನಿಮಗೆ ಸಹಾಯಮಾಡಲು ಜೊತೆಗಿರುತ್ತಾನೆ. ಆದರೆ ನಿಮಗೆ ಕೇವಲ ಒಬ್ಬ ಸ್ನೇಹಿತನಾಗಿದ್ದವನು ನಿಮ್ಮನ್ನು ಅರ್ಧದಲ್ಲಿಯೇ ಬಿಟ್ಟು ಹೋಗುತ್ತಾನೆ. ಅಥವಾ ಬೇರೆ ಹುಡುಗಿಯೊಂದಿಗೆ ಬೆರೆಯುತ್ತಾನೆ. ಆದ್ದರಿಂದ ನಿಮ್ಮೊಂದಿಗೆ ನಿಮ್ಮನ್ನು ಕಾಳಜಿ ಮಾಡುವ ವ್ಯಕ್ತಿ ಇದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ.

X
Desktop Bottom Promotion