ಸೂಪರ್ ಸೊಸೆಯಾಗಲು 10 ಮಾರ್ಗಗಳು

By Deepak M

ವೈವಾಹಿಕ ಜೀವನದಲ್ಲಿ ಎದುರಾಗುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅತ್ತೆ ಮತ್ತು ಮಾವಂದಿರು ಹಾಗು ಅವರ ಮನೆಯವರ ಜೊತೆಯಲ್ಲಿ ಹೊಂದಿಕೊಳ್ಳುವುದು. ಇದು ಮದುವೆಯಾದ ಗಂಡು ಹೆಣ್ಣು ಇಬ್ಬರಿಗು ಅನ್ವಯವಾಗುತ್ತದಾದರು, ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಇದು ಭಾದಿಸುತ್ತದೆ.

ಒಂದು ಅಧ್ಯಯನದ ಪ್ರಕಾರ ಶೇ.60 ರಷ್ಟು ಮದುವೆಗಳಲ್ಲಿ ಎದುರಾಗುವ ದೊಡ್ಡ ಕಿರಿ ಕಿರಿ ಮತ್ತು ತಲೆನೋವುಗಳೆಂದರೆ ಅದು ಅತ್ತೆ ಸೊಸೆಯರದು. ಸಾಮಾನ್ಯವಾಗಿ ಇದು ಒಂದು ಹೆಣ್ಣು ಮತ್ತು ಆಕೆಯ ಗಂಡನ ತಾಯಿಯ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ.

ಸದಾ ಆದೇಶ ನೀಡುವ ಮತ್ತು ಎಲ್ಲಾ ಕೆಲಸಗಳಲ್ಲಿ ಮೂಗು ತೂರಿಸುವ ಅತ್ತೆಯು ಈ ಎಲ್ಲಾ ಸಮಸ್ಯೆಗಳ ಮೂಲವಾಗಿರುತ್ತಾಳೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕೆಂದರೆ ಮೊದಲು ಧನಾತ್ಮಕ ಆಲೋಚನೆಯನ್ನು ಮಾಡುವುದು ಮತ್ತು ಹಿರಿಯರಿಗೆ ಗೌರವವನ್ನು ನೀಡಬೇಕೆಂಬ ಭಾವನೆಯನ್ನು ತಳೆಯುವುದು, ಈ ಎರಡು ಮಾತ್ರವೇ ನಿಮಗೆ ಸಹಾಯ ಮಾಡುತ್ತವೆ. ಇಲ್ಲಿ ನಾವು ನಿಮಗಾಗಿ ಅತ್ತೆಯ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ ಓದಿಕೊಳ್ಳಿ.

10 ways to be a super daughter-in-law

ಧನಾತ್ಮಕ ಮನೋಭಾವ
ನಿಮಗೆ ಹೇಗೆ ಸೊಸೆಯೆಂಬ ಪಾತ್ರ ಹೊಸದೊ, ಹಾಗೆಯೇ ಆಕೆಗು ಸಹ ಅತ್ತೆ ಎಂಬ ಪಾತ್ರ ಹೊಸತು. ಯಾವಾಗಲು ಆಕೆಯ ಕುರಿತಾಗಿ ಒಂದು ಧನಾತ್ಮಕ ಮನೋಭಾವದ ಧೋರಣೆಯನ್ನು ಅನುಸರಿಸಿ. ಬಹುಶಃ ಆ ವಯಸ್ಸಾದ ಹೆಂಗಸು ಅತ್ತೆಯೆಂಬ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸುತ್ತಿರಬಹುದು.

ಸಮಾನತೆ
ಆದಷ್ಟು ನಿಮ್ಮ ಅತ್ತೆ ಮತ್ತು ಅಮ್ಮ ಇಬ್ಬರನ್ನು ಒಂದೇ ತರ ನೋಡಲು ಪ್ರಯತ್ನಿಸಿ. ಉದಾಹರಣೆಗೆ ನಿಮ್ಮ ತಾಯಿಯ ಹುಟ್ಟು ಹಬ್ಬಕ್ಕೆ ಒಂದು ಉಡುಗೊರೆಯನ್ನು ನೀಡಿದಲ್ಲಿ, ನಿಮ್ಮ ಅತ್ತೆಯ ಹುಟ್ಟು ಹಬ್ಬಕ್ಕೂ ಸಹ ಉಡುಗೊರೆಯನ್ನು ನೀಡಲು ಮರೆಯಬೇಡಿ. ಒಂದು ವೇಳೆ ನಿಮಗೆ ಮಕ್ಕಳಿದ್ದಲ್ಲಿ, ನಿಮ್ಮ ತಾಯಿಯ ಮನೆ ಹಾಗು ಅತ್ತೆ ಮನೆಗೆ ಆಗಾಗ ಭೇಟಿ ನೀಡುತ್ತ ಇರಿ.

ಸೂಕ್ಷ್ಮತೆ
ಎಲ್ಲರಿಗು ತಿಳಿದಿರುವಂತೆ ಆ ಹೆಂಗಸು ತನ್ನ ಮಗನನ್ನು ಹೆತ್ತು, ಸಾಕಿ ಬೆಳೆಸಲು ತುಂಬಾ ಶ್ರಮವನ್ನು ವಿನಿಯೋಗಿಸಿದ್ದಾರೆ. ಈಗ ಆ ಮಗನ ಬಾಳಿನಲ್ಲಿ ತನ್ನ ಪಾತ್ರವನ್ನು ಮರೆಸುವಂತಹ ವ್ಯಕ್ತಿಯ ಪ್ರವೇಶವಾಗಿರುವುದು, ಆತನ ಆರೈಕೆಯನ್ನು ಆಕೆಯೇ ನೋಡಿಕೊಳ್ಳುವುದು ಮತ್ತು ಆಕೆಯ ಮಗನ ಪ್ರಧಾನ ಆಕರ್ಷಣೆಯಾಗಿರುವುದು ಹೆತ್ತ ತಾಯಿಗೆ ಸ್ವಲ್ಪ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಿ ಸಾಕು.

ಆದರೂ ಬಹುತೇಕ ಅತ್ತೆಯಂದಿರು ತಮ್ಮ ಸೊಸೆಯಂದಿರನ್ನು ತಮ್ಮ ಪ್ರತಿಸ್ಪರ್ಧಿ ಎಂದು ಪರಿಗಣಿಸುವುದಿಲ್ಲ. ಅವರು ಎಂದಿಗು ತಮ್ಮ ಮಗನಿಗೆ ತಾಯಿಯಾಗಿಯೇ ಇರುತ್ತಾರೆ. ತುಂಬಾ ವರ್ಷಗಳಿಂದ ಅವರು ತಮ್ಮ ಮಗನನ್ನು ಆರೈಕೆ ಮಾಡುತ್ತಿದ್ದ ಏಕ ಮಾತ್ರ ವ್ಯಕ್ತಿಯಾಗಿರಬಹುದು ಮತ್ತು ಅವರ ಮಗ ಅವರಿಗೆ ಇದ್ದ ಏಕೈಕ ಮಗುವಾಗಿರಬಹುದು. ಬಹುಶಃ ಈ ಕಾರಣವು ಆಕೆಯನ್ನು ಮಗನ ಮೇಲೆ ಅತಿ ಹೆಚ್ಚಿನ ಅಧಿಕಾರ ಮತ್ತು ಮಮತೆಯನ್ನು ಹೊಂದಲು ಸಹಕರಿಸಿರಬಹುದು. ಇದರಿಂದ ಆಕೆಗೆ ತನ್ನ ಮಗನೇ ಜೀವನವಾಗಿದ್ದರೂ ಆಗಿರಬಹುದು.

ಇಂತಹವರು ಯಾವಾಗಲು ತಮ್ಮ ಮಗನ ಕುರಿತಾಗಿ ಕತೆಗಳನ್ನು ಹೇಳುತ್ತಿರುತ್ತಾರೆ. ಉದಾಹರಣೆಗೆ ಊಟಕ್ಕೆ ಕೂತಾಗ ಈ ತಿಂಡಿಯನ್ನು ತನ್ನ ಮಗ ಎಷ್ಟು ಇಷ್ಟಪಟ್ಟು ತಿನ್ನುತ್ತಿದ್ದ, ನನ್ನ ಅಡುಗೆಯನ್ನು ಎಷ್ಟು ಹೊಗಳುತ್ತಿದ್ದ ಹೀಗೆಲ್ಲ ಹೇಳುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕು ನೀವು ಅದೇ ರೀತಿಯ ಅಡುಗೆಯನ್ನು ಮಾಡಿ ಹೇಗಿದೆ? ನನ್ನ ಕೈ ಅಡುಗೆ ಎಂದು ನಿಮ್ಮ ಗಂಡನನ್ನು ಪ್ರಶ್ನಿಸಬೇಡಿ. ಇದು ನಿಮ್ಮ ಅತ್ತೆಯ ಮನಸ್ಸಿಗೆ ನೋವನ್ನು ಉಂಟು ಮಾಡಬಹುದು.

ಗೌರವ
ನಿಮ್ಮ ಅತ್ತೆಯನ್ನು ಗೌರವದಿಂದ ಕಾಣಿರಿ. ಆಕೆಯನ್ನು ನಿಮ್ಮ ಹಿರಿಯರು ಮತ್ತು ಬುದ್ಧಿವಂತರು ಎಂದು ಪರಿಗಣಿಸಿ. ಆಕೆಯು ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿರಬಹುದು. ಬಿಡುವು ಸಿಕ್ಕಾಗ ಆಕೆಯೊಂದಿಗೆ ಮಾತನಾಡಿ, ಆಕೆಯ ಬಾಲ್ಯ, ಬೆಳವಣಿಗೆ, ಮಕ್ಕಳನ್ನು ಅಡಿಸಿ-ಬೆಳೆಸಿದ ಪರಿ ಮತ್ತು ಜೀವನಾನುಭವಗಳ ಕುರಿತಾಗಿ ಕೇಳಿ. ಯಾವಾಗ ನೀವು ಆಕೆಯ ಜೀವನದ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳುತ್ತೀರೋ, ಆಕೆಗೆ ನೀವು ಸಹ ಇಷ್ಟವಾಗಲು ಆರಂಭಿಸುತ್ತೀರಾ, ಹೀಗೆ ಇಬ್ಬರ ನಡುವೆ ಒಂದು ಬಗೆಯ ಭಾಂದವ್ಯವು ಬೆಳವಣಿಗೆಯಾಗುತ್ತದೆ.

ನಿರೀಕ್ಷೆಗಳು
ನೀವು ಮದುವೆಯಾಗಿ ಸೇರಿದ ಮನೆ ಮತ್ತು ಮನೆಯವರ ಕುರಿತಾಗಿ ತಿಳಿದುಕೊಳ್ಳಲು ಸಮಯ ತಗುಲುತ್ತದೆ. ಆದರೂ ಬಹುತೇಕ ಮನೆಗಳಲ್ಲಿ ಸೊಸೆಯನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ. ಒಂದು ವೇಳೆ ನಿಮಗೆ ಇಂತಹ ಸ್ವಾಗತ ದೊರೆಯಲಿಲ್ಲವಾದಲ್ಲಿ ನಿರಾಶರಾಗದಿರಿ. ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಅವರಿಗೆ ಕಾಲಾವಕಾಶ ಕೊಡಿ.

ಗಮನ ಕೊಡಿ
ನಿಮ್ಮ ಅತ್ತೆ ಮನೆಯಲ್ಲಿರುವಾಗ ಆಕೆಯ ಕುರಿತಾಗಿ ಅಗತ್ಯವಾದ ಗಮನವನ್ನು ಕೊಡಿ. ಆಕೆಯೊಂದಿಗೆ ಕುಳಿತು ಮಾತನಾಡಿ, ಸಮಯ ಸಿಕ್ಕಾಗ ಆಕೆಯನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗಿ. ನೀವು ಅಡುಗೆ ಮಾಡುವಾಗ ಆಕೆ ಸಹಕರಿಸುತ್ತೇನೆ ಎಂದರೆ ಅವಕಾಶ ಮಾಡಿಕೊಡಿ. ಒಂದು ವೇಳೆ ಆಕೆ ಕೂರಲು ಮತ್ತು ನಿಲ್ಲಲು ಕಷ್ಟ ಪಡುತ್ತಿದ್ದಲ್ಲಿ ನಿಮ್ಮ ಗಂಡನ ಸಹಾಯವನ್ನು ಪಡೆಯಲು ಹಿಂಜರಿಯಬೇಡಿ.

ಮಾಹಿತಿ
ನಿಮ್ಮ ಅತ್ತೆಗೆ ಅಗತ್ಯ ಮಾಹಿತಿಗಳನ್ನು ಆಗಾಗ ಒದಗಿಸಿ; ಮಹತ್ವದ ಕಾರ್ಯಕ್ರಮಗಳ ಕುರಿತು ನಿಮ್ಮ ಅತ್ತೆಗೆ ತಿಳಿಸಿ ಮತ್ತು ಆಕೆಯಿಂದ ತಿಳಿದುಕೊಳ್ಳಿ. ಆಕೆಯನ್ನು ಸದಾ ಸಂಪರ್ಕದಲ್ಲಿರಿಸಿಕೊಂಡಿರಿ. ನಿಮಗೆ ಮಕ್ಕಳಿದ್ದಲ್ಲಿ, ಅವರ ಫೋಟೊಗಳನ್ನು ನಿಮ್ಮ ಅತ್ತೆಗೆ ಕಳುಹಿಸಿಕೊಡಿ. ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳ ಚಿತ್ರವನ್ನು ನೋಡಲು ಸದಾ ಇಷ್ಟಪಡುತ್ತಾರೆ ಎಂಬುದನ್ನು ಮರೆಯಬೇಡಿ.

ಸಲಹೆ
ನಿಮ್ಮ ಅತ್ತೆಯು ಉತ್ತಮವಾದ ಜೀವನಾನುಭವವನ್ನು ಪಡೆದಿರುತ್ತಾರೆ. ಆಕೆಯ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಬಹುಶಃ ಆಕೆಯ ಸಲಹೆಯನ್ನು ನೀವು ಒಪ್ಪದಿರಬಹುದು ಅಥವಾ ಅನುಸರಿಸದಿರಬಹುದು. ಹಾಗೆಂದು ಅದನ್ನು ತಿರಸ್ಕರಿಸಿ ಎಂದರ್ಥವಲ್ಲ. ಮೊದಲು ಆಕೆಯ ಸಲಹೆಯನ್ನು ಗೌರವಿಸಿ, ನಿಮ್ಮ ಆಲೋಚನೆಯನ್ನು ಕಾರ್ಯ ರೂಪಕ್ಕೆ ತನ್ನಿ. ಆದರೆ ಈ ಸಲಹೆಯನ್ನು ಆಕೆಯ ಮೇಲೆ ಹಗೆತನ ಸಾಧಿಸಲು ಬಳಸಬೇಡಿ. ಏಕೆಂದರೆ ನಿಮಗೆ ಸಹಾಯ ಮಾಡುವ ಸಲುವಾಗಿ ತಾನೇ ಆಕೆ ಸಲಹೆಗಳನ್ನು ನೀಡಿದ್ದು.

ಮಕ್ಕಳು
ನಿಮ್ಮ ಅತ್ತೆಗೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳುವ ಅವಕಾಶ ಮಾಡಿಕೊಡಿ. ಕೆಲವು ವೇಳೆ ಅವರಿಗೆ ಇತರೆ ಮಕ್ಕಳಿಗಿಂತ ತಮ್ಮ ಮೊಮ್ಮಕ್ಕಳೇ ಹೆಚ್ಚಾಗಿರುತ್ತಾರೆ. ಹಾಗಾಗಿ ನಿಮ್ಮ ಮಕ್ಕಳನ್ನು ಹಾಳು ಮಾಡುತ್ತಾರೆ ಎಂಬ ಭಾವನೆ ನಿಮಗಿದ್ದರು ಸಹ ಸುಮ್ಮನೆ ಅದಕ್ಕೆ ಸ್ವಲ್ಪ ಅವಕಾಶ ಮಾಡಿಕೊಡಿ. ರಾತ್ರಿ ಮಲಗುವಾಗ ಅವರು ತಮ್ಮ ಮೊಮ್ಮಕ್ಕಳಿಗೆ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿನ ಚಾಕೊಲೇಟ್ ನೀಡಬಹುದು. ಆದರೆ ಅದಕ್ಕೆ ಅಡ್ಡಿಯನ್ನು ಮಾಡಬೇಡಿ.

ಸಂಪರ್ಕ
ನಿಮ್ಮ ಕುಟುಂಬದ ಜೊತೆಗೆ ಮಾತನಾಡಲು ಮತ್ತು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ಯಾರಾದರು ನಿಮ್ಮ ಮನಸ್ಸಿಗೆ ನೋವನ್ನುಂಟು ಮಾಡಿದ್ದರೆ ಅದನ್ನು ಎಲ್ಲರ ಮುಂದೆ ಹೇಳಿ ಹಗುರವಾಗಿ. ಅದನ್ನು ಬಿಟ್ಟು ಒಳಗಡೆ ಅದನ್ನು ಬೆಳೆಯಲು ಬಿಟ್ಟು ಕೊರಗಬೇಡಿ. ನಿಮ್ಮ ಅತ್ತೆ ಮತ್ತು ಗಂಡನ ಜೊತೆಗೆ ನಿಮ್ಮ ಭಾವನೆಗಳನ್ನು ಮತ್ತು ಹತಾಶೆಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನ ದೊರೆಯಬಹುದು.

X
Desktop Bottom Promotion