ನಿಮ್ಮ ಉತ್ತಮ ಸಂಬಂಧ ಹದಗೆಡುತ್ತಿರುವ ಲಕ್ಷಣಗಳಿವು!

By Super

ಹದಿಹರೆಯದಲ್ಲಿ ಗಂಡು ಹೆಣ್ಣುಗಳ ನಡುವೆ ಆಕರ್ಷಣೆ ನೈಸರ್ಗಿಕ. ಒಬ್ಬ ವ್ಯಕ್ತಿಯನ್ನು ಮೆಚ್ಚಲು ಅವರ ಕೆಲವು ಗುಣಗಳು ಕಾರಣವಾಗುತ್ತವೆ. ಸೋನಾ ಘಸ್ ಕೇ ದೇಖೋ, ಆದ್ಮೀ ಕೆ ಸಾಥ್ ಬಸ್ ಕೆ ದೇಖೋ ಎಂಬುದೊಂದು ಹಿಂದಿ ಗಾದೆ. ಇದರರ್ಥ ಚಿನ್ನವನ್ನು ಒರೆಹಚ್ಚಿದ ಬಳಿಕ ಹಾಗೂ ವ್ಯಕ್ತಿಯೊಂದಿಗೆ ಕೊಂಚ ಸಮಯ ಕಳೆದ ಬಳಿಕವೇ ನಿಜರೂಪ ಗೊತ್ತಾಗುವುದು. ಹದಿಹರೆಯದ ಪ್ರೇಮದಲ್ಲೂ ಅಷ್ಟೇ, ತಮ್ಮ ನೆಚ್ಚಿನ ಸಂಗಾತಿಗಳನ್ನು ಮೆಚ್ಚಿಸಲು ಯುವಜನತೆ ಏನೇನೋ ಕ್ರಮಗಳನ್ನು ಅನುಸರಿಸುತ್ತಾರೆ ಹಾಗೂ ಅದಕ್ಕೆ ತಕ್ಕಂತೆ ನಾಟಕವನ್ನೂ ಆಡುತ್ತಾರೆ. ಪುರುಷರ ಮನ ಸೆಳೆಯುವ ವೇಳೆ ಆಗುವ 7 ಎಡವಟ್ಟುಗಳು!

ಆದರೆ ಕೆಲಸಮಯದ ಬಳಿಕ ನಿಜ ವಿಷಯ ತಿಳಿದರೆ ಅದುವರೆಗೆ ಆ ವ್ಯಕ್ತಿಯ ಮೇಲೆ ಆವರೆಗೆ ಬೆಳೆಸಿಕೊಂಡಿದ್ದ ವ್ಯಾಮೋಹ, ಅಕ್ಕರೆ ಕರಗುತ್ತದೆ. ನಿಧಾನವಾಗಿ ಆಪ್ತತೆ ದೂರವಾಗಿ ಸಂಬಂಧ ಹಳಸಲು ತೊಡಗುತ್ತದೆ. ಉದಾಹರಣೆಗೆ ಪ್ರಿಯತಮೆಯನ್ನು ಮೆಚ್ಚಿಸಲು ಆಕೆಗೊಂದು ದುಬಾರಿ ಮೊಬೈಲ್ ಫೋನ್ ಕೊಂಡು ಕೊಟ್ಟಿದ್ದು ಆತನ ತಾಯಿಯ ಚಿಕಿತ್ಸಾ ವೆಚ್ಚಕ್ಕೆಂದು ಉಳಿಸಿದ್ದ ಹಣದಿಂದ ಎಂಬ ವಿಷಯ ತಿಳಿದ ಬಳಿಕ ಯುವತಿಗೆ ಅಷ್ಟರವರೆಗೆ ಆ ಮೊಬೈಲಿನ ಮೇಲಿಟ್ಟಿದ್ದ ಪ್ರೀತಿ ಕಡಿಮೆಯಾಗುತ್ತದೆ.

ಸ್ವಾಭಿಮಾನವುಳ್ಳ ಯಾವುದೇ ಯುವತಿ ಆ ಮೊಬೈಲನ್ನು ತಿರಸ್ಕರಿಸಿ ತನ್ನ ಮೇಲಿನ ಪ್ರೀತಿಗಾಗಿ ತಾಯಿಯ ಆರೋಗ್ಯವನ್ನೇ ಪಣಕ್ಕಿಟ್ಟ ಯುವಕನನ್ನು ದೂರ ಮಾಡುವುದು ಖಚಿತ. ಸಂಬಂಧಗಳು ಹದಗೆಡುತ್ತಿದೆ ಎಂಬ ಸೂಚನೆಗಳನ್ನು ನೀಡುವ ಇಂತಹ ಹಲವು ಸಂಕೇತಗಳು ಸಿಕ್ಕಿದ ಕೂಡಲೇ ಆದ ಪ್ರಮಾದವನ್ನು ಗಮನಿಸಿ ಸರಿಪಡಿಸಿಕೊಂಡರೆ ಮಾತ್ರ ಸಂಬಂಧ ಮತ್ತೆ ಸರಿಯಾಗಲು ಸಾಧ್ಯ. ಇತ್ತೀಚೆಗೆ ಮದುವೆಯಾದ ಅಥವಾ ಮದುವೆಯಾಗಲಿರುವ ಜೋಡಿಗಳಿಗೆ ಇಂತಹ ಸೂಚನೆಗಳನ್ನು ನೀಡುವ ಹತ್ತು ಪ್ರಮುಖ ಸಂಕೇತಗಳನ್ನು ಇಲ್ಲಿ ವಿವರಿಸಲಾಗಿದೆ. ಆದರೆ ಎಲ್ಲಾ ಸಂಕೇತಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವುದಿಲ್ಲ. ನಿಮ್ಮ ಸಂಬಂಧ ಹದಗೆಡುತ್ತಿದೆ ಎಂದು ಅನ್ನಿಸಿದರೆ ಇವುಗಳಲ್ಲಿ ಯಾವ ಅಂಶ ಅತಿಹೆಚ್ಚಾಗಿ ಅನ್ವಯಿಸುತ್ತದೆಯೋ ಅದನ್ನು ಮಾತ್ರ ಪರಿಗಣಿಸಿ. ಬೇರ್ಪಟ್ಟ ಸಂಬಂಧ ನೀಡುವುದೇ ಹೊಸ ತಿರುವು?

ಹೆಚ್ಚು ಹೊತ್ತು ಸಂಪರ್ಕದಲ್ಲಿ ಇಲ್ಲದೇ ಇರುವುದು


ಮೊಬೈಲ್ ಬಂದ ಬಳಿಕ ಪ್ರೇಮಿಗಳ ನಡುವೆ ಸಂಭಾಷಣೆಯಾಗದ ಕಾಲವೇ ಕಡಿಮೆ. ಚಾಟ್, ಮೆಸೇಜ್, ವಾಟ್ಸಪ್ ಎಂಬ ಭೂತಗಳ ಮೂಲಕ ಸಂದೇಶಗಳು ರವಾನೆಯಾಗುತ್ತಲೇ ಇರುತ್ತವೆ. ಒಂದು ವೇಳೆ ಯಾವುದೋ ಕಾರಣದಿಂದ ಈ ಸಂದೇಶಗಳು ಕಡಿಮೆಯಾದರೆ ಆತಂಕಪಡಬೇಕಾಗಿಲ್ಲ. ಆದರೆ ಒಂದು ವೇಳೆ ಮುಖ್ಯ ವಿಷಯವಿದ್ದಾಗಲೂ ನಿಂತೇ ಹೋದರೆ ಮಾತ್ರ ಇದು ಸಂಬಂಧ ಹದಗೆಡುತ್ತಿರುವ ಸ್ಪಷ್ಟ ಸೂಚನೆಯಾಗಿದೆ.

ಜೊತೆಯಲ್ಲಿ ಸಂಚರಿಸುವ ಅವಕಾಶಗಳು ಕಡಿಮೆಯಾಗುವುದು


ಯಾವುದೋ ನೆಪದಲ್ಲಿ ಜೊತೆಯಾಗಿರುವುದು ಪ್ರೇಮಿಗಳ ಪ್ರಮುಖ ಲಕ್ಷಣ. ಒಂದು ವೇಳೆ ಪ್ರಮುಖ ಅವಶ್ಯಕತೆಯಿದ್ದಾಗಲೂ ಜೊತೆಯಾಗಲು ತಡವರಿಸಿದರೆ, ಅಥವಾ ನಿರಾಕರಿಸಿದರೆ ಅಥವಾ ಮುಂದೆ ಹಾಕುವ, ನಾಳೆ ನೋಡುವಾ ಎಂದು ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಮಾತ್ರ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು.

ಸಂಬಂಧವನ್ನು ಮುಂದೊಯ್ಯುವ ಸೂಚನೆ ನೀಡದೇ ಇರುವುದು


ಭವಿಷ್ಯದ ಬಗ್ಗೆ ಕಂಡ ಕನಸುಗಳನ್ನು ನನಸಾಗಿಸಲು ತೋರುವ ಒಲವು ಕಡಿಮೆಯಾದರೆ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು. ಅಲ್ಲದೇ ಪ್ರಿಯತಮ/ಪ್ರಿಯತಮೆ ಗೆ ತನ್ನ ಸಂಗಾತಿಯಾಗುವವನು/ಳು ತನ್ನ ಅಂತಸ್ತಿಗೆ/ಜಾತಿಗೆ/ದರ್ಜೆಗೆ ಅರ್ಹನಲ್ಲ/ಳಲ್ಲ ಎಂಬ ಭಾವನೆ ಮೂಡಿ ಈ ಸಂಬಂಧದಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ಇನ್ನೂ ಹೆಚ್ಚೆಂದರೆ ಸಧ್ಯಕ್ಕೆ ಮದುವೆಯ ಕನಸು ತೋರಿಸಿ ದೈಹಿಕ ಸಂಬಂಧವನ್ನು ಮಾತ್ರ ಬಯಸುವ, ಆದರೆ ಸಂಗಾತಿಯಿಂದ ಈ ಸಂಬಂಧಕ್ಕೆ ಹಿರಿಯರ ಅಪ್ಪಣೆಗಾಗಿ ಒತ್ತಾಯ ಬಂದ ಕೂಡಲೇ ನಿಧಾನವಾಗಿ ಜಾರಿಕೊಳ್ಳುವುದು ಸಂಬಂಧ ಹದಗೆಡುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಈ ಸೂಚನೆ ಸಿಕ್ಕಿದಾಕ್ಷಣ ಮತ್ತೆ ಹತ್ತಿರಾಗಲು ಪ್ರಯತ್ನಿಸದೇ ದೂರಾಗುವುದೇ ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ.

ಅತಿಮುಖ್ಯವಲ್ಲದ ಸಂಗತಿಗಳು ಮುಖ್ಯವಾಗತೊಡಗುತ್ತವೆ


ನಿಮ್ಮ ಸಂಗಾತಿ ಕ್ಷುಲ್ಲುಕ ಕಾರಣಗಳಿಗೆ ಅತಿ ಹೆಚ್ಚಿನ ಮಹತ್ವ ನೀಡಿ ನಿಮ್ಮ ಅಗತ್ಯತೆ ಅಥವಾ ಭಾವನೆಗಳಿಗೆ ಬೆಲೆಕೊಡದೇ ಹೋದರೆ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು.

ಥಟ್ಟನೇ ಪ್ರಕಟವಾಗುವ ವಿಶ್ವಾಸಭಂಗ
ಯಾವುದೇ ಸಂಬಂಧದಲ್ಲಿ ಪರಸ್ಪರ ವಿಶ್ವಾಸ ಅತಿಮುಖ್ಯ. ಒಂದು ಹಂತದಲ್ಲಿ ನಿಮಗೆ ನಿಮ್ಮ ಸಂಗಾತಿ ವಿಶ್ವಾಸಾರ್ಹನಲ್ಲವೆಂಬ ಭಾವನೆ ಮೊಳೆಯತೊಡಗುತ್ತದೆ. ಒಂದು ವೇಳೆ ಈ ವಿಶ್ವಾಸಕ್ಕೆ ಬೆಲೆನೀಡದೇ ಹೋದರೆ ಪ್ರಕಟವಾಗುವ ವಿಶ್ವಾಸಭಂಗ ಸಂಬಂಧ ಹದಗೆಡುತ್ತಿರುವ ಸ್ಪಷ್ಟ ಸೂಚನೆಯಾಗಿದೆ.

ನಿಮ್ಮ ಸಂಗಾತಿಯೊಡನೆ ಮನಬಿಚ್ಚಿ ಮಾತನಾಡಲು ಭಯವಾಗುತ್ತದೆ


ಪ್ರತಿಯೊಬ್ಬರಲ್ಲೂ ಅತ್ಯಂತ ಖಾಸಗಿಯಾದ ಕೆಲವು ವಿಷಯಗಳಿರುತ್ತವೆ. ಒಂದು ವೇಳೆ ನಿಮ್ಮ ಸಂಗಾತಿ ಈ ವಿಷಯಗಳ ದುರುಪಯೋಗಪಡಿಸಿಕೊಂಡರೆ ಎಂಬ ಭಯ ಏನಾದರೂ ಕಾಡತೊಡಗಿದರೆ ಅಥವಾ ಈ ವಿಚಾರ ಯಾವುದೋ ವಾಗ್ವಾದವನ್ನು ಕೆದಕಿ ವಾಗ್ವಾದ ಕಲಹಕ್ಕೆ ತಿರುಗಿ, ಕಲಹ ಜಗಳವಾಗಿ, ಜಗಳ ಬೇರ್ಪಡುವಲ್ಲಿ ಪರ್ಯವಸಾನವಾಗಲೂಬಹುದು ಎಂಬ ಆತಂಕ ಮನದಲ್ಲಿ ಮೂಡಿದರೆ ನಿಮ್ಮ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು.

ಮಿಲನದಲ್ಲಿ ಆಸಕ್ತಿ ತೋರುವುದು ಕಡಿಮೆಯಾಗುತ್ತದೆ
ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಸುಳ್ಳಾಗುವ ಲಕ್ಷಣಗಳು ತೋರಿದರೆ ಸಂಬಂಧ ಹದಗೆಡುವ ಲಕ್ಷಣ ಎಂದು ಅರ್ಥೈಸಿಕೊಳ್ಳಬೇಕು. ನಿಮ್ಮ ಸಂಗಾತಿ ಮಿಲನದ ಸಮಯದಲ್ಲಿ ಏಕಾಂತವನ್ನು ಬಯಸಿದರೆ, ಅದಕ್ಕಾಗಿ ಕುಂಟುನೆಪಗಳನ್ನು ಮುಂದೆ ಮಾಡಿದರೆ ವಿವಾಹಿತ ಸಂಬಂಧ ದೂರಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ.

X
Desktop Bottom Promotion