Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಇಂತಹ 13 ಬಗೆಯ ಪ್ರೇಯಸಿಯರಿಂದ ದೂರವುಳಿದರೆ ಒಳಿತು!
ಯೌವನ, ಮಾನವನ ಜೀವನದ ಅತ್ಯಂತ ನಾಜೂಕಿನ ಘಟ್ಟ. ಹುಡುಗಾಟಿಕೆಯ ತುಂಟತನದಿಂದ ಗಾಂಭೀರ್ಯದತ್ತ ಸರಿಯುವ ಸಮಯ. ಭವಿಷ್ಯವನ್ನು ರೂಪಿಸಿಕೊಳ್ಳುವ ಈ ಸಮಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಹಿರಿಯರ ಮಾರ್ಗದರ್ಶನ, ತಿಳಿವಳಿಕೆ ಹಾಗೂ ಬುದ್ದಿವಾದ ಅಗತ್ಯ. ಜೊತೆಗೇ ಒಡನಾಟಕ್ಕೆ ಮನಮೆಚ್ಚುವ ಸ್ನೇಹಿತರಿರುವುದೂ ಅಗತ್ಯ.
ಈ ಸ್ನೇಹಿತರಲ್ಲಿ ಓರ್ವ ವ್ಯಕ್ತಿಯನ್ನು ಪ್ರಿಯತಮ/ಪ್ರಿಯತಮೆಯಾಗಿ ಗುರುತಿಸಿಕೊಂಡು ಸ್ನೇಹಿತ ವೃಂದದಲ್ಲಿ ಓಡಾಡುವುದು ಇಂದಿನ ಯುವಜನಾಂಗದಲ್ಲಿ ಸಾಮಾನ್ಯವಾದ ಪ್ರಕ್ರಿಯೆ. ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಹುಡುಗರು ಮತ್ತು ಹುಡುಗಿಯರು ಜೊತೆಯಾಗಿರುತ್ತಿದ್ದುದೇ ಅಪರೂಪ, ಅದರಲ್ಲೂ ಪ್ರಿಯತಮ/ಪ್ರಿಯತಮೆಯ ಪರಿಕಲ್ಪನೆ ಇದ್ದುದು ಎಲ್ಲೋ ನೂರರಲ್ಲೊಂದು ಮಾತ್ರ.
ಈಗ ಕಾಲ ಬದಲಾಗಿದೆ. ಪ್ರಿಯತಮ/ಪ್ರಿಯತಮೆ ಇಲ್ಲದಿರುವುದು ಒಂದು ಐಬು ಎಂದು ಸಾದರಪಡಿಸಲಾಗುತ್ತದೆ. ವಿದ್ಯಾರ್ಥಿದೆಸೆಯಲ್ಲಿ ಪ್ರಿಯತಮ/ಪ್ರಿಯತಮೆಯ ಜೊತೆಗೆ ಓಡಾಡಿ ವೃತ್ತಿಜೀವನದಲ್ಲಿ ಕಾಲಿಡುವ ಮುನ್ನ ಇವರೇ ತಮ್ಮ ಬಾಳಸಂಗಾತಿಯಾಗುವವರು ಎಂಬ ನಿರ್ಧಾರಕ್ಕೆ ಬಂದು ಹಿರಿಯರ ಆಶೀರ್ವಾದ ಪಡೆದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಸುಖವಾಗಿರುವ ಹಲವು ದಂಪತಿಗಳು ಈಗ ನಮ್ಮ ನಡುವೆ ಇದ್ದಾರೆ.
ಆದರೆ ಹೃದಯಕ್ಕೆ ಅತ್ಯಂತ ಹತ್ತಿರವಾಗಬೇಕಿರುವ ಈ ಪ್ರಿಯತಮೆಯನ್ನು ಕಂಡುಹಿಡಿಯುವುದು ಅತಿ ನಾಜೂಕಿನ ಕೆಲಸ. ಒಂದು ವೇಳೆ ನಿಮ್ಮ ಪ್ರಿಯತಮೆ ಪ್ರಥಮ ನೋಟದಲ್ಲಿ ಮನಸೆಳೆದು ಬಳಿಕ ಬೇರೆಯೇ ವ್ಯಕ್ತಿತ್ವ ಹೊಂದಿದ್ದರೆ ನಿಮ್ಮ ಜೀವನ ನರಕವಾಗುವುದು ಖಂಡಿತ. ಆದುದರಿಂದ ನಿಮ್ಮ ಅಭಿವ್ಯಕ್ತಿಗೆ ತಕ್ಕನಾದ ಪ್ರಿಯತಮೆಯನ್ನು ಪಡೆಯಲು ಅವರ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಅರಿಯುವುದು ಅಗತ್ಯ. ಈ ವ್ಯಕ್ತಿ ತಮಗೆ ತಕ್ಕವರೋ, ಬಾಳಸಂಗಾತಿಯಾಗಲು ಅರ್ಹರೋ ಎಂಬ ಖಚಿತನಿರ್ಧಾರಕ್ಕೆ ಬರಲು ಈ ಕೆಳಗಿನ ಹದಿಮೂರು ಬಗೆಗಳ ವ್ಯಕ್ತಿಗಳನ್ನು ಕೈಬಿಡುವ ಮೂಲಕ ಸುಲಭವಾಗುವುದು.

ನಿಮ್ಮ ಮನೆಯಲ್ಲಿ ಬೇರೆ ಹೆಂಗಸರಿದ್ದಾರೆಯೇ ಎಂದು ಹುಡುಕುವವರು
ಒಂದು ವೇಳೆ ನಿಮ್ಮ ಪ್ರಿಯತಮೆ ನೀವಿಲ್ಲದ ವೇಳೆಯಲ್ಲಿ ನಿಮ್ಮ ಮನೆಗೆ ಆಗಮಿಸಿ ಬೇರೆ ಹೆಂಗಸರ ಬಗ್ಗೆ ವಿಚಾರಿಸಿದರೆ ಅಥವಾ ಹುಡುಕಾಡಿದರೆ ಅವರು ಖಂಡಿತಾ ನಿಮಗೆ ತಕ್ಕವರಲ್ಲ. ನಿಮ್ಮ ಬಗ್ಗೆ ನಿಮ್ಮ ಸ್ನೇಹಿತರಲ್ಲಿ ಹಾಗೂ ಬಂಧು ಬಾಂಧವರಲ್ಲಿ ವಿಚಾರಿಸಿ, ಕಡೆಗೆ ನಿಮಗೆ ಫೋನ್ ಮಾಡಿಯೂ ವಿಚಾರಿಸಿದರೆ, ಒಂದು ವೇಳೆ ಯಾವುದೋ ತ್ವರಿತ ಕಾರಣದಿಂದ ಅವರ ಫೋನ್ ತೆಗೆದುಕೊಳ್ಳದೇ ಇದ್ದ ಪಕ್ಷ ಗೂಢಾಚಾರಿಗಳನ್ನು ಬಿಟ್ಟು ನಿಮ್ಮ ಮೇಲೆ ನಿಗಾ ಇರಿಸಿದರೆ ಅವರ ಖಂಡಿತಾ ನಿಮಗೆ ತಕ್ಕವರಲ್ಲ.

ನಿಮ್ಮ ಬಗ್ಗೆ ಅತೀವ ಸ್ವಾಮಿತ್ವ ತೋರುವವರು
ನಿಮ್ಮ ಎಲ್ಲಾ ಸಮಯ ತಮಗೆ ಮೀಸಲು ಎಂದು ಆಡುವವರು, ನಿಮ್ಮಿಂದ ಎರಡು ನಿಮಿಷದ ತಡವನ್ನೂ ಸಹಿಸಲಾರದವರು ನಿಮಗೆ ತಕ್ಕವರಲ್ಲ. ಅವರಿಗೆ ನೀವು ಸ್ವಾಮಿಯ ದರ್ಜೆ ಕೊಟ್ಟು ಸದಾ ಆರಾಧಿಸುತ್ತಾ ಇರಬೇಕೆಂದು ಬಯಸುವವರು ಒಂದು ವೇಳೆ ನಿಮ್ಮ ಸಾನಿಧ್ಯದಲ್ಲಿ ಬೇರೆ ಮಹಿಳೆಯನ್ನು ನೋಡಿದಾಕ್ಷಣ ಕಾಳಿಯ ಅವತಾರ ಎತ್ತುವವರು ನಿಮಗೆ ತಕ್ಕವರಲ್ಲ.

ಮಹಿಳೆಯರ ಪರವಾಗಿಯೇ ಯಾವಾಗಲೂ ಮಾತನಾಡುತ್ತಿರುವವರು
ಪ್ರತಿಬಾರಿಯ ಸಂವಾದದಲ್ಲಿ ಮಹಿಳೆಯರಿಗೆ ಸಲ್ಲುತ್ತಿರುವ ನಿರ್ಲಕ್ಷ್ಯ, ಮಹಿಳೆಯರಿಗೆ ಮೀಸಲಾತಿ ಮೊದಲಾದ ಬಗ್ಗೆಯೇ ಮಾತನಾಡುತ್ತಾ ಪುರುಷ ಪ್ರಧಾನವಾದ ಸಮಾಜವನ್ನು ಅವಹೇಳನ ಮಾಡುವ ಮಹಿಳೆಯರು ನಿಮಗೆ ಸಲ್ಲರು.

ತನ್ನ ಪುರುಷನೇ ಉತ್ಕೃಷ್ಟನಾಗಿರಬೇಕೆಂದು ಬಯಸುವವರು
ನಿಮ್ಮ ಸ್ನೇಹಿತರ ವಲಯದಲ್ಲಿ ತನ್ನ ಪ್ರಿಯತಮ ಎಲ್ಲರಿಗಿಂತ ಬಲಿಷ್ಠ, ಎಲ್ಲರಿಗಿಂತ ಬುದ್ಧಿವಂತ, ಎಲ್ಲರಿಗಿಂತ ಶ್ರೀಮಂತ ಒಟ್ಟಾರೆ ಎಲ್ಲದರಲ್ಲಿಯೂ ನಂ ೧ ಆಗಿರಬೇಕೆಂದು ಬಯಸುವ ಮಹಿಳೆ ನಿಮಗೆ ಅನರ್ಹಳು. ತನ್ನ ಪುರುಷನೇ ಮಹಾಪುರುಷ ಎಂದು ಸಾಬೀತುಪಡಿಸಲು ಸ್ನೇಹಿತರಲ್ಲಿ ಜಗಳ ಹುಟ್ಟಿಸಿ ಹೊಡೆದಾಟಕ್ಕೆ ಅಟ್ಟುವಲ್ಲೂ ಇವರು ಹಿಂದೆ ನೋಡರು.

ತನ್ನ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವವರು
ಯಾವುದೇ ವಿಷಯದಲ್ಲಿ ತನ್ನ ವಾದವೇ ಗೆಲ್ಲಬೇಕೆಂದು ಪಟ್ಟುಹಿಡಿದು ಪ್ರಿಯತಮನನ್ನು ಬಲವಂತವಾಗಿ ಸೋಲಿಸುವ ಮಹಿಳೆಯರಿಂದ ದೂರಾಗಿ. ಒಂದು ವೇಳೆ ಈ ಸಂಬಂಧ ಕುದುರಿದರೆ ಜೀವನಪರ್ಯಂತ ಚಾಟಿ ಛಳಪಿಸಿ ಪಳಗಿಸಲಾಗುವ ಸಿಂಹರೂಪದ ಇಲಿಯ ಪಾತ್ರ ನಿಮ್ಮದಾಗುತ್ತದೆ.

ಎಲ್ಲಾ ರೀತಿಯಲ್ಲೂ ನಿಮಗಿಂತ ಮೇಲುಸ್ತರದಲ್ಲಿರುವವರು.
ನಿಮಗಿಂತಲೂ ಹೆಚ್ಚು ಸಂಪಾದಿಸುತ್ತಿರುವ, ನಿಮಗಿಂತಲೂ ಚೆನ್ನಾಗಿ ವಾಹನ ಚಲಾಯಿಸಬಲ್ಲ, ಮನೆಗೆಲಸ ಮಾಡಬಲ್ಲವರು ನಿಮಗೆ ಬೇಡ. ಏಕೆಂದರೆ ಮೊದಮೊದಲು ಚೆನ್ನಾಗಿರುವ ಈ ಸಂಬಂಧ ಕಾಲಕಳೆದಂತೆ ಅಭಿಮಾನದ ವ್ಯತ್ಯಾಸದಲ್ಲಿ ದುಮ್ಮಾನಗಳನ್ನು ಹೆಚ್ಚಿಸುತ್ತಾ ಸಂಬಂಧಲ್ಲಿ ಬಿರುಕನ್ನೆಬ್ಬಿಸುತ್ತಾ ಹೋಗುತ್ತದೆ. ಕ್ರಮೇಣ ಈ ಬಿರುಕು ಮತ್ತೆ ಒಂದಾಗಲಾರದಷ್ಟು ಆಳವಾಗಿ ಬಿರಿದು ಎರಡು ಕುಟುಂಬಗಳ ಕಣ್ಣೀರಿಗೆ ಕಾರಣವಾಗುತ್ತದೆ.

ಅತಿ ಪೆದ್ದಾಗಿ ವರ್ತಿಸುವವರು
ನೋಡಲು ಸುಂದರಳಾಗಿದ್ದರೂ ಮಾನಸಿಕವಾಗಿ ಬೆಳೆಯದೇ ಇರುವ ಯುವತಿ ನಿಮಗೆ ಬೇಡ. ಏಕೆಂದರೆ ಯಾವ ಹೊತ್ತಿನಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಯದ ಅವರಿಗೆ ಚೆಲ್ಲುಚೆಲ್ಲಾಗಿ ನಗುವುದು ಅಭ್ಯಾಸವಾಗಿ ಇತರರ ಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಈ ಸನ್ನಿವೇಶ ನಿಮಗೆ ಅತೀವ ಮುಜುಗರ ತರುತ್ತದೆ.

ತಂದೆ ತಾಯಿಯರ ಮುದ್ದಿನ ದಂತದ ಬೊಂಬೆ
ತಂದೆ ತಾಯಿಯರ ಅತೀವ ಮುದ್ದಿನಲ್ಲಿ ಬೆಳೆದ ದಂತದ ಬೊಂಬೆ ನಿಮಗೆ ಬೇಡ. ಇಡಿಯ ಜೀವಮಾನದಲ್ಲಿ ಸ್ವತಂತ್ರವಾಗಿ ಯಾವುದೇ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಾಗದ ಆಕೆ ಪ್ರತಿಯೊಂದಕ್ಕೂ ತಂದೆ ತಾಯಿಯರನ್ನು ಕೇಳಿ ಮುಂದುವರೆಯುವುದು ನಿಮಗೆ ಅತೀವ ಮುಜುಗರ ಮತ್ತು ಸಂಕೋಚವನ್ನುಂಟುಮಾಡುತ್ತದೆ.

ಅತೀ ಹೆಚ್ಚು ಲೈಂಗಿಕ ಸಖ್ಯ ಬಯಸುವವರು.
ಸೌಂದರ್ಯ ಮತ್ತು ಬುದ್ಧಿಮತ್ತೆಯಲ್ಲಿ ಅಪ್ರತಿಮರಾಗಿ, ಉತ್ತಮ ನಡವಳಿಕೆ ಹೊಂದಿದ್ದರೂ ಲೈಂಗಿಕ ಸಖ್ಯವನ್ನು ಹೆಚ್ಚಾಗಿ ಬೇಡುವವರು ನಿಮಗೆ ಸಲ್ಲರು. ಏಕೆಂದರೆ ಅವರ ಮನಸ್ಸಿನಲ್ಲಿ ಸದಾ ಲೈಂಗಿಕ ಸುಖದ ಬಗ್ಗೆಯೇ ವಿಚಾರಗಳು ಮೂಡುತ್ತಿದ್ದು ವಿಭಿನ್ನ ಪ್ರಯೋಗಗಳ ಬಗ್ಗೆ ಉತ್ಸುಕರಾಗಿರುತ್ತಾರೆ. ಅಲ್ಲಸಲ್ಲದ ಸ್ಥಳಗಳಲ್ಲಿ ಇಲ್ಲಸಲ್ಲದ ವೇಳೆಯಲ್ಲಿ ಕಾಮನೆಯನ್ನು ಕೆಣಕುವ ಅವರು ನಿಮ್ಮನ್ನು ಅತಿಹೆಚ್ಚಿನ ಮುಜುಗರಕ್ಕೀಡು ಮಾಡುವವರು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಹಿರಿಯರ ಅನುಭವದ ಕಣ್ಣಿನಿಂದ ಈ ಚೇಷ್ಟೆಗಳು ತಪ್ಪುವುದು ಸಾಧ್ಯವಿಲ್ಲದಿರುವುದರಿಂದ ನಿಮ್ಮ ಬಾಳು ನರಕವಾಗುವುದು ಮಾತ್ರ ಖಂಡಿತ.

ಅಲ್ಪ ಅತೃಪ್ತರು
ಜೀವನದಲ್ಲಿ ಎಷ್ಟೇ ಐಶ್ವರ್ಯ, ಸಮೃದ್ಧಿಯಿದ್ದರೂ ಅವರಿಗಿಂತ ಹೆಚ್ಚು ಶ್ರೀಮಂತರೊಂದಿಗೆ ಹೋಲಿಸಿಕೊಂಡು ತಾವಿನ್ನೂ ಎಷ್ಟು ಅಲ್ಪರು ಎಂದು ಬಿಕ್ಕುವ ಮಹಿಳೆಯರಿಂದ ದೂರಾಗಿ. ಇವರಿಗೆ ಕುಬೇರನಿಂತ ಹೆಚ್ಚು ಐಶ್ವರ್ಯವಿದ್ದರೂ ಸಾಲದು. ನಿಮ್ಮ ಸ್ನೇಹಿತವಲಯದಲ್ಲಿ ನಿಮಗಿಂತ ಹೆಚ್ಚು ಸಂಪಾದಿಸುವ ಇತರರೊಂದಿಗೆ ನಿಮ್ಮನ್ನು ಹೋಲಿಸಿ ನಿಮ್ಮ ಜೀವನವನ್ನು ನರಕ ಮಾಡಲೂ ಇವರು ಹಿಂಜರಿಯರು.

ಮುನಿದು ಮಾರಿಯಾಗುವವರು
ಚಿಕ್ಕ ಪುಟ್ಟ ಕಾರಣಗಳಿಗೂ ಸಿಟ್ಟುಗೊಂಡು ಎಲ್ಲರೆದುರೇ ನಿಮ್ಮ ವಿರುದ್ಧ ವಾಗ್ದಾಳಿ ನಡೆಸುವ ಹೆಮ್ಮಾರಿ ನಿಮಗೆ ಬೇಡ. ಕಾರಣ ಸ್ವಲ್ಪ ಗುರುತ್ವದ್ದಾಗಿದ್ದರೆ ನಿಮ್ಮ ಮೇಲೆ ಕೈಮಾಡಲೂ ಅವರು ಹಿಂಜರಿಯುವುದಿಲ್ಲ. ಯಾವಾಗ ಕೋಪದ ಜ್ವಾಲಮುಖಿ ಸಿಡಿಯುತ್ತದೆಯೋ ಎಂದು ಹೇಳಲಾಗದ ಮನೋಭಾವದ ಮಹಿಳೆಯರನ್ನು ಇತರರ ನಡುವೆ ಕರೆದೊಯ್ಯುವುದೂ ಗಂಡಾಂತರಕ್ಕೆ ದಾರಿ.

ನಿಮಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವವರು
ನಿಮಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ನಿಮಗಾಗಿ ಜೀವನವನ್ನು ಮುಡಿಪಾಗಿಡುವವರು ನಿಮಗೆ ಬೇಡ. ಅರೆ? ಇದೇನಿದು, ಯಶಸ್ವಿ ಕನ್ನಡ ಚಿತ್ರದ ಚಿತ್ರಕಥೆಯ ಹಂದರವೇ ಚಿಂದಿಯಾಯಿತೇ? ಕಾರಣವೇನೆಂದರೆ ಸರ್ವಸ್ವವನ್ನು ತ್ಯಾಗ ಮಾಡಿ ಬಂದಿರುವವರು ಕ್ರಮೇಣ ಈ ತ್ಯಾಗದ ಬೆಲೆಯನ್ನು ಕೇಳಲು ತೊಡಗುತ್ತಾರೆ. ದಂಪತಿಗಳಾಗುವವರು ಒಬ್ಬರಿಗೊಬ್ಬರು ಪೂರಕವಾಗಿರಬೇಕು. ಇಲ್ಲಿ ತನ್ನ ತ್ಯಾಗವನ್ನೇ ಜೀವಮಾನವಿಡೀ ಉರುಹಚ್ಚುತ್ತಾ ನಿಮ್ಮ ಜೀವನವನ್ನು ಬರಿದು ಮಾಡುತ್ತಾರೆ.

ಹಣ ಮತ್ತು ಚಿನ್ನದಾಸೆಯುಳ್ಳ ಮಹಿಳೆಯರು
ನಿಮ್ಮನ್ನು ನಿಮ್ಮ ವ್ಯಕ್ತಿತ್ವಕ್ಕಲ್ಲರೇ ನಿಮ್ಮ ಹಣ ಮತ್ತು ಸ್ಥಾನಮಾನವನ್ನು ನೋಡಿ ಬಳಿಬರುವ ಮಹಿಳೆಯರು ನಿಮಗೆ ಬೇಡ. ನಿಮಗೆ ತಿಳಿದಿರದ ಸಂಗತಿ ಎಂದರೆ ನಿಮ್ಮ ಬಳಿ ಬರುವ ಮುನ್ನ ಆಕೆ ನಿಮ್ಮ ಸ್ಥಾನಮಾನ, ನಿಮ್ಮ ಗಳಿಕೆ, ಭವಿಷ್ಯದಲ್ಲಿ ನೀವು ಏರಲಿರುವ ಎತ್ತರ, ಅದರಿಂದ ತನಗಾಗುವ ಲಾಭವನ್ನು ಲೆಕ್ಕಾಚಾರ ಹಾಕಿಕೊಂಡು ನಿಮಗೆ ಗಾಳ ಹಾಕಿರುತ್ತಾರೆ. ಯಾವುದೇ ಕೆಟ್ಟ ಘಳಿಗೆಯಲ್ಲಿ ನಿಮ್ಮ ವರಮಾನ ಕಡಿಮೆಯಾಯಿತೋ ಆಕೆಯ ಗಾಳ ಬೇರೆ ಮೀನಿನೆಡೆ ತಿರುಗುವುದರಿಂದ ಈ ಸಂಬಂಧದಿಂದ ಮೊದಲು ಕಳಚಿಕೊಳ್ಳಿ.



Click it and Unblock the Notifications











