ಗಂಡಸರು ಲೈಂಗಿಕತೆಯಲ್ಲಿ ನಿರಾಸಕ್ತಿ ಹೊಂದಲು 14 ಕಾರಣಗಳು

By Super

ನೀವು ಎಂದಾದರು ಕೇಳಿದ್ದೀರಾ, ಗಂಡಸರು ಸಹ ಮಿಲನ ಬೇಡ!! ಎನ್ನುತ್ತಾರಾ? ಅದಕ್ಕೆ ಕಾರಣಗಳು ಏನು ಎಂದು ಎಂದಾದರು ಚಿಂತಿಸಿದ್ದೀರಾ? ಮನಃ ಶಾಸ್ತ್ರಜ್ಞರ ಪ್ರಕಾರ ಅದಕ್ಕೆ ಎರಡು ಕಾರಣಗಳು ಇರಬೇಕು. ಒಂದು ಭಾವನಾತ್ಮಕ ಕಾರಣಗಳಾದರೆ, ಮತ್ತೊಂದು ಒಂದು ಹುಡುಗಿಯನ್ನು ಲೈಂಗಿಕವಾಗಿ ತೃಪ್ತಿಪಡಿಸಲು ಅಸಾಧ್ಯ ಎಂದು ಅರಿವಾದಾಗ ಇರಬಹುದು.

ಕೆಲವೊಮ್ಮೆ ದೀರ್ಘ ಕಾಲದ ಸಂಬಂಧದಲ್ಲಿ ಒಬ್ಬ ಹುಡುಗಿಯನ್ನು ಲೈಂಗಿಕವಾಗಿ ತೃಪ್ತಿಪಡಿಸಲು ಅಸಾಧ್ಯವೆಂದು ಅರಿವಾದಾಗ ಅವರು ಮಿಲನಕ್ಕೆ ಒಲ್ಲೆ ಎನ್ನುತ್ತಾರೆ. ಮತ್ತೊಂದು ಕಾರಣವೆಂದರೆ ಗಂಡಸರಿಗೆ ಬೇರೆ ರೀತಿಯ "ಭಾವನೆಗಳು" ಇರುತ್ತವೆ. ಅದನ್ನು ಸಾಮಾನ್ಯವಾಗಿ ಅವರು ತಮ್ಮ ಸಂಗಾತಿಗಳ ಜೊತೆಗೆ ಹಂಚಿಕೊಳ್ಳುವುದಿಲ್ಲ. ಅದು ಹೇಗೆ ಎಂದರೆ, ಹೆಂಗಸರು ಹೇಗೆ ತಮ್ಮ ಮೂಡ್ ಆನ್ ಮತ್ತು ಆಫ್ ಮಾಡುತ್ತಾರೋ, ಹಾಗೆಯೇ ಗಂಡಸರು ಸಹ ತಮ್ಮ ನಡವಳಿಕೆಗಳಿಗೆ ಅನುಗುಣವಾಗಿ ಆನ್ ಆಫ್ ಆಗುತ್ತದೆ. ಇದನ್ನು ಬಹುತೇಕ ಹೆಂಗಸರು ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಾರೆ.

ವಿವಾಹ ಪೂರ್ವ ಮಿಲನ ಏಕೆ ಸಲ್ಲದು? ಇಲ್ಲಿದೆ 10 ಕಾರಣಗಳು

ಮದುವೆಯಾಗಿ ಸ್ವಲ್ಪ ವರ್ಷವಾದ ಮೇಲೆ ಮಿಲನದ ಕುರಿತಾಗಿ ಈ ಮೊದಲು ಇರುವ ತುಡಿತ ಕಡಿಮೆಯಾಗುತ್ತ ಹೋಗುತ್ತದೆ. ಇದಕ್ಕೆ ಕಾರಣ ದಂಪತಿಗಳು ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿರುತ್ತಾರೆ. ಇವರ ಆತ್ಮೀಯತೆಯು ಅನೇಕ ಕಾರಣಗಳಿಂದಾಗಿ ಕಾಣೆಯಾಗಿ ಬಿಡುತ್ತದೆ. ಇದೇ ಕಾರಣವಾಗಿ ಅವರು ಮಿಲನ ಬೇಡ,,, ಎನ್ನುತ್ತಾರೆ. ಈ ಕೆಳಕಂಡ ಕಾರಣಗಳಿಗಾಗಿ ಗಂಡಸರು ಮಿಲನದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಅವುಗಳ ವಿವರವನ್ನು ಮುಂದೆ ಓದಿ:-

ಎಲ್ಲಾದಕ್ಕು ಕಾರಣ ಆ ಮೂರ್ಖರ ಪೆಟ್ಟಿಗೆ

ಎಲ್ಲಾದಕ್ಕು ಕಾರಣ ಆ ಮೂರ್ಖರ ಪೆಟ್ಟಿಗೆ

ನಿಮ್ಮ ಸಂಗಾತಿಯ ಜೊತೆಗೆ ಮಿಲನಕ್ಕೆ ನೀವು ಮನಸ್ಸು ಮಾಡಿದಾಗ, ಆತ ನೋ!, ಎಂದಾಗ ಅಚ್ಚರಿ ಪಡಬೇಡಿ. ಸಾಕರ್, ಕ್ರಿಕೆಟ್, ಬ್ಯಾಸ್ಕೆಟ್ ಬಾಲ್ ಮುಂತಾದ ಆಟೋಟಗಳನ್ನು ನೋಡಿಕೊಂಡು ಮೈಮರೆಯುವ ನಿಮ್ಮ ಸಂಗಾತಿಯು ತಮ್ಮ ಮೆಚ್ಚಿನ ಆಟಗಳನ್ನು ನೋಡುವ ಸಲುವಾಗಿ ಮಿಲನಕ್ಕೆ ನೋ ಎನ್ನಬಹುದು.

ಪೋರ್ನ್ ನೋಡುವುದೇ ಚಂದಾನ?

ಪೋರ್ನ್ ನೋಡುವುದೇ ಚಂದಾನ?

ಕೆಲವು ಗಂಡಸರು ಇರುತ್ತಾರೆ. ಅವರಿಗೆ ನೈಜ ಮಿಥುನಕ್ಕಿಂತ ಪೋರ್ನ್ ನೋಡುವುದರಲ್ಲಿಯೇ ಆನಂದ ಕಾಣುತ್ತಿರುತ್ತಾರೆ. ಇದು ಅಸ್ವಾಭಾವಿಕ ಎಂದು ಗೊತ್ತಿದ್ದರು ಸಹ ಇದೆ ಆನಂದ ಎಂದು ಅವರು ನಂಬಿ ಪೋರ್ನ್ ನೋಡುತ್ತ ಕಾಲ ಕಳೆದು ಬಿಡುತ್ತಾರೆ.

ಭಂಗಿಗಳನ್ನು ಪ್ರಯತ್ನಿಸಿ ನೋಡಲು ತುಂಬಾ ಸುಸ್ತಾಗಿರುತ್ತಾರೆ

ಭಂಗಿಗಳನ್ನು ಪ್ರಯತ್ನಿಸಿ ನೋಡಲು ತುಂಬಾ ಸುಸ್ತಾಗಿರುತ್ತಾರೆ

ಯಾವಾಗ ಹೆಣ್ಣು ಹೊಸ ಭಂಗಿಯನ್ನು ಪ್ರಯತ್ನಿಸಲು ಸಿದ್ಧಳಾಗಿರುವುದಿಲ್ಲವೊ, ಆಗ ಗಂಡಸು ಆಕೆಯ ಬಗ್ಗೆ ತಾತ್ಸಾರ ಮಾಡಲು ಶುರು ಮಾಡುತ್ತಾನೆ. ಇದು ಸಹ ಗಂಡಸರು ಮಿಲನಕ್ಕೆ ಒಲ್ಲೆ ಎನ್ನಲು ಇರುವ ಕಾರಣಗಳಲ್ಲಿ ಒಂದು.

ಗ್ಯಾಸ್ ತುಂಬಿದ ಹೊಟ್ಟೆ

ಗ್ಯಾಸ್ ತುಂಬಿದ ಹೊಟ್ಟೆ

ಚೆನ್ನಾಗಿ ಊಟ ಮಾಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿರುತ್ತದೆ. ರಾತ್ರಿ ಊಟದ ನಂತರ ನಿಮ್ಮವರು ಮಿಲನಕ್ಕೆ ನೋ!,, ಎಂದರೆ ಅರ್ಥ ಮಾಡಿಕೊಳ್ಳಿ, ಅವರು ತಮ್ಮನ್ನು ತಾವು ಕಷ್ಟಕ್ಕೆ ಸಿಲುಕಿಸಿಕೊಳ್ಳಲು ಇಷ್ಟಪಟ್ಟಿರುವುದಿಲ್ಲವೆಂದು.

ಒತ್ತಡವೇ ಅಪರಾಧಿ

ಒತ್ತಡವೇ ಅಪರಾಧಿ

ಹೌದು ನಿಮ್ಮವರು ನಿಮ್ಮೊಂದಿಗೆ ಮಿಲನಕ್ಕೆ ಬರಲು ಮನಸ್ಸು ಮಾಡುತ್ತಿಲ್ಲವೇ? ಹಾಗಾದರೆ ಆತ ನಿಜವಾಗಿ ಒತ್ತಡದಲ್ಲಿ ಸಿಲುಕಿರಬಹುದು. ಹೀಗೆ ಆತ ಒತ್ತಡದಲ್ಲಿ ಸಿಲುಕಿರುವಾಗ ಅದರಿಂದ ಪಾರಾಗಿ ಆತ ಮೂಡ್‍ಗೆ ಬರುವುದು ತುಂಬಾ ಕಷ್ಟ.

"ನೀವು" ಆತನನ್ನು ಉದ್ರೇಕಗೊಳಿಸುತ್ತಿಲ್ಲ

ನೀವು ಆತನನ್ನು ಉದ್ರೇಕಗೊಳಿಸಲಿಲ್ಲವಾದರೆ, ಆತ ಖಂಡಿತವಾಗಿ ನಿಮ್ಮನ್ನು ಪಕ್ಕಕ್ಕೆ ತಳ್ಳುತ್ತಾನೆ. ಆದರೂ ಹೀಗೆ ಉದ್ರೇಕಪಡಿಸುವುದು ಹೆಂಗಸರ ಸ್ವಭಾವವಲ್ಲ ಬಿಡಿ. ಒಂದೊಮ್ಮೆ ಹೀಗೆ ಉದ್ರೇಕಪಡಿಸದ ಹೆಂಡತಿಯ ಜೊತೆಗೆ ನೀವು ಸಂಸಾರ ಮಾಡುತ್ತಿದ್ದರೆ, ಆಕೆಗೆ ಅದನ್ನು ತಿಳಿಸಿ, ಅದಕ್ಕೆ ಆಕೆ ಕೆಲವೊಂದು ಹೊಸ ದಾರಿಗಳನ್ನು ಹುಡುಕಬಹುದು.

ಗಾತ್ರದ ಬಗ್ಗೆ ತಲೆಕೆಡಿಸಿಕೊಂಡಿರಬಹುದು

ಗಾತ್ರದ ಬಗ್ಗೆ ತಲೆಕೆಡಿಸಿಕೊಂಡಿರಬಹುದು

ಬಹುತೇಕ ಗಂಡಸರು ಮಿಲನ ಬೇಡ,,, ಎನ್ನಲು ಕಾರಣ ಅವರ ಜನನೇಂದ್ರಿಯದ ಗಾತ್ರ ಅವರಿಗೆ ಇರಿಸು ಮುರಿಸು ಮಾಡುವುದು. ಇದರಿಂದ ತಮ್ಮ ಸಂಗಾತಿಗೆ ತೃಪ್ತಿಯನ್ನು ನೀಡಲು ಸಾಧ್ಯವೇ ಎಂದು ಅವರು ಚಿಂತೆ ಮಾಡಲು ಆರಂಭಿಸುತ್ತಾರೆ. ಇದರಿಂದಾಗಿ ಮಿಲನವು ನಡೆಯುವುದಿಲ್ಲ.

ಖಿನ್ನತೆ

ಖಿನ್ನತೆ

ಮಿಲನದಿಂದ ದೂರ ಹೋಗಲು ಇರುವ ಕಾರಣಗಳಲ್ಲಿ ಮತ್ತೊಂದು ಅಂಶ ಖಿನ್ನತೆ. ಇದು ಸಹ ಗಂಡಸರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದರಿಂದ ಅವರು ಮಿಲನಕ್ಕೆ ನೋ ಎನ್ನುತ್ತಾರೆ.

ಮೂಡ್ ಇಲ್ಲ

ಮೂಡ್ ಇಲ್ಲ

ಯಾವಾಗ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಮಾಡುವಷ್ಟು ಕೋಟಿ ವಿಚಾರಗಳು ಓಡಾಡುತ್ತಿರುತ್ತವೋ, ಆಗ ಆತ ತಾನೇ ಹೇಗೆ ಮಿಲನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬಲ್ಲ?

ಒಂದು ಸವಿಯಾದ ದ್ವೇಷ

ಒಂದು ಸವಿಯಾದ ದ್ವೇಷ

ಮಹಿಳೆಯರಷ್ಟೇ ಅಲ್ಲ ಪುರುಷರು ಸಹ ಆಗಾಗ ತಮ್ಮ ಸಂಗಾತಿಯ ಮೇಲೆ ಒಂದು ಸವಿಯಾದ ದ್ವೇಷವನ್ನು ತೀರಿಸಿಕೊಳ್ಳುತ್ತಾರೆ. ನೀವು ಇತ್ತೀಚೆಗೆ ಆತನಿಗೆ ನೋ,,, ಎಂದಿದ್ದರೆ, ಆತನು ಸಹ ಅದರ ರುಚಿಯನ್ನು ನಿಮಗೆ ತೋರಿಸಲು ಕಾಯುತ್ತಿರುತ್ತಾನೆ.

ಕಾರಣ ನಿಮ್ಮಿಬ್ಬರ ಮಧ್ಯೆ ಎಲ್ಲಾ ಸರಿಯಿಲ್ಲ

ಕಾರಣ ನಿಮ್ಮಿಬ್ಬರ ಮಧ್ಯೆ ಎಲ್ಲಾ ಸರಿಯಿಲ್ಲ

ಕೆಲವೊಮ್ಮೆ, ದಂಪತಿಗಳ ನಡುವೆ ಹೀಗಾಗಿ ಬಿಡುತ್ತದೆ. ಅವರಿಬ್ಬರ ನಡುವೆ ಒಂದು ಸ್ಪಾರ್ಕ್ ಕಳೆದುಹೋಗಿ ಬಿಡುತ್ತದೆ. ಆಗ ಅವರಿಬ್ಬರ ನಡುವೆ ಕುತೂಹಲ ಉಳಿದಿರುವುದಿಲ್ಲ, ಇನ್ನು ಹೇಗೆ ತಾನೆ ಮಿಲನ ಸಾಧ್ಯ?

ಯಜಮಾನತನ ಸಾಧಿಸುವುದನ್ನು ತಡೆಯುವುದು

ಯಜಮಾನತನ ಸಾಧಿಸುವುದನ್ನು ತಡೆಯುವುದು

ಬಹುತೇಕ ಹೆಂಗಸರು ಹಾಸಿಗೆಯಲ್ಲಿ ಬಾಸ್‍ಗಳಂತೆ ವರ್ತಿಸುತ್ತಿರುತ್ತಾರೆ. ಒಂದೊಮ್ಮೆ ನಿಮ್ಮ ಸಂಗಾತಿ ಇದಕ್ಕಾಗಿ ಮೌನವಾಗಿ ಅಸಮಾಧಾನವನ್ನು ವ್ಯಕ್ತಪಡಿಸಬೇಕೆಂದು ಬಯಸಿದಲ್ಲಿ, ಅವರು ನಿಮ್ಮೊಂದಿಗೆ ಮಿಲನಕ್ಕೆ ನೋ,,, ಎನ್ನುತ್ತಾರೆ.

ಅಪ್ಪನಾಗುವ ಭಯ

ಅಪ್ಪನಾಗುವ ಭಯ

ಗಂಡಸು ಮಿಲನ ಬೇಡ,, ಎನ್ನುತ್ತಾರೆ ಎಂದರೆ ಅದಕ್ಕೆ ಆತ ಅಪ್ಪ ಆಗುತ್ತಾನೆ ಎಂಬ ಭಯವು ಸಹ ಕಾರಣವಿರಬಹುದು. ಈ ಭಯವು ಆತನ ಮಿಲನದ ಕುರಿತಾದ ಕನಸಿಗೆ ಅಡ್ಡಗೋಡೆಯಾಗಿ ನಿಲ್ಲುತ್ತದೆ.

ಇನ್‍ಫೆಕ್ಷನ್ ಆಗಿರಬಹುದು ಮತ್ತು ಭಯ ಇರಬಹುದು

ಇನ್‍ಫೆಕ್ಷನ್ ಆಗಿರಬಹುದು ಮತ್ತು ಭಯ ಇರಬಹುದು

ಒಂದು ವೇಳೆ ಆತನು ಜನನಾಂಗದ ಸೋಂಕಿಗೆ ಒಳಗಾಗಿದ್ದರೆ ಅಥವಾ ರ‍್ಯಾಶ್‍ಗೆ ಗುರಿಯಾಗಿದ್ದಲ್ಲಿ, ಅದರ ಭಯದಿಂದ ನಿಮ್ಮೊಂದಿಗೆ ಮಿಲನ ಬೇಡ ಎನ್ನಬಹುದು.

X
Desktop Bottom Promotion