ಗೆಳತಿಯು ಅಪ್ಪಿ ತಪ್ಪಿಯೂ ಇಂತಹ 5 ರಹಸ್ಯವನ್ನು ಬಿಟ್ಟುಕೊಡುವುದಿಲ್ಲ!

By Super

ಪ್ರಪಂಚದ ಅತ್ಯಂತ ಬುದ್ಧಿವಂತ ಗಂಡಸು ಸಹ ಹೆಂಗಸಿಗೆ ಏನು ಬೇಕು ಎಂಬುದನ್ನು ಊಹಿಸಲಾರ. ಹೆಂಗಸರು ಯಾವಾಗಲು ನಿಗೂಢತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಅವರ ರಹಸ್ಯಗಳನ್ನು ಊಹಿಸಲು ನಿಮಗೆ ಕೆಲವೊಂದು ಸುಳಿವುಗಳನ್ನು ನಾವು ನೀಡುತ್ತೇವೆ. ಈ ಸುಳಿವುಗಳ ಆಧಾರದ ಮೇಲೆ ನೀವು ಅವರ ನಿಗೂಢತೆಯನ್ನು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದು. ಅದರಲ್ಲೂ ಆಕೆ ತುಟುಕ್ ಪಿಟುಕ್ ಎಂದು ತುಟಿಯೇ ತೆರೆಯದ ವಿಚಾರಗಳ ಕುರಿತು ಸಹ ಆ ವಿಚಾರಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುತ್ತಾಳೆ.

ಅದು ಹೆಣ್ಣಿನ ಸ್ವಭಾವ. ಒಬ್ಬ ಗಂಡಸಾಗಿ ನೀವು ಆಕೆಯ ನಿರೀಕ್ಷೆಗಳ ಮಟ್ಟಿಗೆ ಬದುಕುತ್ತಿರುತ್ತೀರಿ. ಆಕೆಯ ಅವಶ್ಯಕತೆಗಳು ಮತ್ತು ಅಗತ್ಯತೆಗಳ ಕುರಿತು ಸೂಕ್ಷ್ಮವಾಗಿ ಸ್ಮಂದಿಸುತ್ತಿರುತ್ತೀರಿ. ಆಕೆ ನಿಮ್ಮೊಂದಿಗೆ ಹಂಚಿಕೊಳ್ಳದ ವಿಷಯಗಳನ್ನು ನೀವು ಅರಿತುಕೊಂಡಾಗ ಮಾತ್ರ ನಿಮ್ಮ ಬಾಳು ಸುಖಮಯವಾಗಿರುತ್ತದೆ. ಒಂದು ವೇಳೆ ನೀವು ಉದಾಸೀನರಾಗಿದ್ದರೆ, ಆಕೆಯು ನಿಮ್ಮ ಕೈತಪ್ಪಿ ಹೋಗುತ್ತಾಳೆ. ಆಕೆಯ ಮೂಲಭೂತ ಅಗತ್ಯತೆಗಳನ್ನು ನೀವು ಅರಿತುಕೊಳ್ಳದಿದ್ದರೆ, ಆಕೆಯನ್ನು ಪಡೆಯಬೇಕೆಂಬ ನಿಮ್ಮ ಪ್ರಯತ್ನಗಳೆಲ್ಲವು ವಿಫಲವಾಗುತ್ತವೆ. ವೈವಾಹಿಕ ಜೀವನದಲ್ಲಿ ಸರಸ ಸಲ್ಲಾಪ ಏಕೆ ಮಹತ್ವಪೂರ್ಣ?

ಏನೇ ಇರಲಿ ಸಂಬಂಧ ಎನ್ನುವುದು ರಾಕೆಟ್ ವಿಜ್ಞಾನವಲ್ಲ ಅದರಲ್ಲೂ ಒಬ್ಬ ಹೆಣ್ಣನ್ನು ನಿಜವಾಗಿ ಪ್ರೀತಿಸುವ ಗಂಡಸಿಗೆ ಆಕೆಯ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಜಾಗರೂಕತೆಯಿಂದ ಈ ಕೆಳಕಂಡ ಅಂಶಗಳನ್ನು ಓದಿ. ಇನ್ನು ಮುಂದೆ ಆಕೆಯನ್ನು ಅಚ್ಚರಿಗೊಳಿಸಲು ಸಿದ್ಧರಾಗಿ. ಆಕೆಯು ಸಹ ನಿಮ್ಮನ್ನು ಇಷ್ಟಪಡಲು ಶುರು ಮಾಡುತ್ತಾಳೆ.

5 Things She’ll Never Tell You

ಆಕೆಯು ನಿಮ್ಮ ರಹಸ್ಯಗಳನ್ನು ಅರಿತಿರುತ್ತಾಳೆ
ನಿಮ್ಮ ಹುಡುಗಿಗೆ ನೀವು ಯಾವ ಮಹಿಳಾ ಸಹೋದ್ಯೋಗಿ ಮರುಳಾಗಿದ್ದೀರಿ ಎಂಬ ವಿಚಾರ ತಿಳಿದಿರುತ್ತದೆ. ಆದರೆ ಅದನ್ನು ನಿಮ್ಮ ಮುಂದೆ ಆಕೆ ಹೇಳಿಕೊಳ್ಳುವುದಿಲ್ಲ. ನೀವು ನಿಮ್ಮ ಸಹೋದ್ಯೋಗಿಯನ್ನು ಹೇಗೆ ಮಾತನಾಡಿಸುತ್ತೀರಾ ಮತ್ತು ಆಕೆಯೊಂದಿಗೆ ಹೇಗೆ ನಡೆದುಕೊಳ್ಳುತ್ತೀರಾ ಎಂಬುದರ ಮೇಲೆ, ಆಕೆ ಈ ತೀರ್ಮಾನಕ್ಕೆ ಬಂದಿರುತ್ತಾಳೆ. ಇದರ ಪರಿಣಾಮವಾಗಿ ಆಕೆ ನಿಮ್ಮ ಮೇಲೆ ನಿಗಾ ಇರಿಸಿರುತ್ತಾಳೆ. ಆಕೆ ನಿಮ್ಮ ಗುಟ್ಟನ್ನು ಬಯಲು ಮಾಡುವ ಮೊದಲು, ಸುಮ್ಮನೆ ನಿಮ್ಮ ಮಹಿಳಾ ಸಹೋದ್ಯೋಗಿಯೊಂದಿಗಿನ ಒಡನಾಟವನ್ನು ಬಿಟ್ಟು ಬಿಡಿ. ಇಲ್ಲವಾದಲ್ಲಿ ಕಪಾಳ ಮೋಕ್ಷ ದೊರೆಯುವ ಸಾಧ್ಯತೆಗಳುಂಟು!!!.

ಕುಟುಂಬದ ವಿಚಾರಗಳು!
ಆಕೆ ನಿಮ್ಮ ತಾಯಿಯ ಜೊತೆಗೆ ಅದ್ಭುತವಾದ ಅನುಬಂಧವನ್ನು ಹೊಂದಿರಬಹುದು. ಆದರೆ ಕುಟುಂಬದ ಜೊತೆಗೆ ಸಮಯ ಕಳೆಯುವ ಅವಕಾಶವನ್ನು ಒದಗಿಸಿದರೆ, ಆಕೆ ತನ್ನ ತಂದೆ-ತಾಯಿ ಕುಟುಂಬದ ಜೊತೆಗೆ ಸಮಯ ಕಳೆಯುತ್ತಾಳೆಯೇ ಹೊರತು, ನಿಮ್ಮ ಕುಟುಂಬದ ಜೊತೆಗಲ್ಲ. ಇದು ಏಕೆ ಎಂದು ಯಾವತ್ತಿಗೂ ಆಕೆ ನಿಮ್ಮೊಂದಿಗೆ ಹೇಳಿಕೊಳ್ಳುವುದಿಲ್ಲ. ಆದರೆ ನೀವೇ ಇದನ್ನು ಅರ್ಥ ಮಾಡಿಕೊಂಡು ಆಕೆಯನ್ನು ಆಕೆಯ ಪಾಡಿಗೆ ತನ್ನಿಷ್ಟದಂತೆ ಬಿಟ್ಟು ಬಿಡಿ.

ಯಾವಾಗ ಆಕೆ " ಇದು ಓಕೆ.........." ಎಂದು ಹೇಳುತ್ತಾಳೆ
ಯಾವುದೇ ವಿಚಾರಕ್ಕಾಗಲಿ ಆಕೆ ಇದು ಓಕೆ, ಪರವಾಗಿಲ್ಲ ಎಂದು ಹೇಳುತ್ತಾಳೆಯೋ, ಅದನ್ನು ನೀವು ಓಕೆ ಎಂದು ಪರಿಗಣಿಸಲು ಹೋಗಬೇಡಿ. ಅದರರ್ಥ ಅದು ಇನ್ನೂ ಪರಿಪೂರ್ಣವಾಗಲು ನೀವು ಇನ್ನೂ ಏನೋ ಮಾಡಬೇಕು ಎಂದು ಆಕೆ ಹೇಳುತ್ತಿರುತ್ತಾಳೆ. ಅದು ಏನೆಂದು ನೀವೇ ಹುಡುಕಬೇಕು, ಇದನ್ನು ಯಾವ ಗರ್ಲ್ ಫ್ರೆಂಡ್ ಸಹ ಬಾಯಿ ಬಿಟ್ಟು ಹೇಳುವುದಿಲ್ಲ. ಮುರಿದು ಹೋದ ಸಂಬಂಧವನ್ನು ಸರಿಪಡಿಸಲು ಸರಳ ಸಲಹೆಗಳು

ಆಕೆಗೆ ಉಡುಗೊರೆಗಳು ಬೇಕು
ಹೆಂಗಸರಿಗೆ ಉಡುಗೊರೆಗಳೆಂದರೆ ಅಚ್ಚು ಮೆಚ್ಚು. ಆದರೆ ಅದನ್ನು ಅವರು ಬಾಯಿ ತೆಗೆದು ಹೇಳುವುದಿಲ್ಲ. ಆದರೆ ನೀವು ಮಾತ್ರ ಆಕೆಗೆ ನಿಯಮಿತವಾಗಿ ಕೆಲವೊಂದು ಉಡುಗೊರೆಗಳನ್ನು ಕಳುಹಿಸುತ್ತಾ ಇರಬೇಕು. ಆದರೂ ಆಕೆ ನಿಮ್ಮನ್ನು ಉಡುಗೊರೆಗಳಿಂದಲೆ ಅಳೆಯುವುದಿಲ್ಲ. ಆದರೆ ಈ ಪ್ರಕ್ರಿಯೆಯು ಮಹಿಳೆಯ ಅಗತ್ಯತೆಗಳಿಗೆ ನೀವು ಸ್ಪಂದಿಸುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ.

ಅಲಂಕಾರದ ಕೌಶಲ್ಯಗಳು
ಒಂದು ಹುಡುಗಿ ನಿಮ್ಮೊಂದಿಗೆ ಇದ್ದರೆ, ಆಕೆ ಸಂಪೂರ್ಣವಾಗಿ ನಿಮ್ಮವಳಾಗಿರುತ್ತಾಳೆ ಎಂದು ಭಾವಿಸಬೇಡಿ. ಆಕೆ ನಿರಂತರವಾಗಿ ನಿಮ್ಮನ್ನು ಗಮನಿಸುತ್ತಾ ಇರುತ್ತಾಳೆ. ನೀವು ಪರಿಶೀಲನೆಗ ಒಳಪಡುತ್ತೀರುತ್ತೀರಿ. ಆದ್ದರಿಂದ ಶುಚಿತ್ವವನ್ನು ಕಾಪಾಡಿ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ. ನಿಮ್ಮ ಉಗುರುಗಳನ್ನು ಕತ್ತರಿಸಿ, ತಲೆ ಕೂದಲನ್ನು ಕತ್ತರಿಸಿ ಮತ್ತು ನಿಯಮಿತವಾಗಿ ಗಡ್ಡವನ್ನು ತೆಗೆಯಿರಿ. ಊಟದ ಜೊತೆಗೆ ಈರುಳ್ಳಿ ಮುಂತಾದವನ್ನು ಸೇವಿಸಿ ಬರುವ ನಿಮ್ಮನ್ನು ಮತ್ತು ನಿಮ್ಮ ವಾಸನೆಯನ್ನು ಆಕೆ ಇಷ್ಟಪಡುವುದಿಲ್ಲ. ದಂಪತಿಗಳ ಕಲಹದಲ್ಲಿ ಎಂದಿಗೂ ಇಂತಹ ಮಾತುಗಳು ಬಾರದಿರಲಿ!

ದೇಹದ ದುರ್ಗಂಧವನ್ನು ಗಮನಿಸಿ ಪರಿಹಾರ ಹುಡುಕಿಕೊಳ್ಳಿ. ಸುಮಾರು ವಿಚಾರಗಳನ್ನು ಹುಡುಗಿಯರು ನಿಮ್ಮೊಂದಿಗೆ ಹೇಳಿಕೊಳ್ಳುವುದಿಲ್ಲ. ಹಾಗೆಂದು ಅದರ ಬಗ್ಗೆ ಉದಾಸೀನ ಮಾಡಬೇಡಿ. ಹಾಗೆ ಮಾಡಿದರೆ ನೀವು ಆಕೆಯನ್ನು ಕಳೆದುಕೊಳ್ಳುವಿರಿ. ಆಕೆಯ ಅಗತ್ಯತೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿ ನೀವಿರಿ. ನಿಮಗೆ ಮುಜುಗರವಾಗುವಂತಹ ವಿಚಾರಗಳನ್ನು ಆಕೆ ಮಾತನಾಡುವವರೆಗೆ ಕಾಯುತ್ತ ಕುಳಿತುಕೊಳ್ಳಬೇಡಿ.

Story first published: Monday, December 8, 2014, 23:06 [IST]
X
Desktop Bottom Promotion