Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಪ್ರತಿಯೊಬ್ಬ ಗಂಡಸು ತನ್ನ ಹೆಂಡತಿಯಲ್ಲಿ ಅಪೇಕ್ಷಿಸುವ 15 ಗುಣಗಳು
ಮದುವೆಯಾಗಲು ಹೆಣ್ಣನ್ನು ಹುಡುಕುವ ಪ್ರತಿಯೊಬ್ಬ ಭಾರತೀಯನು ತನ್ನ ಹೆಂಡತಿಯಾಗುವವಳಲ್ಲಿ ಕೆಲವೊಂದು ಅಂಶಗಳನ್ನು ನಿರೀಕ್ಷಿಸುತ್ತಾನೆ. ನೋಡಲು ಲಕ್ಷಣವಾಗಿ, ಮುದ್ದಾಗಿ ಕಾಣುವ ಹೆಣ್ಣು ಈತನ ಮೊದಲ ಆಯ್ಕೆಯಾಗಿರುತ್ತಾಳೆ. ಭಾರತೀಯ ಗಂಡಸಿಗೆ ತನ್ನ ತಾಯಿ ಮೊದಲ ಆಧ್ಯತೆಯಾಗಿರುತ್ತಾಳೆ.
ಯಾರು ತನ್ನ ತಾಯಿಯ ಜೊತೆ ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೋ, ಆ ಹುಡುಗಿಯನ್ನು ಈತ ಇಷ್ಟ ಪಡುತ್ತಾನೆ. ಜೊತೆಗೆ ಸದಾಕಾಲ ತನ್ನ ಯೋಗ ಕ್ಷೇಮವನ್ನು ನೋಡಿಕೊಳ್ಳುವಂತಹ ಹೆಣ್ಣು ಗಂಡಸರ ಆಯ್ಕೆಯಾಗಿರುತ್ತಾಳೆ. ಈ ಮೇಲಿನ ಅಂಶಗಳು ಕೇವಲ ಮುಖ್ಯಾಂಶಗಳಷ್ಟೇ!, ಇವುಗಳೆಲ್ಲವನ್ನು ಹೊರತುಪಡಿಸಿ ಭಾರತೀಯ ಗಂಡಸು ತನ್ನ ಹೆಂಡತಿಯಲ್ಲಿ ಅಪೇಕ್ಷಿಸುವ ಬಹಳಷ್ಟು ಅಂಶಗಳು ಇವೆ. ಆತ ತನ್ನ ಕನಸಿನ ಹೆಂಡತಿಯಲ್ಲಿ ಬಯಸುವ ಗುಣಗಳೇನು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ಓದಿ ತಿಳಿದುಕೊಳ್ಳಿ
ಮದುವೆಯಾಗಲು ಸಿದ್ಧರಾಗಿರುವ ಹೆಣ್ಣು ಮಕ್ಕಳು ತಪ್ಪದೆ ತಿಳಿದಿರಬೇಕಾದ ಕೆಲವೊಂದು ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಗಂಡನಾಗುವವನು ನಿಮ್ಮಲ್ಲಿ ಬಯಸುವ ಗುಣಗಳನ್ನು ತಿಳಿದುಕೊಂಡು ಅದನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ. ಯಾರಿಗೆ ಗೊತ್ತು! ಬಹುಶಃ ನೀವು ಒಬ್ಬ ಮಿ. ಪರ್ಫೆಕ್ಟ್ ಅನ್ನೇ ವರಿಸಬಹುದು. ಇನ್ನೇಕೆ ತಡ ಮುಂದುವರಿಯಿರಿ. ವಧುವಾಗ ಬೇಕಾದವಳ ರಹಸ್ಯಗಳನ್ನು ತಿಳಿಯಲು

ಮೈ ಡೊಂಕಿನ ವೈಯ್ಯಾರಿ
ಹೌದು, ಭಾರತೀಯ ಗಂಡಸರು ಆ ಬಿಂಕದ ಸಿಂಗಾರಿಯನ್ನು ಮರೆತರು, ಈ ಮೈಡೊಂಕಿನ ವೈಯ್ಯಾರಿಯನ್ನು ಮರೆಯಲಾರರು. ಕಣ್ಣಿಗೆ ಸೊಬಗನ್ನು ನೀಡುವ ನಿಮ್ಮ ಮೈಡೊಂಕುಗಳು ಆತನನ್ನು ನಿಮ್ಮೆಡೆಗೆ ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಅಡುಗೆಯನ್ನು ಬಲ್ಲ ಹುಡುಗಿ
ಗಂಡನ್ನು ಗೆಲ್ಲಬೇಕಾದವಳು ಮೊದಲು ಅವನಿಗೆ ತನ್ನ ಕೈ ರುಚಿಯನ್ನು ಸವಿಯಲು ನೀಡಬೇಕು. ಗಂಡಸಿನ ಹೊಟ್ಟೆಯನ್ನು ತುಂಬಿಸಿದರೆ ಅಲ್ಲಿಂದ ಅವನ ಹೃದಯಕ್ಕೆ ದಾರಿಯು ನಿಮಗೆ ತೆರೆದುಕೊಳ್ಳುತ್ತದೆ. ಒಂದಷ್ಟು ಬೊಂಬಾಟ್ ಭೋಜನ, ಒಗ್ಗರಣ್ಣೆ ಡಬ್ಬಿ ಕಾರ್ಯಕ್ರಮಗಳನ್ನು ನೋಡಿ ಕಲಿತಿರಿ.

ಅತ್ತೆಯೊಂದಿಗೆ ಹೊಂದಿಕೊಳ್ಳುವ ಮನೋಭಾವ
ಯಾವುದೇ ಪೂರ್ವಾಗ್ರಹಗಳಿಲ್ಲದೆ ನಿಮ್ಮ ಗಂಡನ ಅಮ್ಮ ಅಂದರೆ ನಿಮ್ಮ ಅತ್ತೆಯೊಂದಿಗೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ. ಸಾಕು! ಆತ ನಿಮ್ಮನ್ನು ಪ್ರೀತಿಸಲು ಶುರು ಮಾಡಿಕೊಳ್ಳುತ್ತಾನೆ. ಈ ಅಂಶವಂತು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಮರೆಯಬೇಡಿ.

ಕ್ರಿಕೆಟ್ ಇಷ್ಟಪಡುವ ಹೆಂಗಸು
ತೀರಾ ಆಟಗಾರರನ್ನು ಆರಾಧಿಸುವ ಮಟ್ಟಕ್ಕೆ ಬೇಡ. ಆದರೆ ತಾನು ಕ್ರಿಕೆಟ್ ನೋಡುವಾಗ ತನ್ನ ಜೊತೆಯಲ್ಲಿ ಕುಳಿತು ಆಟದ ಮೋಜನ್ನು ಅನುಭವಿಸುವಂತಹ ಹುಡುಗಿ ಭಾರತೀಯ ಗಂಡಸರ ಮೆಚ್ಚಿನ ಆಯ್ಕೆಯಾಗಿರುತ್ತಾಳೆ. ಸ್ವಲ್ಪ ಧಾರಾವಾಹಿಗಳ ಜೊತೆಗೆ ಆಗಾಗ ಕ್ರಿಕೆಟ್ ನೋಡಿ, ಅದರ ಕುರಿತು ತಿಳಿದುಕೊಳ್ಳಿ.

ಸಂಪ್ರದಾಯಗಳನ್ನು ಪಾಲಿಸುವ ಹೆಂಗಸು
ಆಕೆ ಬೇಕಾದರೆ ತನ್ನ ನಡೆ ನುಡಿಗಳಲ್ಲಿ ಆಧುನಿಕತೆಯನ್ನು ವ್ಯಕ್ತಪಡಿಸಲಿ, ಆದರೆ ಸಂಪ್ರದಾಯಗ್ಳನ್ನು ಪಾಲಿಸುವ ಹೆಂಗಸು ಎಲ್ಲಾ ಗಂಡಸರ ಆಯ್ಕೆಯಾಗಿರುತ್ತಾಳೆ. ಆಗಾಗಿ ಸಂಪ್ರದಾಯಗಳ ಕುರಿತಾಗಿ ಚಾಚೂ ತಪ್ಪದೆ ತಿಳಿದುಕೊಳ್ಳಿ. ಇದು ನಿಮ್ಮ ಕುರಿತಾಗಿ ಆತನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮಿಸ್ ಇಂಡಿಯಾ
ಭಾರತೀಯ ಹೆಂಗಸರು ವಿಶ್ವದಲ್ಲಿಯೇ ತಮ್ಮ ಅಂದಕ್ಕೆ ಹೆಸರುವಾಸಿ. ಆದ್ದರಿಂದ ಪ್ರತಿಯೊಬ್ಬ ಗಂಡಸು ತನ್ನ ಹೆಂಡತಿಯಾಗುವವಳು ಸುಂದರಿಯಾಗಿರಬೇಕೆಂದು ಇಷ್ಟಪಡುತ್ತಾನೆ. ಆದ್ದರಿಂದ ಇರುವುದರಲ್ಲಿಯೇ ನಿಮ್ಮನ್ನು ಸುಂದರವಾಗಿ ಕಾಣುವಂತೆ ನೀವು ತಯಾರಾಗುವುದನ್ನು ಮರೆಯಬೇಡಿ. ಅಂದ ಚಂದಕ್ಕೆ ಆಧ್ಯತೆ ನೀಡಿ.

ಹಾಸ್ಯ ಪ್ರವೃತ್ತಿ
ಹೆಂಗಸರಲ್ಲಿ ಹಾಸ್ಯ ಪ್ರವೃತ್ತಿ ಮನೆ ಮಾಡಿದ್ದರೆ, ಯಾವ ಗಂಡಸು ತಾನೇ ಆಕೆಯನ್ನು ಇಷ್ಟಪಡುವುದಿಲ್ಲ. ಆಗಾಗ ಅವರು ತಮ್ಮ ಗಂಡಂದಿರನ್ನು ನಗುವಂತೆ ಮಾಡುತ್ತಿದ್ದರೆ, ಗಂಡಂದಿರ ಒತ್ತಡವು ಕಡಿಮೆಯಾಗುತ್ತದೆ. ಆಗಾಗಿ ಸಂಕೋಚವನ್ನು ಪಕ್ಕಕ್ಕಿಟ್ಟು ನಾಲ್ಕು ನಗೆಹನಿಗಳನ್ನು ಹಂಚಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಿ.

ಬೆಡ್‍ರೂಮಿನಲ್ಲಿ ಸೃಜನಶೀಲತೆಯನ್ನು ತೋರಬೇಕು.
ಹೇಳಿ ಕೇಳಿ ಕಾಮಸೂತ್ರವು ಭಾರತದಲ್ಲಿ ಜನಿಸಿದ್ದು, ಹೊರಗೆ ಗರತಿ ಗೌರಮ್ಮನಂತಿರುವ ಹೆಂಗಸು ಸಹ ಬೆಡ್‍ರೂಮಿನಲ್ಲಿ ತನ್ನ ಗಂಡನ ಡ್ರೀಮ್ ಗರ್ಲ್ ಆಗಬೇಕು. ಅಷ್ಟಕ್ಕೂ ಆತ ಯಾರೂ ನಿಮ್ಮ ಗಂಡ ತಾನೇ? ನಾಚಿಕೆಯನ್ನು ರೂಮ್‍ನಿಂದ ಹೊರಗೆ ಇಟ್ಟು ಆತನಿಗೆ ಮುದ ನೀಡಿ, ಆತನೊಂದಿಗೆ ಆಟವಾಡಿ ಸಾಕು. ಆತ ನಿಮ್ಮನ್ನು ಆರಾಧಿಸುವ ವ್ಯಕ್ತಿಯಾಗಿ ಬಿಟ್ಟಿರುತ್ತಾನೆ.

ಮಕ್ಕಳೆಂದರೆ ಪ್ರೀತಿ
ಮೊದಲು ತನ್ನ ಗಂಡನನ್ನು ಮಗುವಿನಂತೆ ಪ್ರೀತಿಸುವ ಹೆಂಗಸು, ಗಂಡಸಿನಲ್ಲಿ ಒಳ್ಳೆಯ ತಾಯಿಯಾಗುತ್ತಾಳೆ ಎಂಬ ಭರವಸೆಯನ್ನು ಮೂಡಿಸುತ್ತಾಳೆ. ಇದು ಹೆಂಗಸಿಗೆ ಅತ್ಯಗತ್ಯವಾಗಿ ಬೇಕಾದಂತಹ ಗುಣ ತಪ್ಪದೇ ಬೆಳೆಸಿಕೊಳ್ಳಿ.

ದಣಿವರಿಯದ ಅರಗಿಣಿ
ಹೌದು, ಪ್ರತಿಯೊಬ್ಬ ಗಂಡಸು ತನ್ನ ಹೆಂಡತಿಯನ್ನು ನಿಸ್ಸಂಶಯವಾಗಿ ಪ್ರೀತಿಸಲು ಆರಂಭಿಸುವುದು, ಆಕೆ ಮಾಡುವ ಕೆಲಸಗಳಿಂದ. ಹತ್ತು ಕೈಗಳನ್ನು ಪಡೆದು ಬಂದಿದ್ದಾಳೋ, ಎಂಬಂತೆ ಕೆಲಸ ಮಾಡುವ ಹೆಣ್ಣು, ಗಂಡಸಿನ ಅರಗಿಣಿಯಾಗಿಬಿಡುತ್ತಾಳೆ. ಎಲ್ಲಾ ಕೆಲಸಗಳನ್ನು ಒಟ್ಟಿಗೆ ಆಯಾಸವನ್ನು ತೋರದೆ ಮಾಡುವ ಹೆಣ್ಣಿಗೆ ಗಂಡ ಏನು? ಇಡೀ ಮನೆಯೇ ಶರಣಾಗುತ್ತದೆ!. ಸ್ವಲ್ಪ ಕೆಲಸ ಮಾಡಲು ಕಲಿತುಕೊಂಡಿರಿ ಪ್ಲೀಸ್!, ನಿಮಗಾಗಿ ಮತ್ತು ನಿಮ್ಮ ಜೀವನಕ್ಕಾಗಿ!.

ಧಾರ್ಮಿಕ ಮನೋಭಾವ
ದೈಹಿಕ ಆಕರ್ಷಣೆಯನ್ನು ಹೊರತುಪಡಿಸಿ ಭಾರತೀಯ ಗಂಡಸರು ಹೆಣ್ಣಿನತ್ತ ಆಕರ್ಷಿತಗೊಳ್ಳುವುದು ಧಾರ್ಮಿಕ ಮನೋಭಾವವನ್ನು ಹೊಂದಿರುವ ಹುಡುಗಿಯರತ್ತ. ಲಕ್ಷಣವಾಗಿ ಸೀರೆಯುಟ್ಟು, ತಲೆಯಲ್ಲಿ ಹೂ ಮುಡಿದುಕೊಂಡು, ಹಣೆಗೆ ಕುಂಕುಮವಿಟ್ಟುಕೊಂಡು ತನ್ನ ಮುಂದೆ ನಿಲ್ಲುವ ಹೆಂಡತಿಯನ್ನು ಅಭಿಮಾನ ತುಂಬಿದ ಮುಗುಳ್ನಗೆಯೊಂದಿಗೆ ನೋಡುತ್ತಿರುತ್ತಾನೆ!, ಭಾರತೀಯ ಗಂಡ.

ನಿರ್ಮಲವಾದ ಪ್ರೀತಿ ಮತ್ತು ಮಮತೆ
ತನ್ನ ಗಂಡನ ಕುರಿತಾಗಿ ನಿರ್ಮಲವಾದ ಪ್ರೀತಿ ಮತ್ತು ಮಮತೆಯನ್ನು ವ್ಯಕ್ತಪಡಿಸುವ ಹೆಂಡತಿ ಆತನ ದೊಡ್ಡ ಆಸ್ತಿಯಾಗಿರುತ್ತಾಳೆ. ತನ್ನನ್ನು ಲಲ್ಲೆಗರೆಯುವ, ಮುದ್ದು ಮಾಡುವ, ಪ್ರೀತಿಯಿಂದ ಸ್ವಲ್ಪ ಹಾಳು ಮಾಡುವ ಹೆಂಡತಿಯರನ್ನು ಗಂಡಸರು ಬಯಸುತ್ತಾರೆ. ಅಷ್ಟೇಕೆ ತನ್ನ ಹೆಂಡತಿ ಒಬ್ಬ ಸೂಪರ್ ಮಹಿಳೆ ಆಗಿರಬೇಕೆಂಬ ಬಯಕೆಯು ಸಹ ಆತನಿಗಿರುತ್ತದೆ.

ಸದಾ ತಪ್ಪನ್ನು ಹುಡುಕಬಾರದು
ಇದೊಂದು ಅತ್ಯಂತ ಮಹತ್ವದ ಅಂಶ! ಭಾರತೀಯ ಗಂಡಸರು ತಪ್ಪದೆ ಅಪೇಕ್ಷಿಸುವ ಗುಣ ಇದು. ಹೆಂಡತಿಯರು ಗಂಡ ಅಪ್ಪಿ ತಪ್ಪಿ ತಪ್ಪು ಮಾಡಿದರು ಅದನ್ನು ಕ್ಷಮಿಸುವ ಉದಾರ ಮನೋಭಾವವನ್ನು ತೋರಬೇಕು ಎಂಬುದು ಗಂಡಸರ ಅಭಿಪ್ರಾಯ. ತಪ್ಪು ಮಾಡಿದ ಗಂಡಸಿಗೆ ಕೀಳರಿಮೆ ಇರುತ್ತದೆ, ಹೆಂಡತಿಯರು ಅದನ್ನು ಎತ್ತಿ ತೋರಿಸಿ ಅವರನ್ನು ಮತ್ತಷ್ಟು ಕೆಳಕ್ಕೆ ತಳ್ಳಬಾರದು.

ತನ್ನ ಪಾಡಿಗೆ ತನ್ನನ್ನು ಬಿಡಬೇಕು
ಈಗ ಪ್ರತಿಯೊಬ್ಬರು ತಮ್ಮ ಜೀವನವನ್ನು ಸ್ವತಂತ್ರವಾಗಿ ಅನುಭವಿಸಲು ಆಸಕ್ತಿ ತೋರುತ್ತಾರೆ. ಗಂಡಸರು ಈ ವಿಷಯದಲ್ಲಿ ಹೆಚ್ಚಿಗೆ ಸ್ವಾತಂತ್ರ್ಯ ಬಯಸುತ್ತಾರೆ. ತನ್ನ ಗಂಡನ ಖಾಸಗಿ ಕ್ಷಣಗಳನ್ನು ಅನುಭವಿಸಲು ಸಹಕರಿಸುವ ಹೆಂಡತಿಯು ಗಂಡನ ಡಾರ್ಲಿಂಗ್ ಆಗಿರುತ್ತಾಳೆ. ಬಿಟ್ಟು ಬಿಡಿ ಇದು ಕೇವಲ ಒಂದು ಸ್ವಲ್ಪ ಹೊತ್ತಿನ ವಿಚಾರ, ಅವನನ್ನು ಅವನ ಪಾಡಿಗೆ ಬಿಡಿ. ಆ ಕಾಲ ಮುಗಿದ ಮೇಲೆ ಅವನು ನಿಮ್ಮ ಪಕ್ಕದಲ್ಲಿ ನಿಂತಿರುತ್ತಾನೆ.

ಆಕೆ ಸೋಮಾರಿಯಾಗಿರಬಾರದು
ಇದೊಂದು ಕಡ್ಡಾಯವಾದ ನಿಯಮ. ಭಾರತೀಯ ಗಂಡಸು ಯಾವುದೇ ಕಾರಣಕ್ಕು ಸೋಮಾರಿಯಾಗಿರುವ ಹುಡುಗಿಯನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಲು ಬಯಸುವುದಿಲ್ಲ.



Click it and Unblock the Notifications











